
ಮಡಿಕೇರಿ ಮೇ 17 NEWS DESK : ಜಿಲ್ಲೆಯಲ್ಲಿ ಕಾಡಾನೆಗಳ ಸಂಖ್ಯೆ ಮಿತಿಮೀರಿದ್ದು, ಅವುಗಳ ಉಪಟಳದಿಂದ ಗ್ರಾಮೀಣರು ಕಂಗಾಲಾಗಿದ್ದಾರೆ ಎಂದು ಮಾಜಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಡಿಕೇರಿಯಲ್ಲಿ ಅರಣ್ಯ ಭವನದ ಎದುರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸರಕಾರ ಕಾಡಾನೆ ಉಪಟಳ ತಡೆಗೆ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ‘ಅರಣ್ಯ ಭವನ’ವನ್ನೇ ಆನೆ ಸಾಕಾಣಿಕೆ ಕೇಂದ್ರ’ವನ್ನಾಗಿ ಮಾಡಲಿ. ಪರಿಸರವಾದಿಗಳು ತಮ್ಮ ಮನೆಯಲ್ಲಿ ಕಾಡಾನೆಗಳನ್ನು ಸಾಕಿಕೊಳ್ಳಲಿ, ಇಲ್ಲದಿದ್ದಲ್ಲಿ ಕಾಡಾನೆಗಳ ನಿಯಂತ್ರಣಕ್ಕೆ ನಮಗೆ ಅವಕಾಶ ನೀಡಲಿ ಎಂದರು.








