Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ವಿದ್ಯುತ್ ಸ್ಥಾವರದ ಸ್ಥಳಾಂತರಕ್ಕೆ ಕೊಡಗು ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಮನವಿ*
  • *ಕನಿಷ್ಠ ವೇತನ, ಕೆಲಸದ ಭದ್ರತೆಗಾಗಿ ಆಗ್ರಹಿಸಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಪ್ರತಿಭಟನೆ*
  • *ಶಿಕಾರಿಪುರದಲ್ಲಿ ಗೋರಕ್ಷಕರ ಮೇಲಿನ ಹಲ್ಲೆ ಖಂಡಿಸಿ ಕೊಡಗು ಜಿಲ್ಲಾಧಿಕಾರಿಗೆ ಮನವಿ : ಗಡಿಭಾಗಗಳಲ್ಲಿ ರಾತ್ರಿ ಗಸ್ತು ಹೆಚ್ಚಿಸಲು ಆಗ್ರಹ*
  • *ವಿರಾಜಪೇಟೆಯ ಶಿವಕೇರಿಯಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ವರಮಹಾಲಕ್ಷ್ಮಿ ಪೂಜಾ ಮಹೋತ್ಸವ*
  • *ಕಾನೂನು ಸುವ್ಯವಸ್ಥೆ ನಿರ್ವಹಣೆಯಲ್ಲಿ ಉತ್ತಮ ಕರ್ತವ್ಯ : ಆರು ಪೊಲೀಸ್ ಅಧಿಕಾರಿಗಳಿಗೆ ಪ್ರಶಂಸನಾ ಪತ್ರ*
  • ಗೋಣಿಕೊಪ್ಪ ದಸರಾಕ್ಕೆ ₹1 ಕೋಟಿ ಅನುದಾನ : ದಶಮಂಟಪಗಳಿಗೆ ಹೆಚ್ಚಿನ ನೆರವಿನ ಭರವಸೆ
  • *ವಿರಾಜಪೇಟೆ ಬಿಲ್ಲವ ಸೇವಾ ಸಂಘದಿಂದ ನಾರಾಯಣ ಗುರು ಜಯಂತಿ*
  • *ಮಾನವ ವನ್ಯಜೀವಿ ಸಂಘರ್ಷ : ಸಾರ್ವಜನಿಕರ ಜತೆ ಸಮಾಲೋಚಿಸಿದ ಅರಣ್ಯ ಸಚಿವರು*
  • *ಕಸ್ತೂರಿ ರಂಗನ್ ವರದಿ : ರಾಜ್ಯ ಸರಕಾರ ರಾಜಕೀಯ ಮಾಡುವುದನ್ನು ಮೊದಲು ನಿಲ್ಲಿಸಲಿ : ಚೆಪ್ಪುಡಿರ ರಾಕೇಶ್ ದೇವಯ್ಯ ಒತ್ತಾಯ*
  • *ಮಡಿಕೇರಿಯಲ್ಲಿ ಬ್ರಹ್ಮರ್ಷಿ ಶ್ರೀ ನಾರಾಯಣ ಗುರು ಮತ್ತು ಕಾಯಕಯೋಗಿ ಶಿವಶರಣ ನುಲಿಯ ಚಂದಯ್ಯ ಜಯಂತಿ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ವೇತನದ ಹಣ ಸಾಮಾಗ್ರಿ ಖರೀದಿಗೆ ಬಳಕೆ : ಆಸ್ಪತ್ರೆ ಸ್ವಚ್ಛತಾ ಸಿಬ್ಬಂದಿಗಳ ಆರೋಪ : ತನಿಖೆಗೆ ಆಗ್ರಹ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ವೇತನದ ಹಣ ಸಾಮಾಗ್ರಿ ಖರೀದಿಗೆ ಬಳಕೆ : ಆಸ್ಪತ್ರೆ ಸ್ವಚ್ಛತಾ ಸಿಬ್ಬಂದಿಗಳ ಆರೋಪ : ತನಿಖೆಗೆ ಆಗ್ರಹ*

ಜನವರಿ 5, 20242 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಜ.5 : ವಿರಾಜಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ನೌಕರರ ವೇತನಕ್ಕೆ ಮೀಸಲಿರಿಸಲಾಗಿದ್ದ 10 ಲಕ್ಷ ರೂ.ಗಳನ್ನು ನಿಯಮ ಮೀರಿ, ಸಾಮಾಗ್ರಿ ಖರೀದಿಗೆ ಬಳಸಲಾಗಿದೆ. ಇದರಿಂದ ಕಳೆದ ಮೂರು ತಿಂಗಳಿನಿಂದ ಆಸ್ಪತೆಯ ಡಿ ಗ್ರೂಪ್ ಮತ್ತು ನಾನ್ ಕ್ಲೀನಿಂಗ್ ನೌಕರರು ವೇತನ ದೊರಕದೆ ಸಂಕಷ್ಟಕ್ಕೆ ಸಿಲುಕಿರುವುದಾಗಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯ ಸ್ವಚ್ಛತಾ ಮತ್ತು ಇತರೆ ಕಾರ್ಮಿಕರ ಸಂಘದ ಕೊಡಗು ಜಿಲ್ಲಾ ಸಮಿತಿಯ ಅಧ್ಯಕ್ಷ ಪಿ.ಆರ್.ಭರತ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುತ್ತಿಗೆ ಆಧಾರದಲ್ಲಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುವ ನೌಕರರ ವೇತನಕ್ಕೆ ಅಡಚಣೆಯಾಗಬಾರದೆನ್ನುವ ದೃಷ್ಟಿಯಿಂದ ಮೀಸಲು ಇರಿಸಿದ್ದ ಹಣವನ್ನು 2022 ರಲ್ಲಿ ಆಸ್ಪತ್ರೆಗೆ ಬೆಡ್ ಶೀಟ್, ಹಾಸಿಗೆ ಖರೀದಿಗೆ ಬಳಸಿರುವಂತೆ ತೋರಿಸಲಾಗಿದೆ. ಆದರೆ, 2023 ನೇ ಸಾಲಿನಲ್ಲಿ ಮತ್ತೆ ಆಸ್ಪತ್ರೆಗೆ ಬೆಟ್‍ಶೀಟ್ ಮತ್ತಿತರ ಸಾಮಾಗ್ರಿಗಳಿಗೆ ಬೇಡಿಕೆ ಇಡಲಾಗಿದೆ. ಇದನ್ನು ಗಮನಿಸಿದಾಗ ಹಿಂದಿನ ಸಾಲಿನಲ್ಲಿ ಮೀಸಲು ಹಣದಲ್ಲಿ ನಡೆದಿರುವ ಖರೀದಿಯಲ್ಲಿ ದುರುಪಯೋಗವಾಗಿರುವ ಅನುಮಾನಗಳಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕೆಂದು ಆಗ್ರಹಿಸಿದರು.


ವಿರಾಜಪೇಟೆ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಡಿ ಗ್ರೂಪ್ ಮತ್ತು ನಾನ್ ಕ್ಲೀನಿಂಗ್ ನೌಕರರಿಗೆ ಮೂರು ತಿಂಗಳಿನಿಂದ ವೇತನ ನೀಡದೇ ಕಾರ್ಮಿಕರು ದೈನಂದಿನ ಜೀವನ ನಡೆಸಲು ಸಂಕಷ್ಟ ಪಡುತ್ತಿದ್ದಾರೆ. ಸಾಲ ಪಡೆದು ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ಬಗ್ಗೆ ಸಂಘದ ವತಿಯಿಂದ ಸಂಬಂಧಪಟ್ಟ ಗುತ್ತಿಗೆದಾರರನ್ನು ವಿಚಾರಿಸಿದಾಗ ನಮಗೆ ಬಿಲ್ ಪಾವತಿ ಆಗದೇ ಇರುವುದರಿಂದ ಸರಿಯಾದ ರೀತಿಯಲ್ಲಿ ವೇತನ ನೀಡಲು ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ. ಆದರೆ ಆಸ್ಪತ್ರೆಯ ಅಧಿಕಾರಿಗಳನ್ನು ವಿಚಾರಿಸಿದಾಗ ವೇತನಕ್ಕಾಗಿ ಮೀಸಲಾಗಿದ್ದ 10 ಲಕ್ಷವನ್ನು ಆಸ್ಪತ್ರೆಯ ಸಾಮಾಗ್ರಿಗಳ ಖರೀದಿಗೆ ಬಳಸಿಕೊಂಡಿರುವುದು ಕಂಡು ಬಂದಿದೆ ಎಂದು ತಿಳಿಸಿದರು.
::: ಪ್ರತಿಭಟನೆಯ ಎಚ್ಚರಿಕೆ :::
ಆಸ್ಪತ್ರೆಯ ಕಾರ್ಮಿಕರ ವೇತನವನ್ನು ತಕ್ಷಣವೇ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆಯಲಾಗಿದೆ. ಹೊರಗುತ್ತಿಗೆ ನೌಕರರನ್ನು ಒದಗಿಸುವ ಸಂಸ್ಥೆಯೊಂದು ಎರಡು ತಿಂಗಳ ವೇತನ ನೀಡಿರುವುದಾಗಿ ತಿಳಿದು ಬಂದಿದೆ. ಬಾಕಿ ವೇತನವನ್ನು ತಕ್ಷಣವೇ ನೀಡದಿದ್ದಲ್ಲಿ ವಿರಾಜಪೇಟೆ ಆಸ್ಪತ್ರೆ ಮುಂಭಾಗ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಸ್ವಚ್ಛತಾ ಮತ್ತು ಡಿ ಗ್ರೂಪ್ ನೌಕರರಿಗೆ ಸರ್ಕಾರ ನೀಡುತ್ತಿರುವ ವೇತನವನ್ನು ಅವರ ದೈನಂದಿನ ಜೀವನದ ಬದುಕು ನಡೆಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಅವರಿಗೆ ಮಾಸಿಕ ಕನಿಷ್ಟ ವೇತನ 31 ಸಾವಿರ ನೀಡಬೇಕು, ಸ್ಚಚ್ಛತಾ ಮತ್ತು ಡಿ ಗ್ರೂಪ್ ನೌಕರರನ್ನು ಗುತ್ತಿಗೆ, ಕಾಂಟ್ರೆಕ್ಟ್ ಪದ್ಧತಿಯಿಂದ ವಿಮೋಚನೆಗೊಳಿಸಿ ಆಸ್ಪತ್ರೆಗಳಲ್ಲೇ ವೇತನ ನೀಡುವಂತಾಗಬೇಕು, ಪ್ರತಿ 5ನೇ ತಾರೀಖಿನ ಒಳಗಡೆ ಕಾರ್ಮಿಕರ ವೇತನ ನೀಡಬೇಕು, ಹೆರಿಗೆ ಭತ್ಯೆ, ಇಎಸ್‍ಐ ಸೌಲಭ್ಯ, ಪಿ.ಎಫ್ ಹಣವನ್ನು ಸರಿಯಾದ ರೀತಿಯಲ್ಲಿ ಗುತ್ತಿಗೆದಾರರು ನೀಡುವಂತಹ ನೀತಿಯನ್ನು ಜಾರಿಗೊಳಿಸಬೇಕೆಂದು ಆಗ್ರಹಿಸಿದ ಭರತ್, ಜ.23 ರಂದು ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದೆಂದು ತಿಳಿಸಿದರು.
ಜಿಲ್ಲೆಯಲ್ಲಿ ಕಾರ್ಮಿಕ ಅಧಿಕಾರಿ ಹಾಗೂ ಕಾರ್ಮಿಕ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ಕಾರ್ಮಿಕ ನ್ಯಾಯಾಲಯದಲ್ಲಿ ನ್ಯಾಯಾಧೀಶರು ಇಲ್ಲದ ಪರಿಸ್ಥಿತಿ ಇದೆ. ತಕ್ಷಣವೇ ಕಾರ್ಮಿಕ ನ್ಯಾಯಾಲಯಕ್ಕೆ ನ್ಯಾಯಾಧೀಶರನ್ನು ನೇಮಕ ಮಾಡಬೇಕೆಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಸಮಿತಿ ಕಾರ್ಯದರ್ಶಿ ಹೆಚ್.ಕೆ.ಜಾನಕಿ ಹಾಗೂ ಸದಸ್ಯೆ ಕೆ.ಬಿ.ಬೇಬಿ ಉಪಸ್ಥಿತರಿದ್ದರು.  

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ವಿದ್ಯುತ್ ಸ್ಥಾವರದ ಸ್ಥಳಾಂತರಕ್ಕೆ ಕೊಡಗು ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಮನವಿ*

ಆಗಷ್ಟ್ 29, 2026

*ಕನಿಷ್ಠ ವೇತನ, ಕೆಲಸದ ಭದ್ರತೆಗಾಗಿ ಆಗ್ರಹಿಸಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಪ್ರತಿಭಟನೆ*

ಆಗಷ್ಟ್ 29, 2026

*ಶಿಕಾರಿಪುರದಲ್ಲಿ ಗೋರಕ್ಷಕರ ಮೇಲಿನ ಹಲ್ಲೆ ಖಂಡಿಸಿ ಕೊಡಗು ಜಿಲ್ಲಾಧಿಕಾರಿಗೆ ಮನವಿ : ಗಡಿಭಾಗಗಳಲ್ಲಿ ರಾತ್ರಿ ಗಸ್ತು ಹೆಚ್ಚಿಸಲು ಆಗ್ರಹ*

ಆಗಷ್ಟ್ 29, 2026

*ಕನಿಷ್ಠ ವೇತನ, ಕೆಲಸದ ಭದ್ರತೆಗಾಗಿ ಆಗ್ರಹಿಸಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಪ್ರತಿಭಟನೆ*

ಆಗಷ್ಟ್ 29, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ NEWS DESK ಆ.29 : ಪರಿಷ್ಕರಣೆ ಮಾಡಿರುವ ಕನಿಷ್ಠ ವೇತನವನ್ನು ತಕ್ಷಣ ಜಾರಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ…

*ಶಿಕಾರಿಪುರದಲ್ಲಿ ಗೋರಕ್ಷಕರ ಮೇಲಿನ ಹಲ್ಲೆ ಖಂಡಿಸಿ ಕೊಡಗು ಜಿಲ್ಲಾಧಿಕಾರಿಗೆ ಮನವಿ : ಗಡಿಭಾಗಗಳಲ್ಲಿ ರಾತ್ರಿ ಗಸ್ತು ಹೆಚ್ಚಿಸಲು ಆಗ್ರಹ*

ಆಗಷ್ಟ್ 29, 2026

*ವಿರಾಜಪೇಟೆಯ ಶಿವಕೇರಿಯಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ವರಮಹಾಲಕ್ಷ್ಮಿ ಪೂಜಾ ಮಹೋತ್ಸವ*

ಆಗಷ್ಟ್ 28, 2026

*ಕಾನೂನು ಸುವ್ಯವಸ್ಥೆ ನಿರ್ವಹಣೆಯಲ್ಲಿ ಉತ್ತಮ ಕರ್ತವ್ಯ : ಆರು ಪೊಲೀಸ್ ಅಧಿಕಾರಿಗಳಿಗೆ ಪ್ರಶಂಸನಾ ಪತ್ರ*

ಆಗಷ್ಟ್ 28, 2026

ಗೋಣಿಕೊಪ್ಪ ದಸರಾಕ್ಕೆ ₹1 ಕೋಟಿ ಅನುದಾನ : ದಶಮಂಟಪಗಳಿಗೆ ಹೆಚ್ಚಿನ ನೆರವಿನ ಭರವಸೆ

ಆಗಷ್ಟ್ 28, 2026

*ವಿರಾಜಪೇಟೆ ಬಿಲ್ಲವ ಸೇವಾ ಸಂಘದಿಂದ ನಾರಾಯಣ ಗುರು ಜಯಂತಿ*

ಆಗಷ್ಟ್ 28, 2026

*ಮಾನವ ವನ್ಯಜೀವಿ ಸಂಘರ್ಷ : ಸಾರ್ವಜನಿಕರ ಜತೆ ಸಮಾಲೋಚಿಸಿದ ಅರಣ್ಯ ಸಚಿವರು*

ಆಗಷ್ಟ್ 28, 2026

*ಮಡಿಕೇರಿಯಲ್ಲಿ ಬ್ರಹ್ಮರ್ಷಿ ಶ್ರೀ ನಾರಾಯಣ ಗುರು ಮತ್ತು ಕಾಯಕಯೋಗಿ ಶಿವಶರಣ ನುಲಿಯ ಚಂದಯ್ಯ ಜಯಂತಿ*

ಆಗಷ್ಟ್ 28, 2026

*ಶಾಸಕ ಪೊನ್ನಣ್ಣ ಅವರಿಗೆ ಮಹಿಳಾ ಕಾಂಗ್ರೆಸ್‌ನಿಂದ ಸನ್ಮಾನ*

ಆಗಷ್ಟ್ 28, 2026

*ಪೇಟೆ ಶ್ರೀ ರಾಮ ಮಂದಿರದಲ್ಲಿ ವಿಶೇಷ ಪೂಜೆ : ಮಡಿಕೇರಿ ದಸರಾ ಜನೋತ್ಸವದ ಪೂರ್ವಭಾವಿ ತಯಾರಿ ಆರಂಭ*

ಆಗಷ್ಟ್ 28, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.