ಮಡಿಕೇರಿ ಆ.23 : ಕೊಡಗು ಜಿಲ್ಲಾ ಮುಸ್ಲಿಂ ಸ್ಪೋರ್ಟ್ಸ್ ಟ್ರಸ್ಟ್ ನ ಮಾಸಿಕ ಸಭೆ ಟ್ರಸ್ಟ್ ನ ಅಧ್ಯಕ್ಷ ಎ.ಅಬ್ದುಲ್ ಖಾದರ್ ಹಾಕತ್ತೂರು ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ನಗರದ ಖಾಸಗಿ ಹೊಟೇಲ್ ನ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ 20ನೇ ವರ್ಷದ ಕೊಡಗು ಮುಸ್ಲಿಂ ಕಪ್ ಕ್ರಿಕೆಟ್ ಪಂದ್ಯಾವಳಿ ಹಾಗೂ ಪ್ರಥಮ ವರ್ಷದ ಕೊಡಗು ಮುಸ್ಲಿಂ ಕಪ್ ಹಗ್ಗ ಜಗ್ಗಾಟವನ್ನು ಟ್ರಸ್ಟ್ ನ ವತಿಯಿಂದ ನಡೆಸಲು ನಿರ್ಧರಿಸಲಾಯಿತು.
ಈ ಸಂದರ್ಭ ಮಾತನಾಡಿದ ಟ್ರಸ್ಟ್ ನ ಗೌರವಾಧ್ಯಕ್ಷ ಅಬ್ದುಲ್ ರಶೀದ್ ಕುಪ್ಪೊಡಂಡ, ಮುಂದಿನ ದಿನಗಳಲ್ಲಿ ಕೇವಲ ಕ್ರಿಕೆಟ್ ಮಾತ್ರವಲ್ಲದೆ ಕೊಡಗಿನ ಕ್ರೀಡೆಯಾದ ಹಾಕಿ ಮತ್ತಿತರ ಕ್ರೀಡೆಗಳನ್ನು ಆಯೋಜಿಸಬೇಕೆಂದು ಸಲಹೆ ನೀಡಿದರು.
ಇದಕ್ಕೆ ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿದರು. ಸಭೆಯಲ್ಲಿ ಸದಸ್ಯರುಗಳಾದ ಕೆ.ಎಂ.ಮುಜೀಬ್ ಮೂರ್ನಾಡು, ಪಿ.ಹೆಚ್.ಸಮೀರ್ ಕಡಂಗ, ಎಂ.ಕೆ.ಅಬ್ದುಲ್ ರಜಾಕ್ ಯಡಪಾಲ, ಎನ್.ಪಿ.ಹ್ಯಾರಿಸ್ ಮಡಿಕೇರಿ ಮತ್ತಿತರರು ಉಪಸ್ಥಿತರಿದ್ದರು.
ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಎಸ್.ಆದಂ ಕುಶಾಲನಗರ ಸ್ವಾಗತಿಸಿ, ನಿರ್ದೇಶಕ ಎಂ.ಎಂ.ಹ್ಯಾರಿಸ್ ನಂಜರಾಯಪಟ್ಟಣ ವಂದಿಸಿದರು.








