ಸೋಮವಾರಪೇಟೆ ಆ.25 : ಕುವೆಂಪು ಶಾಲೆಯಲ್ಲಿ ನಡೆದ ವಲಯ ಎ ಮಟ್ಟದ ಪ್ರಾಥಮಿಕ ಶಾಲಾ ವಿಭಾಗದ ಶಟಲ್ ಬ್ಯಾಡ್ಮಿಂಟನ್ ಬಾಲಕಿಯರ ಮತ್ತು ಬಾಲಕರ ವಿಭಾಗದಲ್ಲಿ ಕುವೆಂಪು ಶಾಲೆ ಪ್ರಥಮ ಸ್ಥಾನಗಳನ್ನು ಪಡೆದಿದೆ.
ಚೆಸ್ ಸ್ಪರ್ಧೆಯಲ್ಲಿ 5 ವಿದ್ಯಾರ್ಥಿಗಳು ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಶಾಲೆಯ ಮುಖ್ಯ ಶಿಕ್ಷಕಿ ಮಿಲ್‍ಡ್ರೆಡ್ ಗೋನ್ಸಾಲ್ವೆಸ್, ದೈಹಿಕ ಶಿಕ್ಷಣ ಪರಿವೀಕ್ಷಕರಾದ ಸುಕುಮಾರಿ, ದೈಹಿಕ ಶಿಕ್ಷಣ ಶಿಕ್ಷಕರಾದ ಕರುಂಬಯ್ಯ, ಇಂದಿರಾ, ನಾಗೇಶ್ ಮತ್ತು ಶಿಕ್ಷಕರು ಇದ್ದರು.







