Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಶರಣ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಅರಮೇರಿ ಶ್ರೀಗಳ ಆಯ್ಕೆ*
  • *ಮಾಯಮುಡಿಯಲ್ಲಿ ಅಮ್ಮ ಕೊಡವರ “ಬಾನಂಡ ಕಪ್ ಕ್ರಿಕೆಟ್” ಹಬ್ಬ*
  • *ಗಾಳಿಬೀಡು ಚಾಂಪಿಯನ್ಸ್ ಕ್ಲಬ್ ನಿಂದ ವಿವಿಧ ಕ್ರೀಡಾಕೂಟ*
  • *ವೀರಭದ್ರ ಹಾಗೂ ಸಪರಿವಾರ ದೇವರುಗಳ ದೇವಾಲಯ ಪ್ರತಿಷ್ಠಾ ಬಂಧ ಬ್ರಹ್ಮಕಲಶೋತ್ಸವ ಧಾರ್ಮಿಕ ವಿಧಿ, ವಿಧಾನಗಳೊಂದಿಗೆ ಶ್ರದ್ಧಾ,ಭಕ್ತಿಯಿಂದ ನೆರವೇರಿತು*
  • *ಜಿ.ಪಂ, ತಾ.ಪಂ ಮತ್ತು ಗ್ರಾ.ಪಂ ಚುನಾವಣೆ ನಡೆಸಲು ಆಗ್ರಹಿಸಿ ಪ್ರತಿಭಟನೆ*
  • *ಕುಟ್ಟ ಹೋಂಸ್ಟೇ ಪ್ರಕರಣ ಎಚ್ಚರಿಕೆಯ ಗಂಟೆ : ಸೂಕ್ತ ನಿಯಮ ರೂಪಿಸಲು ಹೋಂಸ್ಟೇ ಅಸೋಸಿಯೇಷನ್ ಆಗ್ರಹ*
  • *’ನಮ್ಮ ಗ್ರೋಮೋರ್’ 1200ನೇ ಮಳಿಗೆ ಉದ್ಘಾಟನೆ*
  • *ಕೊಡಗು ವಿದ್ಯಾಲಯದಲ್ಲಿ ಸಮಾಪನಗೊಂಡ ಸಮಾಗಮ ಬೇಸಿಗೆ ಶಿಬಿರ*
  • *10ನೇ ತರಗತಿ ಫಲಿತಾಂಶ : ರೆನಿತ್ ಸಾಧನೆ*
  • *ರೋಟರಿ ವುಡ್ಸ್ ನಿಂದ ಚಾಮಾ೯ಡಿ ಬೈಕ್ ರೈಡ್*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಕೊಡಗು ವಿಶ್ವವಿದ್ಯಾನಿಲಯದ ಪ್ರಥಮ ಸಂಸ್ಥಾಪನ ದಿನಾಚರಣೆ : ಗುಣಮಟ್ಟದ ಶಿಕ್ಷಣಕ್ಕೆ ಒತ್ತು : ಪ್ರೊ.ಅಶೋಕ್ ಸಂಗಪ್ಪ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಕೊಡಗು ವಿಶ್ವವಿದ್ಯಾನಿಲಯದ ಪ್ರಥಮ ಸಂಸ್ಥಾಪನ ದಿನಾಚರಣೆ : ಗುಣಮಟ್ಟದ ಶಿಕ್ಷಣಕ್ಕೆ ಒತ್ತು : ಪ್ರೊ.ಅಶೋಕ್ ಸಂಗಪ್ಪ*

ಮಾರ್ಚ್ 28, 20242 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಮಾ.28 NEWS DESK  : ಕೊಡಗು ವಿಶ್ವವಿದ್ಯಾನಿಲಯದಲ್ಲಿ ಗುಣಮಟ್ಟದ ಹಾಗೂ ಮೌಲ್ಯಾಧಾರಿತ ಶಿಕ್ಷಣ ನೀಡಲು ಒತ್ತು ನೀಡಲಾಗಿದೆ ಎಂದು ಕೊಡಗು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಅಶೋಕ್ ಸಂಗಪ್ಪ ಆಲೂರ್ ತಿಳಿಸಿದ್ದಾರೆ.
ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ಗುರುವಾರ ನಡೆದ ಕೊಡಗು ವಿಶ್ವವಿದ್ಯಾನಿಲಯದ ಪ್ರಥಮ ಸಂಸ್ಥಾಪನ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿಶ್ವವಿದ್ಯಾನಿಲಯದಲ್ಲಿ ಹಲವು ಇತಿಮಿತಿಗಳ ನಡುವೆ ಧನಾತ್ಮಕ ಚಿಂತನೆ ಒಳಗೊಂಡು ಕಾರ್ಯನಿರ್ವಹಿಸಲಾಗುತ್ತಿದೆ. ಯುವಜನರಿಗೆ ಉದ್ಯೋಗ ಸೃಷ್ಟಿಯತ್ತ ವಿಶೇಷ ಆದ್ಯತೆ ನೀಡಲಾಗಿದೆ ಎಂದು ಅಶೋಕ್ ಸಂಗಪ್ಪ ಆಲೂರ್ ಹೇಳಿದರು.
ಕೊಡಗು ವಿಶ್ವವಿದ್ಯಾನಿಲಯದಲ್ಲಿ ಬಿಸಿಎ, ಎಂಸಿಎ, ಎಂಬಿಎ, ಪದವಿ, ಸ್ನಾತಕೋತ್ತರ ಪದವಿ ಆರಂಭಕ್ಕೆ ಈಗಾಗಲೇ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
ಕೊಪ್ಪಳ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಬಿ.ಕೆ.ರವಿಮಾತನಾಡಿ ಕೊಡಗು ವಿಶ್ವವಿದ್ಯಾನಿಲಯವು ಜಾಗತಿಕ ಮಟ್ಟದಲ್ಲಿ ಗುರುತಿಸುವಂತಾಗಬೇಕು. ಆ ನಿಟ್ಟಿನಲ್ಲಿ ಕಲೆ, ಸಾಹಿತ್ಯ, ವಿಜ್ಞಾನ, ತಂತ್ರಜ್ಞಾನ ಹಾಗೂ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಏಳು ವಿಶ್ವವಿದ್ಯಾನಿಲಯಗಳು ಸ್ಥಾಪನೆಯಾಗಿದ್ದು, ವಿಶ್ವವಿದ್ಯಾನಿಲಯಗಳು ವಿನೂತನ ಪಠ್ಯ ಚಟುವಟಿಕೆಗಳನ್ನು ಅಳವಡಿಸಿಕೊಂಡು ಅಭಿವೃದ್ಧಿಯತ್ತ ಹೆಜ್ಜೆ ಇಡಬೇಕು ಎಂದು ಅವರು ಪ್ರತಿಪಾದಿಸಿದರು.
ಆಧುನಿಕ ಬದುಕಿನಲ್ಲಿ ಹೊಸ ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಬದಲಾವಣೆಗಳತ್ತ ವಿಶ್ವವಿದ್ಯಾನಿಲಯಗಳು ಸಾಗಬೇಕು. ಮಾನವಿಕ ಪದವಿಗಳ ಜೊತೆ ಕೃಷಿ, ವಿಜ್ಞಾನ ಮತ್ತು ತಂತ್ರಜ್ಞಾನ ಅಳವಡಿಸಿಕೊಂಡು ಅಭಿವೃದ್ಧಿಯತ್ತ ದಾಪುಗಾಲು ಹಾಕಬೇಕು ಎಂದು ಕೊಪ್ಪಳ ವಿಶ್ವವಿದ್ಯಾನಿಲಯದ ಕುಲಪತಿ ತಿಳಿಸಿದರು.
ಹೊಸ ವಿಶ್ವವಿದ್ಯಾನಿಲಯಗಳು ಹಲವು ಸಮಸ್ಯೆ ಮತ್ತು ಸವಾಲುಗಳ ನಡುವೆಯೂ ಸಹ ಯುವಜನರಿಗೆ ಉನ್ನತ ಶಿಕ್ಷಣ ಕಲ್ಪಿಸುವತ್ತ ಗಮನಹರಿಸಬೇಕು. ಪ್ರಸ್ತುತ ಬೇಡಿಕೆಗೆ ತಕ್ಕಂತೆ ಯುವ ಜನರಿಗೆ ಉನ್ನತ ಶಿಕ್ಷಣ ನೀಡುವಂತಾಗಬೇಕು ಎಂದು ಬಿ.ಕೆ.ರವಿಸಲಹೆ ಮಾಡಿದರು.
ಹಾಸನ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ತರಿಕೆರೆ ಚಂದ್ರಶೇಖರ ತಾರಾನಾಥ್ ಮಾತನಾಡಿ ವರ್ಷದಿಂದ ವರ್ಷಕ್ಕೆ ವಾತಾವರಣದಲ್ಲಿ ಬದಲಾವಣೆ ಕಂಡು ಬರುತ್ತಿದ್ದು, ಪ್ರಾಕೃತಿಕ ಪರಿಸರ ಹಾಗೂ ಜಲ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕಿದೆ. ಆ ನಿಟ್ಟಿನಲ್ಲಿ ವಿಶ್ವವಿದ್ಯಾನಿಲಯಗಳು ಜಲಸಂರಕ್ಷಣೆ, ವಾತಾವರಣದಲ್ಲಿನ ಬದಲಾವಣೆ ಮತ್ತಿತರ ವಿಷಯಗಳ ಕುರಿತು ವಿಶ್ವವಿದ್ಯಾನಿಲಯಗಳಲ್ಲಿ ಹೆಚ್ಚಿನ ಅಧ್ಯಯನ ಮಾಡುವಂತಾಗಬೇಕು ಎಂದರು.
ಜ್ಞಾನ ಇದ್ದಲ್ಲಿ ಅಜ್ಞಾನಕ್ಕೆ ಅವಕಾಶ ಇರುವುದಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಉನ್ನತ ಶಿಕ್ಷಣ ಪಡೆಯುವಂತಾಗಬೇಕು. ಶಿಕ್ಷಣದಿಂದ ಮಾತ್ರ ಸಮಾಜದಲ್ಲಿ ಬದಲಾವಣೆ ಸಾಧ್ಯ. ಜೊತೆಗೆ ಪ್ರಾಕೃತಿಕ ಸಂಪನ್ಮೂಲಗಳನ್ನು ಉಳಿಸುವಂತಾಗಬೇಕು ಎಂದು ಅವರು ಪ್ರತಿಪಾದಿಸಿದರು.
ವಿಜ್ಞಾನ, ತಂತ್ರಜ್ಞಾನ, ಗಣಿತ, ಸಾಮಾಜಿಕ ವಿಜ್ಞಾನ, ಹೀಗೆ ಹಲವು ವಿಷಯಗಳ ಕುರಿತು ಉನ್ನತ ಶಿಕ್ಷಣ ನೀಡುವುದು ವಿಶ್ವವಿದ್ಯಾನಿಲಯದ್ದಾಗಿದೆ. ಆ ನಿಟ್ಟಿನಲ್ಲಿ ಜ್ಞಾನವೇ ಶಕ್ತಿ ಎಂಬುದನ್ನು ಯಾರೂ ಸಹ ಮರೆಯಬಾರದು. ವಿಶ್ವವಿದ್ಯಾನಿಲಯದಲ್ಲಿ ಯುವಜನರು ಉನ್ನತ ಶಿಕ್ಷಣ ಪಡೆಯುವ ಮೂಲಕ ಉತ್ತಮ ವ್ಯಕ್ತಿತ್ವ ಹೊಂದಬೇಕು. ಉನ್ನತ ಶಿಕ್ಷಣ ಪಡೆದು ಯಶಸ್ಸು ಸಾಧಿಸಬೇಕು ಎಂದರು.
ಹಾವೇರಿ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಸುರೇಶ್ ಎಚ್.ಜಂಗಮಶೆಟ್ಟಿ ಮಾತನಾಡಿ, ಪ್ರತಿಯೊಬ್ಬರಲ್ಲಿಯೂ ಸಹ ಸಾಮಾಜಿಕ ಕಳಕಳಿ ಇರಬೇಕು. ಸಾಮಾಜಿಕ ಕಳಕಳಿ ಇದ್ದಲ್ಲಿ ಸಮಾಜದಲ್ಲಿ ಬದಲಾವಣೆ ಸಾಧ್ಯ ಎಂದರು.
ಆಧುನಿಕ ಬದುಕಿನಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿಯೂ ಸಹ ಗಣಕಯಂತ್ರ ಇದ್ದು, ತಂತ್ರಜ್ಞಾನವನ್ನು ಅಳವಡಿಸಿಕೊಂಡು ಪರಿವರ್ತನೆಗೆ ಮುಂದಾಗಬೇಕು. ಸ್ಥಳೀಯ ಸಂಸ್ಕೃತಿ, ಸಂಪ್ರದಾಯಗಳನ್ನು ಉಳಿಸಿ ಬೆಳೆಸಬೇಕು ಎಂದು ಪ್ರೊ.ಸುರೇಶ್ ಹೇಳಿದರು.
ಕೊಡಗು ವಿಶ್ವವಿದ್ಯಾನಿಲಯದ ಕುಲಸಚಿವರಾದ ಡಾ.ಸೀನಪ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಕೊಡಗು ಜಿಲ್ಲೆಯಲ್ಲಿ ಒಂದು ಘಟಕ ಕಾಲೇಜು, 6 ಸರ್ಕಾರಿ ಪದವಿ ಕಾಲೇಜುಗಳು, 3 ಅನುದಾನಿತ ಕಾಲೇಜುಗಳು, 12 ಖಾಸಗಿ ಕಾಲೇಜುಗಳು, ಒಟ್ಟು 23 ಕಾಲೇಜುಗಳನ್ನು ಕೊಡಗು ವಿಶ್ವವಿದ್ಯಾನಿಲಯ ಒಳಗೊಂಡಿದೆ ಎಂದು ತಿಳಿಸಿದರು.
ಬರೋಡ ಬ್ಯಾಂಕಿನ ಮಂಗಳೂರು ವಲಯ ಮುಖ್ಯಸ್ಥರಾದ ವ್ಯವಸ್ಥಾಪಕರಾದ ಗಾಯತ್ರಿ ಅವರು ಮಾತನಾಡಿದರು. ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರೊ.ರಾಘವ ಅವರು ಮಾತನಾಡಿದರು.
ಕೊಡಗು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾದ ಕೆ.ಎನ್.ಜನಾರ್ಧನ್ ಅವರು ಮಾತನಾಡಿ ಕೊಡಗು ವಿಶ್ವವಿದ್ಯಾನಿಲಯದ ಸರ್ವೋತೋಮುಖ ಅಭಿವೃದ್ದಿಗೆ ಅಗತ್ಯವಿರುವ ಎಲ್ಲಾ ಸಹಕಾರವನ್ನು ನೀಡಲಾಗುವುದು ಎಂದರು.
ಪ್ರಾಧ್ಯಾಪಕರಾದ ಜಮೀರ್ ಅಹ್ಮದ್ ಅವರು ವಿವಿಧ ವಿಶ್ವವಿದ್ಯಾನಿಲಯದ ಕುಲಪತಿಗಳನ್ನು ಪರಿಚಯಿಸಿದರು. ಪ್ರಾಧ್ಯಾಪಕರಾದ ಜಯಶಂಕರ್  ಮಾತನಾಡಿದರು. ಪ್ರಾಧ್ಯಾಪಕರಾದ ಶ್ರೀಧರ ಹೆಗಡೆ ಅವರು ನಿರೂಪಿಸಿದರು. ಕಾಲೇಜಿನ ಪ್ರಾಂಶುಪಾಲ ಮೇಜರ್ ಡಾ.ಬಿ.ರಾಘವ ವಂದಿಸಿದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಶರಣ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಅರಮೇರಿ ಶ್ರೀಗಳ ಆಯ್ಕೆ*

ಏಪ್ರಿಲ್ 24, 2026

*ಮಾಯಮುಡಿಯಲ್ಲಿ ಅಮ್ಮ ಕೊಡವರ “ಬಾನಂಡ ಕಪ್ ಕ್ರಿಕೆಟ್” ಹಬ್ಬ*

ಏಪ್ರಿಲ್ 24, 2026

*ಗಾಳಿಬೀಡು ಚಾಂಪಿಯನ್ಸ್ ಕ್ಲಬ್ ನಿಂದ ವಿವಿಧ ಕ್ರೀಡಾಕೂಟ*

ಏಪ್ರಿಲ್ 24, 2026

*ಮಾಯಮುಡಿಯಲ್ಲಿ ಅಮ್ಮ ಕೊಡವರ “ಬಾನಂಡ ಕಪ್ ಕ್ರಿಕೆಟ್” ಹಬ್ಬ*

ಏಪ್ರಿಲ್ 24, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ NEWS DESK ಏ.24 : ಅಖಿಲ ಅಮ್ಮ ಕೊಡವ ಸಮಾಜದ ವತಿಯಿಂದ ಬಾನಂಡ ಕುಟುಂಬದ ಸಹಯೋಗದಲ್ಲಿ ಮೇ1 ರಿಂದ…

*ಗಾಳಿಬೀಡು ಚಾಂಪಿಯನ್ಸ್ ಕ್ಲಬ್ ನಿಂದ ವಿವಿಧ ಕ್ರೀಡಾಕೂಟ*

ಏಪ್ರಿಲ್ 24, 2026

*ವೀರಭದ್ರ ಹಾಗೂ ಸಪರಿವಾರ ದೇವರುಗಳ ದೇವಾಲಯ ಪ್ರತಿಷ್ಠಾ ಬಂಧ ಬ್ರಹ್ಮಕಲಶೋತ್ಸವ ಧಾರ್ಮಿಕ ವಿಧಿ, ವಿಧಾನಗಳೊಂದಿಗೆ ಶ್ರದ್ಧಾ,ಭಕ್ತಿಯಿಂದ ನೆರವೇರಿತು*

ಏಪ್ರಿಲ್ 24, 2026

*ಜಿ.ಪಂ, ತಾ.ಪಂ ಮತ್ತು ಗ್ರಾ.ಪಂ ಚುನಾವಣೆ ನಡೆಸಲು ಆಗ್ರಹಿಸಿ ಪ್ರತಿಭಟನೆ*

ಏಪ್ರಿಲ್ 24, 2026

*ಕುಟ್ಟ ಹೋಂಸ್ಟೇ ಪ್ರಕರಣ ಎಚ್ಚರಿಕೆಯ ಗಂಟೆ : ಸೂಕ್ತ ನಿಯಮ ರೂಪಿಸಲು ಹೋಂಸ್ಟೇ ಅಸೋಸಿಯೇಷನ್ ಆಗ್ರಹ*

ಏಪ್ರಿಲ್ 24, 2026

*’ನಮ್ಮ ಗ್ರೋಮೋರ್’ 1200ನೇ ಮಳಿಗೆ ಉದ್ಘಾಟನೆ*

ಏಪ್ರಿಲ್ 23, 2026

*ಕೊಡಗು ವಿದ್ಯಾಲಯದಲ್ಲಿ ಸಮಾಪನಗೊಂಡ ಸಮಾಗಮ ಬೇಸಿಗೆ ಶಿಬಿರ*

ಏಪ್ರಿಲ್ 23, 2026

*10ನೇ ತರಗತಿ ಫಲಿತಾಂಶ : ರೆನಿತ್ ಸಾಧನೆ*

ಏಪ್ರಿಲ್ 23, 2026

*ರೋಟರಿ ವುಡ್ಸ್ ನಿಂದ ಚಾಮಾ೯ಡಿ ಬೈಕ್ ರೈಡ್*

ಏಪ್ರಿಲ್ 23, 2026

*ಕೊಡಗು : 10ನೇ ತರಗತಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳು*

ಏಪ್ರಿಲ್ 23, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.