
ಮಡಿಕೇರಿ ಮೇ 1 NEWS DESK : ಮುಂಬೈ ಯ ಸೋಮಯ್ಯ ವಿದ್ಯಾ ವಿಹಾರ್ ವಿಶ್ವವಿದ್ಯಾನಿಲಯದಲ್ಲಿ ನಡೆದ 43ನೇ ಇಂಡಿಯ ಮಾಸ್ಟರ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ 2024 ರಲ್ಲಿ ಜಿಲ್ಲೆಯ ಕ್ರೀಡಾಪಟುಗಳು ಉತ್ತಮ ಸಾಧನೆ ಮಾಡಿದ್ದಾರೆ.
ಮೂಲತಃ ಕೊಡಗು ಜಿಲ್ಲೆಯವರಾದ ಮುಲ್ಲೆರ ಪೂನ್ನಮ್ಮ ಪೂವಣ್ಣ 100 ಮೀ ಮತ್ತು 200 ಮೀ ಓಟದಲ್ಲಿ ಪ್ರಥಮ, ಶೋಟ್ ಪುಟ್ ನಲ್ಲಿ ಪ್ರಥಮ, ಜಾವಲಿನ್ ನಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಜಿಲ್ಲೆಯವರೇ ಆದ ಮತ್ತೋರ್ವ ಕ್ರೀಡಾಪಟು ಪಾಸುರ ಇಂದಿರಾ ಮುತ್ತಣ್ಣ ಶಾಟ್‍ಪುಟ್ ರಿಲೇ ನಲ್ಲಿ ಪ್ರಥಮ, ಜಾವಲಿನ್ ಮತ್ತು ಡಿಸ್ಕಸ್ ಥ್ರೋ ನಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ.








