ನಾಪೋಕ್ಲು ಡಿ.19 : ಕಕ್ಕುಂದಕಾಡು ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಸುಬ್ರಹ್ಮಣ್ಯ ಷಷ್ಟಿ ಪೂಜೆಯನ್ನು ಶ್ರದ್ದಾಭಕ್ತಿಯಿಂದ ಆಚರಿಸಲಾಯಿತು.
ಷಷ್ಠಿ ಅಂಗವಾಗಿ ಮುಂಜಾನೆಯಿಂದಲೇ ದೇವಾಲಯದಲ್ಲಿ ಪಂಚಾಮೃತ ಅಭಿಷೇಕ, ಪುಷ್ಪಲಂಕಾರ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿತು. ಮಧ್ಯಾಹ್ನ ಶ್ರೀ ವೆಂಕಟೇಶ್ವರನಿಗೆ ಗಂಟೆ ಜಾಗಟ ವೇದ ಘೋಷಗಳೊಂದಿಗೆ ವಿಶೇಷ ಮಹಾ ಪೂಜೆ ನೆರವೇರಿಸಿ ಮಹಾ ಮಂಗಳಾರತಿಯ ತಿರ್ಥ ಪ್ರಸಾದ ವಿತರಣೆ ನಡೆಯಿತು.
ನಂತರ ನೆರೆದಿದ್ದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನೆರವೇರಿತು.
ಈ ಸಂದರ್ಭ ದೇವಾಲಯ ಸಮಿತಿ ಅಧ್ಯಕ್ಷ ಟಿ.ಎಸ್.ಮಂಜಯ್ಯ, ಗೌರವ ಕಾರ್ಯಾಧ್ಯಕ್ಷ ಅಧ್ಯಕ್ಷ ಟಿ.ಎನ್.ರಮೇಶ್, ಕಾರ್ಯದರ್ಶಿ ಟಿ.ಎ.ಸುಜಿಕುಮಾರ್., ಖಜಾಂಚಿ ಯನ್. ಪಿ.ಗೋಪಾಲ ಹಾಗೂ ಹಿರಿಯರಾದ ಟಿ.ವಿ.ಶ್ರೀನಿವಾಸ್, ಟಿ.ಎ.ಆನಂದಸ್ವಾಮಿ, ಅಡಳಿತ ಮಂಡಳಿ ನಿರ್ದೇಶಕರಾದ ಟಿ.ಕೆ.ಸೂರ್ಯಕುಮಾರ, ಟಿ.ವಿ.ಭವಾನಿ ಹಾಗೂ ಇತರರು ಹಾಜರಿದ್ದರು.ದೇವಾಲಯದ ಮುಖ್ಯ ಆರ್ಚಕ ಸುದೀರ ಅವರ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನೆರವೇರಿದವು.
ವರದಿ : ದುಗ್ಗಳ ಸದಾನಂದ.








