
ಸುಂಟಿಕೊಪ್ಪ ಜೂ.5 NEWS DESK : ಸುಂಟಿಕೊಪ್ಪ ಬಿಜೆಪಿ ಪಕ್ಷದ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.
ಸುಂಟಿಕೊಪ್ಪದ ಕನ್ನಡ ವೃತ್ತದಲ್ಲಿ ಪಕ್ಷದ ಧ್ವಜವನ್ನು ಹಿಡಿದು, ಪಟಾಕಿ ಸಿಡಿಸಿ ವಿಜಯೋತ್ಸವವನ್ನು ಆಚರಿಸಿದರು.
ಕನ್ನಡವೃತ್ತದಲ್ಲಿ ಜಮಾವಣೆಗೊಂಡ ಬಿಜೆಪಿ ಕಾರ್ಯಕರ್ತರು ಪಕ್ಷದ ಧ್ವಜವನ್ನು ಹಿಡಿದು ರಾಷ್ಟ್ರದ ಪ್ರಧಾನಿಯಾದ ನರೇಂದ್ರಮೋದಿ, ಕೇಂದ್ರ ಗೃಹ ಸಚಿವ ಅಮಿತ್‍ಶಾ, ರಾಜಾಧ್ಯಕ್ಷ ಬಿ.ವೈ.ವಿಜೇಯೇಂದ್ರ, ಬಿ.ಎಸ್.ಯಡಿಯೂರಪ್ಪ, ಜೆಡಿಎಸ್ ಪಕ್ಷ ಹಾಗೂ ಎನ್‍ಡಿಎಗಳಿಗೆ ಜೈಕಾರ ಕೂಗಿ ಸಂಭ್ರಮಿಸಿದರು.
ಈ ಸಂದರ್ಭ ಗ್ರಾ.ಪಂ ಅಧ್ಯಕ್ಷ ಪಿ.ಆರ್.ಸುನಿಲ್‍ಕುಮಾರ್, ಸುಂಟಿಕೊಪ್ಪ ಸ್ಥಾನೀಯ ಸಮಿತಿ ಅಧ್ಯಕ್ಷ ಧನುಕಾವೇರಪ್ಪ, ಕಾರ್ಯದರ್ಶಿ ವಿ.ಕೆ.ರಾಜ, ಅಧ್ಯಕ್ಷರಾದ ಪ್ರಶಾಂತ್(ಕೋಕ), ಪಂ.ಸದಸ್ಯರುಗಳಾದ ಬಿ.ಎಂ.ಸುರೇಶ್, ಗೀತಾ, ಪಕ್ಷದ ಹಿರಿಯ ಮುಖಂಡ ಡಿ.ನರಸಿಂಹ, ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಬಿ.ಕೆ.ಮೋಹನ, ಗ್ರಾ.ಪಂ.ಮಾಜಿ ಅಧ್ಯಕ್ಷೆ ಬಿ.ಐ.ಭವಾನಿ, ಮಾಜಿ ಸದಸ್ಯರುಗಳಾದ ಗೀತಾ, ಆನಂದ, ಹರೀಶ್, ಸಹನಾ ಹಾಗೂ ಬಿಜೆಪಿ ಕಾರ್ಯರ್ತರು ಇದ್ದರು.








