Advertisement
10:19 AM Sunday 3-December 2023

*ಸೆ.28 ರಂದು ಈದ್ ಮಿಲಾದ್ ಆಚರಣೆ*

26/09/2023

ಮಡಿಕೇರಿ ಸೆ.26 :  ಲೋಕಾನುಗ್ರಹಿ ಪುಣ್ಯ ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿವಸಲ್ಲಂ ಅವರ 1498 ನೇಯ ಜನ್ಮ ದಿನವನ್ನು ವಿಶ್ವದಾದ್ಯಂತ ಸೆ.28 ರಂದು ಆಚರಿಸಲಾಗುತ್ತದೆ.
ಇದರ ಅಂಗವಾಗಿ ಮಡಿಕೇರಿಯ ಎಂ.ಎಂ.ಮಸೀದಿಯಲ್ಲಿ ಸೆ.27 ರಂದು ಸಂಜೆ 7 ಗಂಟೆಗೆ  ಮೌಲಿದ್ ಪಾರಾಯಣ ಹಾಗೂ ಪ್ರವಚನ ನಡೆಯಲಿದೆ. ಅಲ್ಲದೆ ಸೆ.28 ರಂದು ಬೆಳಿಗ್ಗೆ 8.30 ಕ್ಕೆ ಮಡಿಕೇರಿಯ ಸಂಯುಕ್ತ ಜಮಾ‌ಅತ್ ವತಿಯಿಂದ ಬ್ರಹತ್ ಮೀಲಾದ್ ಜಾಥಾ ವನ್ನು ಹಮ್ಮಿಕೊಳ್ಳಲಾಗಿದೆ. ಮೆರವಣಿಗೆಯು ಗದ್ದಿಗೆಯ ರಾತೀಬ್ ಕೊಟಡಿಯಿಂದ ಹೊರಟು ನಗರದ ಕಾವೇರಿ ಹಾಲ್ ನಲ್ಲಿ ಕೊನೆಗೊಳ್ಳಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.