Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada
Home»ಇತ್ತೀಚಿನ ಸುದ್ದಿಗಳು»ವಾಂಡರರ್ಸ್ ತರಬೇತಿ ಶಿಬಿರ ಸಮಾರೋಪ : ಮಕ್ಕಳು ವಿದ್ಯಾವಂತರಾಗದಿದ್ದರೂ ಗುಣವಂತರಾಗಬೇಕು : ಚೆಪ್ಪುಡಿರ ಕಾರ್ಯಪ್ಪ
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ವಾಂಡರರ್ಸ್ ತರಬೇತಿ ಶಿಬಿರ ಸಮಾರೋಪ : ಮಕ್ಕಳು ವಿದ್ಯಾವಂತರಾಗದಿದ್ದರೂ ಗುಣವಂತರಾಗಬೇಕು : ಚೆಪ್ಪುಡಿರ ಕಾರ್ಯಪ್ಪ

ಮೇ 2, 20242 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement

ಮಡಿಕೇರಿ ಮೇ 2 NEWS DESK : ಮಕ್ಕಳಿಗೆ ಶಿಕ್ಷಣ ಮುಖ್ಯ, ಓದಿ ವಿದ್ಯಾವಂತರಾಗದಿದ್ದರೂ ಗುಣವಂತರಾಗಬೇಕೆಂದು ಹಾಕಿ ಪಟು, ರಾಷ್ಟ್ರೀಯ ಹಾಕಿ ವೀಕ್ಷಕ ವಿವರಣೆಗಾರ ಚೆಪ್ಪುಡಿರ ಕಾರ್ಯಪ್ಪ ಕರೆ ನೀಡಿದರು.

ವಾಂಡರರ್ಸ್ ಸ್ಪೋರ್ಟ್ಸ್ ಕ್ಲಬ್  ವತಿಯಿಂದ ದಿ. ಸಿ.ವಿ.ಶಂಕರ್ ಸ್ವಾಮಿ ಅವರ ಸ್ಮರಣಾರ್ಥ ಜಿಲ್ಲಾ ಕ್ರೀಡಾಂಗಂದಲ್ಲಿ ಒಂದು ತಿಂಗಳ ಕಾಲ ನಡೆದ ಉಚಿತ ಬೇಸಿಗೆ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಹಾಕಿ ವಿಶ್ವಮಾನ್ಯ ಆಟವಾಗಿದೆ. ಇಂತಹ ಶಿಬಿರದಲ್ಲಿ ಹಾಕಿಯನ್ನು ಕೂಡ ಕಲಿಸಿಕೊಡುತ್ತಿರುವದು ಶ್ಲಾಘನೀಯ. ಯಾವದೇ ಕಾರಣಕ್ಕೂ ಈ ಶಿಬಿರ ನಿಲ್ಲಬಾರದು, ಮುಂದುವರೆಸಿಕೋಡು ಹೋಗಬೇಕೆಂದು ಹೇಳೀದರು. ಶಿಲ್ಪಿ ತನ್ನಲ್ಲಿರುವ ಕಲೆಯನ್ನು ತೋರಿಸಿಕೊಳ್ಳಲ್ಲ, ಅದಾಗಿಯೇ ಹೊರಬರುತ್ತದೆ. ಅದೇ ರೀತಿ ಮಕ್ಕಳ ಪ್ರತಿಭೆ ಬಗ್ಗೆ ಪೋಷಕರಿಗೆ ಗೊತ್ತಿರುತ್ತದೆ. ಅದನ್ನು ಹೊರತರಲು ಪ್ರೋತ್ಸಾಹ ನೀಡಬೇಕು. ಹಿಂದೆ ನಮಗೆಲ್ಲ ಈರೀತಿಯ ಶಿಬಿರ, ಪ್ರೋತ್ಸಾಹ ಇರಲಿಲ್ಲ, ನಾವೇ ಅಭ್ಯಾಸ ಮಾಡಿಕೊಳ್ಳುತ್ತಿದ್ದೆವು. ಆಡುವ ಮೈದಾನಕ್ಕೆ ಮೊದಲು ನಮಿಸಬೇಕು. ಮೈದಾನಕ್ಕೆ ಬರುವವರು ಒಳ್ಳೆಯ ಅಟಗಾರರಾಗುತ್ತಾರೆ. ಪ್ರಸ್ತುತ ದಿನಗಳಲ್ಲಿ ಮೊಬೈಲ್ ದೊಡ್ಡ ಕಾಯಿಲೆಯಾಗಿದ್ದು, ಅಪಾಯಕಾರಿಯಾಗುತ್ತಿದೆ. ಮಕ್ಕಳು ಇದರಿಂದ ದೂರವಿಎಬೇಕು. ವಿದ್ಯಾವಂತರಾಗದಿದ್ದರು ಗುಣವಂತರಾಗಬೇಕು. ಅಪ್ಪ, ಅಮ್ಮಂದಿರನ್ನು ವೃದ್ಧಾಶ್ರಮಕ್ಕೆ ಹಾಕುವಂತಾಗಬಾರದು. ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.

ಇಂತಹ ಶಿಬಿರದಲ್ಲಿ ಯಾವದೇ ಜಾತಿ, ಮತವಿಲ್ಲ. ಎಲ್ಲರೂ ಒಂದೇ ಎಂಬ ಭಾವನೆಯಿಂದ ಕಲಿಸುತ್ತಾರೆ. ಮಕ್ಕಳು ಕಲಿಯಬೇಕು. ಅಭ್ಯಸವನ್ನು ನಿಲ್ಲಿಸಬಾರದು, ಪ್ರತಿನಿತ್ಯ ಅಭ್ಯಾಸ ಮಾಡಬೇಕು. ಶಾರೀರಿಕ, ಮಾನಸಿಕವಾಗಿ ಸದೃಢರಾಗಬೇಕು ಎಂದರಲ್ಲದೆ, ಕ್ರೀಡಾಕೂಟಗಳು ಆಡಂಬರಕ್ಕೆ ಸೀಮಿತವಾಗಬಾರದು, ದಾಖಲೆ ಮಾಡುವದು ಮುಖ್ಯವಲ್ಲ. ಕ್ರೀಡಾಶಾಲೆ, ಖಾಸಗಿ ಶಾಲೆಗಳ ಮಕ್ಕಳಿಗೆ ಅವಕಾಶ ಹೆಚ್ಚಿಗೆ ಸಿಗುತ್ತದೆ, ಆದರೆ ಸರಕಾರಿ ಶಾಲೆ ಮಕ್ಕಳಿಗೆ ತರಬೇತಿ ನೀಡಿದರೆ ಅವರುಗಳ ಭವಿಷ್ಯಕ್ಕೆ ಒಳಿತಾಗಲಿದೆ. ಅದು ಬಿಟ್ಟು ಮಕ್ಕಳ ಕೈಯಲ್ಲಿ ಮದ್ಯ ಬಾಟಲಿ ಹಿಡಿಸುವದು ಸರಿಯಲ್ಲ, ಈ ಬಗ್ಗೆ ಹೇಳಿದರೆ ಜನಾಂಗ ವಿರೋಧಿ ಎಂಬ ಪಟ್ಟ ಕಟ್ಟುತ್ತಾರೆ, ಮಕ್ಕಳಿಗೆ ನೀತಿ ನಿಯಮ ಕಲಿಸಬೇಕು ಎಂದು ಹೇಳಿದರು.

ವಾಂಡರರ್ಸ್ ಕ್ಲಬ್‌ನ ಕಾರ್ಯದರ್ಶಿ ಪಾರ್ಥ ಚಂಗಪ್ಪ ಮಾತನಾಡಿ, ಶಂಕರ್ ಸ್ವಾಮಿ ಆಲದ ಮರ ಇದ್ದಂತೆ, ಜಾತಿ, ಮತ ಮರೆತು ಎಲ್ಲರನ್ನೂ ಸಮನಾಗಿ ನೋಡಿ ತರಬೇತು ನೀಡಿ ತಯಾರಿರಿ ಮಾಡಿದ್ದಾರೆ. ಈ ಶಿಬಿರದಲ್ಲಿ ಕಲಿತ ಮಕ್ಕಳು ಕೂಡ ಬಾರತ ತಂಡಕ್ಕೆ ಆಡುವಂತಾಗಲಿ, ಮೈದಾನಕ್ಕೆ ಬರುವವರು ಯಾರೂ ಕೂಡ ಹಾಳಾಗುವದಿಲ್ಲ. ಉತ್ತಮರಾಗುತ್ತಾರೆ ಎಂದು ಹೇಳಿದರು.

ವಾಂಡರರ್ಸ್  ಕ್ಲಬ್ ಅಧ್ಯಕ್ಷ ಕೋಟೇರ ಮುದ್ದಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಹಿರಿಯ ಕ್ರೀಡಾಪಟು ಜಿ.ಟಿ.ರಾಘವೇಂದ್ರ, ಕೋಟೇರ ನಾಣಯ್ಯ, ತರಬೇತುದಾರ ಗಣೇಶ್, ಶಿಬಿರದ ಸಂಚಾಲಕ ಬಾಬು ಸೋಮಯ್ಯ ಇದ್ದರು. ಇದೇ ಸಂದರ್ಭದಲ್ಲಿ ತರಬೇತುದಾರರಾದ ಎಸ್.ಟಿ.ವೆಂಕಟೇಶ್, ಕುಡೆಕಲ್ ಸಂತೋಷ್, ಲೋಕೇಶ್ ನಾಯ್ಡು, ಹರೇಂದ್ರ, ಯೋಗ ಶಿಕ್ಷಕ ಕೆ.ಕೆ. ಮಹೇಶ್‌ಕುಮಾರ್, ಅವರುಗಳನ್ನು ನೆನಪಿನ ಕಾಣಿಕೆಯೊಂದಿಗೆ ಗೌರವಿಸಲಾಯಿತು. ಶಿಬಿರಾರ್ಥಿಗಳು ತಾವು ಶಿಬಿರದಲ್ಲಿ ಕಲಿತ ಕಲೆಯನ್ನು ಪ್ರದರ್ಶನ ಮಾಡಿದರು. ವಿದ್ಯಾರ್ಥಿನಿ ದಾರಿಕ, ಸ್ನೇಹ, ಅನಘ ಹಾಗೂ ತಂಡದವರು ಪ್ರಾರ್ಥಿಸಿದರು. ತರಬೇತುದಾರ ವೆಂಕಟೇಶ್ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.

Follow us Follow us
Share. WhatsApp Facebook Twitter Email Telegram Copy Link

Related Posts

ಮಡಿಕೇರಿಯಲ್ಲಿ ನ. 2 ಮತ್ತು 3ರಂದು ರಾಜ್ಯಮಟ್ಟದ ಪತ್ರಕರ್ತರ ಕ್ರಿಕೆಟ್ ಪಂದ್ಯಾವಳಿ; 24 ತಂಡಗಳು ಭಾಗಿ

ಅಕ್ಟೋಬರ್ 31, 2026

ಮಡಿಕೇರಿಯಲ್ಲಿ ನವೆಂಬರ್ 1ರಂದು ಕೊಡವ ಪ್ರೀಮಿಯರ್ ಲೀಗ್ ಸೀಸನ್-5 ಆಟಗಾರರ ಹರಾಜು

ಅಕ್ಟೋಬರ್ 31, 2026

ಕೊಡಗು ಕುಲಾಲ ಕುಂಬಾರರ ಚಾಂಪಿಯನ್ಸ್ ಲೀಗ್ ಕ್ರಿಕೆಟ್ ಪಂದ್ಯಾವಳಿ ಸೀಸನ್-2ಕ್ಕೆ ಅದ್ದೂರಿ ಚಾಲನೆ; ಕ್ರೀಡೆ ಸಮಾಜವನ್ನು ಒಗ್ಗೂಡಿಸುವ ಸುಂದರ ವೇದಿಕೆಯಾಗಿದೆ: ಸಿ.ಎಸ್. ಅರುಣ್ ಮಾಚಯ್ಯ

ಅಕ್ಟೋಬರ್ 31, 2026

ಮಡಿಕೇರಿಯಲ್ಲಿ ನವೆಂಬರ್ 1ರಂದು ಕೊಡವ ಪ್ರೀಮಿಯರ್ ಲೀಗ್ ಸೀಸನ್-5 ಆಟಗಾರರ ಹರಾಜು

ಅಕ್ಟೋಬರ್ 31, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ, NEWS DESK ಅ.31: ಕೊಡವ ಪ್ರೀಮಿಯರ್ ಲೀಗ್ (ಕೆಪಿಎಲ್) ಸೀಸನ್-5 ಕ್ರಿಕೆಟ್ ಪಂದ್ಯಾವಳಿಗೆ ಸಂಬಂಧಿಸಿದಂತೆ ಆಟಗಾರರ ಹರಾಜು ಪ್ರಕ್ರಿಯೆಯು…

ಕೊಡಗು ಕುಲಾಲ ಕುಂಬಾರರ ಚಾಂಪಿಯನ್ಸ್ ಲೀಗ್ ಕ್ರಿಕೆಟ್ ಪಂದ್ಯಾವಳಿ ಸೀಸನ್-2ಕ್ಕೆ ಅದ್ದೂರಿ ಚಾಲನೆ; ಕ್ರೀಡೆ ಸಮಾಜವನ್ನು ಒಗ್ಗೂಡಿಸುವ ಸುಂದರ ವೇದಿಕೆಯಾಗಿದೆ: ಸಿ.ಎಸ್. ಅರುಣ್ ಮಾಚಯ್ಯ

ಅಕ್ಟೋಬರ್ 31, 2026

ಮಡಿಕೇರಿಯಲ್ಲಿ ಕಾಂಗ್ರೆಸ್ ನಿಂದ ಇಂದಿರಾ ಗಾಂಧಿ 42ನೇ ಪುಣ್ಯಸ್ಮರಣೆ

ಅಕ್ಟೋಬರ್ 31, 2026

ರೈತರ ಪರಿಹಾರಕ್ಕೆ 17 ಷರತ್ತು ವಿಧಿಸಿದ ಕಾಂಗ್ರೆಸ್ ಸರಕಾರದ ವಿರುದ್ಧ ಕೊಡಗು ಬಿಜೆಪಿ ಆಕ್ರೋಶ

ಅಕ್ಟೋಬರ್ 31, 2026

ನ.2 ರಂದು ವಿರಾಜಪೇಟೆಯಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ತಾಲೂಕು ಮಟ್ಟದ ಸ್ಪರ್ಧೆ

ಅಕ್ಟೋಬರ್ 30, 2026

ಉತ್ತರಾಖಂಡ ಹೆಲಿಕಾಪ್ಟರ್ ದುರಂತ: ಐವರು ಕನ್ನಡಿಗರು ಸೇರಿ ಆರು ಮಂದಿ ಸಾವು

ಅಕ್ಟೋಬರ್ 30, 2026

ಚಿತ್ರಕಲಾ ಸ್ಪರ್ಧೆ : ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ

ಅಕ್ಟೋಬರ್ 30, 2026

ನಿವೃತ್ತ ಅಂಗನವಾಡಿ ಶಿಕ್ಷಕಿಯರಿಗೆ ಆತ್ಮೀಯ ಬೀಳ್ಕೊಡುಗೆ

ಅಕ್ಟೋಬರ್ 30, 2026

ಸ್ಥಳೀಯ ಉತ್ಪನ್ನಗಳ ಗುಣಮಟ್ಟ ಹೆಚ್ಚಿಸಿ ರಫ್ತು ವಹಿವಾಟು ವಿಸ್ತರಿಸಿ : ಬಿ.ಆರ್.ಯೋಗೇಶ್

ಅಕ್ಟೋಬರ್ 30, 2026

ಯುವ ಸಂಸತ್ತು ಕಾರ್ಯಕ್ರಮ : ಯುವ ಸಂಸತ್ತು ವಿದ್ಯಾರ್ಥಿಗಳಲ್ಲಿ ನಾಯತ್ವ ಗುಣ ಬೆಳೆಸಿಕೊಳ್ಳಲು ಸಹಕಾರಿ : ಮಂದ್ರೀರ ಮೋಹನ್ ದಾಸ್

ಅಕ್ಟೋಬರ್ 30, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.