Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ವಿರಾಜಪೇಟೆಯ ಶಿವಕೇರಿಯಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ವರಮಹಾಲಕ್ಷ್ಮಿ ಪೂಜಾ ಮಹೋತ್ಸವ*
  • *ಕಾನೂನು ಸುವ್ಯವಸ್ಥೆ ನಿರ್ವಹಣೆಯಲ್ಲಿ ಉತ್ತಮ ಕರ್ತವ್ಯ : ಆರು ಪೊಲೀಸ್ ಅಧಿಕಾರಿಗಳಿಗೆ ಪ್ರಶಂಸನಾ ಪತ್ರ*
  • ಗೋಣಿಕೊಪ್ಪ ದಸರಾಕ್ಕೆ ₹1 ಕೋಟಿ ಅನುದಾನ : ದಶಮಂಟಪಗಳಿಗೆ ಹೆಚ್ಚಿನ ನೆರವಿನ ಭರವಸೆ
  • *ವಿರಾಜಪೇಟೆ ಬಿಲ್ಲವ ಸೇವಾ ಸಂಘದಿಂದ ನಾರಾಯಣ ಗುರು ಜಯಂತಿ*
  • *ಮಾನವ ವನ್ಯಜೀವಿ ಸಂಘರ್ಷ : ಸಾರ್ವಜನಿಕರ ಜತೆ ಸಮಾಲೋಚಿಸಿದ ಅರಣ್ಯ ಸಚಿವರು*
  • *ಕಸ್ತೂರಿ ರಂಗನ್ ವರದಿ : ರಾಜ್ಯ ಸರಕಾರ ರಾಜಕೀಯ ಮಾಡುವುದನ್ನು ಮೊದಲು ನಿಲ್ಲಿಸಲಿ : ಚೆಪ್ಪುಡಿರ ರಾಕೇಶ್ ದೇವಯ್ಯ ಒತ್ತಾಯ*
  • *ಮಡಿಕೇರಿಯಲ್ಲಿ ಬ್ರಹ್ಮರ್ಷಿ ಶ್ರೀ ನಾರಾಯಣ ಗುರು ಮತ್ತು ಕಾಯಕಯೋಗಿ ಶಿವಶರಣ ನುಲಿಯ ಚಂದಯ್ಯ ಜಯಂತಿ*
  • *ಶಾಸಕ ಪೊನ್ನಣ್ಣ ಅವರಿಗೆ ಮಹಿಳಾ ಕಾಂಗ್ರೆಸ್‌ನಿಂದ ಸನ್ಮಾನ*
  • *ಪೇಟೆ ಶ್ರೀ ರಾಮ ಮಂದಿರದಲ್ಲಿ ವಿಶೇಷ ಪೂಜೆ : ಮಡಿಕೇರಿ ದಸರಾ ಜನೋತ್ಸವದ ಪೂರ್ವಭಾವಿ ತಯಾರಿ ಆರಂಭ*
  • *ಕಸ್ತೂರಿ ರಂಗನ್ ವರದಿಯನ್ನು ಸಂಪೂರ್ಣವಾಗಿ ನಿರಾಕರಿಸಿರುವುದು ಸರಿಯಲ್ಲ : ಕರ್ನಲ್ ಸಿ.ಪಿ.ಮುತ್ತಣ್ಣ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಪೈನರಿ ಮಸೀದಿಯ ಪುನರ್ ನಿರ್ಮಾಣಕ್ಕೆ ಶಂಕುಸ್ಥಾಪನೆ : ಪ್ರೀತಿ, ವಿಶ್ವಾಸಕ್ಕೆ ಭಾಷೆ ಅಡ್ಡಬರಲ್ಲ : ಶಾಸಕ ಎ.ಎಸ್.ಪೊನ್ನಣ್ಣ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಪೈನರಿ ಮಸೀದಿಯ ಪುನರ್ ನಿರ್ಮಾಣಕ್ಕೆ ಶಂಕುಸ್ಥಾಪನೆ : ಪ್ರೀತಿ, ವಿಶ್ವಾಸಕ್ಕೆ ಭಾಷೆ ಅಡ್ಡಬರಲ್ಲ : ಶಾಸಕ ಎ.ಎಸ್.ಪೊನ್ನಣ್ಣ*

ಜನವರಿ 20, 20242 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಜ.20 : NEWS DESK : ಪ್ರೀತಿ ವಿಶ್ವಾಸಕ್ಕೆ ಭಾಷೆ ಅಡ್ಡಬರಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು.

ಕುಂಜಿಲ ಪೈನರಿ ಮಸೀದಿಯ ಪುನರ್ ನಿರ್ಮಾಣಕ್ಕೆ ಶಂಕುಸ್ಥಾಪನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.

ನಾವು ಯಾವುದೇ ಭಾಷೆಯಲ್ಲಿ ಮಾತನಾಡಿದರು ಕೂಡ ಒಂದೇ ಸೌಹಾರ್ದತೆ, ಪ್ರೀತಿ, ವಿಶ್ವಾಸ, ಬಾಂಧವ್ಯ ಮುಖ್ಯ. ಮಾನವೀಯತೆ ಮಾನವ ಗುಣವನ್ನು ಜೀವನದಲ್ಲಿ ಅಳವಡಿಸಿ ಸೌಹಾರ್ದತೆಯ ಸಮಾಜದ ನಿರ್ಮಾಣ ಮಾಡಬೇಕೆಂಬ ಕಲ್ಪನೆಯನ್ನ ಕಟ್ಟಿಕೊಳ್ಳಬೇಕೆಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಕೆಪಿಸಿಸಿ ಕಾರ್ಯದರ್ಶಿ ಎ.ಎಸ್.ಹುಸೈನ್, ಈ ದೇಶದ ಮುಸಲ್ಮಾನರು 629ನೇ ಇಸವಿಯಲ್ಲಿ ಕೇರಳದ ತ್ರಿಶೂರ್ ಜಿಲ್ಲೆಯ ಚೇರ್ಮಾನ್ ಎಂಬ ಗ್ರಾಮದಲ್ಲಿ ಮೊದಲ ಬಾರಿಗೆ ನಿರ್ಮಿಸಲಾದ ಮಸೀದಿಯ ಶಂಕುಸ್ಥಾಪನೆ ಮಾಡಿದ ಮಾಲಿಕ್ ದಿನಾರ್ (ರ ಅ )ಅವರ ಅನುಯಾಯಿ ಗಳಾಗಿದ್ದಾರೆ. ಇಸ್ಲಾಂ ಧರ್ಮ ಬಂದ ಹಾದಿಗೆ ಇತಿಹಾಸವಿದೆ ಎಂದರು.

ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಮಾತನಾಡಿ, ಎಲ್ಲಾ ಧರ್ಮದಲ್ಲೂ ದೇವರು ಒಬ್ಬನೇ. ನಾವ್ಯಾರು ದೇವರನ್ನು ಕಂಡಿಲ್ಲ. ನಿತ್ಯ ಜೀವನದಲ್ಲಿ ಮಾಡುವ ಕೆಲಸಗಳಲ್ಲಿರುವ ವಿಶ್ವಾಸ, ಆತ್ಮಸಾಕ್ಷಿಯೇ ದೇವರು. ಇದನ್ನು ಉಳಿಸಲು ಎಲ್ಲಾ ಧರ್ಮದವರು ನಿರ್ಮಿಸುವ ಒಂದು ಪವಿತ್ರವಾದ ಸ್ಥಳವೇ ಪ್ರಾರ್ಥನ ಮಂದಿರವಾಗಿದೆ. ಕಾಲಾನುಕಾಲದಿಂದ ಬಂದಿರುವ ನಂಬಿಕೆಯ ಉಳಿವಿಗೆ ಎಲ್ಲಾ ಧರ್ಮದಲ್ಲೂ ಆಧುನಿಕವಾಗಿ ಪ್ರಾರ್ಥನಾ ಮಂದಿರಗಳು ನಿರ್ಮಾಣವಾಗುತ್ತಿದೆ. ಅದರಂತೆ ಇಲ್ಲಿನ ಗ್ರಾಮಸ್ಥರಿಗೆ ಅನುಗುಣವಾಗಿ ಉತ್ತಮ ಪ್ರಾರ್ಥನಾ ಮಂದಿರ ನಿರ್ಮಾಣವಾಗಲಿ ಎಂದು ಶುಭ ಹಾರೈಸಿದರು.

ಜಿಲ್ಲಾ ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಅಬ್ದುಲ್ ರೆಹಮಾನ್ ನಾಪೋಕ್ಲು, ಯಾಕೂಬ್ ಸೋಮವಾರಪೇಟೆ, ಉದ್ಯಮಿ ಇಮ್ರಾನ್ ಸಿದ್ದೀಕಿ, ಕರ್ನಾಟಕ ಮುಸ್ಲಿಂ ಜಮಾಅತ್ ಜಿಲ್ಲಾಧ್ಯಕ್ಷ ಲತೀಫ್ ಸುಂಟಿಕೊಪ್ಪ ಮಾತನಾಡಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಪೈನರಿ ಮಸೀದಿಯ ಖತೀಬರಾದ ನಿಝಾರ್ ಅಹ್ಸನಿ ಕಕ್ಕಡಿಪುರಂ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.

ಇದಕ್ಕೂ ಮೊದಲು ಸಯ್ಯದ್ ಸ್ವಾದಿಕಲಿ ಶಿಯಾಬ್ ತಂಙಳ್ ಪಾಣಕ್ಕಾಡ್ ಹಾಗೂ ವಳಪಟ್ಟಣಂ ಖಾಝಿಗಳಾದ ಸಯ್ಯದ್ ಜಮಲುಲೈಲ್ಲಿ ಸಖಾಫಿ ಅಲ್ ಬುಖಾರಿ ಪೈನರಿ ಮಸೀದಿಯ ಶಂಕುಸ್ಥಾಪನೆಗೆ ನೇತೃತ್ವ ವಹಿಸಿ ಮಾತನಾಡಿದರು.

ಈ ಸಂದರ್ಭ ಪೈನರಿ ಮಸೀದಿಯ ಅಧ್ಯಕ್ಷ ಸೌಕತ್ ಆಲಿ, ಉಪಾಧ್ಯಕ್ಷ ಇಬ್ರಾಹಿಂ, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ಜಿಲ್ಲಾ ವಕ್ಫ್ ಬೋರ್ಡ್ ಉಪಾಧ್ಯಕ್ಷರಾದ ಮೊಯ್ದು ಬೆಟ್ಟಗೇರಿ, ವಿರಾಜಪೇಟೆ ಪುರಸಭಾ ಸದಸ್ಯ ಮೊಹಮ್ಮದ್ ರಾಫಿ, ಹಮೀದ್ ಮುಸ್ಲಿಯಾರ್ ಸುಂಟಿಕೊಪ್ಪ, ಕೊಳಕೇರಿ ಮಸೀದಿ ಅಧ್ಯಕ್ಷ ಅಬ್ದುಲ್ ನಾಸಿರ್, ಬಾಚಾಮಂಡ ಲವ ಚಿಣ್ಣಪ್ಪ, ಗ್ರಾ.ಪಂ ಮಾಜಿ ಅಧ್ಯಕ್ಷ ಸಂಪನ್ ಅಯ್ಯಪ್ಪ, ಅಬ್ದುಲ್ಲ ಸಖಾಫಿ, ಕೊಳಕೇರಿ ಮಸೀದಿ ಖತೀಬ್ ಶಹಜಹಾನ್ ಸಖಾಫಿ, ಎಡಪಾಲ ಮಸೀದಿ ಅಧ್ಯಕ್ಷ ಶಾಫಿ, ಉಮ್ಮರ್ ಫೈಝಿ, ಬಷೀರ್ ಹಾಜಿ ಎಡಪಾಲ, ರಫೀಕ್ ನಾಪೋಕ್ಲು, ಗುತ್ತಿಗೆದಾರ ತಾಜುದ್ದೀನ್ ಮಟ್ಟನೂರ್ ಹಾಗೂ ಮಸೀದಿಯ ಆಡಳಿತ ಮಂಡಳಿ ಪದಾಧಿಕಾರಿಗಳು, ಸದಸ್ಯರು, ದರ್ಸ್ ವಿದ್ಯಾರ್ಥಿಗಳು ಮತಿತ್ತರರು ಹಾಜರಿದ್ದರು. ಕಾರ್ಯಕ್ರಮವನ್ನು ಇಬ್ರಾಹಿಂ ಬಾದುಷಾ ನಿರೂಪಿಸಿದರು, ಮಸೀದಿಯ ಮಾಜಿ ಅಧ್ಯಕ್ಷ ಹಾಗೂ ಮಸೀದಿ ಕಟ್ಟಡ ಸಮಿತಿ ಸದಸ್ಯ ಮೊಹಮ್ಮದ್ ಹಾಜಿ ಕುಂಜಿಲ ಸ್ವಾಗತಿಸಿದರು. ಸಲಹಾ ಸಮಿತಿಯ ಸದಸ್ಯ ಅಬು ವಯಕೋಲ್ ವಂದಿಸಿದರು.

ವರದಿ : ಅಶ್ರಫ್  

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ವಿರಾಜಪೇಟೆಯ ಶಿವಕೇರಿಯಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ವರಮಹಾಲಕ್ಷ್ಮಿ ಪೂಜಾ ಮಹೋತ್ಸವ*

ಆಗಷ್ಟ್ 28, 2026

*ಕಾನೂನು ಸುವ್ಯವಸ್ಥೆ ನಿರ್ವಹಣೆಯಲ್ಲಿ ಉತ್ತಮ ಕರ್ತವ್ಯ : ಆರು ಪೊಲೀಸ್ ಅಧಿಕಾರಿಗಳಿಗೆ ಪ್ರಶಂಸನಾ ಪತ್ರ*

ಆಗಷ್ಟ್ 28, 2026

ಗೋಣಿಕೊಪ್ಪ ದಸರಾಕ್ಕೆ ₹1 ಕೋಟಿ ಅನುದಾನ : ದಶಮಂಟಪಗಳಿಗೆ ಹೆಚ್ಚಿನ ನೆರವಿನ ಭರವಸೆ

ಆಗಷ್ಟ್ 28, 2026

*ಕಾನೂನು ಸುವ್ಯವಸ್ಥೆ ನಿರ್ವಹಣೆಯಲ್ಲಿ ಉತ್ತಮ ಕರ್ತವ್ಯ : ಆರು ಪೊಲೀಸ್ ಅಧಿಕಾರಿಗಳಿಗೆ ಪ್ರಶಂಸನಾ ಪತ್ರ*

ಆಗಷ್ಟ್ 28, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ ಪೊಲೀಸ್ ನ್ಯೂಸ್

ಮಡಿಕೇರಿ ಆ.28 NEWS DESK : ಕೊಡಗು ಜಿಲ್ಲೆಯಲ್ಲಿ ಉತ್ತಮ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಅತ್ಯುತ್ತಮವಾಗಿ ಕರ್ತವ್ಯ ನಿರ್ವಹಿಸಿದ ಮೂವರು…

ಗೋಣಿಕೊಪ್ಪ ದಸರಾಕ್ಕೆ ₹1 ಕೋಟಿ ಅನುದಾನ : ದಶಮಂಟಪಗಳಿಗೆ ಹೆಚ್ಚಿನ ನೆರವಿನ ಭರವಸೆ

ಆಗಷ್ಟ್ 28, 2026

*ವಿರಾಜಪೇಟೆ ಬಿಲ್ಲವ ಸೇವಾ ಸಂಘದಿಂದ ನಾರಾಯಣ ಗುರು ಜಯಂತಿ*

ಆಗಷ್ಟ್ 28, 2026

*ಮಾನವ ವನ್ಯಜೀವಿ ಸಂಘರ್ಷ : ಸಾರ್ವಜನಿಕರ ಜತೆ ಸಮಾಲೋಚಿಸಿದ ಅರಣ್ಯ ಸಚಿವರು*

ಆಗಷ್ಟ್ 28, 2026

*ಮಡಿಕೇರಿಯಲ್ಲಿ ಬ್ರಹ್ಮರ್ಷಿ ಶ್ರೀ ನಾರಾಯಣ ಗುರು ಮತ್ತು ಕಾಯಕಯೋಗಿ ಶಿವಶರಣ ನುಲಿಯ ಚಂದಯ್ಯ ಜಯಂತಿ*

ಆಗಷ್ಟ್ 28, 2026

*ಶಾಸಕ ಪೊನ್ನಣ್ಣ ಅವರಿಗೆ ಮಹಿಳಾ ಕಾಂಗ್ರೆಸ್‌ನಿಂದ ಸನ್ಮಾನ*

ಆಗಷ್ಟ್ 28, 2026

*ಪೇಟೆ ಶ್ರೀ ರಾಮ ಮಂದಿರದಲ್ಲಿ ವಿಶೇಷ ಪೂಜೆ : ಮಡಿಕೇರಿ ದಸರಾ ಜನೋತ್ಸವದ ಪೂರ್ವಭಾವಿ ತಯಾರಿ ಆರಂಭ*

ಆಗಷ್ಟ್ 28, 2026

*ಕಸ್ತೂರಿ ರಂಗನ್ ವರದಿಯನ್ನು ಸಂಪೂರ್ಣವಾಗಿ ನಿರಾಕರಿಸಿರುವುದು ಸರಿಯಲ್ಲ : ಕರ್ನಲ್ ಸಿ.ಪಿ.ಮುತ್ತಣ್ಣ*

ಆಗಷ್ಟ್ 28, 2026

*ಆ.29ರಂದು ಕೊಡಗು ಜಿಲ್ಲಾ ಮಟ್ಟದ ಎಸ್‌ಸಿ/ಎಸ್‌ಟಿ ಕುಂದುಕೊರತೆ ಸಭೆ*

ಆಗಷ್ಟ್ 28, 2026

*ಫೀ.ಮಾ.ಕೆ.ಎಂ.ಕಾರ್ಯಪ್ಪ ಕಾಲೇಜ್ ನಲ್ಲಿ ಸರ್ಕಾರಿ ವಲಯ, ನಾಗರಿಕ ಸೇವೆಗಳಲ್ಲಿ ವೃತ್ತಿ ಅವಕಾಶಗಳ ಕುರಿತು ಕಾರ್ಯಾಗಾರ : ಸಾಮರ್ಥ್ಯ, ಆಸಕ್ತಿ ಹಾಗೂ ಗುರಿಗಳನ್ನು ಗುರುತಿಸಿಕೊಂಡು ಭವಿಷ್ಯವನ್ನು ರೂಪಿಸಿಕೊಳ್ಳಲು ಮೇಜರ್ ಪ್ರೊ. ರಾಘವ ಬಿ. ಕರೆ *

ಆಗಷ್ಟ್ 28, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.