Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಪೊನ್ನಂಪೇಟೆ ಕೊಡವ ಸಮಾಜದ ಪೊಮ್ಮಕ್ಕಡ ಕೂಟದ ಮಹಾಸಭೆ*
  • *ಮುಳ್ಳುಸೋಗೆ ಶಾಲೆಯಲ್ಲಿ ಸ್ಕೌಟ್ಸ್, ಗೈಡ್ಸ್ ವತಿಯಿಂದ ಮಕ್ಕಳಿಗೆ ಗೀತ ಗಾಯನ ಸ್ಪರ್ಧೆ:: ವಿದ್ಯಾರ್ಥಿಗಳಲ್ಲಿ ರಾಷ್ಟ್ರಪ್ರೇಮ ಬೆಳೆಸಲು ಸಹಕಾರಿ : ಜಿಲ್ಲಾ ಸ್ಕೌಟ್ ಆಯುಕ್ತ ಜಿಮ್ಮಿ ಸಿಕ್ವೇರಾ*
  • *ಕೊಡಗಿಗೆ ಏನೂ ನೀಡದೆ ಮೋಡ ಬಿತ್ತನೆ ಏಕೆ?*
  • *ವಾಯು ವಿಹಾರ ಮಾಡುತ್ತಿದ್ದ ಇಬ್ಬರಿಗೆ ಕಾರು ಡಿಕ್ಕಿ : ಓರ್ವ ಸಾವು*
  • *ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಗಜಪಡೆಯ ಪಟ್ಟಿ ಸಿದ್ಧ*
  • *ಸುಂಟಿಕೊಪ್ಪ : “ಹಿರಿಯ ಜೀವಿಗಳಿಗೆ ನಮನ” *
  • *ಶಾಸಕ ಪೊನ್ನಣ್ಣ ಜೊತೆ ಸಂವಾದ : ಸಚಿವ ಸ್ಥಾನ ಕೈತಪ್ಪಿದ ವಿಚಾರ, ಕಸ್ತೂರಿ ರಂಗನ್ ವರದಿ, ವನ್ಯಜೀವಿ-ಮಾನವ ಸಂಘರ್ಷ ಚರ್ಚೆ*
  • *ಮಡಿಕೇರಿ – ಸಕಾ೯ರಿ ಪ.ಪೂ. ಕಾಲೇಜಿನಲ್ಲಿ ಹಿರಿಯ ನಾಗರಿಕರಿಗೆ  ಮಿಸ್ಟಿ ಹಿಲ್ಸ್ ನಿಂದ  ಗೌರವಾಪ೯ಣೆ*
  • *ಹಿರಿಯರ ಮಹತ್ವ ತಿಳಿಸುವ ಕಾಯ೯ಕ್ರಮಗಳು ಅಗತ್ಯ – ಕೆ.ಎಸ್. ಪುಟ್ಟಯ್ಯ*
  • *ಅರೆಕಾಡು ಶಾಲೆಯಲ್ಲಿ ಹಿರಿಯ ನಾಗರಿಕರ ದಿನಾಚರಣೆ –  ಹಿರಿಯರಿಗೆ ಸನ್ಮಾನ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಕೊಡಗು ಸೈನಿಕ ಶಾಲೆಗೆ ಲೆಫ್ಟಿನೆಂಟ್ ಜನರಲ್ ನವನೀತ್ ಸಿಂಗ್ ಸರ್ನಾ ಭೇಟಿ : ಭಾರತೀಯ ಸಶಸ್ತ್ರ ಪಡೆಗಳಲ್ಲಿ ವೃತ್ತಿಜೀವನವದ ಆಯ್ಕೆ ಕುರಿತು ಸಲಹೆ*
ಇತ್ತೀಚಿನ ಸುದ್ದಿಗಳು ಕರ್ನಾಟಕ ಕೊಡಗು ಜಿಲ್ಲೆ ಭಾರತ

*ಕೊಡಗು ಸೈನಿಕ ಶಾಲೆಗೆ ಲೆಫ್ಟಿನೆಂಟ್ ಜನರಲ್ ನವನೀತ್ ಸಿಂಗ್ ಸರ್ನಾ ಭೇಟಿ : ಭಾರತೀಯ ಸಶಸ್ತ್ರ ಪಡೆಗಳಲ್ಲಿ ವೃತ್ತಿಜೀವನವದ ಆಯ್ಕೆ ಕುರಿತು ಸಲಹೆ*

ಜೂನ್ 28, 20242 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಜೂ.28 NEWS DESK : ಕೊಡಗು ಸೈನಿಕ ಶಾಲೆಗೆ ನವದೆಹಲಿ ರಕ್ಷಣಾ ಸಚಿವಾಲಯ (ಸೇನಾ ವಿಭಾಗ)ದ ಕೇಂದ್ರ ಕಚೇರಿಯ ನೇಮಕಾತಿ ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ನವನೀತ್ ಸಿಂಗ್ ಸರ್ನಾ (ಎ.ವಿ.ಎಸ್.ಎಂ, ಎಸ್.ಎಂ.ವಿ.ಎಸ್.ಎಂ) ಭೇಟಿ ನೀಡಿ, ವಿದ್ಯಾರ್ಥಿಗಳೊಂದಿಗೆ ಪ್ರೇರಣಾತ್ಮಕ ಸಂವಾದ ನಡೆಸಿದರು. ಶಾಲೆಯ ಕುವೆಂಪು ವಿವಿಧೋದ್ದೇಶ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತೀಯ ಸಶಸ್ತ್ರ ಪಡೆಗಳಲ್ಲಿ ವೃತ್ತಿಜೀವನವದ ಆಯ್ಕೆ ಮಾಡಿಕೊಳ್ಳುವ ಕುರಿತು ಶಾಲಾ ವಿದ್ಯಾರ್ಥಿಗಳಿಗೆ ಸಮಗ್ರವಾದ ಮಾಹಿತಿಯನ್ನು ನೀಡುವುದರೊಂದಿಗೆ ತಮ್ಮ ಅನುಭವಗಳನ್ನು ಹಂಚಿಕೊಂಡರು. ವಿದ್ಯಾರ್ಥಿಗಳು ತಮ್ಮ ಜೀವನದ ಗುರಿಗಳನ್ನು ತಲುಪುವವರೆಗೂ ಉತ್ಸಾಹದಿಂದ, ಅವಿರತವಾಗಿ ಕಾರ್ಯನಿರತರಾಗಿರಬೇಕೆಂದು ಕರೆ ನೀಡಿದರು. ಯು.ಪಿ.ಎಸ್.ಸಿ, ಎನ್.ಡಿ.ಎ ಮತ್ತು ವಿವಿಧ ರಕ್ಷಣಾ ತರಬೇತಿ ಅಕಾಡೆಮಿಗಳ ಸೇರ್ಪಡೆಗೆ ಅತ್ಯವಶ್ಯಕವಾಗಿ ನಡೆಸಬೇಕಾದ ಸಿದ್ಧತೆಯ ಕುರಿತು ಮಾರ್ಗದರ್ಶನ ನೀಡಿದರು. ಭಾರತೀಯ ರಕ್ಷಣಾ ಪಡೆಗಳ ವಿವಿಧ ವಿಭಾಗಗಳು, ಶ್ರೇಣಿಯ ರಚನೆ ಮತ್ತು ಭಾರತೀಯ ಸಶಸ್ತ್ರ ಪಡೆಗಳು ನೀಡುತ್ತಿರುವ ಸಾಹಸ ಚಟುವಟಿಕೆಗಳ ಹಾಗೂ ಕಾರ್ಯವಿಧಾನಗಳ ತಂತ್ರಗಳ ಸರಣಿಯ ಕುರಿತು ಮಾರ್ಗದರ್ಶನ ನೀಡಿದರು. ರಕ್ಷಣಾ ಪಡೆಗಳಲ್ಲಿ ವೃತ್ತಿಜೀವನವನ್ನು ಆಯ್ಕೆ ಮಾಡಿಕೊಳ್ಳಲು ಮತ್ತು ಭಾರತೀಯ ಸಶಸ್ತ್ರ ಪಡೆಗಳಲ್ಲಿ ಹಾಗೂ ಸಮರ್ಥ ರಕ್ಷಣಾ ಅಧಿಕಾರಿಯಾಗಲು ಮೂಲಭೂತವಾಗಿ ಹೊಂದಬೇಕಾದ ಅರ್ಹತೆಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ವಿದ್ಯಾರ್ಥಿಗಳು ಜೀವನದಲ್ಲಿ ಎದುರಿಸಬೇಕಾದ ಸ್ಪರ್ಧಾತ್ಮಕ ಪ್ರಯತ್ನಗಳಲ್ಲಿ ಯಶಸ್ಸನ್ನು ಸಾಧಿಸುವಲ್ಲಿ ಸಕಾರಾತ್ಮಕ ಮನೋಭಾವ, ಕಠಿಣ ಪರಿಶ್ರಮ, ದೃಢಸಂಕಲ್ಪ, ಮುಕ್ತ ಮನಸ್ಸು ಮತ್ತು ಸಾಂಘಿಕ ಹೋರಾಟದ ಮಹತ್ವವನ್ನು ವಿವರಿಸಿದರು. ಶಾಲೆಯ ಪ್ರಾಂಶುಪಾಲ ಕರ್ನಲ್ ಅಮರ್ ಜೀತ್ ಸಿಂಗ್ ಮುಖ್ಯ ಅತಿಥಿಗಳಿಗೆ ಶಾಲೆಯ ಲಾಂಛನವುಳ್ಳ ಸ್ಮರಣಿಕೆ ನೀಡಿ ಗೌರವಿಸಿದರು. ಶಾಲೆಯ ಆವರಣದಲ್ಲಿದ್ದ ಯುದ್ಧವೀರರ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸುವುದರ ಮೂಲಕ ಅವರು ಗೌರವ ಸಮರ್ಪಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಆಡಳಿತಾಧಿಕಾರಿ ವಿಂಗ್ ಕಮಾಂಡರ್ ಪಿ.ಪ್ರಕಾಶ್ ರಾವ್, ಉಪಪ್ರಾಂಶುಪಾಲ  ಲೀಡರ್ ಮೊಹಮ್ಮದ್ ಷಾಜಿ, ಹಿರಿಯ ಶಿಕ್ಷಕರು, ಬೋಧಕ- ಬೋಧಕೇತರ ವರ್ಗ, ಎನ್.ಸಿ.ಸಿ ದೈಹಿಕ ಶಿಕ್ಷಕ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕೆಡೆಟ್ ಗಳಾದ ಬಿ.ಯು.ದೀಪ್ತಿ ಮತ್ತು ತಂಡದವರು ತಮ್ಮ ಸ್ವಾಗತ ನೃತ್ಯದೊಂದಿಗೆ ಸ್ವಾಗತಿಸಿದರು, ರಾಮನ್ ಮತ್ತು ತಂಡದವರು ಸ್ವಾಗತ ಗೀತೆಯನ್ನು ಹಾಡಿದರು. ಎನ್.ಸಮರ್ಥ್ ಮತ್ತು ಕೆಡೆಟ್ ಅರ್ಜಾಕ್ ನಿರೂಪಿಸಿದರು. ಶಾಲಾ ನಾಯಕ ಕೆಡೆಟ್ ಶರಣಬಸು ಮುಖ್ಯ ಅತಿಥಿಗಳನ್ನು ಪರಿಚಯಿಸಿದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಪೊನ್ನಂಪೇಟೆ ಕೊಡವ ಸಮಾಜದ ಪೊಮ್ಮಕ್ಕಡ ಕೂಟದ ಮಹಾಸಭೆ*

ಆಗಷ್ಟ್ 23, 2026

*ಮುಳ್ಳುಸೋಗೆ ಶಾಲೆಯಲ್ಲಿ ಸ್ಕೌಟ್ಸ್, ಗೈಡ್ಸ್ ವತಿಯಿಂದ ಮಕ್ಕಳಿಗೆ ಗೀತ ಗಾಯನ ಸ್ಪರ್ಧೆ:: ವಿದ್ಯಾರ್ಥಿಗಳಲ್ಲಿ ರಾಷ್ಟ್ರಪ್ರೇಮ ಬೆಳೆಸಲು ಸಹಕಾರಿ : ಜಿಲ್ಲಾ ಸ್ಕೌಟ್ ಆಯುಕ್ತ ಜಿಮ್ಮಿ ಸಿಕ್ವೇರಾ*

ಆಗಷ್ಟ್ 22, 2026

*ಕೊಡಗಿಗೆ ಏನೂ ನೀಡದೆ ಮೋಡ ಬಿತ್ತನೆ ಏಕೆ?*

ಆಗಷ್ಟ್ 22, 2026

*ಮುಳ್ಳುಸೋಗೆ ಶಾಲೆಯಲ್ಲಿ ಸ್ಕೌಟ್ಸ್, ಗೈಡ್ಸ್ ವತಿಯಿಂದ ಮಕ್ಕಳಿಗೆ ಗೀತ ಗಾಯನ ಸ್ಪರ್ಧೆ:: ವಿದ್ಯಾರ್ಥಿಗಳಲ್ಲಿ ರಾಷ್ಟ್ರಪ್ರೇಮ ಬೆಳೆಸಲು ಸಹಕಾರಿ : ಜಿಲ್ಲಾ ಸ್ಕೌಟ್ ಆಯುಕ್ತ ಜಿಮ್ಮಿ ಸಿಕ್ವೇರಾ*

ಆಗಷ್ಟ್ 22, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಕುಶಾಲನಗರ, NEWS DESK ಆ. 22: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಕೊಡಗು ಜಿಲ್ಲಾ ಸಂಸ್ಥೆ ಹಾಗೂ ಕುಶಾಲನಗರ ಸ್ಥಳೀಯ…

*ಕೊಡಗಿಗೆ ಏನೂ ನೀಡದೆ ಮೋಡ ಬಿತ್ತನೆ ಏಕೆ?*

ಆಗಷ್ಟ್ 22, 2026

*ವಾಯು ವಿಹಾರ ಮಾಡುತ್ತಿದ್ದ ಇಬ್ಬರಿಗೆ ಕಾರು ಡಿಕ್ಕಿ : ಓರ್ವ ಸಾವು*

ಆಗಷ್ಟ್ 22, 2026

*ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಗಜಪಡೆಯ ಪಟ್ಟಿ ಸಿದ್ಧ*

ಆಗಷ್ಟ್ 22, 2026

*ಸುಂಟಿಕೊಪ್ಪ : “ಹಿರಿಯ ಜೀವಿಗಳಿಗೆ ನಮನ” *

ಆಗಷ್ಟ್ 22, 2026

*ಶಾಸಕ ಪೊನ್ನಣ್ಣ ಜೊತೆ ಸಂವಾದ : ಸಚಿವ ಸ್ಥಾನ ಕೈತಪ್ಪಿದ ವಿಚಾರ, ಕಸ್ತೂರಿ ರಂಗನ್ ವರದಿ, ವನ್ಯಜೀವಿ-ಮಾನವ ಸಂಘರ್ಷ ಚರ್ಚೆ*

ಆಗಷ್ಟ್ 22, 2026

*ಮಡಿಕೇರಿ – ಸಕಾ೯ರಿ ಪ.ಪೂ. ಕಾಲೇಜಿನಲ್ಲಿ ಹಿರಿಯ ನಾಗರಿಕರಿಗೆ  ಮಿಸ್ಟಿ ಹಿಲ್ಸ್ ನಿಂದ  ಗೌರವಾಪ೯ಣೆ*

ಆಗಷ್ಟ್ 22, 2026

*ಹಿರಿಯರ ಮಹತ್ವ ತಿಳಿಸುವ ಕಾಯ೯ಕ್ರಮಗಳು ಅಗತ್ಯ – ಕೆ.ಎಸ್. ಪುಟ್ಟಯ್ಯ*

ಆಗಷ್ಟ್ 22, 2026

*ಅರೆಕಾಡು ಶಾಲೆಯಲ್ಲಿ ಹಿರಿಯ ನಾಗರಿಕರ ದಿನಾಚರಣೆ –  ಹಿರಿಯರಿಗೆ ಸನ್ಮಾನ*

ಆಗಷ್ಟ್ 22, 2026

*ಹಾಕತ್ತೂರು ಸಕಾ೯ರಿ ಪ್ರೌಡಶಾಲೆಯಲ್ಲಿ ಹಿರಿಯ ನಾಗರಿಕರ  ದಿನಾಚರಣೆ*

ಆಗಷ್ಟ್ 22, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.