
ಮಡಿಕೇರಿ ಜೂ.11 NEWS DESK : ಬೀದರ್’ನಲ್ಲಿ ಎನ್.ಸಿ.ಸಿ ಆಯೋಜಿಸಿದ್ದ ರಾಷ್ಟ್ರೀಯ ವಾಯುಪಡೆ ಬೆಸುಗೆ ಶಿಬಿರ (National Airforce Attachment Camp- NAAC) ದಲ್ಲಿ ಎನ್.ಸಿ.ಸಿ ಕೆಡೆಟ್(ಏರ್ ವಿಂಗ್) ಪಾಲಚಂಡ ತರುಣ್ ತಿಮ್ಮಯ್ಯ ಭಾಗಹಿಸಿ ವಿವಿಧ ತರಬೇತಿ ಪಡೆದಿದ್ದಾರೆ.
ವಾಯುಪಡೆಯ ಪೈಲಟ್’ಗಳಿಗೆ ಅತ್ಯಾಧುನಿಕ ಯುದ್ಧ ವಿಮಾನಗಳ ಮೂರನೇ ಹಂತದ ಚಾಲನಾ ತರಬೇತಿಯನ್ನು ನೀಡುವ ಕೇಂದ್ರವಾದ ಬೀದರ್’ನ ವಾಯುಪಡೆಯ ತರಬೇತಿ ಕೇಂದ್ರದಲ್ಲಿ ಈ ಶಿಬಿರವನ್ನು ಆಯೋಜಿಸಲಾಗಿತ್ತು. ಮಂಗಳೂರಿನ ಸೆಂಟ್ ಅಲೋಶಿಯಸ್ ಕಾಲೇಜಿನ ಬಯೊಟೆಕ್ ಎರಡನೇ ವರ್ಷದ ವಿದ್ಯಾರ್ಥಿಯಾಗಿರುವ ತರುಣ್ ತಿಮ್ಮಯ್ಯ ಸೇರಿದಂತೆ ಕರ್ನಾಟಕ ಗೋವ ವಿಭಾಗದ 14 ಕೆಡೆಟ್’ಗಳು ಈ ಶಿಬಿರದಲ್ಲಿ ಪಾಲ್ಗೊಂಡು ವಾಯುಪಡೆಯ ವಿವಿಧ ತರಬೇತಿಗಳನ್ನು ಪಡೆದುಕೊಂಡಿದ್ದಾರೆ.
ಶಿಬಿರದಲ್ಲಿ ಸೇನೆ ಸಂಬಂಧಿಸಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಾದAir Force Common Admission test (AFCAT), Combined Difference Service (CDS), National Difference Academy (NDA) ಮತ್ತು Services Selection Board (SSB) ಮುಂತಾದ ಪರೀಕ್ಷೆಗೆ ಬೇಕಾದ ಮಾಹಿತಿ ಹಾಗು ತರಬೇತಿ ಕಾರ್ಯಾಗಾರ ಹಮ್ಮಿಕೊಂಡು ಕೆಡೆಟ್’ಗಳಿಗೆ ತರಬೇತಿ ನೀಡಲಾಯಿತು. ವಾಯುಸೇನೆಯ ನುರಿತ ಅಧಿಕಾರಿಗಳು, ಕೆಡೆಟ್’ಗಳಿಗೆ ಭಾರತೀಯ ವಾಯುಡೆ ಹಾಗೂ ಯುದ್ಧವಿಮಾನ ಪೈಲೆಟ್ ಆಗಲು ಬೇಕಾದ ಮಾಹಿತಿ ನೀಡಿ ಉತ್ತೇಜಿಸಲಾಯಿತು.
ತರುಣ್ ತಿಮ್ಮಯ್ಯ ಮೂಲತಃ ಪಾಲಂಗಾಲ ನಿವಾಸಿ, ಪ್ರಸ್ತುತ ಗೋಣಿಕೊಪ್ಪದಲ್ಲಿ ನೆಲೆಸಿರುವ ಪಾಲಚಂಡ ಜೀವಿತ್ ಮಂದಣ್ಣ ಹಾಗೂ ಪುಷ್ಪ ದಂಪತಿಗಳ ಪುತ್ರ.








