Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada
Home»ಇತ್ತೀಚಿನ ಸುದ್ದಿಗಳು»ಕಾಫಿ ಬೆಳೆಗಾರರರಿಗೆ ಶುಕ್ರ ದೆಸೆ : ಕಾಫಿ ಇತಿಹಾಸದಲ್ಲೇ ಮೊದಲ ಬಾರಿಗೆ ಸರ್ವಕಾಲಿಕ ದಾಖಲೆ ಬೆಲೆ ಏರಿಕೆ
ಇತ್ತೀಚಿನ ಸುದ್ದಿಗಳು ಕರ್ನಾಟಕ ಕೊಡಗು ಜಿಲ್ಲೆ

ಕಾಫಿ ಬೆಳೆಗಾರರರಿಗೆ ಶುಕ್ರ ದೆಸೆ : ಕಾಫಿ ಇತಿಹಾಸದಲ್ಲೇ ಮೊದಲ ಬಾರಿಗೆ ಸರ್ವಕಾಲಿಕ ದಾಖಲೆ ಬೆಲೆ ಏರಿಕೆ

ಜುಲೈ 11, 20242 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement


ಬೆಂಗಳೂರು ಜು.11 NEWS DESK : ವಿಶ್ವದ ಅಗ್ರ ಉತ್ಪಾದಕ ವಿಯೆಟ್ನಾಂನಿಂದ ಸಾಗಣೆಯಲ್ಲಿನ ನಿಧಾನಗತಿಯಿಂದ ಜಾಗತಿಕ ಮಾರುಕಟ್ಟೆ ಬಿಗಿಯಾಗಿ ರೋಬಸ್ಟಾ ಕಾಫಿ ಬೆಲೆಗಳು ಮಂಗಳವಾರ ದಾಖಲೆಯ ಗರಿಷ್ಠ ಮಟ್ಟಕ್ಕೆ ಏರಿ ಹೊಸ ದಾಖಲೆಯೇ ನಿರ್ಮಾಣವಾಗಿದೆ. ಅರೇಬಿಕಾ ಮತ್ತು ರೊಬಸ್ಟಾ ಪಾರ್ಚ್‌ಮೆಂಟ್‌ ಕಾಫಿಗಳೆರಡೂ ಚೀಲಕ್ಕೆ 300 ರಿಂದ 500 ರೂಪಾಯಿಗಳವರೆಗೆ ಏರಿಕೆ ದಾಖಲಿಸಿವೆ.
ಬುಧವಾರ ದೇಶೀ ಮಾರುಕಟ್ಟೆಯಲ್ಲಿ ಅರೆಬಿಕಾ ಪಾರ್ಚ್‌ಮೆಂಟ್‌ ದರ 50 ಕೆಜಿಗೆ ಚೀಲವೊಂದಕ್ಕೆ 16,4೦೦ ರೂಪಾಯಿಗಳಿಗೂ ರೊಬಸ್ಟಾ ಪಾರ್ಚ್‌ಮೆಂಟ್‌ ಬೆಲೆ 17,500 ರೂಪಾಯಿಗಳವರೆಗೂ ಏರಿಕೆ ದಾಖಲಿಸಿತು. ರೊಬಸ್ಟಾ ಚೆರಿ ದರ ಚೀಲಕ್ಕೆ 10 ಸಾವಿರ ತಲುಪಿದ್ದು ಅರೇಬಿಕಾ ಚೆರಿ ೯ ಸಾವಿರ ತಲುಪಿದೆ. ಮೂಡಿಗೆರೆಯ ಮುದ್ರೆಮನೆ ಕಾಫಿ ಸಂಸ್ಥೆಯ ಖರೀದಿ ದರದ ಪ್ರಕಾರ ಅರೇಬಿಕಾ ಪಾರ್ಚ್‌ಮೆಂಟ್‌ ದರ ಚೀಲಕ್ಕೆ 18 ಸಾವಿರ ಮತ್ತು ರೊಬಸ್ಟಾ ಪಾರ್ಚ್‌ ಮೆಂಟ್‌ ದರ ಚೀಲಕ್ಕೆ 19,200 ರೂಪಾಯಿ ಇದ್ದು ಇದ್ದು ಅರೆಬಿಕಾ ಚೆರಿ ಕಿಲೋಗೆ 355 ರಂತೆ ಮತ್ತು ರೊಬಸ್ಟಾ ಚೆರಿ ದರ ಕಿಲೋಗೆ 405 ರೂಪಾಯಿ ಇದೆ ಎಂದು ತಿಳಿಸಿದರು. ಆದರೆ ಚೆರಿ ಕಾಫಿ ಸಂಪೂರ್ಣ ಔಟರ್ನ್‌ ಮೇಲೆ ಅವಲಂಬಿತವಾಗಿದೆ ಎಂದೂ ಸ್ಪಷ್ಟಪಡಿಸಿದರು. ಓರ್ವ ವರ್ತಕರ ಈ ಹೆಚ್ಚಿನ ದರದ ವಾಟ್ಸ್‌ ಅಪ್‌ ಸಂದೇಶ ಬುಧವಾರ ಭಾರೀ ಸಂಖ್ಯೆಯಲ್ಲಿ ಹರಿದಾಡಿ ಕೊಡಗಿನಾದ್ಯಂತ ವೈರಲ್‌ ಆಗಿತ್ತು.
ಆದರೆ ಮಹದಚ್ಚರಿಯ ಸಂಗತಿಯೆಂದರೆ ಕೊಡಗಿನಲ್ಲಿ ಯಾವುದೇ ಕಾಫಿ ವರ್ತಕರೂ ಈ ದರಕ್ಕೆ ಕಾಫಿ ಖರೀದಿಸುತ್ತಿಲ್ಲ. ಮಡಿಕೇರಿ, ಕುಶಾಲನಗರ ಮತ್ತು ಸೋಮವಾರಪೇಟೆಯ ವರ್ತಕರು ರೊಬಸ್ಟಾ ಪಾರ್ಚ್‌ಮೆಂಟ್‌ ಗೆ 16,800 ರಿಂದ 17,300 ರ ವರೆಗೆ ಹಾಗೂ ಅರೇಬಿಕಾ ಪಾರ್ಚ್‌ಮೆಂಟ್‌ ಕಾಫಿ ಗೆ 15,800 ರಿಂದ 16,200 ರ ವರೆಗೆ ಖರೀದಿಸುತಿದ್ದಾರೆ. ಕಾಫಿ ದರ ಕುರಿತು ಚಿಕ್ಕಮಗಳೂರಿನ ಇತರ ವರ್ತಕರಲ್ಲಿ ವಿಚಾರಿಸಿದಾಗ ಅಲ್ಲಿಯೂ ಕೂಡ ಉತ್ತಮ ರೊಬಸ್ಟಾ ಪಾರ್ಚ್‌ಮೆಂಟ್‌ ಕಾಫಿಗೆ 18 ಸಾವಿರ ರೂಪಾಯಿವರೆಗೆ ಮತ್ತು ಅರೇಬಿಕ ಪಾರ್ಚ್‌ಮೆಂಟ್‌ ಕಾಫಿಗೆ 16,500 ದರ ನೀಡುವುದಾಗಿ ತಿಳಿಸಿದರು. ಮತ್ತೋರ್ವ ವರ್ತಕರು ದರ ಹೆಚ್ಚು ನೀಡುವ ಅಮಿಷವೊಡ್ಡುವವರ ಬಗ್ಗೆ ಜಾಗ್ರತೆ ಆಗಿರಬೇಕು. ಕಾಫಿ ಪಡೆದು ಹಣ ನೀಡಲು ಸತಾಯಿಸುತ್ತಾರೆ ಅಥವಾ ಕಾಫಿ ಖರೀದಿಸುವುದಿಲ್ಲ ಎಂದು ಹೇಳಿದರು.

ಆದರೆ ಅಂತರ್ರಾಷ್ಟ್ರೀಯ ಮಾಧ್ಯಮ ವರದಿಗಳ ಪ್ರಕಾರ ಲಂಡನ್‌ ಕಾಫಿ ಮಾರುಕಟ್ಟೆಯಲ್ಲಿ ಕಾಫಿ ದರ ಮಂಗಳವಾರ ಸರ್ವಕಾಲಿಕ ಏರಿಕೆ ದಾಖಲಿಸಿದೆ. ಈ ವರ್ಷ ರೋಬಸ್ಟಾ ಕಾಫಿ ಬೆಲೆ 63% ಏರಿಕೆಯಾಗಿದೆ, ಲಂಡನ್ ಮೂಲದ ಐಸಿಇ ಫ್ಯೂಚರ್ಸ್ ಯುರೋಪ್ ಮಾರುಕಟ್ಟೆಯಲ್ಲಿ ಮಂಗಳವಾರ ಮೆಟ್ರಿಕ್ ಟನ್‌ಗೆ $4,667 ತಲುಪಿದೆ.
ವಿಯೆಟ್ನಾಂನಂತಹ ಜಾಗತಿಕ ಉತ್ಪಾದಕರು ನಿರಂತರವಾಗಿ ಹೆಚ್ಚುತ್ತಿರುವ ಬೇಡಿಕೆಯೊಂದಿಗೆ ಸರಬರಾಜಿನ ವೇಗವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಕಾರಣ ಮಾರುಕಟ್ಟೆಯು ಸುಮಾರು 18 ತಿಂಗಳುಗಳಿಂದ ಏರುತ್ತಿದೆ. 2023 ರಲ್ಲಿ ಕಾಫಿ ಬೆಲೆಗಳು 58% ರಷ್ಟು ಏರಿದವು. ರೋಬಸ್ಟಾವನ್ನು ವಿದೇಶಗಳಲ್ಲಿ ಸಾಮಾನ್ಯವಾಗಿ ಇನ್ಸ್‌ಟಂಟ್‌ ಕಾಫಿ ಮಾಡಲು ಬಳಸಲಾಗುತ್ತದೆ ̤
ಜೂನ್‌ನಲ್ಲಿ ವಿಯೆಟ್ನಾಂನ ಕಾಫಿ ರಫ್ತು ಕೇವಲ 70,202 ಟನ್‌ಗಳಾಗಿದ್ದು, ಈ ವರ್ಷದ ಮೊದಲಾರ್ಧದಲ್ಲಿ ಒಟ್ಟು 8,93,820 ಟನ್‌ಗಳಷ್ಟು ರಫ್ತಾಗಿದೆ. ಇದು ಹಿಂದಿನ ವರ್ಷಕ್ಕಿಂತ 11.4% ಕಡಿಮೆಯಾಗಿದೆ ಎಂದು ಅಂಕಿ ಅಂಶಗಳು ತಿಳಿಸಿವೆ. “ಜೂನ್ ತಿಂಗಳಲ್ಲಿ ವಿಯೆಟ್ನಾಂನ ಈ ಕಡಿಮೆ ರಫ್ತು ಕಾರ್ಯಕ್ಷಮತೆಯು ಈ ಅತಿದೊಡ್ಡ ರೋಬಸ್ಟಾ-ಉತ್ಪಾದಿಸುವ ರಾಷ್ಟ್ರದೊಳಗಿನ ಬಿಗಿಯಾದ ಆಂತರಿಕ ಮಾರುಕಟ್ಟೆ ಪರಿಸ್ಥಿತಿಗಳನ್ನು ಪ್ರತಿಬಿಂಬಿಸುತ್ತದೆ” ಎಂದು ಅಲ್ಲಿನ ಕಾಫಿ ಉದ್ಯಮಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ವಿಯೆಟ್ನಾಂನಲ್ಲಿನ ಕಾಫಿ ಉತ್ಪಾದನೆಯು ಈ ಶತಮಾನದ ಮೊದಲ ಎರಡು ದಶಕಗಳಲ್ಲಿ ಸುಮಾರು ಮೂರು ಪಟ್ಟು ಹೆಚ್ಚಾಗಿದೆ. ಅಮೆರಿಕಾದ ಕೃಷಿ ಇಲಾಖೆಯ ಮಾಹಿತಿ ಪ್ರಕಾರ ವಿಯಟ್ನಾಂ 2021-22 ರಲ್ಲಿ 31.58 ಮಿಲಿಯನ್ 60-ಕೆಜಿ ಚೀಲ ಕಾಫಿ ಉತ್ಪಾದಿಸಿತ್ತು.
ಆದರೆ ಕಳೆದ ಎರಡು ವರ್ಷಗಳಿಂದ ಕಾಫಿ ಉತ್ಪಾದನೆ 29 ಮಿಲಿಯನ್ ಚೀಲಗಳಿಗಿಂತ ಕಡಿಮೆ ಆಗಿದೆ. ಹವಾಮಾನ ವೈಪರೀತ್ಯದಿಂದಾಗಿ 2024-25 ರಲ್ಲಿ ಉತ್ಪಾದನೆ ಮತ್ತಷ್ಟು ಕುಸಿಯಲಿದೆ. ವಿಯೆಟ್ನಾಂ ಕಾಫಿ ಬೆಳೆಗಾರರು ಈ ವರ್ಷ ಸುಮಾರು ಒಂದು ದಶಕದಲ್ಲೇ ಅತ್ಯಂತ ಭೀಕರ ಬರಗಾಲಕ್ಕೆ ತುತ್ತಾಗಿದ್ದಾರೆ. ಜಾಗತಿಕ ಕಾಫಿ ಉತ್ಪಾದನೆಯಲ್ಲಿ ನಂಬರ್‌ ವನ್‌ ಸ್ತಾನದಲ್ಲಿರುವ ಬ್ರೆಜಿಲ್‌ ನಲ್ಲಿ ರೊಬಸ್ಟಾ ಕಾಫಿ ಉತ್ಪಾದನೆ 21 ಮಿಲಿಯನ್‌ ಗೆ ಕುಸಿದಿದ್ದು ಮುಂದಿನ ಎರಡು ವರ್ಷಗಳ ನಂತರವಷ್ಟೆ ಉತ್ಪಾದನೆ ಹೆಚ್ಚಾಗಲಿದೆ ಎಂದು ಮೂಲಗಳು ತಿಳಿಸಿವೆ.

ವರದಿ : ಕೋವರ್‌ ಕೊಲ್ಲಿ ಇಂದ್ರೇಶ್‌ 

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Follow us Follow us
Share. WhatsApp Facebook Twitter Email Telegram Copy Link

Related Posts

ಮಡಿಕೇರಿಯಲ್ಲಿ ಮಕ್ಕಳ ದಸರಾ ಸಂಭ್ರಮ : ವಿದ್ಯಾರ್ಥಿಗಳ ಪ್ರತಿಭೆಗೆ ಪೋಷಕರ ಪ್ರೋತ್ಸಾಹ ಅಗತ್ಯ : ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್

ಅಕ್ಟೋಬರ್ 16, 2026

ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವ : ಜಿಲ್ಲಾಡಳಿತದಿಂದ ಅಗತ್ಯ ಸಿದ್ಧತೆ

ಅಕ್ಟೋಬರ್ 16, 2026

ಶಿರಂಗಾಲದಲ್ಲಿ ಎಸ್.ವಿ. ನಂಜುಂಡಪ್ಪ ಅವರಿಗೆ ನುಡಿನಮನ; ನಿಸ್ವಾರ್ಥ ಸಾಮಾಜಿಕ ಸೇವೆ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಸಮಾಜ ಮನ್ನಣೆ ನೀಡಲಿ: ಅರಮೇರಿ ಸ್ವಾಮೀಜಿ

ಅಕ್ಟೋಬರ್ 16, 2026

ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವ : ಜಿಲ್ಲಾಡಳಿತದಿಂದ ಅಗತ್ಯ ಸಿದ್ಧತೆ

ಅಕ್ಟೋಬರ್ 16, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಅ.16 NEWS DESK : ತಲಕಾವೇರಿಯಲ್ಲಿ ಶ್ರೀ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಸಿದ್ಧತೆಗಳು…

ಶಿರಂಗಾಲದಲ್ಲಿ ಎಸ್.ವಿ. ನಂಜುಂಡಪ್ಪ ಅವರಿಗೆ ನುಡಿನಮನ; ನಿಸ್ವಾರ್ಥ ಸಾಮಾಜಿಕ ಸೇವೆ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಸಮಾಜ ಮನ್ನಣೆ ನೀಡಲಿ: ಅರಮೇರಿ ಸ್ವಾಮೀಜಿ

ಅಕ್ಟೋಬರ್ 16, 2026

ರೋಟರಿ ಮಿಸ್ಟಿ ಹಿಲ್ಸ್‌ನ 13ನೇ ವರ್ಷದ ಮಕ್ಕಳ ದಸರಾ ಯಶಸ್ವಿ; ಮಂಟಪ ನಿರ್ಮಾಣ ಸ್ಪರ್ಧೆಯಲ್ಲಿ ಟೀಮ್ ಅಗ್ನಿಗೆ ಪ್ರಥಮ ಬಹುಮಾನ; ಸತತ ಮೂರು ವರ್ಷಗಳ ಹ್ಯಾಟ್ರಿಕ್ ಸಾಧನೆ

ಅಕ್ಟೋಬರ್ 16, 2026

ಅ.17 ರಂದು ಕೊಡಗು ಜಿಲ್ಲೆಯಲ್ಲಿ ಕಾವೇರಿ ತುಲಾ ಸಂಕ್ರಮಣದ ರಜೆ

ಅಕ್ಟೋಬರ್ 16, 2026

ಅ.17ಕ್ಕೆ ಕೊಡಗು ಜಿಲ್ಲೆಯಲ್ಲಿ ತುಲಾ ಸಂಕ್ರಮಣದ ರಜೆ

ಅಕ್ಟೋಬರ್ 16, 2026

ಕಡಗದಾಳಿನಲ್ಲಿ ಎನ್‌ಎಸ್‌ಎಸ್ ಶಿಬಿರದ ಸಮಾರೋಪ : ಸಮಾಜದ ಅಭಿವೃದ್ಧಿಗೆ ವಿದ್ಯಾರ್ಥಿಗಳು ಕೊಡುಗೆ ನೀಡಲಿ : ಮೇಜರ್ ಪ್ರೊ. ರಾಘವ ಬಿ.

ಅಕ್ಟೋಬರ್ 15, 2026

ಅ.17 ರಂದು ಉಸ್ತುವಾರಿ ಸಚಿವ ಪಿ.ಎಂ.ನರೇಂದ್ರ ಸ್ವಾಮಿ ಕೊಡಗಿಗೆ ಭೇಟಿ

ಅಕ್ಟೋಬರ್ 15, 2026

ಸಾಂತ್ವನ ಮಹಿಳಾ ಸಹಾಯವಾಣಿ : ಕೊಡಗಿನಲ್ಲಿ 5860 ಪ್ರಕರಣಗಳು ಇತ್ಯರ್ಥ

ಅಕ್ಟೋಬರ್ 15, 2026

ಅ.16 ರಂದು ಮಕ್ಕಳ ದಸರಾ ಸಂಭ್ರಮ: ಮಕ್ಕಳಿಂದ ವೈವಿದ್ಯಮಯ ಸ್ಪರ್ಧೆಗಳು

ಅಕ್ಟೋಬರ್ 15, 2026

ಗೋಣಿಕೊಪ್ಪಲು : ಅ.16 ರಂದು ವಿದ್ಯುತ್ ವ್ಯತ್ಯಯ

ಅಕ್ಟೋಬರ್ 15, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.