Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada
Home»ಇತ್ತೀಚಿನ ಸುದ್ದಿಗಳು»”The girl who unleashed MAGIC” ಪುಸ್ತಕ ಬಿಡುಗಡೆ : ಈ ಪುಸ್ತಕ ಬರೆದ ಬಾಲಕಿ ಮಾಯಾ ಅಪ್ಪಚ್ಚು ಈಗ ನೆನಪು ಮಾತ್ರ
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

”The girl who unleashed MAGIC” ಪುಸ್ತಕ ಬಿಡುಗಡೆ : ಈ ಪುಸ್ತಕ ಬರೆದ ಬಾಲಕಿ ಮಾಯಾ ಅಪ್ಪಚ್ಚು ಈಗ ನೆನಪು ಮಾತ್ರ

ಡಿಸೆಂಬರ್ 21, 20232 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement

ಮಡಿಕೇರಿ ಡಿ.21 : ಏಳು ವರ್ಷದ ಬಾಲಕಿ ಮಾಯಾ ಅಪ್ಪಚ್ಚು ತನ್ನ ಶಾಲೆಯ ಆರಂಭದ ದಿನಗಳಲ್ಲಿ ಅಲ್ಲಿಯ ಹೊಸ ವಾತಾವರಣದಲ್ಲಿ ತನಗೆ ಉಂಟಾದ ಭಯ, ಆತಂಕ, ಮನಸ್ಸಿನ ಗೊಂದಲಗಳು ಹಾಗೂ ಅದ್ಭುತ ಕಲ್ಪನಾ ಶಕ್ತಿಯನ್ನು ಸ್ವತ: ತಾನೇ ವಿಶೇಷವಾಗಿ ವಿವರಿಸಿರುವ “ಮಾಯಾಳ ಮಾಂತ್ರಿಕ ಜಗತ್ತು” ಪುಸ್ತಕ ಇಂದು ಬಿಡುಗಡೆಗೊಂಡಿತು.
ಮಡಿಕೇರಿಯಲ್ಲಿ ಮಾಯಾ ಅಪ್ಪಚ್ಚು ಬರೆದಿರುವ “The girl who unleashed MAGIC”  ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದ ಮಾಯಾಳ ತಾಯಿ ಸಂಚಿತ್ ಅಪ್ಪಚ್ಚು, ತಂದೆ ಕಾರ್ತಿಕ್ ಅಪ್ಪಚ್ಚು, ಮಾಯಾಳ ನೆನಪುಗಳನ್ನು ಮೆಲುಕು ಹಾಕಿ, ಅವಳ ಬರಹಳನ್ನು ಪುಸ್ತಕ ರೂಪದಲ್ಲಿ ಸಂಗ್ರಹಿಸಿದ ಕೊಡವ ಮಕ್ಕಡ ಕೂಟದ ಸ್ಥಾಪಕ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅವರಿಗೆ ಕೃತಜ್ಞತೆ ಸಲ್ಲಿಸಿದರು.
ಕೊಡವ ಮಕ್ಕಡ ಕೂಟದ ಸ್ಥಾಪಕ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿ, ಮಾಯಾಳ ಸಾಧನೆಯನ್ನು ಇತರ ವಿದ್ಯಾರ್ಥಿಗಳಿಗೆ ಮಾದರಿಯನ್ನಾಗಿಸುವ ನಿಟ್ಟಿನಲ್ಲಿ ಕೊಡಗಿನ ಶಾಲಾ ಕಾಲೇಜುಗಳ ಗ್ರಂಥಾಲಯಗಳಿಗೆ ಪುಸ್ತಕವನ್ನು ನೀಡಲಾಗುವುದೆಂದರು.
ಮಾಯಾಳ ಪುಟ್ಟ ಸಹೋದರ ವರುಣ್ ಹಾಜರಿದ್ದರು.
ಅಮೇರಿಕದ ಹೈಕ್ರಾಫ್ಟ್ ಡ್ರೈವ್ ಎಲೆಮೆಂಟ್ರಿ ಸ್ಕೂಲ್ ನಲ್ಲಿ ಎರಡನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಮಾಯಾ ಅಪ್ಪಚ್ಚು ಒಬ್ಬ ಅಪರೂಪದ ಪ್ರತಿಭಾವಂತ ಬಾಲಕಿ. ಪ್ರತೀ ಒಂದು ವಸ್ತು ಅಥವಾ ಜೀವಿಗೆ ಸಂಬಂಧಿಸಿದ ಎಲ್ಲಾ ವಿಚಾರಗಳನ್ನು ವಿವರವಾಗಿ ತಿಳಿದುಕೊಳ್ಳುವ ಕುತೂಹಲ. ಅವುಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುವ ಹಸಿವು, ಉತ್ಸಾಹ. ಕೀಟಗಳ ಮೇಲೆ ಅವಳಿಗಿದ್ದ ಒಲವು ತಾನು ಕೀಟ ಶಾಸ್ತ್ರಜ್ಞೆ ಆಗಬೇಕು ಎಂಬ ಬಯಕೆಯನ್ನು ಅವಳಲ್ಲಿ ಮೂಡಿಸಿತ್ತು.
ವಿದ್ಯಾ ಬುದ್ಧಿಯ ಜೊತೆಗೆ ಶಾಸ್ತ್ರೀಯ ಸಂಗೀತ, ನಾಟ್ಯಶಾಸ್ತ್ರ, ಚಿತ್ರಕಲೆ, ಸಾಹಿತ್ಯ ರಚನೆ ಇವೆಲ್ಲವೂ ಆಕೆಗೆ ಒಲಿದಿತ್ತು. ಹಾಗಾಗಿ ತನ್ನ ಅಧ್ಯಾಪಕರ, ಸಹಪಾಠಿಗಳ, ನೆರೆಯ ಹೊರೆಯವರ ಮೆಚ್ಚುಗೆಗೆ ಪಾತ್ರವಾಗಿದ್ದ ಮಾಯಾ ಅಪ್ಪಚ್ಚು, ತನ್ನ ಜೀವಿತದ ಎಂಟು ವರ್ಷಗಳ ಅವಧಿಯಲ್ಲಿ ಸಾಧನೆಯ ಹಾದಿಯನ್ನು ಹಿಡಿದಿದ್ದಳು.
ನಕಾರಾತ್ಮಕ ಭಾವನೆಗಳನ್ನು ಜಯಿಸುವ ಗುಟ್ಟನ್ನು ತಿಳಿಯಲು ಅವಳು ಕೈಗೊಂಡ ರೋಮಾಂಚಕ ಪ್ರಯಾಣ, ಇತ್ಯಾದಿ ಶೌರ್ಯ ಸಾಹಸಗಳಿಂದ ಕೂಡಿದ ಮಾಂತ್ರಿಕ ಜಗತ್ತನ್ನು ಏಳನೇ ವಯಸ್ಸಿನಲ್ಲಿ “The girl who unleashed MAGIC”  ಎಂಬ ಶೀರ್ಷಿಕೆಯ ಆಂಗ್ಲ ಭಾಷೆಯ ಕಥೆಯನ್ನು ತನ್ನ ಡೈರಿಯಲ್ಲಿ ಚಿತ್ರಗಳ ಸಹಿತ ಬರೆದು ಇಟ್ಟಿದ್ದಾಳೆ.
“The girl who unleashed MAGIC”   ಆಂಗ್ಲ ಭಾಷೆಯ ಕೃತಿಯನ್ನು ಕೊಡವ ಮಕ್ಕಡ ಕೂಟದ 78ನೇ ಪುಸ್ತಕವಾಗಿ ಬಿಡುಗಡೆಗೊಂಡಿದೆ.
ಚಿತ್ರಕಲಾವಿದೆ, ರಂಗ ಕಲಾವಿದೆ, ಕವಯತ್ರಿ, ಗಾಯಕಿ, ಬರಹಗಾರ್ತಿ, ಪತ್ರಕರ್ತೆ ಹಾಗೂ ಸಂಗೀತ ನಿರ್ದೇಶಕಿ, ಕೊಡಗಿನ “ಶಕ್ತಿ” ದಿನಪತ್ರಿಕೆಯ “ಚೇತನ”ದ ಉಪ ಸಂಪಾದಕಿಯಾಗಿದ್ದ ಪುಷ್ಪ ದೇವಯ್ಯ ಕಂಬೆಯಂಡ ಅವರು ಕನ್ನಡ ಭಾಷೆಗೆ ಅನುವಾದ ಮಾಡಿರುವ “ಮಾಯಾಳ ಮಾಂತ್ರಿಕ ಜಗತ್ತು” 79ನೇ ಪುಸ್ತಕವಾಗಿ ಬಿಡುಗಡೆಗೊಂಡಿದೆ.
::: ದು:ಖಕರ :::
ಆದರೆ ಮಾಯಾ ಇಂದು ಜೀವಂತವಾಗಿಲ್ಲ ಎನ್ನುವ ವಿಚಾರ ಅತ್ಯಂತ ದು:ಖಕರವಾಗಿದೆ. ತನ್ನ ಎಂಟನೇ ವಯಸ್ಸಿಗೆ ಬಾರದ ಲೋಕಕ್ಕೆ ತೆರಳಿದ ಆಕೆ ಬಿಟ್ಟು ಹೋದ ನೆನಪುಗಳು ಅಪಾರ. ಆಕಾಸ್ಮಿಕವಾಗಿ AVM ನಿಂದ ಅಕಾಲಿಕ ಮರಣ ಹೊಂದಿದ ಮಾಯಾಳ ನೆನಪು ಮಾತ್ರ ಈಗ ಶಾಶ್ವತವಾಗಿದೆ. ಅಂಗಾಂಗಗಳನ್ನು ದಾನ ಮಾಡುವ ಮೂಲಕ ಮಾಯಾ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾಳೆ.
ಪುತ್ರಿ ಮಾಯಾಳ ಅಂಗಾಂಗಗಳನ್ನು ದಾನ ಮಾಡಿದ ಕಾರಣಕ್ಕಾಗಿ “ಹಾನರ್ ಬ್ರಿಡ್ಜ್” ಸಂಸ್ಥೆ ಪೋಷಕರಿಗೆ ಪ್ರಶಸ್ತಿ ನೀಡಿ ಗೌರವಿಸಿದೆ. ಮಾಯಾ ನೆನಪಿನಲ್ಲಿ ಅಮೇರಿಕ ಹೈಕ್ರಾಫ್ಟ್ ಡ್ರೈವ್ ಎಲೆಮೆಂಟ್ರಿ ಸ್ಕೂಲ್ ನಲ್ಲಿ ಚೆರ್ರಿ ಗಿಡ ನೆಡುವ ಮೂಲಕ ಸಂತಾಪ ಸೂಚಿಸಿದೆ. ಕಣ್ಣು ದಾನ ಮಾಡಿದಕ್ಕಾಗಿ “ಮಿರಾಕಲ್ ಇನ್ ಸೈಟ್ ಸಂಸ್ಥೆ” ತನ್ನ ಲಾಂಚನವನ್ನು ಪೋಷಕರಿಗೆ ನೀಡಿದೆ.
ಮಾಯಾಳ ತಾಯಿ ಸಂಚಿತ್ ಅಪ್ಪಚ್ಚು, ತಂದೆ ಕಾರ್ತಿಕ್ ಅಪ್ಪಚ್ಚು ಪುಟ್ಟಿಚಂಡ ಮೂಲತಃ ಕೊಡಗು ಜಿಲ್ಲೆಯರಾಗಿದ್ದು, ಉದ್ಯೋಗದ ನಿಮಿತ್ತ ವಿದೇಶದಲ್ಲಿ ನೆಲೆಸಿದ್ದಾರೆ. ಮೀರ (ಅಮ್ಮ) ಹಾಗೂ ವಿಠಲ್ (ತಾತ), ಅಯ್ಯಪ್ಪ (ಮಾಮಾ) ಕೊಡಾಂಗಡ ಹಾಗೂ ಪುಟ್ಟಿಚಂಡ ಅಪ್ಪಯ್ಯ ಮತ್ತು ಜಾನ್ಸಿ ಮೂಲತಃ ಕೊಡಗಿನವರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದು, ಮಾಯಾಳ ಮಾಂತ್ರಿಕ ಜಗತ್ತು ಪುಸ್ತಕವನ್ನು ಬಿಡುಗಡೆಗೊಳಿಸುವ ಮೂಲಕ ಮಾಯಾಳ ಕನಸ್ಸನ್ನು ನನಸು ಮಾಡಿದ್ದಾರೆ.

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Follow us Follow us
Share. WhatsApp Facebook Twitter Email Telegram Copy Link

Related Posts

ಮಡಿಕೇರಿಯಲ್ಲಿ ಜಾನಪದ ದಸರಾ ಸಂಭ್ರಮ: ಜಾನಪದ ಕಲಾಪ್ರಕಾರಗಳ ಪ್ರದರ್ಶನಕ್ಕೆ ಮನಸೋತ ಜನತೆ; ಜಾನಪದ ಸಂಸ್ಕೃತಿಯ ಉಳಿವಿಗೆ ಹೆಚ್ಚಿನ ಕಾಳಜಿ ಅಗತ್ಯ: ಶಾಸಕ ಎ.ಎಸ್.ಪೊನ್ನಣ್ಣ ಕರೆ; ಕಲಾವಿದರು ಹಾಗೂ ಜಾನಪದ ವಸ್ತು ಸಂಗ್ರಹಕಾರರಿಗೆ ಸನ್ಮಾನ

ಅಕ್ಟೋಬರ್ 18, 2026

ಕಾವೇರಿ ತೀರ್ಥೋದ್ಭವದಂದು ಎ.ಎಸ್.ಪೊನ್ನಣ್ಣ ಹಾಗೂ ಡಾ.ಮಂತರ್ ಗೌಡ ಅಭಿಮಾನಿ ಬಳಗದಿಂದ ಸೇವಾ ಕಾರ್ಯ : 3 ಸಾವಿರಕ್ಕೂ ಅಧಿಕ ಭಕ್ತರಿಗೆ ಹಣ್ಣು, ತಂಪು ಪಾನೀಯ, ಕಾಫಿ ವಿತರಣೆ

ಅಕ್ಟೋಬರ್ 18, 2026

ಬಲಮುರಿಯಲ್ಲಿ ಇಂದು ಕಾವೇರಿ ಜಾತ್ರಾ ಮಹೋತ್ಸವ: ಸಕಲ ಸಿದ್ಧತೆ ಪೂರ್ಣ; ವಿಶೇಷ ಪೂಜೆ, ಕಾವೇರಿ ಮಹಾ ಆರತಿ ಹಾಗೂ ಅನ್ನಸಂತರ್ಪಣೆ ಆಯೋಜನೆ

ಅಕ್ಟೋಬರ್ 18, 2026

ಕಾವೇರಿ ತೀರ್ಥೋದ್ಭವದಂದು ಎ.ಎಸ್.ಪೊನ್ನಣ್ಣ ಹಾಗೂ ಡಾ.ಮಂತರ್ ಗೌಡ ಅಭಿಮಾನಿ ಬಳಗದಿಂದ ಸೇವಾ ಕಾರ್ಯ : 3 ಸಾವಿರಕ್ಕೂ ಅಧಿಕ ಭಕ್ತರಿಗೆ ಹಣ್ಣು, ತಂಪು ಪಾನೀಯ, ಕಾಫಿ ವಿತರಣೆ

ಅಕ್ಟೋಬರ್ 18, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ, NEWS DESK ಅ.18 : ಕಾವೇರಿ ತೀರ್ಥೋದ್ಭವದ ದಿನವಾದ ಶನಿವಾರ ಕಾವೇರಿ ದರ್ಶನಕ್ಕೆ ಆಗಮಿಸಿದ ಭಕ್ತಾದಿಗಳಿಗೆ ಎ.ಎಸ್.ಪೊನ್ನಣ್ಣ ಹಾಗೂ…

ಬಲಮುರಿಯಲ್ಲಿ ಇಂದು ಕಾವೇರಿ ಜಾತ್ರಾ ಮಹೋತ್ಸವ: ಸಕಲ ಸಿದ್ಧತೆ ಪೂರ್ಣ; ವಿಶೇಷ ಪೂಜೆ, ಕಾವೇರಿ ಮಹಾ ಆರತಿ ಹಾಗೂ ಅನ್ನಸಂತರ್ಪಣೆ ಆಯೋಜನೆ

ಅಕ್ಟೋಬರ್ 18, 2026

ಕ್ಲೀನ್ ಕಕ್ಕಬ್ಬೆ ಅಭಿಯಾನ ಯಶಸ್ವಿ: 3,670 ಕೆ.ಜಿ. ತ್ಯಾಜ್ಯ ತೆರವು; ನಾಲಡಿ ಕಸಮುಕ್ತ; ಮರಂದೋಡು ಗ್ರಾಮವೂ ಬಹುತೇಕ ಸ್ವಚ್ಛ

ಅಕ್ಟೋಬರ್ 18, 2026

ಗೋಣಿಕೊಪ್ಪ ದಸರಾ ಬಹುಭಾಷಾ ಕವಿಗೋಷ್ಠಿ: 118 ಕವಿಗಳ ಮಹಾಸಂಗಮ; ಜೆನ್-ಜಿ ಹಾಗೂ ಬಾಲಕವಿಗಳಿಂದ ಕವನ ವಾಚನ; ವಿವಿಧ ಭಾಷೆ, ಸಂಸ್ಕೃತಿಗಳ ಸಾಹಿತ್ಯ ಅಭಿವ್ಯಕ್ತಿಗೆ ವೇದಿಕೆ

ಅಕ್ಟೋಬರ್ 18, 2026

ರಾಜ್ಯಮಟ್ಟದ ಯೋಗ ದಸರಾ ಸ್ಪರ್ಧೆಯಲ್ಲಿ ಸುಮೇಶ್ ಕೆ.ಪಿ.ಗೆ ದ್ವಿತೀಯ ಸ್ಥಾನ; ಪಾಲಿಬೆಟ್ಟದ ಚೆಶೈರ್ ಹೋಮ್ ವಿಶೇಷ ಶಾಲೆಯ ವಿದ್ಯಾರ್ಥಿಗೆ ಬೆಳ್ಳಿ ಪದಕ, ನಗದು ಬಹುಮಾನ

ಅಕ್ಟೋಬರ್ 18, 2026

ತಲಕಾವೇರಿಯಲ್ಲಿ ಭಕ್ತರ ಹರ್ಷೋದ್ಘಾರದ ನಡುವೆ ಪವಿತ್ರ ತೀರ್ಥೋದ್ಭವ

ಅಕ್ಟೋಬರ್ 17, 2026

ಮೂರ್ನಾಡಿನಲ್ಲಿ ಅ.20ರಂದು 33ನೇ ವರ್ಷದ ಅದ್ದೂರಿ ಆಯುಧ ಪೂಜೆ ಮಹೋತ್ಸವ; ವಾಹನಗಳ ಮೆರವಣಿಗೆ, ಬೊಂಬೆ ಕುಣಿತ ಆಕರ್ಷಣೆ; ವಿದ್ಯಾರ್ಥಿಗಳು, ನಿವೃತ್ತ ಶಿಕ್ಷಕರು ಹಾಗೂ ಮಾಜಿ ಸೈನಿಕರಿಗೆ ಸನ್ಮಾನ

ಅಕ್ಟೋಬರ್ 17, 2026

ಮಡಿಕೇರಿಯಲ್ಲಿ ಅ. 18ರಂದು ಜಾನಪದ ದಸರಾ ಸಂಭ್ರಮ; ಕಲಾ ಜಾಥಾ, ಜಾನಪದ ವಸ್ತು ಪ್ರದರ್ಶನ ಪ್ರಮುಖ ಆಕರ್ಷಣೆ

ಅಕ್ಟೋಬರ್ 17, 2026

ಮಡಿಕೇರಿಯಲ್ಲಿ ಅ. 18ರಂದು ಜಾನಪದ ದಸರಾ ಸಂಭ್ರಮ; ಕಲಾ ಜಾಥಾ, ಜಾನಪದ ವಸ್ತು ಪ್ರದರ್ಶನ ಪ್ರಮುಖ ಆಕರ್ಷಣೆ

ಅಕ್ಟೋಬರ್ 17, 2026

ವಿರಾಜಪೇಟೆಯಲ್ಲಿ ಅ.20ರಂದು ಅದ್ದೂರಿ ಆಯುಧ ಪೂಜೆ: ಬೈಕ್ ಸಾಹಸ ಪ್ರದರ್ಶನ, ಸಂಗೀತ ರಸಮಂಜರಿ ವಿಶೇಷ ಆಕರ್ಷಣೆ

ಅಕ್ಟೋಬರ್ 17, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.