Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಕಸಾಪ ಸಂತಾಪ*
  • *ಸುಂಟಿಕೊಪ್ಪ ಶ್ರೀ ಚಾಮುಂಡೇಶ್ವರಿ, ಶ್ರೀಮುತ್ತಪ್ಪ ಮತ್ತು ಪರಿವಾರ ದೇವರುಗಳ 58ನೇ ವರ್ಷದ ತೆರೆ ಮಹೋತ್ಸವ*
  • *ಸುಗ್ಗಿಕಟ್ಟೆಗಳ ಅಭಿವೃದ್ಧಿಗೆ ಭೂಮಿಪೂಜೆ ನೆರವೇರಿಸಿದ ಶಾಸಕ ಡಾ.ಮಂತರ್ ಗೌಡ*
  • *ಕೊಡಗು ಜಿಲ್ಲಾ ಸಾಹಿತ್ಯ ಸಮ್ಮೇಳನ ಪೂರ್ವಬಾವಿ ಸಭೆ : ಬಿ.ಸಿ.ದಿನೇಶ್ ಗೆ ಅಭಿನಂದನೆ*
  • *ವಿಶ್ವ ಜನಾಂಗೀಯ ತಾರತಮ್ಯ ನಿರ್ಮೂಲನಾ ದಿನ : ಮಾ.21 ರಂದು ಸಿಎನ್‌ಸಿಯಿಂದ “ವಿಚಾರ ಸಂಕಿರಣ”*
  • *ಕೊಡಗಿನಲ್ಲಿ ಮೊದಲ ಬಾರಿಗೆ ವಿಶೇಷ ಚೇತನರಿಗಾಗಿ ರಾಜ್ಯಮಟ್ಟದ ಕ್ರೀಡಾಕೂಟ* 
  • *ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರದಾನ* 
  • *ಮಾ.16 ರಂದು “ಸ್ವಚ್ಛ ಕೊಡಗು, ಸುಂದರ ಕೊಡಗು” ಉದ್ಘಾಟನಾ ಕಾರ್ಯಕ್ರಮ*
  • *ಕುಶಾಲನಗರ ಸಂಚಾರ ಠಾಣೆಯ ನೂತನ ಕಟ್ಟಡ ನಿರ್ಮಾಣಕ್ಕೆ ಶಂಕು ಸ್ಥಾಪನೆ*
  • *ಮಡಿಕೇರಿ ಘಟಕದ ನೂತನ ಡಿಪೋ ವ್ಯವಸ್ಥಾಪಕರನ್ನು ಭೇಟಿಯಾದ ಎಐಟಿಯುಸಿ ಸಂಘಟನೆ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಮಡಿಕೇರಿ : ಸಹಕಾರ ದವಸ ಭಂಡಾರಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳಿಗೆ ವಿಶೇಷ ಶಿಕ್ಷಣ ಕಾರ್ಯಕ್ರಮ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಮಡಿಕೇರಿ : ಸಹಕಾರ ದವಸ ಭಂಡಾರಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳಿಗೆ ವಿಶೇಷ ಶಿಕ್ಷಣ ಕಾರ್ಯಕ್ರಮ*

ಫೆಬ್ರವರಿ 16, 20242 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಫೆ.16 NEWS DESK :  ಸದಸ್ಯರ ಮತ ಪಡೆದು ಆಡಳಿತ ಚುಕ್ಕಾಣಿ ಹಿಡಿದ ನಂತರ ತಮ್ಮ ಸಂಸ್ಥೆಗಳ ಅಭಿವೃದ್ಧಿಗೆ ಆದ್ಯತೆ ಕೊಡಬೇಕು ಎಂದು ಎನ್.ಎ.ರವಿ ಬಸಪ್ಪ ತಿಳಿಸಿದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನ ಸಂಯುಕ್ತಾಶ್ರಯದಲ್ಲಿ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಸಭಾಂಗಣದಲ್ಲಿ ನಡೆದ ಜಿಲ್ಲೆಯ ಸಹಕಾರ ದವಸ ಭಂಡಾರಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳಿಗೆ ಸಹಕಾರ ಕಾಯ್ದೆ, ಕಾನೂನು ತಿದ್ದುಪಡಿ ಹಾಗೂ ಪಶುಪಾಲನೆ ಕುರಿತು ವಿಶೇಷ ಶಿಕ್ಷಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು, ಮಾತನಾಡಿದರು.
ದವಸದ ರೂಪದಲ್ಲಿ ವ್ಯವಹಾರ ನಡೆಸುತ್ತಿದ್ದ ಸಂಘಗಳನ್ನು ಇಂದಿಗೂ ಉಳಿಸಿಕೊಂಡು ಬಂದಿರುವ ಪ್ರತಿನಿಧಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿ ಶುಭಾಶಯ ಕೋರಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಯೂನಿಯನ್ ಅಧ್ಯಕ್ಷ ಎ.ಕೆ.ಮನುಮುತ್ತಪ್ಪ, ಹಾಲು ಉತ್ಪಾದನೆಯಲ್ಲಿ ಭಾರತ ವಿಶ್ವದಲ್ಲೆ ಮೊದಲ ಸ್ಥಾನದಲ್ಲಿದೆ. ಕರ್ನಾಟಕವೂ ಸಹ ಅಗ್ರ ಪಾಲು ಉತ್ಪಾದಕರ ರಾಜ್ಯಗಳ ಪೈಕಿ ಇದೆ. ಆದರೆ ಕೊಡಗು ಕೇವಲ ಹಾಲಿನ ಮಾರಾಟ ಪ್ರದೇಶವಾಗಿದ್ದು ಹೈನೋದ್ಯಮ ಜಿಲ್ಲೆಯ ಒಂದು ಭಾಗಕ್ಕೆ ಮಾತ್ರ ಸೀಮಿತವಾಗಿದೆ. ಇತ್ತೀಚಿನ ವರ್ಷಗಳಲ್ಲಿ ದೇಶೀಯ ಹಸು ತಳಿಗಳನ್ನು ಆರೋಗ್ಯ ಮತ್ತು ಔಷಧದ ಹಿತದೃಷ್ಟಿಯಿಂದ ಸಹ ಸಲಹುವವರು ಹೆಚ್ಚಾಗುತ್ತಿದ್ದಾರೆ. ಕೇವಲ ಹಾಲು ಮಾತ್ರ ಅಲ್ಲ, ಸಗಣಿ ಮತ್ತು ಗೋಮೂತ್ರಕ್ಕೂ ಅತ್ಯಧಿಕ ಬೇಡಿಕೆ ಇದೆ. ಈ ನಿಟ್ಟಿನಲ್ಲಿ ದವಸ ಭಂಡಾರಗಳು ಹಾಲು ಶೇಖರಣಾ ಕೇಂದ್ರಗಳಾಗಿ ಕಾರ್ಯನಿರ್ವಹಿಸಿದಲ್ಲಿ ರೈತರಿಗೂ ಉಪಯೋಗವಾಗಿ ಆರ್ಥಿಕ ಅಭಿವೃದ್ಧಿಯಾಗುತ್ತದೆ. ತರಬೇತಿ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳೂ ಸೇರಿದಂತೆ ಹಲವು ರೀತಿಯ ವಿಷಯಗಳ ಕುರಿತು ವಿಚಾರ ವಿನಿಮಯ, ವಿಷಯ ಮಂಡನೆಯ ಕೆಲವನ್ನಾದರೂ ಅನುಷ್ಠಾನಗೊಳಿಸಿದಲ್ಲಿ ಸಂಘವು ಮುನ್ನಡೆಯುತ್ತದೆ. ಸಮಾಜ ಆರ್ಥಿಕವಾಗಿ ಸಬಲವಾದರೆ ದೇಶ ಮುನ್ನಡೆಯೂ ಸ್ವಾಭಾವಿಕವಾಗಿ ಆಗುತ್ತದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಯೂನಿಯನ್ ನಿರ್ದೇಶಕರಾದ ಬಿ.ಎ.ರಮೇಶ್ ಚಂಗಪ್ಪ, ಕನ್ನಂಡ ಸಂಪತ್, ಪಿ.ಬಿ.ಯತೀಶ್, ಲೆಕ್ಕಪರಿಶೋಧನಾ ಇಲಾಖೆಯ ಉಪನಿರ್ದೇಶಕಿ ಹೇಮಲತಾ ಹಾಜರಿದ್ದರು.
ಪಶುಪಾಲನೆ, ಉಪಕಸುಬುಗಳು, ಸರ್ಕಾರದ ಯೋಜನೆಗಳ ಕುರಿತು ಡಾ. ಕೆ.ಎ. ಪ್ರಸನ್ನ ಸಹಕಾರ ಕಾಯ್ದೆ, ಕಾನೂನು ಮತ್ತು ಇತ್ತೀಚಿನ ತಿದ್ದುಪಡಿಗಳ ಕುರಿತು ಕೆ.ಐ.ಸಿ.ಎಂ.ನ ನಿವೃತ್ತ ಪ್ರಾಂಶುಪಾಲೆ ಎಂ.ಎಂ. ಶ್ಯಾಮಲಾ ಮತ್ತು ಲೆಕ್ಕಪರಿಶೋಧನಾ ವರದಿ ತಯಾರಿಕೆ ಕುರಿತು ಲೆಕ್ಕಪರಿಶೋಧನಾ ಇಲಾಖೆಯ ಲೆಕ್ಕಪರಿಶೋಧಕರಾದ ಹಂಸ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ದವಸ ಭಂಡಾರದ ಪ್ರತಿನಿಧಿಗಳು ಮಾತನಾಡಿ, ದವಸ ಭಂಡಾರಗಳೇ ಸಹಕಾರ ಪರಿಕಲ್ಪನೆಗೆ ಮೂಲವಾಗಿದ್ದು, ಹಿರಿಯರ ಉದ್ದೇಶಗಳಿಗೆ ಗೌರವ ನೀಡಿ ಸಂಘವನ್ನು ಉಳಿಸಿ ಬೆಳೆಸಲು ಅಗತ್ಯವಾದ ಪ್ರಗತಿ, ಕುಂದುಕೊರತೆ ಅಗತ್ಯತೆ ಕುರಿತು ಸಭೆಯ ಗಮನಕ್ಕೆ ತಂದರು.
ಕೊಳಕೇರಿ ದವಸ ಭಂಡಾರದ ಅಧ್ಯಕ್ಷ ರಮೇಶ್ ಮುದ್ದಯ್ಯ ಮಾತನಾಡಿ, ಹಿರಿಯರು ಉದಾರವಾಗಿ ನೀಡಿದ ಸ್ಥಳದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿದ್ದು, ಕಾರ್ಯದರ್ಶಿ ಮತ್ತು ಸ್ಟೋರ್ ಕೀಪರ್ ನಮ್ಮ ಆಧಾರ ಸ್ತಂಭಗಳಂತೆ ಕೆಲಸ ಮಾಡಿದ ಕಾರಣ ಉತ್ತಮ ಲಾಭಗಳಿಸುತ್ತಿದೆ. ಕಡಿಮೆ ದರದಲ್ಲಿ ಗುಣಮಟ್ಟದ ಗೊಬ್ಬರ ಪೂರೈಕೆ ಮತ್ತು ಸಾಲ ನೀಡುತ್ತಿರುವ ಕುರಿತು ತಿಳಿಸಿದರು.
ಹಾಲುಗುಂದ ಸಹಕಾರ ದವಸ ಭಂಡಾರದ ಅಧ್ಯಕ್ಷ ಪಿ.ಸಿ. ನಾಣಯ್ಯ ಮಾತನಾಡಿ, ಕಟ್ಟಡವನ್ನು ಹೊಟೇಲ್, ವರ್ಕ್‍ಶಾಪ್‍ಗೆ ಬಾಡಿಗೆಗೆ ಕೊಟ್ಟಿದ್ದು ಸದಸ್ಯರೆಲ್ಲರು ಸೇರಿ ಮುಂಗಡ ಹಾಡಿ ಗೊಬ್ಬರ, ತಾಟು ಇತರೆ ಖರೀದಿಸಿ ಮಾರಾಟ ಮಾಡುತ್ತಿದ್ದಾರೆ. ಸಂಘದ ಪುಶ್ಚೇನಕ್ಕಾಗಿ ಈ ಹಿಂದೆ ಯೂನಿಯನ್‍ನವರು ರೂಪಿಸಿದ ಕಾರ್ಯಕ್ರಮವನ್ನು ಉತ್ತಮವಾಗಿ ಅನುಷ್ಠಾನಗೊಳಿಸಿದ ಬಾಪ್ತು ಲಾಭದಲ್ಲೇ ಮುಂದುವರೆಯಲು ಯೂನಿಯನ್ ಪುನಶ್ಚೇತನಾ ಸಮಿತಿಯೇ ಕಾರಣವೆಂದು ವಂದನೆಗಳನ್ನು ಸಲ್ಲಿಸಿದರು.
ಸ್ವಂತ ಕಟ್ಟಡವನ್ನು ಸಣ್ಣಪುಟ್ಟ ಕಾರ್ಯಗಳಿಗೆ ಬಾಡಿಗೆಗೆ ನೀಡಿ ಬಹುದಿನದಿಂದ ನವೀಕರಣಕ್ಕಾಗಿ ಆದಾಯದ ಕೊರತೆ ಇರುವುದಾಗಿ ದುರ್ಬಲ ಸಹಕಾರ ಸಂಘಗಳಾದ ದವಸ ಭಂಡಾರಗಳಿಗೂ ಕೇಂದ್ರ ಬ್ಯಾಂಕ್‍ನಿಂದ ಪ್ಯಾಕ್ಸ್‍ಗಳಿಗೆ ವಿತರಿಸಿದ ರೀತಿ ಸಹಾಯಧನ ಮಾತ್ರವಲ್ಲದೆ ಲ್ಯಾಪ್‍ಟಾಪ್, ಗಣಕಯಂತ್ರ ಪರಿಕರಗಳನ್ನು ನೀಡಬೇಕು ಎಂದು ಪ್ರತಿನಿಧಿಗಳು ಕೋರಿದರು.
ದುಬಾರಿ ಲೆಕ್ಕಪರಿಶೋಧನಾ ಶುಲ್ಕ, ಸಕಾಲದಲ್ಲಿ ಲೆಕ್ಕಪರಿಶೋಧನೆ ಆಗದ ಕುರಿತು ಇಲಾಖೆಯವರಿಗೆ ದವಸ ಭಂಡಾರದ ಲೆಕ್ಕಪರಿಶೋಧನೆ ನಡೆಸುವ ಜ್ಞಾನದ ಕೊರತೆ ಇರುವ ಕುರಿತು ಆಕ್ರೋಶ ವ್ಯಕ್ತಪಡಿಸಿ, ಕೊಡಗಿನವರೇ ಆಡಿಟ್ ಮಾಡಿಕೊಡಬೇಕಾಗಿ ಕೋರಿದರು. ಪ್ರಾಥಮಿಕ ಶಾಲೆಗಳ ಮಾದರಿ ದವಸ ಭಂಡಾರಗಳ ಭೂ ದಾಖಲೆಗಳಾದ ಖಾತೆ ವರ್ಗಾವಣೆ, ದಾಖಲೀಕರಣ ಇತ್ಯಾದಿ ಭೂ ದಾಖಲೆಗಳನ್ನು ಸರಿಪಡಿಸಿ ಇಲಾಖೆಯಿಂದಲೇ ಕ್ರಮಕೈಗೊಂಡು ತುರ್ತಾಗಿ ಸರಿಪಡಿಸಿಕೊಡಬೇಕಾಗಿ ಕೋರಿದರು.
ಕಗ್ಗೋಡ್ಲು ಪ್ಯಾಕ್ಸ್‍ನ ಕಾರ್ಯದರ್ಶಿ ಇಂದ್ರಕುಮಾರ್ ಪ್ರಾರ್ಥಿಸಿದರೆ, ಯೂನಿಯನ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ ವಂದಿಸಿದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಕಸಾಪ ಸಂತಾಪ*

ಮಾರ್ಚ್ 15, 2026

*ಸುಂಟಿಕೊಪ್ಪ ಶ್ರೀ ಚಾಮುಂಡೇಶ್ವರಿ, ಶ್ರೀಮುತ್ತಪ್ಪ ಮತ್ತು ಪರಿವಾರ ದೇವರುಗಳ 58ನೇ ವರ್ಷದ ತೆರೆ ಮಹೋತ್ಸವ*

ಮಾರ್ಚ್ 15, 2026

*ಸುಗ್ಗಿಕಟ್ಟೆಗಳ ಅಭಿವೃದ್ಧಿಗೆ ಭೂಮಿಪೂಜೆ ನೆರವೇರಿಸಿದ ಶಾಸಕ ಡಾ.ಮಂತರ್ ಗೌಡ*

ಮಾರ್ಚ್ 15, 2026

*ಸುಂಟಿಕೊಪ್ಪ ಶ್ರೀ ಚಾಮುಂಡೇಶ್ವರಿ, ಶ್ರೀಮುತ್ತಪ್ಪ ಮತ್ತು ಪರಿವಾರ ದೇವರುಗಳ 58ನೇ ವರ್ಷದ ತೆರೆ ಮಹೋತ್ಸವ*

ಮಾರ್ಚ್ 15, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಸುಂಟಿಕೊಪ್ಪ NEWS DESK ಮಾ.15 : ಸುಂಟಿಕೊಪ್ಪ ಶ್ರೀ ಚಾಮುಂಡೇಶ್ವರಿ, ಶ್ರೀಮುತ್ತಪ್ಪ ಮತ್ತು ಪರಿವಾರ ದೇವರುಗಳ 58ನೇ ವರ್ಷದ ತೆರೆ…

*ಸುಗ್ಗಿಕಟ್ಟೆಗಳ ಅಭಿವೃದ್ಧಿಗೆ ಭೂಮಿಪೂಜೆ ನೆರವೇರಿಸಿದ ಶಾಸಕ ಡಾ.ಮಂತರ್ ಗೌಡ*

ಮಾರ್ಚ್ 15, 2026

*ಕೊಡಗು ಜಿಲ್ಲಾ ಸಾಹಿತ್ಯ ಸಮ್ಮೇಳನ ಪೂರ್ವಬಾವಿ ಸಭೆ : ಬಿ.ಸಿ.ದಿನೇಶ್ ಗೆ ಅಭಿನಂದನೆ*

ಮಾರ್ಚ್ 15, 2026

*ವಿಶ್ವ ಜನಾಂಗೀಯ ತಾರತಮ್ಯ ನಿರ್ಮೂಲನಾ ದಿನ : ಮಾ.21 ರಂದು ಸಿಎನ್‌ಸಿಯಿಂದ “ವಿಚಾರ ಸಂಕಿರಣ”*

ಮಾರ್ಚ್ 15, 2026

*ಕೊಡಗಿನಲ್ಲಿ ಮೊದಲ ಬಾರಿಗೆ ವಿಶೇಷ ಚೇತನರಿಗಾಗಿ ರಾಜ್ಯಮಟ್ಟದ ಕ್ರೀಡಾಕೂಟ* 

ಮಾರ್ಚ್ 15, 2026

*ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರದಾನ* 

ಮಾರ್ಚ್ 15, 2026

*ಮಾ.16 ರಂದು “ಸ್ವಚ್ಛ ಕೊಡಗು, ಸುಂದರ ಕೊಡಗು” ಉದ್ಘಾಟನಾ ಕಾರ್ಯಕ್ರಮ*

ಮಾರ್ಚ್ 15, 2026

*ಕುಶಾಲನಗರ ಸಂಚಾರ ಠಾಣೆಯ ನೂತನ ಕಟ್ಟಡ ನಿರ್ಮಾಣಕ್ಕೆ ಶಂಕು ಸ್ಥಾಪನೆ*

ಮಾರ್ಚ್ 15, 2026

*ಮಡಿಕೇರಿ ಘಟಕದ ನೂತನ ಡಿಪೋ ವ್ಯವಸ್ಥಾಪಕರನ್ನು ಭೇಟಿಯಾದ ಎಐಟಿಯುಸಿ ಸಂಘಟನೆ*

ಮಾರ್ಚ್ 15, 2026

*ಅಂತರಾಷ್ಟ್ರೀಯ ಥೈಲ್ಯಾಂಡ್ ಮಾಸ್ಟರ್ಸ್ ಅಥ್ಲೆಟಿಕ್ ನಲ್ಲಿ ಚಿನ್ನ ಮತ್ತು ಬೆಳ್ಳಿ ಗೆದ್ದ ಬಂಗಾಡುಮನೆ ವಸಂತಿ*

ಮಾರ್ಚ್ 15, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.