Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಮಡಿಕೇರಿ ನಗರಸಭೆ : ತ್ಯಾಜ್ಯ ನಿರ್ವಹಣೆಗೆ ವೈಜ್ಞಾನಿಕ ವಿಧಾನಕ್ಕೆ ಒತ್ತು : ಶಾಸಕ ಮಂತರ್ ಗೌಡ*
  • *ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕುಂದುಕೊರತೆ ಸಭೆ : ಪರಿಶಿಷ್ಟರ ಸಮಸ್ಯೆಗಳನ್ನು ಕಾಲಮಿತಿಯಲ್ಲಿ ಪರಿಹರಿಸುವುದು ಆದ್ಯ ಕೆಲಸವಾಗಿದೆ : ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ*
  • *ಕೊಡಗು ವಿದ್ಯಾಲಯದಲ್ಲಿ  ರಕ್ಷಾ ಬಂಧನ*
  • *ಹಾಕತ್ತೂರು ಸಹಕಾರ ಸಂಘದಿಂದ ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹ*
  • *ವಿದ್ಯುತ್ ಸ್ಥಾವರದ ಸ್ಥಳಾಂತರಕ್ಕೆ ಕೊಡಗು ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಮನವಿ*
  • *ಕನಿಷ್ಠ ವೇತನ, ಕೆಲಸದ ಭದ್ರತೆಗಾಗಿ ಆಗ್ರಹಿಸಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಪ್ರತಿಭಟನೆ*
  • *ಶಿಕಾರಿಪುರದಲ್ಲಿ ಗೋರಕ್ಷಕರ ಮೇಲಿನ ಹಲ್ಲೆ ಖಂಡಿಸಿ ಕೊಡಗು ಜಿಲ್ಲಾಧಿಕಾರಿಗೆ ಮನವಿ : ಗಡಿಭಾಗಗಳಲ್ಲಿ ರಾತ್ರಿ ಗಸ್ತು ಹೆಚ್ಚಿಸಲು ಆಗ್ರಹ*
  • *ವಿರಾಜಪೇಟೆಯ ಶಿವಕೇರಿಯಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ವರಮಹಾಲಕ್ಷ್ಮಿ ಪೂಜಾ ಮಹೋತ್ಸವ*
  • *ಕಾನೂನು ಸುವ್ಯವಸ್ಥೆ ನಿರ್ವಹಣೆಯಲ್ಲಿ ಉತ್ತಮ ಕರ್ತವ್ಯ : ಆರು ಪೊಲೀಸ್ ಅಧಿಕಾರಿಗಳಿಗೆ ಪ್ರಶಂಸನಾ ಪತ್ರ*
  • ಗೋಣಿಕೊಪ್ಪ ದಸರಾಕ್ಕೆ ₹1 ಕೋಟಿ ಅನುದಾನ : ದಶಮಂಟಪಗಳಿಗೆ ಹೆಚ್ಚಿನ ನೆರವಿನ ಭರವಸೆ
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಜ.5 ರಂದು ಮಜ್ಲಿಸುನ್ನೂರ್ ಆಧ್ಯಾತ್ಮಿಕ ಸಂಗಮ ಕಾರ್ಯಕ್ರಮ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಜ.5 ರಂದು ಮಜ್ಲಿಸುನ್ನೂರ್ ಆಧ್ಯಾತ್ಮಿಕ ಸಂಗಮ ಕಾರ್ಯಕ್ರಮ*

ಜನವರಿ 4, 20242 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಜ.4 :  ಎಸ್‍ವೈಎಸ್ ಕೊಡಗು ಜಿಲ್ಲಾ ಸಮಿತಿಯ ವತಿಯಿಂದ ಜ.5 ರಂದು ನಾಪೋಕ್ಲುವಿನಲ್ಲಿ ಜಿಲ್ಲಾ ಕಹ್ಫುಲ್ ವರಾ ಮಜ್ಲಿಸುನ್ನೂರ್ ಬೃಹತ್ ಆಧ್ಯಾತ್ಮಿಕ ಸಂಗಮ ನಡೆಯಲಿದೆ ಎಂದು ಸಮಿತಿಯ ಸಂಘಟನಾ ಕಾರ್ಯದರ್ಶಿ ಸಿ.ಎಂ.ಹಮೀದ್ ಮುಸ್ಲಿಯಾರ್ ಸುಂಟಿಕೊಪ್ಪ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಸಂಜೆ 5 ಗಂಟೆಯಿಂದ ನಾಪೋಕ್ಲು ಮಾರ್ಕೆಟ್ ಮುಂಭಾಗದಲ್ಲಿ ಜಿಲ್ಲಾ ಕಹ್ಫುಲ್ ವರಾ ಮಜ್ಲಿಸುನ್ನೂರ್ ಬೃಹತ್ ಆಧ್ಯಾತ್ಮಿಕ ಸಂಗಮ ನಡೆಯಲಿದೆ ಎಂದರು.
ಸಮಸ್ತ ಎಂಬ ಆಧ್ಯಾತ್ಮಿಕ ಉಲಮಾ ಒಕ್ಕೂಟದ ಯುವಜನ ಘಟಕವಾದ ಸುನ್ನಿ ಯುವಜನ ಸಂಘ (ಎಸ್‍ವೈಎಸ್) ಕಳೆದ 70 ವರ್ಷಗಳಿಂದ ಧಾರ್ಮಿಕ ಮತ್ತು ಶೈಕ್ಷಣಿಕ ಹಾಗೂ ಜನಪರ ಸಮಾಜಮುಖಿ ಕಾರ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಸಂಘಟನೆಯಾಗಿದ್ದು, ಶಾಂತಿ ಹಾಗೂ ಸಮಾಧಾನ ಮತ್ತು ಸಹಬಾಳ್ವೆಯನ್ನು ಸಾರುವ ಧರ್ಮದ ವಿಶ್ವಾಸ ವಿಚಾರಗಳನ್ನು ಸಮಾಜಕ್ಕೆ ಅರ್ಥೈಸಿ ಕೊಡುವುದರೊಂದಿಗೆ ಆಧ್ಯಾತ್ಮಿಕವಾಗಿ ಜನರ ಮನಸ್ಸುಗಳನ್ನು ಶುಚೀಕರಿಸುವುದರ ಮೂಲಕ ಉತ್ತಮ ಸಮಾಜದ ನಿರ್ಮಾಣ ಎಂಬ ವಿಶ್ವಾಸದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಜ.5 ರಂದು ಅಸರ್ ನಮಾಜಿನ ಬಳಿಕ ಹಿರಿಯ ವಿದ್ವಾಂಸರಾದ ಹುಸೈನ್ ಮುಸ್ಲಿಯಾರ್ ಕುಂಜಿಲ ಉಸ್ತಾದರ ನೇತೃತ್ವದಲ್ಲಿ ಚೆರಿಯ ಪರಂಬು ದರ್ಗಾ ಝಿಯಾರತ್ ನಡೆಯಲಿದ್ದು, ನಂತರ ನಾಪೆÇೀಕ್ಲು ನಗರದ ಮಾರ್ಕೆಟ್ ಮುಂಭಾಗ ಕಾರ್ಯಕ್ರಮದ ಸ್ವಾಗತ ಸಮಿತಿಯ ಜನರಲ್ ಕನ್ವೀನರ್ ಅಬ್ದುಲ್ ಹಮೀದ್ ಹಾಜಿ ಬೆಟ್ಟಗೇರಿ ಧ್ವಜಾರೋಹಣ ನೆರವೇರಿಸಲಿದ್ದಾರೆ.
ಬಳಿಕ ಎಸ್.ವೈ.ಎಸ್ ಆಮಿಲಾ ಸಮಿತಿಯ ವತಿಯಿಂದ ಅಬ್ದುಲ್ಲಾ ಉಸ್ತಾದರ ನೇತೃತ್ವದಲ್ಲಿ ಶೈಖುನಾ ಶಂಸುಲ್ ಉಲಮಾ (ಖ, ಸಿ )ಮೌಲಿದ್ ಪಾರಾಯಣೆ ನಡೆಯಲಿದ್ದು, ಮಗ್ರಿಬ್ ನಮಾಜಿನ ನಂತರ ಬೃಹತ್ ಮಜ್ಲಿಸುನ್ನೂರ್ ಆಧ್ಯಾತ್ಮಿಕ ಸಂಗಮ ಹಾಗೂ ಧಾರ್ಮಿಕ ಪ್ರವಚನ ಕಾರ್ಯಕ್ರಮ ನಡೆಯಲಿದೆ.
ಎಸ್‍ವೈಎಸ್ ಕೊಡಗು ಜಿಲ್ಲಾ ಅಧ್ಯಕ್ಷರಾದ ಸಿ.ಪಿ.ಎಂ ಬಶೀರ್ ಹಾಜಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಉದ್ಘಾಟನೆಯನ್ನು ಸಮಸ್ತ ಕೇಂದ್ರ ಮುಶಾವರ ಸದಸ್ಯರು ಹಾಗೂ ಜಿಲ್ಲೆಯ ಖಾಝಿಗಳು ಆದ ಶೈಖುನಾ ಅಬ್ದುಲ್ಲಾ ಫೈಝಿ ಎಡಪಾಲ ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದ ಮೊದಲಿಗೆ ಎ.ಸಿ.ಉಸ್ಮಾನ್ ಫೈಝಿ ಪ್ರಾರಂಭ ಪ್ರಾರ್ಥನೆ ನಡೆಸಲಿದ್ದಾರೆ.
ಕಾರ್ಯಕ್ರಮದ ಕೇಂದ್ರಬಿಂದುವಾದ ಮಜ್ಲಿಸುನ್ನೂರ್ ಆಧ್ಯಾತ್ಮಿಕ ಸಂಗಮ ಹಾಗೂ ದುಆ ಮಜ್ಲಿಸ್ ನಡೆಯಲಿದ್ದು, ಸಂಗಮದ ನೇತೃತ್ವವನ್ನು ಮುಸಲ್ಮಾನರ ಆಧ್ಯಾತ್ಮಿಕ ನೇತರರಾರಾದ ಪಾಣಕ್ಕಾಡ್ ಸಯ್ಯದ್ ಮುಈನ್ ಅಲಿ ಶಿಹಾಬ್ತ ತಂಗಳ್ ವಹಿಸಿಕೊಳ್ಳಲಿದ್ದಾರೆ. ಸಾವಿರಾರು ಮಂದಿ ಪ್ರಸ್ತುತ ಪ್ರಾರ್ಥನಾ ಸಂಗಮದಲ್ಲಿ ಪಾಲ್ಗೊಳ್ಳಲಿದ್ದು, ಎಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಪರಿಹಾರವನ್ನು ಕಂಡುಕೊಳ್ಳಲಿದ್ದಾರೆ.
ಬಳಿಕ ನೆರೆದ ವಿಶ್ವಾಸಿಗಳ ಹೃದಯಕ್ಕೆ ಸಾಂತ್ವನದ ಬೆಳಕು ಚೆಲ್ಲುತ್ತಾ ಕೇರಳ ಹಾಗೂ ಕರ್ನಾಟಕದಾದ್ಯಂತ ಖ್ಯಾತಿ ಹೊಂದಿದ ಭಾಷಣಗಾರ ಗೌರವಾನ್ವಿತ ಮಹ್ ಮೂನ್ ಹುದವಿ ಮಲಪ್ಪುರಂ ಕೇರಳ ಸಬಿಕರನ್ನು ಉದ್ದೇಶಿಸಿ ಮುಖ್ಯ ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಹುಸೈನ್ ಮುಸ್ಲಿಯಾರ್ ಕುಂಜಿಲ, ಮಾಜಿ ಶಾಸಕರಾದ ಸುಂಠಿಕೊಪ್ಪ ಇಬ್ರಾಹಿಂ ಮಾಸ್ಟರ್, ನಾಪೋಕ್ಲು ಜುಮಾ ಮಸೀದಿ ಅಧ್ಯಕ್ಷರಾದ ಎಂ. ಎಚ್. ಅಬ್ದುಲ್ ರಹ್ಮಾನ್, ನಾಲ್ಕುನಾಡ್ ಮುಸ್ಲಿಂ ಜಮಾಹತ್ ಮುಖಂಡರಾದ ಪಿ.ಎಂ.ಖಾಸಿಂ ನಾಪೋಕ್ಲು, ಸಮಸ್ತ ಉಮರಾ ನಾಯಕರಾದ ಯಾಕೂಬ್ ಬಜೆಗುಂಡಿ, ಮಾಹಿನ್ ಹಾಜಿ ಎಮ್ಮೆಮಾಡು, ಇಸ್ಮಾಈಲ್ ನಾಪೋಕ್ಲು , ಅಶ್ರಫ್ ಫೈಝಿ ಕುಶಾಲನಗರ, ಇಕ್ಬಾಲ್ ಮುಸ್ಲಿಯಾರ್, ಆರಿಫ್ ಫೈಝಿ, ತಂಲೀಕ್ ದಾರಿಮಿ ಮುಂತಾದ ಗಣ್ಯರು ಹಾಗೂ ಉಲಮಾ ಉಮರಾ ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಸ್ತ್ರೀಯರಿಗೆ ವಿಶೇಷ ಸ್ಥಳಾವಕಾಶವಿದ್ದು, ಕೊನೆಯಲ್ಲಿ ತಬರ್ರುಕ್ ವಿತರಣೆ ಸಹ ನಡೆಯಲಿದೆ. ಸಮಾರಂಭದ ಕೊನೆಯಲ್ಲಿ ಎಸ್‍ವೈಎಸ್ ನಾಪೋಕ್ಲು ವಲಯ ಅಧ್ಯಕ್ಷ ಹಂಝ ಮೌಲವಿ ಕುಂಜಿಲ ಧನ್ಯವಾದ ಸಮರ್ಪಣೆ ಮಾಡಲಿದ್ದಾರೆ ಎಂದು ಸಿ.ಎಂ.ಹಮೀದ್ ಮುಸ್ಲಿಯಾರ್ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಎಸ್‍ವೈಎಸ್ ಅಧ್ಯಕ್ಷ ಸಿಪಿಎಂ ಬಶೀರ್ ಹಾಜಿ, ಕೋಶಾಧಿಕಾರಿ ವೈ.ಎಂ.ಉಮರ್ ಫೈಝಿ, ಸ್ವಾಗತ ಸಮಿತಿ ಜನರಲ್ ಕನ್ವೀನರ್ ಅಬ್ದುಲ್ ಹಮೀದ್ ಹಾಜಿ ಬೆಟ್ಟಗೇರಿ, ಎಸ್‍ವೈಎಸ್ ನಾಪೋಕ್ಲು ವಲಯ ಸಮಿತಿ ಅಧ್ಯಕ್ಷ ಹಂಝ ಮೌಲವಿ ಕುಂಜಿಲ ಹಾಗೂ ಸ್ವಾಗತ ಸಮಿತಿ ಸದಸ್ಯ ಅಬ್ದುಲ್ ರಶೀದ್ ನಾಪೋಕ್ಲು ಉಪಸ್ಥಿತರಿದ್ದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಮಡಿಕೇರಿ ನಗರಸಭೆ : ತ್ಯಾಜ್ಯ ನಿರ್ವಹಣೆಗೆ ವೈಜ್ಞಾನಿಕ ವಿಧಾನಕ್ಕೆ ಒತ್ತು : ಶಾಸಕ ಮಂತರ್ ಗೌಡ*

ಆಗಷ್ಟ್ 29, 2026

*ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕುಂದುಕೊರತೆ ಸಭೆ : ಪರಿಶಿಷ್ಟರ ಸಮಸ್ಯೆಗಳನ್ನು ಕಾಲಮಿತಿಯಲ್ಲಿ ಪರಿಹರಿಸುವುದು ಆದ್ಯ ಕೆಲಸವಾಗಿದೆ : ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ*

ಆಗಷ್ಟ್ 29, 2026

*ಕೊಡಗು ವಿದ್ಯಾಲಯದಲ್ಲಿ  ರಕ್ಷಾ ಬಂಧನ*

ಆಗಷ್ಟ್ 29, 2026

*ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕುಂದುಕೊರತೆ ಸಭೆ : ಪರಿಶಿಷ್ಟರ ಸಮಸ್ಯೆಗಳನ್ನು ಕಾಲಮಿತಿಯಲ್ಲಿ ಪರಿಹರಿಸುವುದು ಆದ್ಯ ಕೆಲಸವಾಗಿದೆ : ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ*

ಆಗಷ್ಟ್ 29, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ, NEWS DESK ಆ.29 : ಪೊಲೀಸ್ ಇಲಾಖೆ ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಸಾರ್ವಜನಿಕರಿಗೆ ಸ್ಪಂದಿಸದಿದ್ದಲ್ಲಿ ಮಾಹಿತಿ ನೀಡಬಹುದಾಗಿದೆ. ಪೊಲೀಸ್…

*ಕೊಡಗು ವಿದ್ಯಾಲಯದಲ್ಲಿ  ರಕ್ಷಾ ಬಂಧನ*

ಆಗಷ್ಟ್ 29, 2026

*ಹಾಕತ್ತೂರು ಸಹಕಾರ ಸಂಘದಿಂದ ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹ*

ಆಗಷ್ಟ್ 29, 2026

*ವಿದ್ಯುತ್ ಸ್ಥಾವರದ ಸ್ಥಳಾಂತರಕ್ಕೆ ಕೊಡಗು ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಮನವಿ*

ಆಗಷ್ಟ್ 29, 2026

*ಕನಿಷ್ಠ ವೇತನ, ಕೆಲಸದ ಭದ್ರತೆಗಾಗಿ ಆಗ್ರಹಿಸಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಪ್ರತಿಭಟನೆ*

ಆಗಷ್ಟ್ 29, 2026

*ಶಿಕಾರಿಪುರದಲ್ಲಿ ಗೋರಕ್ಷಕರ ಮೇಲಿನ ಹಲ್ಲೆ ಖಂಡಿಸಿ ಕೊಡಗು ಜಿಲ್ಲಾಧಿಕಾರಿಗೆ ಮನವಿ : ಗಡಿಭಾಗಗಳಲ್ಲಿ ರಾತ್ರಿ ಗಸ್ತು ಹೆಚ್ಚಿಸಲು ಆಗ್ರಹ*

ಆಗಷ್ಟ್ 29, 2026

*ವಿರಾಜಪೇಟೆಯ ಶಿವಕೇರಿಯಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ವರಮಹಾಲಕ್ಷ್ಮಿ ಪೂಜಾ ಮಹೋತ್ಸವ*

ಆಗಷ್ಟ್ 28, 2026

*ಕಾನೂನು ಸುವ್ಯವಸ್ಥೆ ನಿರ್ವಹಣೆಯಲ್ಲಿ ಉತ್ತಮ ಕರ್ತವ್ಯ : ಆರು ಪೊಲೀಸ್ ಅಧಿಕಾರಿಗಳಿಗೆ ಪ್ರಶಂಸನಾ ಪತ್ರ*

ಆಗಷ್ಟ್ 28, 2026

ಗೋಣಿಕೊಪ್ಪ ದಸರಾಕ್ಕೆ ₹1 ಕೋಟಿ ಅನುದಾನ : ದಶಮಂಟಪಗಳಿಗೆ ಹೆಚ್ಚಿನ ನೆರವಿನ ಭರವಸೆ

ಆಗಷ್ಟ್ 28, 2026

*ವಿರಾಜಪೇಟೆ ಬಿಲ್ಲವ ಸೇವಾ ಸಂಘದಿಂದ ನಾರಾಯಣ ಗುರು ಜಯಂತಿ*

ಆಗಷ್ಟ್ 28, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.