Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಶ್ರೀಮಂಗಲದಲ್ಲಿ ಪ್ರಜಾಸೇವೆ ಅಭಿಯಾನ; 134ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆ*
  • *ಶ್ರದ್ಧಾಭಕ್ತಿಯಿಂದ ಜರುಗಿದ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯದ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ*
  • *ಈದ್ ಮಿಲಾದ್ ಪ್ರಬಂಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ; ಧರ್ಮವನ್ನು ಪ್ರೀತಿಸಿ, ಇತರ ಧರ್ಮಗಳನ್ನು ಗೌರವಿಸಿ: ರಫೀಕ್ ಮಾಸ್ಟರ್*
  • *ಕೊಡಗಿನ ಶಿಕ್ಷಕರಿಗೆ ಪ್ರತಿಷ್ಠಿತ ‘ವಿದ್ಯಾರತ್ನ’ ರಾಜ್ಯ ಪ್ರಶಸ್ತಿ*
  • *ಶಿಕ್ಷಕರು ನೈತಿಕತೆ, ಮಾನವೀಯ ಮೌಲ್ಯ ಬೆಳೆಸಬೇಕು: ಮದನ್ ಮಾದಯ್ಯ; ಸುಂಟಿಕೊಪ್ಪ ಲಯನ್ಸ್ ಕ್ಲಬ್ ವತಿಯಿಂದ ಶಿಕ್ಷಕರ ದಿನಾಚರಣೆ; ನಿವೃತ್ತ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್ ದಂಪತಿಗೆ ಸನ್ಮಾನ*
  • *ಕ್ರೀಡಾ ಕ್ಷೇತ್ರದಲ್ಲಿ ಆಂಜೆಲಾ ವಿದ್ಯಾನಿಕೇತನದ ವಿದ್ಯಾರ್ಥಿಗಳ ಅದ್ವಿತೀಯ ಸಾಧನೆ; ಸಾಧಕ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ*
  • *2030ಕ್ಕೆ ಭಾರತವನ್ನು ಮಲೇರಿಯಾ ಮುಕ್ತಗೊಳಿಸುವ ಗುರಿ: ಕೊಡಗಿಗೆ ಕೇಂದ್ರ ತನಿಖಾ ತಂಡ ಭೇಟಿ*
  • *ಶ್ರೀಮಂಗಲ-ನಾಲ್ಕೇರಿ ರಸ್ತೆ ಅಭಿವೃದ್ಧಿಗೆ ಭೂಮಿಪೂಜೆ*
  • *ಮಾಸ್ಟರ್ಸ್ ಅಥ್ಲೆಟಿಕ್ಸ್ ಮೀಟ್ 2026ರಲ್ಲಿ ಕೊಡಗಿನ ಕ್ರೀಡಾಪಟುಗಳ ಮಿಂಚಿನ ಸಾಧನೆ*
  • *ಮಹಿಳಾ ಸ್ವಾವಲಂಬನೆಗೆ ‘ಆತ್ಮ’ ಯೋಜನೆ ಆಸರೆ: ನಾಪೋಕ್ಲು ಮಹಿಳಾ ಸಮಾಜದಿಂದ ಅಣಬೆ ಕಟಾವು*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಕೊಡಗಿನಲ್ಲಿ ರಿಯಲ್ ಎಸ್ಟೇಟ್ ಗೆ ಹೂಡಿಕೆ ಮಾಡಿ ಕೈ ಸುಟ್ಟುಕೊಳ್ಳಬೇಡಿ : ಕಾನೂನು ಹೋರಾಟದ ಎಚ್ಚರಿಕೆ ನೀಡಿದ ಕರ್ನಲ್ ಸಿ.ಪಿ.ಮುತ್ತಣ್ಣ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಕೊಡಗಿನಲ್ಲಿ ರಿಯಲ್ ಎಸ್ಟೇಟ್ ಗೆ ಹೂಡಿಕೆ ಮಾಡಿ ಕೈ ಸುಟ್ಟುಕೊಳ್ಳಬೇಡಿ : ಕಾನೂನು ಹೋರಾಟದ ಎಚ್ಚರಿಕೆ ನೀಡಿದ ಕರ್ನಲ್ ಸಿ.ಪಿ.ಮುತ್ತಣ್ಣ*

ಸೆಪ್ಟೆಂಬರ್ 27, 20232 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಸೆ.27 : ಕಾವೇರಿಯ ಉಗಮ ಸ್ಥಾನ ಕೊಡಗು ಜಿಲ್ಲೆಗೆ ವಾಣಿಜ್ಯ ಭೂಪರಿವರ್ತನೆ ಮತ್ತು ನಗರೀಕರಣ ಮಾರಕವಾಗಿದ್ದು, ನಿಯಮ ಬಾಹಿರ ಭೂಪರಿವರ್ತನೆಗಳ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು. ಆದ್ದರಿಂದ ಕೊಡಗಿನಲ್ಲಿ ರಿಯಲ್ ಎಸ್ಟೇಟ್ ಗೆ ಹೂಡಿಕೆ ಮಾಡಿ ಕೈ ಸುಟ್ಟುಕೊಳ್ಳಬೇಡಿ ಎಂದು ಪರಿಸರ ಮತ್ತು ಆರೋಗ್ಯ ಪ್ರತಿಷ್ಠಾನದ ಪ್ರಮುಖ ಹಾಗೂ ಕೊಡಗು ವನ್ಯಜೀವಿ ಸಂಘದ ಮಾಜಿ ಅಧ್ಯಕ್ಷ ಕರ್ನಲ್ ಸಿ.ಪಿ.ಮುತ್ತಣ್ಣ ಮನವಿ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾವೇರಿ ನೀರಿಗಾಗಿ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳು ಕಲಹದಲ್ಲಿ ತೊಡಗಿವೆ. ಆದರೆ ಕಾವೇರಿ ನದಿ ಹುಟ್ಟುವ ಕೊಡಗಿನ ಸ್ಥಿತಿಗತಿಯ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.
ಹಾಲಿಗಾಗಿ ಕಿತ್ತಾಟ ನಡೆಯುತ್ತಿದೆ, ಆದರೆ ಹಾಲು ಕೊಡುವ ಹಸುವಿಗೆ ಏನಾಗಿದೆ ಎಂದು ಯಾರೂ ಚಿಂತಿಸುತ್ತಿಲ್ಲ. ವಾಣಿಜ್ಯ ಭೂಪರಿವರ್ತನೆ ಮತ್ತು ನಗರೀಕರಣದಿಂದ ಕಾವೇರಿ ಜಲಮೂಲಕ್ಕೆ ಅಪಾಯ ಎದುರಾಗಿದೆ. ತೋಟ, ಗದ್ದೆಗಳು ನಿಯಮ ಬಾಹಿರವಾಗಿ ಭೂಪರಿವರ್ತನೆಯಾಗುತ್ತಿವೆ. ಹೊರಗಿನವರು ಬಂದು ರೆಸಾರ್ಟ್, ಲೇಔಟ್ ಗಳನ್ನು ಮಾಡಿ ನಗರೀಕರಣಗೊಳಿಸುತ್ತಿದ್ದಾರೆ. ಜಿಲ್ಲೆಯ ಮೂಲನಿವಾಸಿಗಳು ಮೂಲೆ ನಿವಾಸಿಗಳಾಗುತ್ತಿದ್ದಾರೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಕೊಡಗು ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವ ಭೀತಿ ಎದುರಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕೊಡಗು ಜಿಲ್ಲೆಯ ಪರಿಸರ ಮತ್ತು ಜಲಮೂಲಗಳನ್ನು ಉಳಿಸಿಕೊಳ್ಳಲು ನಾವು ನಿರಂತರವಾಗಿ ಹೋರಾಟಗಳನ್ನು ನಡೆಸುತ್ತಾ ಬಂದಿದ್ದೇವೆ. ಆದರೆ ಭ್ರಷ್ಟ ವ್ಯವಸ್ಥೆ ನ್ಯಾಯಾಲಯದ ಆದೇಶವನ್ನೇ ಉಲ್ಲಂಘಿಸಿ ಭೂಪರಿವರ್ತನೆಯಲ್ಲಿ ತೊಡಗಿವೆ. ಇದನ್ನು ತಡೆಯಲು ಮುಂದಿನ ದಿನಗಳಲ್ಲಿ ಕಠಿಣ ಕಾನೂನು ಹೋರಾಟಗಳನ್ನು ನಡೆಸಲಾಗುವುದು. ಇದರಿಂದ ನಿಯಮ ಉಲ್ಲಂಘಿಸಿದ ರೆಸಾರ್ಟ್‍ಗಳನ್ನು ತೆರವುಗೊಳಿಸಬೇಕಾದ ಪರಿಸ್ಥಿತಿಯೂ ಎದುರಾಗಬಹುದು. ಆದ್ದರಿಂದ ಕೊಡಗಿನಲ್ಲಿ ರಿಯಲ್ ಎಸ್ಟೇಟ್ ಗೆ ಮತ್ತು ನಗರೀಕರಣಕ್ಕೆ ಹಣ ಹೂಡಿಕೆ ಮಾಡುವವರು ಸ್ವಲ್ಪ ಯೋಚಿಸುವುದು ಅಗತ್ಯ, ಇಲ್ಲದಿದ್ದರೆ ಕಾನೂನು ಕ್ರಮದಿಂದ ಹಣ ಕಳೆದುಕೊಳ್ಳಬೇಕಾಗುತ್ತದೆ ಎಂದು ಕರ್ನಲ್ ಮುತ್ತಣ್ಣ ಎಚ್ಚರಿಕೆ ನೀಡಿದರು.
ಕೊಡಗು ಜಿಲ್ಲೆಗೆ ಬಂದು ಲಾಭ ಮಾಡಿಕೊಂಡವರು ಲಾಭದ ಹಣವನ್ನು ಜಲಮೂಲದ ನಾಶಕ್ಕೆ ಕಾರಣವಾಗಬಲ್ಲ ರಿಯಲ್ ಎಸ್ಟೇಟ್ ಗೆ ಸುರಿಯುವ ಮೂಲಕ ಎಂಟು ಕೋಟಿ ಜನರಿಗೆ ನೀರನ್ನು ಒದಗಿಸುವ ಕಾವೇರಿ ಮಾತೆಗೆ ಅನ್ಯಾಯ ಮಾಡುತ್ತಿದ್ದಾರೆ. ಲೇಔಟ್, ರೆಸಾರ್ಟ್ ಮತ್ತು ರಿಯಲ್ ಎಸ್ಟೇಟ್ ವ್ಯವಹಾರ ಮಾಡಬೇಕೆನ್ನುವ ಆಸಕ್ತಿ ಇರುವವರು ಮೈಸೂರು, ಬೆಂಗಳೂರಿನಲ್ಲಿ ಮಾಡಲಿ. ಕಾವೇರಿ ನಾಡು ಕೊಡಗಿನಿಂದ ಲಾಭ ಮಾಡಿಕೊಂಡು ಕೊಡಗನ್ನು ನಾಶ ಮಾಡುವುದು ಬೇಡ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಿಯಮ ಬಾಹಿರ ಭೂಪರಿವರ್ತನೆಯಿಂದ ವಿರಾಜಪೇಟೆ, ಗೋಣಿಕೊಪ್ಪಲು ಮತ್ತು ಪೆÇನ್ನಂಪೇಟೆ ದಕ್ಷಿಣ ಕೊಡಗಿನಲ್ಲಿ ಮೈಸೂರು ಗಾತ್ರದ ದೊಡ್ಡ ನಗರವಾಗಲಿದೆ. ಅದೇ ರೀತಿ ಮಡಿಕೇರಿ, ಕುಶಾಲನಗರ ಮತ್ತು ಸೋಮವಾರಪೇಟೆ ಉತ್ತರ ಕೊಡಗಿನ ಮತ್ತೊಂದು ದೊಡ್ಡ ಸಿಂಗಲ್ ಸಿಟಿಯಾಗಲಿದೆ. ಕೊಡಗಿಗೆ ಹೊರ ಭಾಗದಿಂದ ಹೆಚ್ಚಿನ ಸಂಖ್ಯೆಯ ಜನರು ಬರುವುದರಿಂದ ಸ್ಥಳೀಯ ಸಮುದಾಯಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳಲಿವೆ. ಮುಖ್ಯವಾಗಿ ಕಾವೇರಿ ನೀರನ್ನು ಒದಗಿಸುವ ಶಕ್ತಿಯನ್ನು ಕೊಡಗು ಕಳೆದುಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು.
ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕೊಡಗಿನ ಹಿತವನ್ನು ಕಾಯಲು ಮುಂದಾಗಬೇಕು. ನಿಯಮ ಬಾಹಿರ ಭೂಪರಿವರ್ತನೆಗಳನ್ನು ತಡೆಯಬೇಕು. ಕೊಡಗನ್ನು ಉಳಿಸಿಕೊಳ್ಳಲು ಸ್ಥಳೀಯ ಜನ ಸ್ವಯಂ ಪ್ರೇರಿತರಾಗಿ ಪರಿಸರ ಮತ್ತು ಜಲಮೂಲದ ಪರ ಹೋರಾಟಕ್ಕೆ ದುಮುಕಬೇಕು ಎಂದು ಕರ್ನಲ್ ಸಿ.ಪಿ.ಮುತ್ತಣ್ಣ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಕೆದಕಲ್ ಗ್ರಾ.ಪಂ ಸದಸ್ಯ ಜಿ.ಡಿ.ಶಿವಕುಮಾರ್, ಕೊಡಗು ರಕ್ಷಣಾ ವೇದಿಕೆಯ ಉಪಾಧ್ಯಕ್ಷ ವೈ.ಟಿ.ಗೋಪಿನಾಥ್, ಪ್ರಮುಖರಾದ ಉಳುವಾರನ ಗಯ ಹಾಗೂ ಉಳುವಾರನ ಪ್ರಜ್ವಲ್ ಉಪಸ್ಥಿತರಿದ್ದರು. 

Follow us Follow us
Share. WhatsApp Facebook Twitter Email Telegram Copy Link

Related Posts

*ಶ್ರೀಮಂಗಲದಲ್ಲಿ ಪ್ರಜಾಸೇವೆ ಅಭಿಯಾನ; 134ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆ*

ಸೆಪ್ಟೆಂಬರ್ 26, 2026

*ಶ್ರದ್ಧಾಭಕ್ತಿಯಿಂದ ಜರುಗಿದ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯದ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ*

ಸೆಪ್ಟೆಂಬರ್ 26, 2026

*ಈದ್ ಮಿಲಾದ್ ಪ್ರಬಂಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ; ಧರ್ಮವನ್ನು ಪ್ರೀತಿಸಿ, ಇತರ ಧರ್ಮಗಳನ್ನು ಗೌರವಿಸಿ: ರಫೀಕ್ ಮಾಸ್ಟರ್*

ಸೆಪ್ಟೆಂಬರ್ 26, 2026

*ಶ್ರದ್ಧಾಭಕ್ತಿಯಿಂದ ಜರುಗಿದ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯದ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ*

ಸೆಪ್ಟೆಂಬರ್ 26, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ, NEWS DESK ಸೆ.26: ನಗರದ ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾದ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯದ ಪುನರ್…

*ಈದ್ ಮಿಲಾದ್ ಪ್ರಬಂಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ; ಧರ್ಮವನ್ನು ಪ್ರೀತಿಸಿ, ಇತರ ಧರ್ಮಗಳನ್ನು ಗೌರವಿಸಿ: ರಫೀಕ್ ಮಾಸ್ಟರ್*

ಸೆಪ್ಟೆಂಬರ್ 26, 2026

*ಕೊಡಗಿನ ಶಿಕ್ಷಕರಿಗೆ ಪ್ರತಿಷ್ಠಿತ ‘ವಿದ್ಯಾರತ್ನ’ ರಾಜ್ಯ ಪ್ರಶಸ್ತಿ*

ಸೆಪ್ಟೆಂಬರ್ 26, 2026

*ಶಿಕ್ಷಕರು ನೈತಿಕತೆ, ಮಾನವೀಯ ಮೌಲ್ಯ ಬೆಳೆಸಬೇಕು: ಮದನ್ ಮಾದಯ್ಯ; ಸುಂಟಿಕೊಪ್ಪ ಲಯನ್ಸ್ ಕ್ಲಬ್ ವತಿಯಿಂದ ಶಿಕ್ಷಕರ ದಿನಾಚರಣೆ; ನಿವೃತ್ತ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್ ದಂಪತಿಗೆ ಸನ್ಮಾನ*

ಸೆಪ್ಟೆಂಬರ್ 26, 2026

*ಕ್ರೀಡಾ ಕ್ಷೇತ್ರದಲ್ಲಿ ಆಂಜೆಲಾ ವಿದ್ಯಾನಿಕೇತನದ ವಿದ್ಯಾರ್ಥಿಗಳ ಅದ್ವಿತೀಯ ಸಾಧನೆ; ಸಾಧಕ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ*

ಸೆಪ್ಟೆಂಬರ್ 26, 2026

*2030ಕ್ಕೆ ಭಾರತವನ್ನು ಮಲೇರಿಯಾ ಮುಕ್ತಗೊಳಿಸುವ ಗುರಿ: ಕೊಡಗಿಗೆ ಕೇಂದ್ರ ತನಿಖಾ ತಂಡ ಭೇಟಿ*

ಸೆಪ್ಟೆಂಬರ್ 26, 2026

*ಶ್ರೀಮಂಗಲ-ನಾಲ್ಕೇರಿ ರಸ್ತೆ ಅಭಿವೃದ್ಧಿಗೆ ಭೂಮಿಪೂಜೆ*

ಸೆಪ್ಟೆಂಬರ್ 26, 2026

*ಮಾಸ್ಟರ್ಸ್ ಅಥ್ಲೆಟಿಕ್ಸ್ ಮೀಟ್ 2026ರಲ್ಲಿ ಕೊಡಗಿನ ಕ್ರೀಡಾಪಟುಗಳ ಮಿಂಚಿನ ಸಾಧನೆ*

ಸೆಪ್ಟೆಂಬರ್ 26, 2026

*ಮಹಿಳಾ ಸ್ವಾವಲಂಬನೆಗೆ ‘ಆತ್ಮ’ ಯೋಜನೆ ಆಸರೆ: ನಾಪೋಕ್ಲು ಮಹಿಳಾ ಸಮಾಜದಿಂದ ಅಣಬೆ ಕಟಾವು*

ಸೆಪ್ಟೆಂಬರ್ 26, 2026

*36 ವರ್ಷ ಸೇವೆ ಸಲ್ಲಿಸಿದ ಅಂಗನವಾಡಿ ಕಾರ್ಯಕರ್ತೆ ದೇವಮಾಜಿ, ಶಿಕ್ಷಕಿ ಭೋಜಮ್ಮಗೆ ಆತ್ಮೀಯ ಬೀಳ್ಕೊಡುಗೆ*

ಸೆಪ್ಟೆಂಬರ್ 26, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.