*ಚಿರತೆ ದಾಳಿಗೆ ಕುರಿ ಬಲಿ : ಗರಗಂದೂರು ಗ್ರಾಮದಲ್ಲಿ ಘಟನೆ*
01/10/2023

ಮಡಿಕೇರಿ ಅ.1 : ಕೊಟ್ಟಿಗೆಯಲ್ಲಿ ಕಟ್ಟಿ ಹಾಕಲಾಗಿದ್ದ ಕುರಿಯ ಮೇಲೆ ಮಧ್ಯರಾತ್ರಿಯ ವೇಳೆ ಚಿರತೆಯೊಂದು ದಾಳಿ ಮಾಡಿ ಕೊಂದು ಹಾಕಿರುವ ಘಟನೆ ಗರಗಂದೂರು ಗ್ರಾಮದಲ್ಲಿ ನಡೆದಿದೆ.
ಮೊರಾರ್ಜಿ ದೇಸಾಯಿ ಪಿಯು ವಸತಿ ಕಾಲೇಜಿನ ಬಳಿ ಇರುವ ಉಮ್ಮರ್ ಖಾನ್ ಎಂಬುವವರಿಗೆ ಸೇರಿದ ಕುರಿಯನ್ನು ಚಿರತೆ ಕೊಂದು ಹಾಕಿದೆ. ಚಿರತೆಯ ದಾಳಿಗೆ ಬೆದರಿದ ದನ ಕರುಗಳು ಚೀರಿಕೊಳ್ಳಲು ಆರಂಭಿಸಿದಾಗ ಚಿರತೆ ಅಲ್ಲಿಂದ ಕಾಲ್ಕಿತ್ತಿದೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿ ಜಗದೀಶ್, ಪಶು ವೈದ್ಯಾಧಿಕಾರಿ ಬಾದಾಮಿ, ಹರದೂರು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಪೂರ್ಣಿಮ, ಉಪಾಧ್ಯಕ್ಷ ಸಲೀಂ, ಸದಸ್ಯ ರಮೇಶ, ಕಾಂಗ್ರೆಸ್ ಓಬಿಸಿ ಅಧ್ಯಕ್ಷ ಸುಂದರ ಭೇಟಿ ನೀಡಿ ಪರಿಶೀಲಿಸಿದರು.
ಈ ಭಾಗದ ವಿದ್ಯಾರ್ಥಿಗಳು ಹಾಗೂ ನಿವಾಸಿಗಳಲ್ಲಿ ಅತಂಕ ಸೃಷ್ಟಿಯಾಗಿದ್ದು, ಚಿರತೆಯನ್ನು ಕಾಡಿಗಟ್ಟುವಂತೆ ಒತ್ತಾಯಿಸಿದ್ದಾರೆ.
