

ಮಡಿಕೇರಿ ಜು.8 NEWS DESK : ಆಂಧ್ರಪ್ರದೇಶದ ಕಡಪಾದಲ್ಲಿ ಜು.10ರಿಂದ 17 ರವರೆಗೆ ನಡೆಯಲಿರುವ 2ನೇ ಹಾಕಿ ಇಂಡಿಯಾ ಜೂನಿಯರ್ ಮಹಿಳಾ ದಕ್ಷಿಣ ವಲಯ ಚಾಂಪಿಯನ್ ಶಿಪ್ ನಲ್ಲಿ ಬೇಂಗೂರು ಗ್ರಾಮದ ಪಟ್ಟಮಾಡ ಶ್ರೀಷ್ಮ ಬೊಳ್ಳಮ್ಮ ಹಾಕಿ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ.
ಬೇಂಗೂರಿನ ಪಟ್ಟಮಾಡ ರವಿನ್ ಮುತ್ತಣ್ಣ ಹಾಗೂ ಮಿಲನ್ ಮುತ್ತಣ್ಣ ಅವರ ಪುತ್ರಿ ಶ್ರೀಷ್ಮ ಬೊಳ್ಳಮ್ಮ ಬೆಂಗಳೂರಿನ ಸಂತ ಜೋಸೆಫರ ಕಾಲೇಜ್ ನಲ್ಲಿ ಪ್ರಥಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದಾರೆ.









