
ಮಡಿಕೇರಿ ಜು.4 NEWS DESK : ಹಿಂದೂ ಮಲಯಾಳಿ ಸಮಾಜದ ಕೊಡಗು ಜಿಲ್ಲಾ ಸಮಿತಿ ವತಿಯಿಂದ ಜು.7 ರಂದು ನಗರದ ಅಂಬೇಡ್ಕರ್ ಭವನದಲ್ಲಿ ವಾರ್ಷಿಕ ಮಹಾಸಭೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆಯೆಂದು ಸಮಿತಿಯ ಅಧ್ಯಕ್ಷ ವಿ.ಎಂ.ವಿಜಯ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಹಿಂದೂ ಮಲಯಾಳಿ ಸಮಾಜದಿಂದ 2022-23 ಮತ್ತು 2023-24 ನೇ ಸಾಲಿಗೆ ಸಂಬಂಧಿಸಿದಂತೆ ಜಿಲ್ಲಾ ವ್ಯಾಪ್ತಿಯ ಹಿಂದೂ ಮಲಯಾಳಿ ಸಮಾಜದ 9 ಘಟಕಗಳಿಂದ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ತಲಾ ನಾಲ್ವರು ವಿದ್ಯಾರ್ಥಿಗಳಂತೆ ಒಟ್ಟು 36 ವಿದ್ಯಾರ್ಥಿಗಳನ್ನು ಪ್ರೋತ್ಸಾಹ ಧನವನ್ನು ನೀಡಿ ಪುರಸ್ಕರಿಸಲಾಗುತ್ತದೆಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರು ಮತ್ತು ಉನ್ನತ ವ್ಯಾಸಂಗ ಮಾಡಿದ ಸುಮಾರು 40 ಮಂದಿಯನ್ನು ಸನ್ಮಾನಿಸಿ ಗೌರವಿಸಲಾಗುತ್ತದೆಂದು ಹೇಳಿದರು.
ನೂತನ ಸಂಸದರಿಗೆ ಸನ್ಮಾನ : ಸನ್ಮಾನ ಕಾರ್ಯಕ್ರಮವನ್ನು ಜು.7 ರಂದು ಬೆಳಗ್ಗೆ 10.30 ಗಂಟೆಗೆ ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ. ಮಂತರ್ ಗೌಡರವರು ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭ ಮೈಸೂರು-ಕೊಡಗು ಕ್ಷೇತ್ರದ ನೂತನ ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಸನ್ಮಾನಿಸಿ ಗೌರವಿಸಲಾಗುತ್ತದೆಂದರು.
ಮುಖ್ಯ ಅತಿಥಿಗಳಾಗಿ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್. ಪೊನ್ನಣ್ಣ, ಎಂಎಲ್‍ಸಿ ಎಂ.ಪಿ.ಸುಜಾ ಕುಶಾಲಪ್ಪ, ಮಾಜಿ ಶಾಸಕರುಗಳಾದ ಕೆ.ಜಿ.ಬೋಪಯ್ಯ, ಎಂ,ಪಿ.ಅಪ್ಪಚ್ಚು ರಂಜನ್ ಸೇರಿದಂತೆ ಹಲ ಗಣ್ಯರು ಪಾಲ್ಗೊಳ್ಳಲಿದ್ದಾರೆಂದು ವಿವರಗಳನ್ನಿತ್ತರು.
ನೂತನ ಆಡಳಿತ ಮಂಡಳಿ ರಚನೆ- ಅಂದು ಮಧ್ಯಾಹ್ನ 3 ಗಂಟೆಗೆ ಹಿಂದೂ ಮಲಯಾಳಿ ಸಮಾಜದ ಕೊಡಗು ಜಿಲ್ಲಾ ಸಮಿತಿಯ ಮಹಾಸಭೆ ನಡೆಯಲಿದೆ. ಇದರಲ್ಲಿ ಸಮಿತಿಯ ನೂತನ ಆಡಳಿತ ಮಂಡಳಿಯ ರಚನೆಯಾಗಲಿದೆಯೆಂದು ತಿಳಿಸಿದರು.
ಸದ್ದಿಗೋಷ್ಠಿಯಲ್ಲಿ ಹಿಂದೂ ಮಲಯಾಳಿ ಸಮಾಜದ ಸ್ಥಾಪಕಾಧ್ಯಕ್ಷರಾದ ಕೆ.ಎಸ್.ರಮೇಶ್, ಕೊಡಗು ಜಿಲ್ಲಾ ಸಮಿತಿಯ ಉಪಾಧ್ಯಕ್ಷರಾದ ಟಿ.ಕೆ.ಸುಧೀರ್, ಖಜಾಂಚಿ ಕೆ.ಬಾಬು, ಮುಖ್ಯ ಸಲಹೆಗಾರರಾದ ಟಿ.ಆರ್.ವಾಸುದೇವ ಉಪಸ್ಥಿತರಿದ್ದರು.








