ಮಡಿಕೇರಿ ನ.14 : ಮಡಿಕೇರಿ ತಾಲ್ಲೂಕಿನ ನರಿಯಂದಡ ಗ್ರಾ.ಪಂ ವ್ಯಾಪ್ತಿಯ ಕರಡ ಕೀಮಲೆಕಾಡು ಗ್ರಾಮದಲ್ಲಿ ಕಾಡಾನೆಯೊಂದು ಮರಿಗೆ ಜನ್ಮ ನೀಡಿದೆ.
ಸ್ಥಳೀಯ ನಿವಾಸಿ ಎಂ.ಮಂಜು ಎಂಬುವವರ ಮನೆಯ ಬಳಿ ರಾತ್ರಿ ವೇಳೆ ಕಾಡಾನೆ ಮರಿ ಹಾಕಿದೆ. ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಕಾಡಾನೆ ಮರಿಯನ್ನು ಹೆಚ್ಚಿನ ಸಂಖ್ಯೆಯ ಗ್ರಾಮಸ್ಥರು ಕುತೂಹಲದಿಂದ ನೋಡುತ್ತಿದ್ದ ದೃಶ್ಯ ಕಂಡು ಬಂತು. ತಾಯಿ ಆನೆ ಪಕ್ಕದ ತೋಟದಲ್ಲಿ ಇರುವುದಾಗಿ ತಿಳಿದು ಬಂದಿದೆ.
ನರಿಯಂದಡ ಸುತ್ತಮುತ್ತಲ ಗ್ರಾಮಗಳಲ್ಲಿ ಕಾಡಾನೆ ಹಾವಳಿ ಮಿತಿ ಮೀರಿರುವ ಬಗ್ಗೆ ಗ್ರಾಮಸ್ಥರು ದೂರಿಕೊಂಡಿದ್ದಾರೆ.








