ಮಡಿಕೇರಿ ಏ.10 NEWS DESK : ಗೌಡ ಫುಟ್ಬಾಲ್ ಅಕಾಡೆಮಿ ವತಿಯಿಂದ ಮೇ 18 ರಿಂದ 25ರ ವರೆಗೆ ಗೌಡ ಫುಟ್ಬಾಲ್ ಟ್ರೋಫಿ ಹಾಗೂ ಮರಗೋಡು ವ್ಯಾಪ್ತಿಯ ಗ್ರಾಮಗಳಿಗೆ ಸೀಮಿತವಾಗಿ ಯೂನಿಟಿ ಕಪ್ ಫುಟ್ಬಾಲ್ ಪಂದ್ಯಾವಳಿ ನಡೆಯಲಿದೆ ಎಂದು ಅಕಾಡೆಮಿ ಕಾರ್ಯದರ್ಶಿ ಇಟ್ಟಣಿಕೆ ನವನೀತ್ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮರಗೋಡು ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ 7ನೇ ವರ್ಷದ ಗೌಡ ಫುಟ್ಬಾಲ್ ಪಂದ್ಯಾವಳಿ ನಡೆಯಲಿದೆ ಎಂದರು.
ಕಳೆದ ಬಾರಿಯ ಪಂದ್ಯಾವಳಿಗೆ ಸಮುದಾಯ ಬಾಂಧವರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಈ ಬಾರಿ ಮೊದಲ 64 ತಂಡಗಳಿಗೆ ಆಧ್ಯತೆ ನೀಡಲಾಗಿದೆ. ಪ್ರವೇಶ ಶುಲ್ಕ 3 ಸಾವಿರ ರೂಪಾಯಿ ಇದ್ದು, ಆಸಕ್ತ ತಂಡಗಳು ಮೇ 5 ರೊಳಗಾಗಿ ತಂಡಗಳ ಹೆಸರು ನೋಂದಾಯಿಸಿಕೊಳ್ಳುವಂತೆ ಮನವಿ ಮಾಡಿದರು.
ಪಂದ್ಯಾವಳಿಯ ವಿಜೇತ ತಂಡಕ್ಕೆ ಪ್ರಥಮ ಬಹುಮಾನ ರೂ. 70,000 ನಗದು, ದ್ವಿತೀಯ ರೂ.50,000 ನಗದು, ತೃತೀಯ ಹಾಗೂ ನಾಲ್ಕನೇ ಬಹುಮಾನ ರೂ.10,000 ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು ಎಂದು ನವನೀತ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಅಕಾಡೆಮಿ ಅಧ್ಯಕ್ಷ ಬಡುವಂಡ್ರ ಸುಜಯ್, ಉಪಾಧ್ಯಕ್ಷ ಪಾಂಡನ ರಿಶಿಕೇಷ್, ಪ್ರಮುಖರಾದ ಜೈನಿರ ರೋಷನ್, ಕೊಂಪುಳಿರ ಪುನೀತ್, ರೋಷನ್ ಬೊಳ್ಳೂರು ಹಾಜರಿದ್ದರು.









