ಸುಂಟಿಕೊಪ್ಪ ಡಿ.23 : ಮಾದಾಪುರ ರಸ್ತೆಯ ಬ್ಯಾಂಕ್ ಆಫ್ ಬರೋಡದ ವತಿಯಿಂದ “ನಮ್ಮ ಸಂಕಲ್ಪ ವಿಕಸಿತ ಭಾರತ” ಕೇಂದ್ರ ಸರಕಾರದ ಯೋಜನೆಗಳ ಸಂಕಲ್ಪ ಯಾತ್ರೆಯ ಮಹತ್ವದ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು.
ಜಿ.ಎಂ.ಪಿ ಶಾಲಾ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸರಕಾರದ ಯೋಜನೆಗಳ ಸೌಲಭ್ಯಗಳನ್ನು ಪಡೆದುಕೊಳ್ಳಬೇಕಾದರೆ ಫಲಾನುಭವಿಗಳು ಬ್ಯಾಂಕ್ ಖಾತೆಗಳನ್ನು ಹೊಂದಿರಬೇಕೆಂದು ಬ್ಯಾಂಕ್ ಆಫ್ ಬರೋಡದ ವ್ಯವಸ್ಥಾಪಕ ದೀಪ್ತಿ ಸಿ.ಗಂಗಾಧರ್ ಹೇಳಿದರು.
ಅಂಚೆ ಇಲಾಖೆ ಅಧಿಕಾರಿ ಅಮಿತಾ, ಇಂಡಿಯನ್ ಗ್ಯಾಸ್ ವಿತರಕ ರಾಕೇಶ್, ನಬಾರ್ಡ್ ಜಿಲ್ಲಾ ಮೇಲ್ವಿಚಾರಕ ರಮೇಶ್, ಗ್ರಾಮ ಪಂಚಾಯಿತಿ ಅಭಿವೃಧ್ದಿ ಅಧಿಕಾರಿ ಲೋಕೇಶ್, ಕೇಂದ್ರ ಸರಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಲ್ಲಿಸಬೇಕಾದ ಅರ್ಜಿಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿದರು.
ಸಂಕಲ್ಪಯಾತ್ರೆಯ ಅಯೋಜಕರು ಸ್ವಸ್ತಿಕ್ ಡ್ರೋನ್ ಮೂಲಕ ರೈತರು ತಮ್ಮ ಬೆಳೆಗಳಿಗೆ ಕ್ರಿಮಿ ನಾಶಕ ಔಷಧಿ ಸಿಂಪಡಿಸುವ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು. ರೈತರು ಡ್ರೋನ್ ಖರೀದಿಸುವುದಾದರೆ ಕೇಂದ್ರ ಸರಕಾರದಿಂದ ಇರುವ ರಿಯಾಯಿತಿ ಬಗ್ಗೆ ಮಾಹಿತಿ ನೀಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್.ಸುನೀಲ್‌ಕುಮಾರ್, ಬ್ಯಾಂಕ್ ಆಫ್ ಬರೋಡ ಅಧಿಕಾರಿಗಳಾದ ಚಂದ್ರಶೇಖರ್ ರೆಡ್ಡಿ, ಚಿನ್ನ ಬಾಬು, ರವಿ, ಚಿನ್ನಮ್ಮ, ಸಿಬ್ಬಂದಿ ಸಂತೋಷ್ ಮತ್ತಿತರರು ಹಾಜರಿದ್ದರು.









