
ಸುಂಟಿಕೊಪ್ಪ ಜೂ.28 NEWS DESK : ಸಂತ ಅಂತೋಣಿ ದೇವಾಲಯದ ವಾರ್ಷಿಕೋತ್ಸವಕ್ಕೆ ಮಡಿಕೇರಿ ಸಂತ ಮೈಕಲ್ಸ್ ಶಿಕ್ಷಣ ಸಂಸ್ಥೆ ವ್ಯವಸ್ಥಾಪಕ ರೇ.ಫಾ. ಸಂಜಯ್ ಕುಮಾರ್ ಹಾಗೂ ಸಂತ ಅಂತೋಣಿ ದೇವಾಲಯದ ಧರ್ಮಗುರುಗಳಾದ ವಿಜಯಕುಮಾರ್ ಮೂಲಕ ಚಾಲನೆ ನೀಡಿದರು.
ರೇ.ಫಾ. ಸಂಜಯ್ ಕುಮಾರ್ ಧ್ವಜಾರೋಹಣ ನೇರವೇರಿಸುವ ಮೂಲಕ ಚಾಲನೆ ನೀಡಿದರು. ವಾರ್ಷಿಕೋತ್ಸವದ ಅಂಗವಾಗಿ 3 ದಿನಗಳ ಕಾಲ ದೇವಾಲಯದಲ್ಲಿ ವಿಶೇಷ ಬಲಿಪೂಜೆ, ಆರಾಧನೆ ನೆರವೇರಲಿದೆ.
ಇಂದು ಸಂಜೆ ಬಲಿಪೂಜೆ ಹಾಗೂ ಆರಾಧನೆಯನ್ನು ಡೊರ್ನಹಳ್ಳಿಯ ಸಂತ ಅಂತೋಣಿ ಬಸಿಲಿಕಾ ಆಡಳಿತಾಧಿಕಾರಿ ವಂ.ಗುರುಗಳಾದ ಪ್ರವೀಣ್ ಪೇಧ್ರು ನೇರವೇರಿಸಲಿದ್ದಾರೆ. ಜೂ.29 ರಂದು ಸೋಮವಾರಪೇಟೆ ಜಯವೀರ ಮಾತೆ ದೇವಾಲಯದ ಧರ್ಮಗುರುಗಳಾದ ವಂ.ರೇ.ಫಾ. ಅವಿನಾಶ್ ಹಾಗೂ ಧರ್ಮಗುರುಗಳಾದ ವಿಜಯಕುಮಾರ್ ನೇರವೇರಿಸಲಿದ್ದಾರೆ.
ಜೂ.30 ರಂದು ಸಂಜೆ 5.30 ಗಂಟೆಗೆ ಸಂತ ಅಂತೋಣಿಯವರ ಹಬ್ಬದ ಅಡಂಬರ ಗಾಯನ ಬಲಿಪೂಜೆ ನೆರವೇರಲಿದೆ. ಪರಮ ಪ್ರಸಾದ ಆರಾಧನೆಯನ್ನು ಹೆಚ್.ಡಿಕೋಟೆಯ ಸೈಂಟ್ ಮೇರಿಸ್ ಚರ್ಚ್‍ನ ಬರ್ನಾಡ್ ಪ್ರಕಾಶ್ ಬಾರ್ನಿಸ್ ನೇರವೇರಿಸಲಿದ್ದಾರೆ ಎಂದು ದೇವಾಲಯದ ಧರ್ಮಗುರುಗಳಾದ ವಿಜಯಕುಮಾರ್ ತಿಳಿಸಿದ್ದಾರೆ.
ದೇವಾಲಯದ ವಾರ್ಷಿಕೋತ್ಸವದ ಅಂಗವಾಗಿ ದೇವಾಲಯವನ್ನು ಬಣ್ಣದ ಹೂ ಹಾಗೂ ವಿದ್ಯುತ್ ದೀಪಗಳಿಂದ, ತಳಿರು ತೋರಣಗಳಿಂದ ಅಲಂಕಾರಿಸಲಾಗಿತ್ತು.








