ಮಡಿಕೇರಿ ಡಿ.26 : ರೋಟರಿ ಸಂಸ್ಥೆಯ ಶಿಕ್ಷಕರಾದ ಕೃಷ್ಣ ಪ್ರಸಾದ್ ಅವರು ಪ್ರತಿಲಿಪಿ ಅಂತರ್ಜಾಲ ಸಾಹಿತ್ಯ ವೇದಿಕೆಯ ಬರಹಗಾರರು ಗಳಿಸಬಹುದಾದ ಪ್ರತಿಷ್ಠಿತ ಗೌರವ ಗೋಲ್ಡನ್ ಬ್ಯಾಡ್ಜ್ ಪ್ರಮಾಣ ಪತ್ರಕ್ಕೆ ಪಾತ್ರರಾಗಿದ್ದಾರೆ.
ಅಂತರ್ಜಾಲದ ಈ ಆ್ಯಪ್ ನಲ್ಲಿ ಇವರು ನಾಲ್ಕು ಸಾವಿರಕ್ಕೂ ಅಧಿಕ ಓದುಗರನ್ನು ಸಂಪಾದಿಸಿದ್ದು, ಸಾಹಿತ್ಯದ ವಿವಿಧ ಪ್ರಕಾರಗಳಾದ ಕಥೆ, ಲೇಖನ, ಧಾರವಾಹಿ, ಅನುಭವ ಬರಹ, ಹಾಸ್ಯ ಒಟ್ಟಾರೆಯಾಗಿ 126 ಬರಹಗಳನ್ನು ಬರೆದಿದ್ದಾರೆ. ಹಾಲುಗುಂದ ಗ್ರಾಮದವರಾಗಿದ್ದು, ಶಿಕ್ಷಕ ವೃತ್ತಿಯಲ್ಲಿ ಯಶಸ್ವಿಯಾಗಿ 14 ವರ್ಷದ ಅನುಭವವೂ ಇವರಿಗಿದೆ.







