ಸೋಮವಾರಪೇಟೆ ಆ.19 : ಜೀಪು ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿ ಜೀಪು ಪಲ್ಟಿಯಾದ ಘಟನೆ ಮಸಗೋಡು ತಿರುವಿನಲ್ಲಿ ನಡೆದಿದೆ.
ತಣ್ಣೀರುಹಳ್ಳ ಗ್ರಾಮದ ಶೇಷಪ್ಪ ಅವರ ಜೀಪು ಹಾಗೂ ಮಸಗೋಡು ಗೋವರ್ಧನ್ ಅವರ ಕಾರು ನಡುವೆ ನಡೆದ ಮುಖಾಮುಖಿ ಡಿಕ್ಕಿಯಲ್ಲಿ ಜೀಪು ಮಗುಚಿಕೊಂಡಿದ್ದು, ಜೀಪಿನಲ್ಲಿದ್ದವರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.








