Advertisement
10:06 AM Sunday 3-December 2023

*ವಿರಾಜಪೇಟೆ : ಪದ್ಮಶ್ರೀ ಪುರಸ್ಕೃತೆ ರಾಣಿ ಮಾಚಯ್ಯರಿಗೆ ಸನ್ಮಾನ*

21/09/2023

ಮಡಿಕೇರಿ ಸೆ.21 : ವಿರಾಜಪೇಟೆ ಕಾವೇರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ನಾಯಕರುಗಳಿಗೆ ಪದಗ್ರಹಣ ಹಾಗೂ ಪದ್ಮಶ್ರೀ ಪುರಸ್ಕೃತೆ ಐಮುಡಿಯಂಡ ರಾಣಿ ಮಾಚಯ್ಯ ಅವರನ್ನು ಸನ್ಮಾನಿಸಲಾಯಿತು.

ಪದ್ಮಶ್ರೀ ಪುರಸ್ಕೃತ ಐಮುಡಿಯಂಡ ರಾಣಿ ಮಾಚಯ್ಯ ವರ್ಷದ ಕಾರ್ಯ ಚಟುವಟಿಕೆಯನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಮತ್ತು ಮೌಲ್ಯಗಳನ್ನು ಬೆಳೆಸಿಕೊಂಡು, ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಗುರಿ ಸಾಧಿಸುವ ಛಲ ಇರಬೇಕೆಂದರು.
ತಂದೆ, ತಾಯಿ, ಗುರುಗಳನ್ನು ಗೌರವದಿಂದ ಕಾಣಬೇಕು ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಭಾಗವಹಿಸಬೇಕೇಂದು ಕರೆ ನೀಡಿದರು.
ಕಾವೇರಿ ಪದವಿ ಕಾಲೇಜಿನ ನಿವೃತ್ತ ಪ್ರಾಶುಂಪಾಲರಾದ ಪ್ರೊ.ಇಟ್ಟೀರ ಕಮಲಾಕ್ಷಿ ಬಿದ್ದಪ್ಪ, ವಿದ್ಯಾರ್ಥಿ ನಾಯಕರು ಮತ್ತು ತರಗತಿ ಪ್ರತಿನಿಧಿಗಳಿಗೆ ಪ್ರಮಾಣ ವಾಚನವನ್ನು ಬೋಧಿಸಿದರು. ನಂತರ ಪದ್ಮಶ್ರೀ ಪುರಸ್ಕೃತೆ ಐಮುಡಿಯಂಡ ರಾಣಿಮಾಚಯ್ಯ ಅವರನ್ನು ಸನ್ಮಾನಿಸಿ ಗೌರವಿಸಿದರು.

ನಂತರ ಮಾತನಾಡಿದ ಅವರು, ನಮ್ಮ ನಡೆ ಸಾಧನೆಯೆಡೆಗೆ ಎನ್ನುವಂತೆ ಸಾಧನೆಯನ್ನು ಮಾಡುವ ಮಾರ್ಗದಲ್ಲಿ ಎಡರು ತೊಡರು ಬರುತ್ತವೆ ಅದನ್ನು ಧೈರ್ಯದಿಂದ ಎದುರಿಸಿ ಕಠಿಣ ಪರಿಶ್ರಮ, ದೃಢನಂಬಿಕೆ, ಬದ್ದತೆ ಇದ್ದಾಗ ಮಾತ್ರ ಯಶಸ್ವಿಯಾಗಲು ಸಾಧ್ಯ. ಕಲಿಕೆಯು ನಿರಂತರವಾಗಿ ನಡೆಯುವ ಪ್ರಕ್ರಿಯೆ. ಯಾವಕೆಲಸವು ಕೀಳಾಲ್ಲ ಶಿಸ್ತುಬದ್ದ ಜೀವನವನ್ನು ಅಳವಡಿಸಿಕೊಳ್ಳಬೇಕೆಂದು ತಿಳಿ ಹೇಳಿದರು.
ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಸಂಚಾಲಕಿ ಡೈನಾ ಸೋಮಯ್ಯ ತರಗತಿ ಪ್ರತಿನಿಧಿಗಳು ಮತ್ತು ಪದಾಧಿಕಾರಿಗಳ ಪರಿಚಯವನ್ನು ಮಾಡಿದರು.
ಉಪನ್ಯಾಸಕರಾದ ಎ.ಪಿ.ದಮಯಂತಿ ಪದ್ಮಶ್ರೀ ಪುರಸ್ಕೃತೆ ಐಮುಡಿಯಂಡ ರಾಣಿಮಾಚಯ್ಯ ಅವರನ್ನು ಪರಿಚಯಿಸಿದರು.
ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಹಾಕಿ, ಬ್ಯಾಡ್ಮಿಂಟನ್, ಕಾಲ್ಚೆಂಡು, ಕಬಡ್ಡಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಜೀವಶಾಸ್ತ್ರ ಉಪನ್ಯಾಸಕಿ ದಿಕ್ಷೀತ್ ಅಕ್ಕಮ್ಮ ನಡೆಸಿಕೊಟ್ಟರು.
ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ಆರಂಭದಲ್ಲಿ ದೀಪು ಮತ್ತು ತಂಡದವರು ಪ್ರಾರ್ಥಿಸಿದರು, ಪ್ರಾಶುಂಪಾಲ ಎನ್.ಎಂ.ನಾಣಯ್ಯ ಸ್ವಾಗತಿಸಿದರು. ರಾಜ್ಯಶಾಸ್ತ್ರ ಉಪನ್ಯಾಸಕ ಕೆ.ಪಿ. ಗಾಯತ್ರಿ ವಂದಿಸಿದರು. ಇತಿಹಾಸ ಉಪನ್ಯಾಸಕಿ ಸಿ.ಪಿ.ಅನುಪಮ ಹಾಗೂ ವಿದ್ಯಾರ್ಥಿಗಳಾದ ವಿದ್ಯಾ, ಸುಶ್ಮೀತಾ ಮತ್ತು ನಾಫಿಯಾ ಕಾರ್ಯಕ್ರಮವನ್ನು ನಿರೂಪಿಸಿದರು. ವಿದ್ಯಾರ್ಥಿಗಳಿಂದ ಹಲವು ಸಾಂಸ್ಕೃತಿಕ ಚಟುವಟಿಕೆಗಳು ಗಮನ ಸೆಳೆಯಿತು.