Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada
Home»ಇತ್ತೀಚಿನ ಸುದ್ದಿಗಳು»ಸುಂಟಿಕೊಪ್ಪ : ಸಂತ ಅಂತೋಣಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಗ್ರಾಮ ಸಭೆ
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಸುಂಟಿಕೊಪ್ಪ : ಸಂತ ಅಂತೋಣಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಗ್ರಾಮ ಸಭೆ

ಡಿಸೆಂಬರ್ 23, 20233 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement

ಸುಂಟಿಕೊಪ್ಪ ಡಿ.23 : ಸುಂಟಿಕೊಪ್ಪ ಗ್ರಾ.ಪಂ ವತಿಯಿಂದ ಸಂತ ಅಂತೋಣಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಮಕ್ಕಳ ಗ್ರಾಮಸಭೆ ನಡೆಯಿತು.

ಸಂತ ಮೇರಿ ಆಂಗ್ಲ ಮಾದ್ಯಮ ಶಾಲೆಯ ವಿದ್ಯಾರ್ಥಿನಿ ಐಶ್ವರ್ಯ ಅಧ್ಯಕ್ಷತೆಯಲ್ಲಿ ಮಕ್ಕಳ ಗ್ರಾಮಸಭೆಯಲ್ಲಿ ಶಾಲೆಯ ವಿವಿಧ ಸಮಸ್ಯೆಗಳ ಬಗ್ಗೆ ಮಕ್ಕಳು ಗಮನ ಸೆಳೆದರು.
ಶಾಲೆಯ ಹೂವಿನ ಗಿಡಗಳು ಆಡು ದನಕರುಗಳ ಪಾಲು, ಕುಡಿಯಲು ಶುದ್ಧ ನೀರು, ಹೆದ್ದಾರಿಯಲ್ಲಿ ದಾಟಲು ಜಿಬ್ರಾ ಕ್ರಾಸ್ ಅಳವಡಿಸಿ, ಹಾನಿಗೊಳ್ಳುತ್ತಿರುವ ಕುಡಿಯುವ ನೀರಿನ ಟ್ಯಾಪ್, ಶಾಲಾ ಗೇಟ್ ಮುಂಭಾಗದಲ್ಲಿ ವಾಹನಗಳ ನಿಲುಗಡೆ, ಶಾಲಾ ಅವಧಿಯ ವೇಳೆ ಮೈದಾನಕ್ಕೆ ಸಾರ್ವಜನಿಕರು ಆಗಮಿಸುವುದು. ಶಾಲೆ ಬಿಡುವ ವೇಳೆ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜನೆಗೊಳಿಸುವಂತೆ ಮನವಿ ಮಾಡಿದರು.

ಸಭೆಯಲ್ಲಿ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಮಹಮದ್ ಆರಫನ್ ಮಾತನಾಡಿ, ಶಾಲೆಯಲ್ಲಿ ಶುದ್ಧ ಕುಡಿಯವ ನೀರಿನ ಘಟಕವನ್ನು ಒದಗಿಸಿಕೊಡುಂವಂತೆ ಮನವಿ ಮಾಡಿದರು.

ಸರಕಾರಿ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಕೃತಿಕ ಪಂಚಾಯಿತಿ ವತಿಯಿಂದ ಕುಡಿಯುವ ಸೌಲಭ್ಯ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಪಂಚಾಯಿತಿ ಆಡಳಿತ ಮಂಡಳಿ ಭೇಟಿ ನೀಡುತ್ತಿದ್ದು, ಸಮಸ್ಯೆಗಳನ್ನು ನೀಗಿಸುವಲ್ಲಿ ಕ್ರಮ ಕೈಗೊಂಡಿದ್ದಾರೆ. ಶಾಲೆಯ ಮುಂಭಾಗದಲ್ಲಿ ಸುಂದರವಾದ ಹೂತೋಟವನ್ನು ಮಾಡಲಾಗಿದ್ದು ಮುಖ್ಯ ಶಿಕ್ಷಕರು, ಸಹಶಿಕ್ಷಕರು ಹಾಗೂ ನಿತ್ಯ ವಿದ್ಯಾರ್ಥಿಗಳು ಪಾಠಪ್ರವಚನದ ಸಂದರ್ಭದಲ್ಲಿ ಆಡು, ದನ ಕರುಗಳನ್ನು ಓಡಿಸುವ ಕಾಯಕದಲ್ಲಿ ತೊಡಗಿಸಿಕೊಳ್ಳುವಂತಾಗಿದೆ. ಇದರಿಂದ ನಮಗೆ ಪಾಠ ಪ್ರವಚನ ಕೇಳಲು ಕಷ್ಟಸಾಧ್ಯ ಎಂದರು.

ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಎಂ.ರೋಜ, ಸುಂಟಿಕೊಪ್ಪ ಪಟ್ಟಣದ ನಡುವೆ ರಾಜ್ಯ ಹೆದ್ದಾರಿ ಹಾಗೂ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದ್ದು ನಾವು ಹೆದ್ದಾರಿಯನ್ನು ದಾಟಬೇಕಾದರೆ ವಾಹನಗಳ ವೇಗ ಹಾಗೂ ದಟ್ಟನೆ ಹೆಚ್ಚಾಗಿದ್ದು, ಕನ್ನಡ ವೃತ್ತದ ಬಳಿ ಜಿಬ್ರಾಕ್ರಾಸ್ ಅಳವಡಿಸುವಂತೆ ಕೋರಿದರು.

ಮಹಮದ್ ಆಜ್ಮಲ್ ಮಾತನಾಡಿ, ಶಾಲಾ ವಠಾರದಲ್ಲಿ ವಾಹನಗಳನ್ನು ಕ್ರಮ ಬದ್ದವಾಗಿ ನಿಲ್ಲಿಸದೆ ಎಲ್ಲೆಂದರಲ್ಲಿ ನಿಲ್ಲಿಸಿಕೊಳ್ಳುತ್ತಿದ್ದಾರೆ. ಅಲ್ಲದೆ ಶಾಲಾ ಗೇಟ್ ಮುಂಭಾಗದಲ್ಲಿ ವಾಹನಗಳನ್ನು ತಂದು ನಿಲ್ಲಿಸಲಾಗುತ್ತಿದೆ. ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಸಂಜನ ಸಾರ್ವಜನಿಕರು ಶಾಲಾ ಸಮಯದಲ್ಲಿ ಮೈದಾನಕ್ಕೆ ಆಗಮಿಸುತ್ತಿದ್ದಾರೆ. ಗದ್ದೆಹಳ್ಳದ ಸ.ಹಿ.ಪ್ರಾ.ಶಾ.ದಿಕ್ಷೀತ್ ಶಾಲೆಗೆ ನೀರಿನ ಸೌಲಭ್ಯವಿಲ್ಲ ಪಕ್ಕದ ವಿದ್ಯಾರ್ಥಿ ನಿಲಯ ಅಥವಾ ಸಮೀಪದ ಮನೆಗಳಿಂದ ನೀರು ತರುವಂತಾಗಿದೆ ಕೂಡಲೇ ನೀರಿನ ಸೌಲಭ್ಯ ಒದಗಿಸಿ, ಗದ್ದೆಹಳ್ಳದ ಸ.ಹಿ.ಪ್ರಾ.ಶಾ. ನಿಜ ಫಾತೀಮಾ ಶಾಲೆಗೆ ಸಾಂಸ್ಕøತಿಕ ಚಟುವಟಿಕೆಗಳನ್ನು ನಿರ್ವಹಿಸಲು, ಕಂಪ್ಯೂಟರ್ ಮತ್ತು ಗ್ರಂಥಾಲಯದ ಕೊರತೆಯಿದ್ದು, ಕೂಡಲೆ ಶಾಲೆಗೆ ಒಂದು ಸಭಾಂಗಣವನ್ನು ನಿರ್ಮಿಸುವಂತೆ ಕೋರಿದರು

ಸ.ಹಿ.ಪ್ರಾ.ಶಾ. ಸುಂ.ಸ.ಮಾ.ಪ್ರಾ.ಶಾ. ಹಳೆಯ ಸಭಾಂಗಣವನ್ನು ಕೆಡವಲಾಗಿದ್ದು, ಅದೇ ಸ್ಥಳದಲ್ಲಿ ಸಭಾಂಗಣ ನಿರ್ಮಿಸಲು ಅಡಿಪಾಯ ಹಾಕಲಾಗಿದೆ ಪಿಲ್ಲರ್ ನಿರ್ಮಿಸಲು ಕಬ್ಬಿಣದ ಸಲಾಕೆಗಳನ್ನು ಅಳವಡಿಸಿದ್ದಾರೆ ಅವುಗಳು ಶೀಥಿಲಾವಸ್ಥೆಗೆ ತಲುಪಿದೆ. ಇದರಿಂದ ಮಕ್ಕಳಿಗೆ ಬಾರಿ ಅನಾಹುತಗಳು ಸಂಭವಿಸುವ ಸಾಧ್ಯತೆ ಇದ್ದು, ತಕ್ಷಣವೇ ಅದನ್ನು ತೆರವುಗೊಳಿಸಬೇಕೆಂದು ಅನ್ವಿಕ್ ಸಭೆಯ ಗಮನಕ್ಕೆ ತಂದರು.

ಸುಂಟಿಕೊಪ್ಪ ಠಾಣಾಧಿಕಾರಿ ಎಂ.ಸಿ.ಶ್ರೀಧರ್ ಮಾತನಾಡಿ, ಇಂದಿಗೂ ಬಾಲ್ಯ ವಿವಾಹ ಅಪಾಪ್ತ ಹೆಣ್ಣು ಹಾಗೂ ಗಂಡು ಮಕ್ಕಳ ವಿವಾಹ ಕೆಲವು ಭಾಗಗಳಲ್ಲಿ ಜೀವಂತವಾಗಿದ್ದು, ಅವುಗಳ ಬಗ್ಗೆ ಮಾಹಿತಿ ತಿಳಿದ್ದಲ್ಲಿ ಇಲಾಖೆಯ ಗಮನಕ್ಕೆ ತಂದರೆ ಕೂಡಲೆ ಅಂತಹ ಮಕ್ಕಳನ್ನು ರಕ್ಷಿಸಲು ಕ್ರಮ ಕೈಗೊಳ್ಳಲಾಗುವುದು. ಮಕ್ಕಳು ಮೊಬೈಲ್ ಬಳಕೆಯಿಂದ ದೂರವಿದ್ದಷ್ಟು ಉತ್ತಮ ಪುಸ್ತಕಗಳ ವಾಚಿಸುವುದರಿಂದ ಮೊಬೈಲ್‍ನಲ್ಲಿರುವ ಮಾಹಿತಿಯು ಪುಸ್ತಕದಲ್ಲಿಯೂ ದೊರಕುತ್ತದೆ ಜ್ಞಾನವು ವೃದ್ಧಿಗೊಳ್ಳುತ್ತದೆ. ಮಕ್ಕಳು ಮೋಟಾರ್ ವಾಹನಗಳನ್ನು ಚಲಾಯಿಸಬೇಡಿ 18ಕ್ಕಿಂತ ಕೆಳಗಿನವರು ಮೋಟಾರ್ ವಾಹನ ಚಲಾಯಿಸುವುದರಿಂದ ಪೋಷಕರು ರೂ 25,000 ದಂಡ ಜೈಲು ಸೆರಬೇಕಾಗುತ್ತದೆ. ಕೊಡಗು ಜಿಲ್ಲೆಯು ಪುಟ್ಟ ಪ್ರದೇಶವಾದರೂ ಕ್ರೀಡೆಗೆ ದೇಶ ಸೇವೆಗೆ ತನ್ನದೆಯಾದ ಕೂಡುಗೆಯಿದೆ. ಮಕ್ಕಳು ಕ್ರೀಡೆ ಹಾಗೂ ಸೇನೆಗಳಿಗೆ ಸೇರುವುದರೊಂದಿಗೆ ಜಿಲ್ಲೆಗೆ ಪೋಷಕರಿಗೂ ತರುವಂತೆ ಕಿವಿಮಾತು ಹೇಳಿದರು.
ಯಾವುದೇ ರೀತಿಯ ಅಪಾಯಕಾರಿ ಸಮಸ್ಯೆಗಳು ಎದುರಾದರೆ ತಕ್ಷಣವೇ 1098 ಅಥವಾ 112 ಗೆ ಕರೆಮಾಡಿದರೆ ಕೂಡಲೇ ನೀವು ಇರುವ ಕಡೆ ನಿಮ್ಮ ಸಹಾಯಕ್ಕೆ ಬರಲಿದೆ ಎಂದರು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕ್ಷೇತ್ರ ಕಾರ್ಯಕರ್ತೆ ಜಯಶ್ರೀ ಮಾತನಾಡಿ, ಮಕ್ಕಳಿಗೆ ಯಾವುದೇ ಕಾರಣಕ್ಕೂ ಶಿಕ್ಷಣ ವಂಚಿಗೊಳ್ಳಬಾರದು ಮಕ್ಕಳಿಗಾಗಿಯೇ ಮಕ್ಕಳ ಹಕ್ಕು ಕಾಯ್ದೆ ಸೇರಿದಂತೆ ಒಡಂಬಡಿಕೆ ಕಾನೂನಿನ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ನಿಮ್ಮ ಸುತ್ತ ಮುತ್ತಲಿನ ವ್ಯಾಪ್ತಿಯಲ್ಲಿ ಪೋಷಕರಲ್ಲಿ ಯಾರೊಬ್ಬರು ಕಳೆದುಕೊಂಡು ಬಡತನರೇಖೆಗೆ ಒಳಪಟ್ಟ ಮಕ್ಕಳು ಶಿಕ್ಷಣದಿಂದ ವಂಚಿತರಾಗಿ ಉಳಿದುಕೊಂಡಿರುವವರು ಇದ್ದಲ್ಲಿ ಅರ್ಜಿ ಸಲ್ಲಿಸಿದ್ದಲ್ಲಿ ಸರಕಾರದಿಂದ ರೂ. 4,000 ಸಹಾಯಧನ ನೀಡಲಾಗುತ್ತದೆ. ಹೆಚ್‍ಐವಿ ಮರಣಾಂತಿಕ ಕಾಯಿಲೆ ತುತ್ತಾಗಿರುವ ಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿದ ವಿದ್ಯಾರ್ಥಿಗಳ ಆರೋಗ್ಯ ಸುಧಾರಣೆಗಾಗಿ ಮಾಸಿಕ 1,000 ರೂ.ನೀಡಲಾಗುತ್ತದೆ. ಮಕ್ಕಳ ಮೇಲೆ ಲೈಗಿಂಕ ದೌರ್ಜನ್ಯಗಳು ಪ್ರಕರಣಗಳು ಆಗಿಂದಾಗೆ ನೆಡೆಯುತ್ತಿರುವ ಹಿನ್ನಲೆಯಲ್ಲಿ ಪೊಕ್ಸೋ ಕಾಯ್ದೆಯನ್ನು 2012 ರಲ್ಲಿ ಜಾರಿಗೆ ತರಲಾಗಿದೆ ಇದರಿಂದ ಮಕ್ಕಳ ರಕ್ಷಣೆಗೆ ಸಹಕಾರಿಯಾಗಿದೆ. ಮಕ್ಕಳು ತಮ್ಮ ರಕ್ಷಣೆಗೆ ಸಹಾಯವಾಣಿ ಕೇಂದ್ರದವಾದ 1098 ಹಾಗೂ 112 ಕರೆ ಮಾಡುವ ಮೂಲಕ ನಮ್ಮ ಇಲಾಖೆಯಿಂದ ಮಕ್ಕಳಿಗೆ ಕಾನೂನ್ಮತಕ ರಕ್ಷಣೆಯನ್ನು ನೀಡಲಾಗುತ್ತದೆ ಎಂದರು.

ಸಭೆಯನ್ನು ಗ್ರಾ.ಪಂ ಅಧ್ಯಕ್ಷ ಪಿ.ಆರ್.ಸುನಿಲ್‍ಕುಮಾರ್ ಉದ್ಘಾಟಿಸಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲೋಕೇಶ್ ಪ್ರಾಸ್ತಾವಿಕ ಭಾಷಣ ಮಾತನಾಡಿ, ಮಕ್ಕಳ ಗ್ರಾಮ ಸಭೆಯ ಮಹತ್ವತೆ ಬಗ್ಗೆ ಮಾಹಿತಿ ನೀಡಿದರು.

ವೇದಿಕೆಯಲ್ಲಿ ಗ್ರಾ.ಪಂ ಉಪಾಧ್ಯಕ್ಷೆ ಶಿವಮ್ಮ ಮಹೇಶ್, ಸದಸ್ಯರುಗಳಾದ ಪಿ. ಎಫ್.ಸೆಬಾಸ್ಟಿಯನ್, ಜೀನಾಸುದ್ದೀನ್, ರಫೀಕ್ ಖಾನ್, ಗೀತಾ, ರೇಷ್ಮ, ಕಾಲೇಜಿನ ಪ್ರಾಂಶುಪಾಲೆ ಸಂತ ಮೇರಿ ಆಂಗ್ಲ ಮಾದ್ಯಮ ಶಾಲೆಯ ವ್ಯವಸ್ಥಾಪಕ ಅರುಳ್ ಸೆಲ್ವಕುಮಾರ್, ಕಾಲೇಜಿನ ಪ್ರಾಂಶುಪಾಲರಾದ ಶ್ರೀಲತಾ, ಮೇಲ್ವಿಚಾರಕರು ಮಕ್ಕಳ ಸಹಾಯವಾಣಿ ಘಟಕ ನಿಮಾ ತಂಗಚ್ಚನ್ ಮತ್ತಿತರರು ಇದ್ದರು.

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Follow us Follow us
Share. WhatsApp Facebook Twitter Email Telegram Copy Link

Related Posts

ಮಡಿಕೇರಿಯಲ್ಲಿ ಜಾನಪದ ದಸರಾ ಸಂಭ್ರಮ: ಜಾನಪದ ಕಲಾಪ್ರಕಾರಗಳ ಪ್ರದರ್ಶನಕ್ಕೆ ಮನಸೋತ ಜನತೆ; ಜಾನಪದ ಸಂಸ್ಕೃತಿಯ ಉಳಿವಿಗೆ ಹೆಚ್ಚಿನ ಕಾಳಜಿ ಅಗತ್ಯ: ಶಾಸಕ ಎ.ಎಸ್.ಪೊನ್ನಣ್ಣ ಕರೆ; ಕಲಾವಿದರು ಹಾಗೂ ಜಾನಪದ ವಸ್ತು ಸಂಗ್ರಹಕಾರರಿಗೆ ಸನ್ಮಾನ

ಅಕ್ಟೋಬರ್ 18, 2026

ಕಾವೇರಿ ತೀರ್ಥೋದ್ಭವದಂದು ಎ.ಎಸ್.ಪೊನ್ನಣ್ಣ ಹಾಗೂ ಡಾ.ಮಂತರ್ ಗೌಡ ಅಭಿಮಾನಿ ಬಳಗದಿಂದ ಸೇವಾ ಕಾರ್ಯ : 3 ಸಾವಿರಕ್ಕೂ ಅಧಿಕ ಭಕ್ತರಿಗೆ ಹಣ್ಣು, ತಂಪು ಪಾನೀಯ, ಕಾಫಿ ವಿತರಣೆ

ಅಕ್ಟೋಬರ್ 18, 2026

ಬಲಮುರಿಯಲ್ಲಿ ಇಂದು ಕಾವೇರಿ ಜಾತ್ರಾ ಮಹೋತ್ಸವ: ಸಕಲ ಸಿದ್ಧತೆ ಪೂರ್ಣ; ವಿಶೇಷ ಪೂಜೆ, ಕಾವೇರಿ ಮಹಾ ಆರತಿ ಹಾಗೂ ಅನ್ನಸಂತರ್ಪಣೆ ಆಯೋಜನೆ

ಅಕ್ಟೋಬರ್ 18, 2026

ಕಾವೇರಿ ತೀರ್ಥೋದ್ಭವದಂದು ಎ.ಎಸ್.ಪೊನ್ನಣ್ಣ ಹಾಗೂ ಡಾ.ಮಂತರ್ ಗೌಡ ಅಭಿಮಾನಿ ಬಳಗದಿಂದ ಸೇವಾ ಕಾರ್ಯ : 3 ಸಾವಿರಕ್ಕೂ ಅಧಿಕ ಭಕ್ತರಿಗೆ ಹಣ್ಣು, ತಂಪು ಪಾನೀಯ, ಕಾಫಿ ವಿತರಣೆ

ಅಕ್ಟೋಬರ್ 18, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ, NEWS DESK ಅ.18 : ಕಾವೇರಿ ತೀರ್ಥೋದ್ಭವದ ದಿನವಾದ ಶನಿವಾರ ಕಾವೇರಿ ದರ್ಶನಕ್ಕೆ ಆಗಮಿಸಿದ ಭಕ್ತಾದಿಗಳಿಗೆ ಎ.ಎಸ್.ಪೊನ್ನಣ್ಣ ಹಾಗೂ…

ಬಲಮುರಿಯಲ್ಲಿ ಇಂದು ಕಾವೇರಿ ಜಾತ್ರಾ ಮಹೋತ್ಸವ: ಸಕಲ ಸಿದ್ಧತೆ ಪೂರ್ಣ; ವಿಶೇಷ ಪೂಜೆ, ಕಾವೇರಿ ಮಹಾ ಆರತಿ ಹಾಗೂ ಅನ್ನಸಂತರ್ಪಣೆ ಆಯೋಜನೆ

ಅಕ್ಟೋಬರ್ 18, 2026

ಕ್ಲೀನ್ ಕಕ್ಕಬ್ಬೆ ಅಭಿಯಾನ ಯಶಸ್ವಿ: 3,670 ಕೆ.ಜಿ. ತ್ಯಾಜ್ಯ ತೆರವು; ನಾಲಡಿ ಕಸಮುಕ್ತ; ಮರಂದೋಡು ಗ್ರಾಮವೂ ಬಹುತೇಕ ಸ್ವಚ್ಛ

ಅಕ್ಟೋಬರ್ 18, 2026

ಗೋಣಿಕೊಪ್ಪ ದಸರಾ ಬಹುಭಾಷಾ ಕವಿಗೋಷ್ಠಿ: 118 ಕವಿಗಳ ಮಹಾಸಂಗಮ; ಜೆನ್-ಜಿ ಹಾಗೂ ಬಾಲಕವಿಗಳಿಂದ ಕವನ ವಾಚನ; ವಿವಿಧ ಭಾಷೆ, ಸಂಸ್ಕೃತಿಗಳ ಸಾಹಿತ್ಯ ಅಭಿವ್ಯಕ್ತಿಗೆ ವೇದಿಕೆ

ಅಕ್ಟೋಬರ್ 18, 2026

ರಾಜ್ಯಮಟ್ಟದ ಯೋಗ ದಸರಾ ಸ್ಪರ್ಧೆಯಲ್ಲಿ ಸುಮೇಶ್ ಕೆ.ಪಿ.ಗೆ ದ್ವಿತೀಯ ಸ್ಥಾನ; ಪಾಲಿಬೆಟ್ಟದ ಚೆಶೈರ್ ಹೋಮ್ ವಿಶೇಷ ಶಾಲೆಯ ವಿದ್ಯಾರ್ಥಿಗೆ ಬೆಳ್ಳಿ ಪದಕ, ನಗದು ಬಹುಮಾನ

ಅಕ್ಟೋಬರ್ 18, 2026

ತಲಕಾವೇರಿಯಲ್ಲಿ ಭಕ್ತರ ಹರ್ಷೋದ್ಘಾರದ ನಡುವೆ ಪವಿತ್ರ ತೀರ್ಥೋದ್ಭವ

ಅಕ್ಟೋಬರ್ 17, 2026

ಮೂರ್ನಾಡಿನಲ್ಲಿ ಅ.20ರಂದು 33ನೇ ವರ್ಷದ ಅದ್ದೂರಿ ಆಯುಧ ಪೂಜೆ ಮಹೋತ್ಸವ; ವಾಹನಗಳ ಮೆರವಣಿಗೆ, ಬೊಂಬೆ ಕುಣಿತ ಆಕರ್ಷಣೆ; ವಿದ್ಯಾರ್ಥಿಗಳು, ನಿವೃತ್ತ ಶಿಕ್ಷಕರು ಹಾಗೂ ಮಾಜಿ ಸೈನಿಕರಿಗೆ ಸನ್ಮಾನ

ಅಕ್ಟೋಬರ್ 17, 2026

ಮಡಿಕೇರಿಯಲ್ಲಿ ಅ. 18ರಂದು ಜಾನಪದ ದಸರಾ ಸಂಭ್ರಮ; ಕಲಾ ಜಾಥಾ, ಜಾನಪದ ವಸ್ತು ಪ್ರದರ್ಶನ ಪ್ರಮುಖ ಆಕರ್ಷಣೆ

ಅಕ್ಟೋಬರ್ 17, 2026

ಮಡಿಕೇರಿಯಲ್ಲಿ ಅ. 18ರಂದು ಜಾನಪದ ದಸರಾ ಸಂಭ್ರಮ; ಕಲಾ ಜಾಥಾ, ಜಾನಪದ ವಸ್ತು ಪ್ರದರ್ಶನ ಪ್ರಮುಖ ಆಕರ್ಷಣೆ

ಅಕ್ಟೋಬರ್ 17, 2026

ವಿರಾಜಪೇಟೆಯಲ್ಲಿ ಅ.20ರಂದು ಅದ್ದೂರಿ ಆಯುಧ ಪೂಜೆ: ಬೈಕ್ ಸಾಹಸ ಪ್ರದರ್ಶನ, ಸಂಗೀತ ರಸಮಂಜರಿ ವಿಶೇಷ ಆಕರ್ಷಣೆ

ಅಕ್ಟೋಬರ್ 17, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.