
ಮಡಿಕೇರಿ ಜೂ.24 NEWS DESK : ವಿದ್ಯಾರ್ಥಿಗಳಿಗೆ ತಮ್ಮ ಶೈಕ್ಷಣಿಕ ಕಲಿಕೆಯ ಸಮಯದಲ್ಲೇ ಚುನಾವಣೆಯ ಮಹತ್ವ, ಚುನಾವಣೆಯ ಪ್ರಕ್ರಿಯೆ, ಮತದಾನದ ಮಹತ್ವ, ಮತದಾನ ಪ್ರಕ್ರಿಯೆ,ಶಾಲಾ ಸಂಬಂಧಿಸಿದ ಸಂಸತ್ತಿನ ಚಟುವಟಿಕೆಗಳ ಅರಿವು ಮೂಡಿಸುವ ಉದ್ದೇಶದಿಂದ ತ್ರಿವೇಣಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಶಾಲಾ ಸಂಸತ್ತಿನ ಚುನಾವಣೆ ನಡೆಯಿತು.
4ನೇ ತರಗತಿಯಿಂದ 10 ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಯಿತು. ನಾಮಪತ್ರ ಸಲ್ಲಿಕೆ ಪ್ರಕಾರದಿಂದ ಹಿಡಿದು, ಮತಯಾಚನೆ, ಮತದಾನ ಪ್ರಕ್ರಿಯೆ, ಗುರುತು ಮಾಡುವಿಕೆ ನಡೆಸಲಾಯಿತು. ಫಲಿತಾಂಶ ಎಣಿಕೆಯ ಸಂದರ್ಭದಲ್ಲಿ ವಿದ್ಯಾರ್ಥಿ ನಾಯಕರುಗಳು ಮುನ್ನಡೆ-ಹಿನ್ನಡೆ ಗಳಿಸಿಕೊಂಡು ಅಂತಿಮವಾಗಿ ವಿದ್ಯಾರ್ಥಿ ನಾಯಕರನ್ನು ಆಯ್ಕೆ ಮಾಡಲಾಯಿತು.








