
ಚೆಟ್ಟಳ್ಳಿ ಏ.25 NEWS DESK : ಚೆಟ್ಟಳ್ಳಿಯ ಪುರಾತನ ಇತಿಹಾಸ ನೆಲೆಯಾದ ಬೇಟೆಗಾರ ಅಯ್ಯಪ್ಪ ನೆಲೆಯಲ್ಲಿ ವಾರ್ಷಿಕ ಪೂಜೆ ಶ್ರದ್ಧಾಭಕ್ತಿಯಿಂದ ನೆರವೇರಿತು.
ಬೆಳಿಗ್ಗೆ ಗಣಪತಿ ಪೂಜೆ ಸಲ್ಲಿಸಿ, ನಂತರ ಭನದಲ್ಲಿರುವ ಬೇಟೆಗಾರ ಅಯ್ಯಪ್ಪ ನೆಲೆಯಲ್ಲಿ ಚಪ್ಪರ ಹಾಕಿ ಹಾಲು, ಹಣ್ಣು, ಕಜ್ಜಾಯ, ಬಿಲ್ಲುಬಾಣವನ್ನೆಲ್ಲ ಅರ್ಪಿಸಿ ಮಹಾಪೂಜೆಯನ್ನು ನೆರವೇರಿಸಲಾಯಿತು. ನೆರೆದಿದ್ದ ಭಕ್ತಾಧಿಗಳಿಗೆ ತೀರ್ಥ ಪ್ರಸಾದ ವಿತರಣೆ ಬಳಿಕ ನೆರವೇರಿತು.









