
ಮಡಿಕೇರಿ ಜೂ.11 NEWS DESK : ಅಖಿಲ ಭಾರತೀಯ ಸಾಹಿತ್ಯ ಪರಿಷದ್ ರಾಜ್ಯ ಸಮಿತಿಯಿಂದ ಆಯ್ಕೆಯಾದ ಸದಸ್ಯರಿಂದ
ಮಡಿಕೇರಿಯ ಮಧುಕೃಪದಲ್ಲಿ ಔಪಚಾರಿಕ ಸಭೆ ನಡೆಯಿತು.
ಸದಸ್ಯರ ಆಯ್ಕೆ ಪ್ರಕ್ರಿಯೆಯಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಅಧ್ಯಕ್ಷರಾಗಿ ಸಿ.ಎಸ್.ಸುರೇಶ್, ಗೌರವ ಅಧ್ಯಕ್ಷರಾಗಿ
ಕಸ್ತೂರಿ ಗೋವಿಂದಮ್ಮಯ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಬಬ್ಬಿರ ಸರಸ್ವತಿ, ಜಿಲ್ಲಾ ಸಹ ಕಾರ್ಯದರ್ಶಿಯಾಗಿ ಚಂದನ್ ನಂದರಬೆಟ್ಟು, ಮಕ್ಕಳ ಪ್ರಕಾರ ಪ್ರಮುಖರಾಗಿ ಹೇಮಂತ್ ಪಾರೇರ, ಖಜಾಂಚಿಯಾಗಿ ಸಿ.ತಮ್ಮಯ್ಯ, ಮಾಧ್ಯಮ ಪ್ರಮುಖರಾಗಿ ವಿನೋದ್ ಮುಡಗದ್ದೆ, ಜಿಲ್ಲಾ ಸಮಿತಿ ಸದಸ್ಯರಾಗಿ ಮಾಚಿಮಡ ಜಾನಕಿ ಮಾಚಯ್ಯ ಹಾಗೂ ಸುಶೀಲ ಕುಶಾಲಪ್ಪ ಆಯ್ಕೆಯಾಗಿದ್ದಾರೆ.








