

ಮಡಿಕೇರಿ ಮೇ 1 NEWS DESK : ಇತಿಹಾಸ ಪ್ರಸಿದ್ಧ ಎಮ್ಮೆಮಾಡು ಮಖಾಂ ಉರೂಸ್ ಪ್ರಯುಕ್ತ ಮೇ 2 ರಂದು ಸ್ವಲಾತ್ ಮಜ್ಲಿಸ್ ನಡೆಯಲಿದೆ.
ಮಗ್ರಿಬ್ ನಮಾಝಿನ ಬಳಿಕ ಮುದರ್ರಿಸ್ ಎಮ್ಮೆಮಾಡು ಹಂಝ ಸಖಾಫಿ ಮಲಪ್ಪುರಂ ನೇತೃತ್ವದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸಯ್ಯಿದ್ ಸಮೀಹ್ ಅನ್ವಾರಿ ಅಲ್ ಅಹ್ಸನಿ (ಮುದರ್ರಿಸ್ ಕೀಚೇರಿ) ದುಆಃ ನೆರವೇರಿಸಲಿದ್ದಾರೆ.
ಎ.ಎಂ.ನೌಶಾದ್ ಬಾಖವಿ ಕೊಲ್ಲಂ ಮುಖ್ಯ ಪ್ರಭಾಷಣ ಮಾಡಲಿದ್ದಾರೆ.
ಕಾರ್ಯಕ್ರಮದಲ್ಲಿ ಸಯ್ಯಿದ್ ನುಅಮಾನ್ ಸಅದಿ ಅಲ್ ಹೈದರೂಸಿ ಎಮ್ಮೆಮಾಡು, ಸಯ್ಯಿದ್ ಝಕರಿಯಾ ಸಅದಿ ಅಲ್ ಹಾದಿ, ಎಮ್ಮೆಮಾಡು ತಾಜುಲ್ ಇಸ್ಲಾಂ ಮುಸ್ಲಿಂ ಜಮಾಅತ್ ಸದಸ್ಯ ಹಸೈನಾರ್ ಕನ್ನಡಿಯಂಡ, ಹಳೇ ತಾಲೂಕು ಖತೀಬ್ ಹಾಫಿಳ್ ಶಬೀರ್ ಹಿಮಮಿ, ರಿಯಾಝ್ ಫೈಝಿ ಎಮ್ಮೆಮಾಡು ಪಾಲ್ಗೊಳ್ಳಲಿದ್ದಾರೆ.







