Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ರೋಟರಿ ಮಡಿಕೇರಿಯಿಂದ ದಹನ ಯಂತ್ರ ವಿತರಣೆ*
  • *ರೋಟರಿ ಮಡಿಕೇರಿಯಿಂದ ವೃತ್ತಿಪರ ಕೌಶಲ್ಯ ಶಿಬಿರ : ವಿದ್ಯಾರ್ಥಿಗಳಿಗೆ ಟೈಲರಿಂಗ್ ತರಬೇತಿ*
  • *ನಾಪೋಕ್ಲು ಸುತ್ತಮುತ್ತ ಮದ್ಯ ಮಾರಾಟ ನಿಷೇಧ*
  • *ಸಾಕಾನೆ-ಡ್ರೋನ್ ಬಳಸಿ ಹುಲಿ ಶೋಧ*
  • *ಸೋಮವಾರಪೇಟೆಯ ವಿವಿಧೆಡೆ ಮದ್ಯ ಮಾರಾಟ ನಿಷೇಧ*
  • ಕೊಡಗು ಜಿಲ್ಲಾ ಪೊಲೀಸ್ ಕಚೇರಿಗೆ ಡಾ. ಎಂ.ಬಿ.ಬೋರಲಿಂಗಯ್ಯ ಅವರು ಭೇಟಿ : ಅಧಿಕಾರಿಗಳೊಂದಿಗೆ ಸಮಾಲೋಚನೆ*
  • *ಮಡಿಕೇರಿ : ಮಾ.27 ರಂದು ನಗರಸಭೆ ಕೌನ್ಸಿಲ್‍ನ ಸಾಮಾನ್ಯ ಸಭೆ*
  • *ಕಾಫಿ ತೋಟದಲ್ಲಿ ಹುಲಿ ಪ್ರತ್ಯಕ್ಷ : ಗ್ರಾಮಸ್ಥರಲ್ಲಿ ಆತಂಕ*
  • *ಜ್ಞಾನ ಕಾವೇರಿ ಆವರಣದಲ್ಲಿ ಯುವ ಆಪತ್ ಮಿತ್ರ ತರಬೇತಿ ಶಿಬಿರ*
  • *ದೇವಟ್ ಪರಂಬುವಿನಲ್ಲಿ ಪುಷ್ಪ ನಮನ ಸಲ್ಲಿಸಿದ ಸಿಎನ್‌ಸಿ : ವಿವಿಧ ಹಕ್ಕೊತ್ತಾಯಗಳ ಮಂಡನೆ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಮಡಿಕೇರಿಯಲ್ಲಿ ಅಂತರಗಂಗೆ ಕೃತಿ ಲೋಕಾಪ೯ಣೆ : ಪುಸ್ತಕ ಓದುವ ಹವ್ಯಾಸದ ಮೂಲಕ ಮಕ್ಕಳಲ್ಲಿ ಉತ್ತಮ ಸಂಸ್ಕಾರ ಮೂಡಿಸಬೇಕು :  ಡಾ.ಜಮೀರ್ ಅಹಮ್ಮದ್*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಮಡಿಕೇರಿಯಲ್ಲಿ ಅಂತರಗಂಗೆ ಕೃತಿ ಲೋಕಾಪ೯ಣೆ : ಪುಸ್ತಕ ಓದುವ ಹವ್ಯಾಸದ ಮೂಲಕ ಮಕ್ಕಳಲ್ಲಿ ಉತ್ತಮ ಸಂಸ್ಕಾರ ಮೂಡಿಸಬೇಕು :  ಡಾ.ಜಮೀರ್ ಅಹಮ್ಮದ್*

ಜೂನ್ 10, 20243 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಜೂ.10 NEWS DESK :  ಬಾಲ್ಯದಿಂದಲೇ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸುವುದರಿಂದ ಮಕ್ಕಳಲ್ಲಿ ಸೂಕ್ತ ಸಂಸ್ಕಾರ ಬೆಳೆಸುವಲ್ಲಿ ಶಿಕ್ಷಕ ವಗ೯ ಮತ್ತು ಪೋಷಕರು ಗಮನ ನೀಡುವಂತೆ ಚಿಕ್ಕಅಳುವಾರದಲ್ಲಿನ ಕನ್ನಡ ವಿಶ್ವವಿದ್ಯಾನಿಲಯದ ಕನ್ನಡ ಉಪನ್ಯಾಸಕ ಡಾ ಜಮೀರ್ ಅಹಮ್ಮದ್ ಕರೆ ನೀಡಿದ್ದಾರೆ.

ನಗರದ ರೆಡ್ ಬ್ರಿಕ್ಸ್ ನ ಸತ್ಕಾರ್ ಸಬಾಂಗಣದಲ್ಲಿ ಆಯೋಜಿತ, ವಿರಾಜಪೇಟೆ ಸಂತ ಅನ್ನಮ್ಮ ಕಾಲೇಜಿನ ಉಪನ್ಯಾಸಕಿ ಪ್ರತಿಮಾ ಹರೀಶ್ ರೈ ವಿರಚಿತ ಅಂತರಗಂಗೆ ಕೃತಿ ಲೋಕಾಪ೯ಣೆ ಸಮಾರಂಭದಲ್ಲಿ ಕೃತಿಯ ಬಗ್ಗೆ ಮಾತನಾಡಿದ ಜಮೀರ್ ಅಹಮ್ಮದ್, ಸಾಮಾಜಿಕ ಹೊಣೆಗಾರಿಕೆ ಹೆಚ್ಚಿಸುವಲ್ಲಿ ಪುಸ್ತಕಗಳ ಪಾತ್ರ ಮಹತ್ವದ್ದಾಗಿದ್ದು, ಬಾಲ್ಯದಿಂದಲೇ ಮಕ್ಕಳಲ್ಲಿ ಉತ್ತಮ ಸಂಸ್ಕಾರ ರೂಪಿಸುವ ನಿಟ್ಟಿನಲ್ಲಿ ಒ ಳ್ಳೆಯ ಮಾಹಿತಿಯುಳ್ಳ ಕೃತಿಗಳು ತಮ್ಮದೇ ಕೊಡುಗೆ ನೀಡುತ್ತವೆ ಎಂದರು, ಬದುಕಿನ ನೈಜ ಸೌಂದಯ೯ ಅನುಭವಿಸುಲ್ಲಿ ಕೖತಿಗಳು ಸಹಕಾರಿ ಎಂದು ಅನಿಸಿಕೆ ವ್ಯಕ್ತಪಡಿಸಿದ ಡಾ, ಜಮೀರ್ ಅಹಮ್ಮದ್, ಪುಸ್ತಕಗಳ ಓದಿನಿಂದ ಯುವಪೀಳಿಗೆಯ ಮನದಲ್ಲಿ ಸದ್ವಿಚಾರಗಳು ಮೂಡುತ್ತವೆ ಇಂಥ ಯುವಪೀಳಿಗೆಯ ಸದ್ವಳಕೆಯಿಂದ ಸದೃಢ ಭಾರತ ನಿಮಾ೯ಣವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಪ್ರತಿಮಾಹರೀಶ್ ರೈ ಅವರ ಅಂತರಗಂಗೆ ಕೖತಿಯು ಸಮಾಜಮುಖಿ ಬರಹಗಳನ್ನು ಒಳಗೊಂಡಿದ್ದು, ಸಮಾಜದ ಒಳಿತಿಗಾಗಿ ಮಾಹಿತಿಯುಕ್ತ ಲೇಖನಗಳನ್ನು ಈ ಲೇಖನಗಳ ಸಂಗ್ರಹ ಒಳಗೊಂಡಿದೆ ಎಂದೂ ಅವರು ವಿಶ್ಲೇಷಿಸಿದರು.

ಕಾಯ೯ಕ್ರಮ ಉದ್ಘಾಟಿಸಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ಮಹಿಳಾ ಬರಹಗಾರರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ 2002 ರಿಂದ ಕನ್ನಡ ಸಾಹಿತ್ಯ ಪರಿಷತ್ ಕೊಡಗಿನ ಗೌರಮ್ಮ ಹೆಸರಿನಲ್ಲಿ ಸ್ಥಾಪಿಸಿರುವ ದತ್ತಿನಿಧಿಗೆ ಈವರೆಗೂ 21 ಲೇಖಕಿಯರು ಅಹ೯ರಾಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಲೇಖಕಿಯರನ್ನು ಪ್ರೋತ್ಸಾಹಿಸುವ ಕೆಲಸವನ್ನು ಕಸಾಪ ಮಾಡುತ್ತಿದೆ ಎಂದರು. ಕೊಡಗು ಜಿಲ್ಲೆಯ ಲೇಖಕ, ಲೇಖಕಿಯರಿಂದ ರಚನಾತ್ಮಕ, ಗುಣಾತ್ನಕ ಕೃತಿಗಳು ಪ್ರಕಟವಾಗುತ್ತಿರುವುದು ಶ್ಲಾಘನೀಯ ಎಂದೂ ರಮೇಶ್ ಹೇಳಿದರು,

ಶಕ್ತಿ ಪತ್ರಿಕೆಯ ಪ್ರಧಾನ ಸಂಪಾದಕ ಜಿ.ರಾಜೇಂದ್ರ ಮಾತನಾಡಿ, ಸಪ್ತನದಿಗಳಲ್ಲಿ ಪ್ರಮುಖಳಾಗಿರುವ ಗಂಗೆಯು ಪವಿತ್ರ ನದಿಯಾಗಿ ಖ್ಯಾತಿ ಪಡೆದಿದ್ದು, ಮನುಷ್ಯನ ಮನಸ್ಸನ್ನು ವಿಚಾರಗಳ ಮೂಲಕ ಶುಚಿಗೊಳಿಸುವಂಥ ಅಂಶಗಳು ಅಂತರಗಂಗೆಯಲ್ಲಿದೆ ಎಂದು ಶ್ಲಾಘಿಸಿದರು.

ಕೃತಿ ಲೋಕಾಪ೯ಣೆ ಮಾಡಿದ ಶನಿವಾರಸಂತೆಯ ಉಪನ್ಯಾಸಕಿ, ಸಾಹಿತಿ ಶ. ಗ ನಯನತಾರಾ ಮಾತನಾಡಿ, ನಿತ್ಯದ ಜೀವನದಲ್ಲಿ ಅನುಭವಿಸುವಂಥ ವಿಚಾರಗಳೊಂದಿಗೇ ವೈಚಾರಿಕ ಚಿಂತನೆಗಳ ಬರಹಗಳು ಅಂತರಗಂಗೆಯಲ್ಲಿ ಇದ್ದು, ಎಲ್ಲಾ ವಯಸ್ಸಿನವರ ಓದಿಗೂ ಸೂಕ್ತವಾಗಿದೆ ಎಂದು ಶ್ಲಾಘಿಸಿದರು, ಜೀವನದಲ್ಲಿ ಸಂಕಷ್ಟ ಎದುರಿಸುತ್ತಿರುವವರಿಗೆ ಅಂತರಗಂಗೆಯಲ್ಲಿನ ಲೇಖನಗಳು ಗುಣಾತ್ನಕ ಅಂಶಗಳ ಮಾಹಿತಿಯೊಂದಿಗೆ ಮಾಗ೯ದಶ೯ನ ನೀಡುವಂಥವು ಎಂದು ಅಭಿಪ್ರಾಯಪಟ್ಟರು, ಮನಸ್ಸಿನ ಜಾಗೃತಿಗೆ ಕಾರಣವಾಗಬಲ್ಲಂಥ ಕಾಯ೯ ಸಾಹಿತ್ಯ ಕೃಷಿಯಿಂದ ಉಂಟಾಗಬೇಕೆಂದೂ ರಾಜೇಂದ್ರ, ಹೇಳಿದರು.

ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಹೆಚ್, ಟಿ, ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಸಾಹಿತ್ಯಪರ ಒಲವಿನ ಗಾಳಿ ಬಲವಾಗಿ ಬೀಸುತ್ತಿದ್ದು, ಪ್ರತೀ 15 ದಿನಕ್ಕೊಮ್ಮೆ ಹೊಸ ಕೖತಿಗಳು ಲೋಕಾಪ೯ಣೆಯಾಗುತ್ತಿದೆ, ಹೆಚ್ಚಿನ ಸಂಖ್ಯೆಯಲ್ಲಿ ಲೇಖಕ, ಲೇಖಕಿಯರು ತಮ್ಮ ಕೖತಿ ಪ್ರಕಾಶನಕ್ಕೆ ಮುಂದಾಗುತ್ತಿದ್ದರೂ ಆಸಕ್ತ ಓದುಗರಿಗೆ ಇಂಥ ಕೖತಿಗಳನ್ನು ತಲುಪಿಸಲು ಸೂಕ್ತ ವ್ಯವಸ್ಥೆ ಇಲ್ಲದಾಗಿದೆ, ಈ ನಿಟ್ಟಿನಲ್ಲಿ ಕಸಾಪ ಸೇರಿದಂತೆ ಆಸಕ್ತ ಸಂಘಸಂಸ್ಥೆಗಳು ಮೂರುತಿಂಗಳಿಗೊಮ್ಮೆಯಾದರೂ ಜಿಲ್ಲೆಯ 5 ತಾಲೂಕಿನಲ್ಲಿ ಪುಸ್ತಕ ಸಂತೆ ಆಯೋಜಿಸುವ ಮೂಲಕ ಪ್ರಕಟಿತ ಪುಸ್ತಕಗಳನ್ನು ಓದುಗರು, ಸಂಶೋಧಕರು, ವಿದ್ಯಾಥಿ೯ಗಳು, ಶಿಕ್ಷಕವೖಂದ,ಕ್ಕೆ ತಲುಪಿಸುವ ಯೋಜನೆ ರೂಪಿಸುವಂತಾಗಬೇಕೆಂದರು, ಪ್ರತಿಮಾ ರೈ ಪ್ರತಿಭೆಯ ಗಣಿ ಎಂದೂ ಅನಿಲ್ ಶ್ಲಾಘಿಸಿ, ಅಂತರಗಂಗೆಯ 82 ಲೇಖನಗಳೂ ವಿಭಿನ್ನ ವಿಚಾರಗಳಿಂದ ಮನಸ್ಸು ಮುಟ್ಟುತ್ತದೆ ಎಂದರು

ಮಡಿಕೇರಿ ಆಕಾಶವಾಣಿಯ ಉದ್ಗೋಷಕ ಸುಬ್ರಾಯ ಸಂಪಾಜೆ ಮಾತನಾಡಿ, ಅಂತರಗಂಗೆ ಹೆಸರಿನಲ್ಲಿಯೇ ವಿಶಿಷ್ಯತೆ ಇದೆ, ಶುದ್ದತೆಯ ಪ್ರತೀಕವಾಗಿದ್ದ ಗಂಗೆಯನ್ನು ಲೋಕಶುದ್ದತೆಯ ಕಾರಣಕ್ಕಾಗಿ ಆಕಾಶಗಂಗೆಯಾಗಿ ದೇವಾನುದೇವತೆಗಳು ಬಳಸಿದ್ದರು ಎಂದರು.

ಕೊಡಗು ಬಂಟರ ಸಂಘದ ಅಧ್ಯಕ್ಷ ಜಗದೀಶ್ ರೈ ಮಾತನಾಡಿ, ಅಂತರಗಂಗೆ ಕೖತಿಯ ಸಾಹಿತ್ಯ ಗಂಗೆಯಂತೆ ಓದುಗರಿಗೆ ಪ್ರಯೋಜನಕಾರಿಯಾಗಲಿ ಎಂದು ಹಾರೈಸಿದರು.

ಕೇರಳದ ಮಂಜೇಶ್ವರದ ಸಕಾ೯ರಿ ಪ್ರೌಡಶಾಲಾ ಮುಖ್ಯಶಿಕ್ಷಕ ಅರವಿಂದಾಕ್ಷ ಭಂಡಾರಿ ಮಾತನಾಡಿ,ಅಂತರರಾಜ್ಯದ ಗಡಿ ಭಾಗದಲ್ಲಿ ಕನ್ನಡ ಶಾಲೆಗಳಲ್ಲಿ ವಿದ್ಯಾಥಿ೯ಗಳ ಕೊರತೆಯುಂಟಾಗಿ ಶಾಲೆಗಳು ಮುಚ್ಚುವ ಹಂತ ತಲುಪಿದೆ ಎಂದು ಆತಂಕ ವ್ಯಕ್ತಪಡಿಸಿದರಲ್ಲದೇ, ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಸಮಯ ಕಳೆಯುವ ಯುವಪೀಳಿಗೆಗೆ ಸಾಮಾಜಿಕ ಹೊಣೆಯ ವಿಚಾರ ತಿಳಿಸುವ ಕೖತಿ ಅಂತರಗಂಗೆಯಾಗಿದೆ ಎಂದರು, ಮಾದಕ ವ್ಯಸನಗಳಿಗೆ ದಾಸರಾಗುತ್ತಿರುವ ಯುವಜನಾಂಗದ ಬಗ್ಗೆ ಪೋಷಕರು ಈಗಿನಿಂದಲೇ ಎಚ್ಚರಗೊಳ್ಳದಿದ್ದರೆ ದುರಂತ ಕಾದಿದೆ ಎಂದೂ ಅವರು ಎಚ್ಚರಿಸಿದರು.

ಅಂತರಗಂಗೆ ಲೇಖಕಿ ಪ್ರತಿಮಾ ಹರೀಶ್ ರೈ ಮಾತನಾಡಿ, ಸಮಾಜದಲ್ಲಿ ಇರುವ ಉತ್ತಮ ಅಂಶಗಳನ್ನು ಪರಿಗಣಿಸಲು ನಾವು ನೋಡುವ  ದೃಷ್ಟಿಕೋನ ಕೂಡ ಉತ್ತಮವಾಗಿರಬೇಕೆಂದು ಅಭಿಪ್ರಾಯಪಟ್ಟರಲ್ಲದೇ, ನೈಜಜೀವನದ ಆನಂದಕ್ಕಾಗಿ ಸಾಹಿತ್ಯ ಕೃತಿಗಳ ಅಗತ್ಯವಿದೆ ಎಂದರು.

ಶಿಕ್ಷಕಿ ಕಾವೇರಮ್ಮ ಸ್ವಾಗತಿಸಿ, ಸೋನಿ ರೈ ಅತಿಥಿ ಪರಿಚಯ ಮಾಡಿ, ಸೌಮ್ಯ ಸತೀಶ್ ರೈ ವಂದಿಸಿದ ಕಾಯ೯ಕ್ರಮವನ್ನು ಉಪನ್ಯಾಸಕಿ ಕೆ.ಜಯಲಕ್ಷ್ಮಿ ನಿರೂಪಿಸಿದರು. ಪ್ರತಿಭಾ ಮಧುಕರ್ ಪ್ರಾಥಿ೯ಸಿ, ನಮಿತಾ ಶೆಣೈ ಮತ್ತು ಅಕ್ಷರ ಅವರಿಂದ ಸ್ವಾಗತ ನೖತ್ಯ ಗಮನ ಸೆಳೆಯಿತು. ಬಿ.ಬಿ.ಹರೀಶ್ ರೈ ಕಾಯ೯ಕ್ರಮದಲ್ಲಿದ್ದರು. ಗಾಯತ್ರಿ ದೇವಿ ನಿರೂಪಣೆಯಲ್ಲಿ ಮೂಡಿಬಂದ ಗಾನಕಾವೇರಿ ತಂಡದ ಸಂಗೀತ ಕಾಯ೯ಕ್ರಮದಲ್ಲಿ ಜಿಲ್ಲೆಯ ಗಾಯಕ ಗಾಯಕಿಯರಾದ ಅನ್ವಿತ್  ಟಿ.ಡಿ.ಮೋಹನ್, ಅಜಿತ್ , ಅಮೖತ್ ರಾಜ್, ಅನಿತ್ ರಾಜ್ನ, ಸ್ನೇಹ ಮಧುಕರ್, ರಚನ್ ಪೊನ್ನಪ್ಪ, ಬಿ.ಜಿ.ಅನಂತಶಯನ, ಅವರುಗಳಿಂದ ವೈವಿಧ್ಯಮಯ ಹಾಡುಗಾರಿಕೆ ಜನಮನ ಸೆಳೆಯಿತು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ರೋಟರಿ ಮಡಿಕೇರಿಯಿಂದ ದಹನ ಯಂತ್ರ ವಿತರಣೆ*

ಮಾರ್ಚ್ 26, 2026

*ರೋಟರಿ ಮಡಿಕೇರಿಯಿಂದ ವೃತ್ತಿಪರ ಕೌಶಲ್ಯ ಶಿಬಿರ : ವಿದ್ಯಾರ್ಥಿಗಳಿಗೆ ಟೈಲರಿಂಗ್ ತರಬೇತಿ*

ಮಾರ್ಚ್ 26, 2026

*ನಾಪೋಕ್ಲು ಸುತ್ತಮುತ್ತ ಮದ್ಯ ಮಾರಾಟ ನಿಷೇಧ*

ಮಾರ್ಚ್ 26, 2026

*ರೋಟರಿ ಮಡಿಕೇರಿಯಿಂದ ವೃತ್ತಿಪರ ಕೌಶಲ್ಯ ಶಿಬಿರ : ವಿದ್ಯಾರ್ಥಿಗಳಿಗೆ ಟೈಲರಿಂಗ್ ತರಬೇತಿ*

ಮಾರ್ಚ್ 26, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ NEWS DESK ಮಾ.26 : ಮಹಿಳಾ ಸಬಲೀಕರಣಕ್ಕಾಗಿ ವೃತ್ತಿಪರ ಕೌಶಲ್ಯ ಶಿಬಿರದಡಿ ರೋಟರಿ ಮಡಿಕೇರಿ ವತಿಯಿಂದ ಆಯೋಜಿಸಿರುವ ಟೈಲರಿಂಗ್…

*ನಾಪೋಕ್ಲು ಸುತ್ತಮುತ್ತ ಮದ್ಯ ಮಾರಾಟ ನಿಷೇಧ*

ಮಾರ್ಚ್ 26, 2026

*ಸಾಕಾನೆ-ಡ್ರೋನ್ ಬಳಸಿ ಹುಲಿ ಶೋಧ*

ಮಾರ್ಚ್ 26, 2026

*ಸೋಮವಾರಪೇಟೆಯ ವಿವಿಧೆಡೆ ಮದ್ಯ ಮಾರಾಟ ನಿಷೇಧ*

ಮಾರ್ಚ್ 26, 2026

ಕೊಡಗು ಜಿಲ್ಲಾ ಪೊಲೀಸ್ ಕಚೇರಿಗೆ ಡಾ. ಎಂ.ಬಿ.ಬೋರಲಿಂಗಯ್ಯ ಅವರು ಭೇಟಿ : ಅಧಿಕಾರಿಗಳೊಂದಿಗೆ ಸಮಾಲೋಚನೆ*

ಮಾರ್ಚ್ 25, 2026

*ಮಡಿಕೇರಿ : ಮಾ.27 ರಂದು ನಗರಸಭೆ ಕೌನ್ಸಿಲ್‍ನ ಸಾಮಾನ್ಯ ಸಭೆ*

ಮಾರ್ಚ್ 25, 2026

*ಕಾಫಿ ತೋಟದಲ್ಲಿ ಹುಲಿ ಪ್ರತ್ಯಕ್ಷ : ಗ್ರಾಮಸ್ಥರಲ್ಲಿ ಆತಂಕ*

ಮಾರ್ಚ್ 25, 2026

*ಜ್ಞಾನ ಕಾವೇರಿ ಆವರಣದಲ್ಲಿ ಯುವ ಆಪತ್ ಮಿತ್ರ ತರಬೇತಿ ಶಿಬಿರ*

ಮಾರ್ಚ್ 25, 2026

*ದೇವಟ್ ಪರಂಬುವಿನಲ್ಲಿ ಪುಷ್ಪ ನಮನ ಸಲ್ಲಿಸಿದ ಸಿಎನ್‌ಸಿ : ವಿವಿಧ ಹಕ್ಕೊತ್ತಾಯಗಳ ಮಂಡನೆ*

ಮಾರ್ಚ್ 25, 2026

*ಚೇರಂಬಾಣೆಯಲ್ಲಿ ಹೆಚ್‍ಪಿವಿ ಲಸಿಕೆ ವಿತರಣೆ*

ಮಾರ್ಚ್ 25, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.