ನಾಪೋಕ್ಲು ಡಿ.22 : ಕೊಳಕೇರಿಯಿಂದ ಕುಪ್ಪೋಟು ಸೇತುವೆಯ ಕಡೆ ತೆರಲುವ ರಸ್ತೆಯ ಪಕ್ಕದಲ್ಲಿರುವ ಒಣಗಿದ ಮರ ಅಪಾಯವನ್ನು ಆಹ್ವಾನಿಸುತ್ತಿದೆ.
ರಸ್ತೆಯ ಸಮೀಪವಿರುವ ಅಂಗನವಾಡಿ ಪಕ್ಕ ಟಿ.ಎ.ಮಹಮ್ಮದ್ ಎಂಬವರ ಮನೆಯ ಮುಂಭಾಗದ ರಸ್ತೆ ಬದಿಯಲ್ಲಿ ಬಾರಿ ಗಾತ್ರದ ಒಣಗಿದ ಮರ ಒಂದು ಬೀಳುವ ಸ್ಥಿತಿ ಯಲ್ಲಿದೆ.
ಮರ ಕೆಳಗೆ ವಿದ್ಯುತ್ ಲೈನ್ (ತಂತಿ )ಹಾದು ಹೋಗಿದ್ದು, ಮರ ಬಿದ್ದು ಅವಘಡ ಸಂಭವಿಸುವ ಮೊದಲು ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ವೈದು ಎಂ.ಎ ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ವರದಿ : ದುಗ್ಗಳ ಸದಾನಂದ









































