ಮಡಿಕೇರಿ ಅ.4 : ಸತ್ಯ, ಅಸ್ತಿತ್ವ, ಸಮರ್ಪಣೆ”ಎಂಬ ದ್ಯೇಯದಡಿಯಲ್ಲಿ ಅ.11 ರಂದು ಎಸ್‍ಕೆಎಸ್‍ಎಸ್‍ಎಫ್ ಕೊಡಗು ಜಿಲ್ಲಾ ಸಮ್ಮೇಳನ ಹಾಗೂ ಬೃಹತ್ ಮೀಲಾದ್ ಸಮಾವೇಶ ಮತ್ತು ನೂರೇ ಅಜ್ಮೀರ್ ಕಾರ್ಯಕ್ರಮ ಕುಶಾಲನಗರದಲ್ಲಿ ನಡೆಯಲಿದೆ ಎಂದು ಎಸ್‍ಕೆಎಸ್‍ಎಸ್‍ಎಫ್ ಕೊಡಗು ಅಧ್ಯಕ್ಷ ಎಂ.ತಮೀಖ್ ದಾರಿಮಿ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಜೆ 4 ಗಂಟೆಗೆ ಮೀಲಾದ್ ಸಂದೇಶ ಮೆರವಣಿಗೆಯೊಂದಿಗೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ನಂತರ ಕುಶಾಲನಗರದ ಎಸ್ ಎಲ್ ಎನ್ ಮೈದಾನದಲ್ಲಿ ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಪಾಣಕ್ಕಾಡ್ ಸೈಯ್ಯಿದ್ ಮುನವ್ವರಲಿ ಶಿಹಾಬ್ ತಂಙಳ್ ಸಮ್ಮೇಖವನ್ನು ಉದ್ಘಾಟಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಎಸ್‍ಕೆಎಸ್‍ಎಸ್‍ಎಫ್ ಕೊಡಗು ಸಮಿತಿ ಉಪಾಧ್ಯಕ್ಷ ಸತ್ತಾರ್ ಪಂದಲ್ಲೂರ್ ‘ಸತ್ಯ, ಅಸ್ತಿತ್ವ, ಸಮರ್ಪಣೆ ಎಂಬ ವಿಷಯವನ್ನಾಧರಿಸಿ ದಿಕ್ಸೂಚಿ ಭಾಷಣ ಮಾಡಲಿದ್ದು, ಮುಖ್ಯ ಅಥಿತಿಗಳಾಗಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ, ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ, ಮಾಜಿ ಶಾಸಕ ಕೆ.ಎಂ.ಇಬ್ರಾಹಿಂ ಮಾಸ್ಟರ್ ಸೇರಿದಂತೆ ಮತ್ತಿತರ ಗಣ್ಯ ವ್ಯಕ್ತಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.
ರಾತ್ರಿ 8 ಗಂಟೆಗೆ ವಲಿಯುದ್ದೀನ್ ಫೈಝಿ ನೇತೃತ್ವದಲ್ಲಿ ನೂರೇ ಅಜ್ಮೀರ್ ಆಧ್ಯಾತ್ಮಿಕ ಸಂಗಮ ನಡೆಯಲಿದ್ದು, ಧಾರ್ಮಿಕ, ಸಾಮಾಜಿಕ ಹಾಗೂ ರಾಜಕೀಯ ನೇತರಾರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸಮ್ಮೇಳನದ ಪ್ರಚಾರಾರ್ಥ ಅ.5, 6, 7 ರಂದು ಜಿಲ್ಲೆಯಾದ್ಯಂತ ಪ್ರಚಾರ ಯಾತ್ರೆ ನಡೆಯಲಿದ್ದು, ಅ.5 ರಂದು ಬೆಳಿಗ್ಗೆ 9 ಗಂಟೆಗೆ ಎಡಪಾಲ ಅಂಡತ್ಮಾನಿ ಮಖಾಂ ಝಿಯಾರತಿನೊಂದಿಗೆ ಪ್ರಚಾರ ಯಾತ್ರೆಗೆ ಚಾಲನೆ ದೊರೆಯಲಿದೆ. ನಂತರ 10 ಗಂಟೆಗೆ ಕಡಂಗದಿಂದ ಆರಂಭಗೊಂಡು ಸಂಜೆ 7 ಗಂಟೆಗೆ ಪೊನ್ನತುಮೊಟ್ಟದಲ್ಲಿ ಮೊದಲ ದಿನದ ಪ್ರಚಾರ ಯಾತ್ರೆ ಸಮಾರೋಪಗೊಳ್ಳಲಿದೆ ಎಂದು ಹೇಳಿದರು.
ಅ.6 ರಂದು ಎರಡನೇ ದಿನ ಪ್ರಚಾರ ಯಾತ್ರೆ ಆರಂಭಗೊಳ್ಳಲಿದ್ದು, ಬೆಳಿಗ್ಗೆ 9 ಗಂಟೆಗೆ ಬಜೆಗೊಲ್ಲಿಯಿಂದ ಆರಂಭವಾಗುವ ಯಾತ್ರೆ ಸಂಜೆ 7.30ಕ್ಕೆ ಕೊಡ್ಲಿಪೇಟೆಯಲ್ಲಿ ಸಮಾರೋಪಗೊಳ್ಳಲಿದೆ. ಅ.7 ರಂದು ಮೂರನೇ ದಿನ ಯಾತ್ರೆ ನಡೆಯಲಿದ್ದು, ಬೆಳಿಗ್ಗೆ 10 ಗಂಟೆಗೆ ಕೊಂಡಂಗೇರಿಯಿಂದ ಆರಂಭವಾಗುವ ಯಾತ್ರೆಯು ಸಂಜೆ 7.15ಕ್ಕೆ ಸಿದ್ದಾಪುರದಲ್ಲಿ ಸಮಾರೋಪಗೊಳ್ಳಲಿದೆ ಎಂದು ತಮ್ಲೀಖ್ ದಾರಿಮಿ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಎಸ್‍ಕೆಎಸ್‍ಎಸ್‍ಎಫ್ ಸದಸ್ಯರಾದ ಹಸನ್ ಮಾಪಿಳತ್ತೋಡು, ಹುಸೈನ್ ಮಾಪಿಳತ್ತೋಡು, ವ್ಯವಸ್ಥಾಪಕ ಅಬ್ದುಲ್ ಮಜೀದ್, ಸ್ವಾಗತ ಸಮಿತಿ ಸಂಚಾಲಕ ಪಿ.ಎಂ.ಅಬ್ದುಲ್ಲ, ಕುಶಾಲನಗರ ತಾಲೂಕು ಅಧ್ಯಕ್ಷ ಅಬ್ದುಲ್ ಹಮಿದ್ ಉಪಸ್ಥಿತರಿದ್ದರು.







