ಕುಶಾಲನಗರ ಜ.7 : ಕುಶಾಲನಗರದ ಅಲ್ ಇಹ್ಸಾನ್ ಕಮಿಟಿ ವತಿಯಿಂದ ೧೪ ನೇ ವರ್ಷದ ಬಡ ಹೆಣ್ಣು ಮಕ್ಕಳ ವಿವಾಹ ಕಾರ್ಯಕ್ರಮವನ್ನು ಕುಶಾಲನಗರದ ಶಾಧಿ ಮಹಿಲ್ ನಲ್ಲಿ ನಡೆಸಲಾಯಿತು.
ಅಲ್ ಇಹ್ಸಾನ್ ಕಮಿಟಿ ಅಧ್ಯಕ್ಷರಾದ ಎಮ್.ಇ.ಮುಸ್ತಫಾರವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾಲ್ವರು ಬಡ ಹೆಣ್ಣುಮಕ್ಕಳ ವಿವಾಹ ಕಾರ್ಯಕ್ರಮ ನೆರವೇರಿಸಲಾಯಿತು. ವಧುವಿಗೆ ೪೦ ಗ್ರಾಂ ಚಿನ್ನ, ವಸ್ತ್ರ ಹಾಗೂ ವರನಿಗೆ ವಸ್ತ್ರವನ್ನು ವಿತರಿಸಲಾಯಿತು.
ಈ ಕುರಿತು ಮಾತನಾಡಿದ ಅಲ್ ಇಹ್ಸಾನ್ ಕಮಿಟಿ ಅಧ್ಯಕ್ಷ ಎಮ್.ಇ.ಮುಸ್ತಫಾ, ಪ್ರತೀ ವರ್ಷದಂತೆ ಈ ಬಾರಿಯೂ ಬಡ ಹೆಣ್ಣುಮಕ್ಕಳ ವಿವಾಹವನ್ನು ನಡೆಸಲಾಯಿತು. ಕಾರ್ಯಕ್ರಮಕ್ಕೆ ಆರ್ಥಿಕವಾಗಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು. ಹಾಗೆಯೇ ಅಲ್ ಇಹ್ಸಾನ್ ನ ಪದಾಧಿಕಾರಿಗಳಿಗೆ ಹಾಗೂ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಎಂದರು.
ಈ ಸಂದರ್ಭ ಕುಶಾಲನಗರದ ಧರ್ಮುಗುರುಗಳಾದ ನಾಸೊರ್ ಫೈಜಿ಼, ದಾರುಲ್ ಉಲೂಂ ಮದ್ರಸದ ಪ್ರಾಂಶುಪಾಲರಾದ ತಮ್ಲೀಕ್ ದಾರಿಮಿ, ದಾರುಲ್ ಉಲೂಂ ಕಮಿಟಿ ಪದಾಧಿಕಾರಿಗಳು, ಅಲ್ ಇಹ್ಸಾನ್ ಕಮಿಟಿ ಪದಾಧಿಕಾರಿಗಳು ಹಾಗೂ ಇನ್ನಿತರರು ಇದ್ದರು.









