ಮಡಿಕೇರಿ ಸೆ.16 : ಅಂಚೆ ಅದಾಲತ್‍ನ ಮುಂದಿನ ಸಭೆಯು ಸೆ.25 ರಂದು ಬೆಳಗ್ಗೆ 11 ಗಂಟೆಗೆ ಕೊಡಗು ಅಂಚೆ ವಿಭಾಗದ, ವಿಭಾಗೀಯ ಕಚೇರಿ, ಸಿದ್ದಾಪುರ ರಸ್ತೆಯ ಅಶೋಕಪುರದಲ್ಲಿ ನಡೆಯಲಿದೆ.
ಸಭೆಯಲ್ಲಿ ಕೊಡಗು ಅಂಚೆ ವಿಭಾಗದ ಅಂಚೆ ಸೇವೆಗೆ ಸಂಬಂಧಿಸಿದ ಎಲ್ಲಾ ತರಹದ ದೂರುಗಳನ್ನು ಸ್ವೀಕರಿಸಿ ಚರ್ಚಿಸಲಾಗುತ್ತದೆ. ದೂರುಗಳಿದ್ದಲ್ಲಿ ‘ಅಂಚೆ ಅದಾಲತ್’ ಎಂದು ಬರೆದು ಅಂಚೆ ಅಧೀಕ್ಷಕರು, ಕೊಡಗು ಅಂಚೆ ವಿಭಾಗ, ಮಡಿಕೇರಿ ಇವರಿಗೆ ಸೆಪ್ಟೆಂಬರ್, 22 ರೊಳಗೆ ತಲುಪುವಂತೆ ಕಳುಹಿಸುವಂತೆ ಕೋರಿದೆ. ನಂತರ ಸೆಪ್ಟೆಂಬರ್, 25 ರಂದು ನಡೆಯುವ ಸಭೆಯಲ್ಲಿ ಭಾಗವಹಿಸಬಹುದು ಎಂದು ಕೊಡಗು ಅಂಚೆ ವಿಭಾಗದ ಅಂಚೆ ಅಧಿಕ್ಷಕರು ತಿಳಿಸಿದ್ದಾರೆ.







