ನಾಪೋಕ್ಲು ಡಿ.21 : ಶೌರ್ಯ ವಿಪತ್ತು ನಿರ್ವಹಣಾ ಘಟಕ ನಾಪೊಕ್ಲು ಇದರ ವತಿಯಿಂದ ಇಲ್ಲಿಗೆ ಸಮೀಪದ ಹಳೇ ತಾಲೂಕಿನಲ್ಲಿರುವ ಅಂಗನವಾಡಿ ಶಾಲೆಯಲ್ಲಿ ಶ್ರಮದಾನದ ಮೂಲಕ ಸ್ವಚ್ಛತಾ ಶ್ರಮದಾನ ನಡೆಯಿತು.

ಅಂಗನವಾಡಿಯ ಆವರಣದಲ್ಲಿ ಬೆಳೆದು ನಿಂತಿದ್ದ ಕಾಡು ಗಿಡಗಂಟಿ ಕಡಿದು ಸ್ವಚ್ಛಗೊಳಿಸಿದಲ್ಲದೆ ತರಕಾರಿ ಬೆಲೆಸಲು ಪೂರಕವಾದ ಪಾತಿ ನಿರ್ಮಿಸಿದರು.
ಶ್ರಮದಾನದಲ್ಲಿ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸಂಯೋಜಕಿ ಬಾಳೆಯಡ ದಿವ್ಯ, ಉಮಾಲಕ್ಷ್ಮಿ ,ಚಂದ್ರಕಲಾ, ದಿಲೀಶ್ ,ಶಂಕರ, ಶರವಣ ಮತ್ತು ಅಂಗನವಾಡಿಯ ಶಿಕ್ಷಕಿಯಾದ ಜ್ಯೋತಿ ಸಹಾಯಕಿ ಸರೋಜಾ ಹಾಜರಿದ್ದರು.
ವರದಿ : ದುಗ್ಗಳ ಸದಾನಂದ






