Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಅಮ್ಮತ್ತಿ ಕೊಡವ ಸಮಾಜದಿಂದ ಶಾಸಕ ಎ.ಎಸ್.ಪೊನ್ನಣ್ಣರಿಗೆ ಸನ್ಮಾನ*
  • *ಕೆದಮುಳ್ಳೂರು : ಏ.3 ಮತ್ತು 4 ರಂದು ಶ್ರೀ ಚಾಮುಂಡಿ ದೇವಿಯ ತೆರೆ ಮಹೋತ್ಸವ*
  • *ಶ್ರದ್ಧಾಭಕ್ತಿಯಿಂದ ಜರುಗಿದ ಕೆದಮುಳ್ಳೂರು ಶ್ರೀ ಭಗವತಿ ದೇವರ ವಾರ್ಷಿಕೋತ್ಸವ*
  • *ಕುಡಿಯುವ ನೀರಿನ ಅಭಾವ : ಪೊನ್ನಂಪೇಟೆಯಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು*
  • *ಎಮ್ಮೆಮಾಡು ಪ್ರಕರಣ : ಸಾಮಾಜಿಕ ಜಾಲತಾಣದ ಮೇಲೆ ನಿಗಾ ವಹಿಸಿರುವ ಕೊಡಗು ಪೊಲೀಸ್*
  • *ಸೋಮವಾರಪೇಟೆ : ಮಹಿಳಾ ಸಂಘಗಳು ಮಹಿಳೆಯರ ಅಭಿವೃದ್ಧಿಗೆ ಸಹಕಾರಿ : ಸಾಹಿತಿ ಶ.ಗ.ನಯನತಾರ*
  • *ಕೊಡಗು : ದೈವಕ್ಕೆ ಅಪಮಾನ ಆರೋಪ : ಸೂಕ್ತ ಕ್ರಮಕ್ಕೆ ಒತ್ತಾಯ*
  • *ಭಗವಾನ್ ಮಹಾವೀರರ ಜೀವನ ಮತ್ತು ಬೋಧನೆಗಳು ಸಾರ್ವಕಾಲಿಕ : ವಾಣಿ ಪುಷ್ಪರಾಜ್*
  • *ಕೂಡಿಗೆ ಸೈನಿಕ ಶಾಲೆಗೆ ನಿರ್ದೇಶಕರ ಭೇಟಿ*
  • *”ಮುಕ್ಕಾಟಿರ ಕ್ರಿಕೆಟ್ ನಮ್ಮೆ” ಏ.3 ರಿಂದ ಆರಂಭ : 289 ತಂಡಗಳ ನಡುವೆ ಹಣಾಹಣಿ : ಮೇ 1 ರಂದು ಅಂತಿಮ ಪಂದ್ಯ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಕೊಡಗಿನ ಒಲಂಪಿಯನ್ ಆಟಗಾರರು ಹಾಗೂ ತರಬೇತುದಾರರು*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಕೊಡಗಿನ ಒಲಂಪಿಯನ್ ಆಟಗಾರರು ಹಾಗೂ ತರಬೇತುದಾರರು*

ಆಗಷ್ಟ್ 13, 20244 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಆ.13 NEWS DESK : ಒಲಂಪಿಕ್ಸ್ ಕ್ರೀಡೆಯು ಕ್ರಿಸ್ತ ಪೂರ್ವ 776ರಲ್ಲಿ ಗ್ರೀಕ್ ನ ಒಲಂಪಿಯಾದಲ್ಲಿ ಪ್ರಾರಂಭವಾಯಿತು. ಆದ್ದರಿಂದ ಒಲಂಪಿಕ್ ಗೇಮ್ಸ್ ಎಂಬ ಹೆಸರನ್ನು ಕೂಡ ಪಡೆದುಕೊಂಡಿತ್ತು. ಮೊದಲ ಆಧುನಿಕ ಒಲಂಪಿಕ್ಸ್ ಕ್ರೀಡೆಯು 1896ರಲ್ಲಿ ಗ್ರೀಕ್ ನ ಅಥೆನ್ಸ್ ನಲ್ಲಿ ಪ್ರಾರಂಭವಾಯಿತು. ಒಲಂಪಿಕ್ಸ್ ವಿಶ್ವದಲ್ಲೇ ಶ್ರೇಷ್ಠವಾದ ಕ್ರೀಡಾಕೂಟ. ಇದು 4 ವರ್ಷಗಳಿಗೊಮ್ಮೆ ನಡೆಯುತ್ತದೆ. ಒಲಂಪಿಕ್ಸ್ ಲಾಂಛನದಲ್ಲಿರುವ ಐದು ಉಂಗುರಗಳು ಇದು ಖಂಡಗಳಾದ ಆಸ್ಟ್ರೇಲಿಯ, ಏಷ್ಯಾ, ಆಫ್ರಿಕಾ, ಯುರೋಪ್ ಹಾಗೂ ಅಮೇರಿಕಾವನ್ನು ಪ್ರತಿನಿಧಿಸುತ್ತದೆ. ಈ ಐದು ಉಂಗುರದ ಬಣ್ಣಗಳು ಐದು ದೇಶದ ಧ್ವಜದಲ್ಲಿ ಕನಿಷ್ಠ ಒಂದು ಬಣ್ಣವನ್ನು ಪ್ರತಿನಿಧಿಸುತ್ತದೆ. ಕೊಡಗಿನಿಂದ 11 ಒಲಂಪಿಕ್ಸ್ ಹಾಕಿ ಆಟಗಾರರು, ಇತರ ಕ್ರೀಡೆಯಿಂದ 7 ಒಲಂಪಿಕ್ಸ್ ಕ್ರೀಡಾಪಟುಗಳು ಹಾಗೂ 5 ಒಲಂಪಿಕ್ಸ್ ತರಬೇತುದಾರರನ್ನು ಕೊಟ್ಟ ಪುಟ್ಟ ಜಿಲ್ಲೆ ಕೊಡಗು.

ಹಾಕಿ ಆಟಗಾರರು

  1. ಬಿಳಿಮಗ್ಗ ಪಿ ಗೋವಿಂದ : ಮೂಲತಃ ಸೋಮವಾರಪೇಟೆ, 1972 ಮ್ಯುನಿಚ್ ಒಲಂಪಿಕ್ಸ್ ನ ಕಂಚಿನ ಪದಕ ವಿಜೇತ, 1976 ಮಾಂಟ್ರಿಲ್ ಒಲಂಪಿಕ್ಸ್ ನಲ್ಲಿ ಆಡಿದ ಅದ್ಭುತ ಆಟಗಾರ, ಇಂಡಿಯನ್ ಏರ್ ಲೈನ್ಸ್ ತಂಡದ ಪರ ಆಡುತ್ತಿದ್ದರು.
  2. ಡಾ.ಮೊಳ್ಳೇರ ಪಿ ಗಣೇಶ್ : ಮೂಲತಃ ಸುಂಟಿಕೊಪ್ಪ, ಪದ್ಮಶ್ರೀ ಪುರಸ್ಕೃತ, 1972 ಮ್ಯುನಿಚ್ ಒಲಂಪಿಕ್ಸ್ ನ ಕಂಚಿನ ಪದಕ ವಿಜೇತ, ಕೋರ್ ಆಫ್ ಸಿಗ್ನಲ್ಸ್ ನ ಅದ್ಭುತ ಮುನ್ನಡೆ ಹಾಕಿ ಆಟಗಾರ ಹಾಗು ಸರ್ವಿಸಸ್ ನಿಂದ ಭಾರತ ಪ್ರತಿನಿಧಿಸಿದ್ದರು.
  3. ಮನೆಯಪಂಡ ಎಂ ಸೋಮಯ್ಯ : ಮೂಲತಃ ಪೊನ್ನಂಪೇಟೆ, 1980 ಮಾಸ್ಕೋ ಒಲಂಪಿಕ್ಸ್ ನ ಚಿನ್ನದ ಪದಕ ವಿಜೇತ, 1984 ಲಾಸ್ ಏಂಜಲೀಸ್ ಒಲಂಪಿಕ್ಸ್, 1988 ಸಿಯೋಲ್ ಒಲಂಪಿಕ್ಸ್ ನಾಯಕ.
    3 ಒಲಂಪಿಕ್ಸ್ ಆಡಿದ ಕೊಡಗಿನ ಏಕೈಕ ಹಾಕಿ ಆಟಗಾರ, ಮಹೇಂದ್ರ ಮುಂಬೈ ತಂಡದ ಪರ ಆಡಿದ್ದರು.
  4. ಐಣ.ಅoಟ.ಬಾಳೆಯಡ ಕೆ ಸುಬ್ರಮಣಿ : ಮೂಲತಃ ನಾಪೋಕ್ಲು, 1988 ಸಿಯೋಲ್ ಒಲಂಪಿಕ್ಸ್ ಆಡಿದ ಹಾಕಿ ಆಟಗಾರ, M.E.G ಗೆ ಆಡಿ ಸರ್ವಿಸಸ್ ಪರ ಭಾರತದ ತಂಡವನ್ನು ಪ್ರತಿನಿಧಿಸಿದರು.
  5. ಚೆಪ್ಪುಡೀರ ಎಸ್ ಪೂಣಚ್ಚ : ಮೂಲತಃ ಪೊನ್ನಂಪೇಟೆ, 1992 ಬ್ರಾಸಿಲೋನ ಒಲಂಪಿಕ್ಸ್, S.B.I ತಂಡದ ಆಟಗಾರ ಹಾಗೂ ಅಲ್ಲಿನ ಉನ್ನತ ಅಧಿಕಾರಿ. ಕರ್ನಾಟಕ ತಂಡದ ಪರ ಆಡಿದರು.
  6. ಡಾ. ಅಂಜಪರುವಂಡ ಸುಬ್ಬಯ್ಯ : ಮೂಲತಃ ಮಡಿಕೇರಿ ತಾಲ್ಲೂಕಿನ ಬೋಯಿಕೆರೆ, ಹಾಕಿ ಕರ್ನಾಟಕದ ಕಾರ್ಯದರ್ಶಿ, 1992 ಬ್ರಾಸಿಲೋನ ಒಲಂಪಿಕ್ಸ್, 1996 ಅಟ್ಲಾಂಟ ಒಲಂಪಿಕ್ಸ್ ಆಡಿದ ಅದ್ಭುತ ಗೋಲ್ ಕೀಪರ್, ಇಂಡಿಯನ್ ಏರ್ ಲೈನ್ಸ್ ತಂಡದ ಪರ ಆಡುತ್ತಿದ್ದರು.
  7. ಅರ್ಜುನ್ ಹಾಲಪ್ಪ : ಮೂಲತಃ ಸೋಮವಾರಪೇಟೆ, 2004 ಅಥೆನ್ಸ್ ಒಲಂಪಿಕ್ಸ್ ನಲ್ಲಿ ಭಾಗವಹಿಸಿದ್ದರು, ಇಂಡಿಯನ್ ಏರ್ ಲೈನ್ಸ್ ನ ಆಟಗಾರ.
  8. ಒಕ್ಕಲಿಗರ ರಘುನಾಥ್ : ಮೂಲತಃ ಹಾತೂರು, 2012 ಲಂಡನ್ ಒಲಂಪಿಕ್ಸ್ ಹಾಗೂ 2016 ರಿಯೋ ಒಲಂಪಿಕ್ಸ್ ನಲ್ಲಿ ಭಾಗವಹಿಸಿದ್ದರು. I.O.C.L ನ ಆಟಗಾರ, ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದರು.
  9. ಸಣ್ಣುವಂಡ ಕೆ ಉತ್ತಪ್ಪ : ಮೂಲತಃ ದೇವರಪುರ, 2012 ಲಂಡನ್ ಒಲಂಪಿಕ್ಸ್ ಹಾಗೂ 2016 ರಿಯೋ ಒಲಂಪಿಕ್ಸ್ ನಲ್ಲಿ ಭಾಗವಹಿಸಿದ್ದರು.I.O.C.L ನ ಆಟಗಾರ, ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದರು.
  10. ಸೋಮವಾರಪೇಟೆ ವಿ ಸುನಿಲ್ :  ಮೂಲತಃ ಸೋಮವಾರಪೇಟೆ 2012 ಲಂಡನ್ ಒಲಂಪಿಕ್ಸ್ ಹಾಗೂ 2016 ರಿಯೋ ಒಲಂಪಿಕ್ಸ್ ನಲ್ಲಿ ಭಾಗವಹಿಸಿದ್ದರು.B.P.C.L ನ ಆಟಗಾರ, ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದರು.
  11. ಚೇಂದಂಡ ನಿಕಿನ್ ತಿಮ್ಮಯ್ಯ : ಮೂಲತಃ ಚೆಂಬೆಬೆಳ್ಳೂರು, 2016 ರಿಯೋ ಒಲಂಪಿಕ್ಸ್ ನಲ್ಲಿ ಭಾಗವಹಿಸಿದ್ದರು. ಕೆನರಾ ಬ್ಯಾಂಕ್ ನ ಆಟಗಾರ, ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದರು.

   ಇತರ ಕ್ರೀಡೆಯ ಕ್ರೀಡಾಪಟುಗಳು :: 

  1. ಚೇನಂಡ ಸಿ ಮಾಚಯ್ಯ : ಮೂಲತಃ ಕೋಕೇರಿ, ಅದ್ಭುತ ಬಾಕ್ಸರ್, 1976 ಮಾಂಟ್ರಿಲ್ ಒಲಂಪಿಕ್ಸ್ ನಲ್ಲಿ ಭಾಗವಹಿಸಿದ್ದರು. M.E.G ಗೆ ಆಡಿ ಸರ್ವಿಸಸ್ ಪರ ಭಾರತದ ತಂಡವನ್ನು ಪ್ರತಿನಿಧಿಸಿದರು.
  2. ಪುಚ್ಚಿಮಂಡ ಅಶ್ವಿನಿ ನಾಚಪ್ಪ :
    ಮೂಲತಃ ಬಿಟ್ಟಂಗಾಲ, ಅದ್ಭುತ ಅಥ್ಲೆಟ್ (ಓಟಗಾರ್ತಿ), 1988 ಸಿಯೋಲ್ ಒಲಂಪಿಕ್ಸ್ ನಲ್ಲಿ ಭಾಗವಹಿಸಿದ್ದರು. ವಿಜಯ ಬ್ಯಾಂಕ್ ನ ಉದ್ಯೋಗಿಯಾಗಿದ್ದರು. ಪ್ರಸ್ತುತ ತಮ್ಮ ಸ್ವಂತ K.A.L.S ವಿದ್ಯಾಸಂಸ್ಥೆಯನ್ನು ನಡೆಸುತ್ತಿದ್ದಾರೆ.
  3. ಗುಡ್ಡಂಡ ಜಿ ಪ್ರಮೀಳ : ಮೂಲತಃ ಬಿಟ್ಟಂಗಾಲ, ಅದ್ಭುತ ಅಥ್ಲೆಟ್(ಓಟಗಾರ್ತಿ), 2000 ಸಿಡ್ನಿ ಒಲಂಪಿಕ್ಸ್ ಹಾಗೂ 2008 ಬೀಜಿಂಗ್ ಒಲಂಪಿಕ್ಸ್ ನಲ್ಲಿ ಭಾಗವಹಿಸಿದ್ದರು. ಪ್ರಸ್ತುತ ತಮ್ಮದೇ ಆದ ತರಬೇತಿ ಕೇಂದ್ರವನ್ನು ನಡೆಸುತ್ತಿದ್ದಾರೆ.
  4. ಮಚ್ಚಂಡ ರೋಹನ್ ಬೋಪಣ್ಣ : ಮೂಲತಃ ಮಾದಾಪುರ, ಪದ್ಮಶ್ರೀ ಪುರಸ್ಕೃತ, ಅದ್ಭುತ ಟೆನ್ನಿಸ್ ಆಟಗಾರ, 2012 ಲಂಡನ್ ಒಲಂಪಿಕ್ಸ್ 2016 ರಿಯೋ ಒಲಂಪಿಕ್ಸ್ ಹಾಗೂ 2024 ಪ್ಯಾರಿಸ್ ಒಲಂಪಿಕ್ಸ್ ನಲ್ಲಿ ಭಾಗವಹಿಸಿದ್ದರು. ವೃತ್ತಿಪರ ಟೆನ್ನಿಸ್ ಆಟದ ಸಿಂಗಲ್ಸ್ ಅಥವಾ ಡಬಲ್ಸ್ ನಲ್ಲಿ ವಿಶ್ವದ ಅತ್ಯಂತ ಹಿರಿಯ ನಂ.01 ಆಟಗಾರ ಎಂದು ಗಿನ್ನಿಸ್ ದಾಖಲೆಯನ್ನು ನಿರ್ಮಿಸಿದ್ದಾರೆ.
  5. ಮಾಚೆಟ್ಟೀರ ಆರ್ ಪೂವಮ್ಮ : ಮೂಲತಃ ಬಿಟ್ಟಂಗಾಲ, ಅದ್ಭುತ ಅಥ್ಲೆಟ್ (ಓಟಗಾರ್ತಿ), 2008 ಬೀಜಿಂಗ್ ಒಲಂಪಿಕ್ಸ್, 2016 ರಿಯೋ ಒಲಂಪಿಕ್ಸ್ ಹಾಗೂ 2024ರ ಪ್ಯಾರಿಸ್ ಒಲಂಪಿಕ್ಸ್ ನಲ್ಲಿ ಭಾಗವಹಿಸಿದ್ದರು. ಪ್ರಸ್ತುತ ONGC ಯಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ.
  6. ಮಾಚಿಮಂಡ ಅಶ್ವಿನಿ ಪೊನ್ನಪ್ಪ : ಮೂಲತಃ ಅಮ್ಮತ್ತಿ, ಬ್ಯಾಡ್ಮಿಂಟನ್ ಆಟಗಾರ್ತಿ, 2012 ಲಂಡನ್ ಒಲಂಪಿಕ್ಸ್, 2016 ರಿಯೋ ಒಲಂಪಿಕ್ಸ್ ಹಾಗು 2024 ಪ್ಯಾರೀಸ್ ಒಲಂಪಿಕ್ಸ್ ನಲ್ಲಿ ಭಾಗವಹಿಸಿದ್ದರು.
  7. ಕೇಳಪಂಡ ಗಣಪತಿ : ಮೂಲತಃ ಕೊಳತೋಡು ಬೈಗೋಡು, ಸೈಲಿಂಗ್ ಕ್ರೀಡಾಪಟು, 2021 ಟೋಕಿಯೋ ಒಲಂಪಿಕ್ಸ್ ನಲ್ಲಿ ಭಾಗವಹಿಸಿದ್ದರು. ಪ್ರಸ್ತುತ ಚೆನ್ನೈನಲ್ಲಿ ನೆಲೆಸಿದ್ದಾರೆ.

          ಒಲಂಪಿಕ್ಸ್ ತರಬೇತಿದಾರರು :: 

  1. ಡಾ. ಮೊಳ್ಳೇರ ಪಿ ಗಣೇಶ್ : 1980 ಮಾಸ್ಕೋ ಒಲಂಪಿಕ್ಸ್ (ಚಿನ್ನದ ಪದಕ) ಹಾಗು 1988 ಸಿಯೋಲ್ ಒಲಂಪಿಕ್ಸ್ ನ ಭಾರತ ಹಾಕಿ ತಂಡದ ತರಬೇತಿದಾರ.
  2. ಬಿಳಿಮಗ್ಗ ಪಿ ಗೋವಿಂದ : 1988 ಸಿಯಲ್ ಒಲಂಪಿಕ್ಸ್ ನ ಭಾರತ ಹಾಕಿ ತಂಡದ ತರಬೇತಿದಾರ. 1975 ವಿಶ್ವಕಪ್ ವಿಜೇತ.
  3. ಜಗ್ಗಾರಂಡ ಅಪ್ಪಚ್ಚು : ಮೂಲತಃ ಕೊಡಗರಹಳ್ಳಿಯ ಸುಂಟಿಕೊಪ್ಪ ಗ್ರಾಮ, ಕರ್ನಾಟಕ ಸರ್ಕಾರದ ಯುವಜನ ಸೇವಾ ಇಲಾಖೆಯ ಅಥ್ಲೆಟಿಕ್ಸ್ ತರಬೇತಿದಾರ, 1984 ಲಾಸ್ ಏಂಜಲೀಸ್ ಒಲಂಪಿಕ್ಸ್ ನ ಭಾರತದ ಪರ ತರಬೇತಿದಾರ.
  4. ಅಂಕಿತ ಸುರೇಶ್ : ಸುಂಟಿಕೊಪ್ಪದ ಕಂಬಿಬಾಣೆ, ಹಾಕಿ ತರಬೇತುದಾರರು, DYES ಪೊನ್ನಂಪೇಟೆ, 2021 ಟೋಕಿಯೋ ಒಲಂಪಿಕ್ಸ್ ನ ಭಾರತದ ಮಹಿಳಾ ತಂಡದ ತರಬೇತುದಾರರು, ಪ್ರಸ್ತುತ ಹಾಕಿ ಇಂಡಿಯಾದ ತರಬೇತುದಾರರಾಗಿದ್ದಾರೆ.
  5. ಚೇನಂಡ ವಿಶು ಕುಟ್ಟಪ್ಪ : ಮೂಲತಃ ಕೋಕೇರಿ, ಬಾಕ್ಸಿಂಗ್ ತರಬೇತುದಾರ, 2021 ಟೋಕಿಯೋ ಒಲಂಪಿಕ್ಸ್ ಹಾಗೂ 2024 ಪ್ಯಾರಿಸ್ ಒಲಂಪಿಕ್ಸ್ ನಲ್ಲಿ ಭಾಗವಹಿಸಿದ್ದಾರೆ. ಇವರು ಒ.ಇ.ಉ ಯಿಂದ ಸರ್ವಿಸಸ್ ನ ತರಬೇತಿದಾರರಾಗಿದ್ದಾರೆ.
    ರಾಷ್ಟ್ರ ಕ್ರೀಡೆ
    ಹಾಕಿಯಲ್ಲಿ 8 ಚಿನ್ನದ ಪದಕ, 1 ಬೆಳ್ಳಿ ಪದಕ ಹಾಗೂ 4 ಕಂಚಿನ ಪದಕಗಳನ್ನು ಭಾರತ ಗೆದ್ದಿದೆ. ಆದ್ದರಿಂದ ಹಾಕಿಯನ್ನು ಭಾರತದ ರಾಷ್ಟ್ರ ಕ್ರೀಡೆ ಎಂದು ಕರೆಯಲಾಗುತ್ತದೆ. ಕೊಡಗಿನ 18 ಆಟಗಾರರು ಹಾಗೂ 5 ತರಬೇತಿದಾರರಲ್ಲಿ ಡಾಕ್ಟರೇಟ್ ಪದವಿಧರರು, ಪದ್ಮಶ್ರೀ, ಅರ್ಜುನ ಹಾಗೂ ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತರು ಇದ್ದಾರೆ. ಇವರೆಲ್ಲ ಕೊಡಗಿನ ಮುಕುಟ ಮಣಿಗಳು. ಇವರೆಲ್ಲರ ಭಾವಚಿತ್ರವನ್ನು ಕೊಡಗಿನ ಜಿಲ್ಲಾಡಳಿತ ಕಛೇರಿಯಲ್ಲಿ ಪ್ರಕಟಿಸಬೇಕೆಂದು ಕೊಡಗಿನ ಕ್ರೀಡಾ ಸಂಸ್ಥೆಗಳು ಒತ್ತಾಯಿಸಿ ಕಾರ್ಯರೂಪಕ್ಕೆ ತರಬೇಕು. ಒಲಂಪಿಕ್ಸ್ ನಲ್ಲಿ ಪದಕ ಗೆದ್ದರೆ ಭಾರತ ಸರ್ಕಾರವು ಜೀವಿತಾವಧಿವರೆಗೂ ಪಿಂಚಣಿಯನ್ನು ನೀಡುತ್ತದೆ. ಒಲಂಪಿಕ್ಸ್ ಆಟದಲ್ಲಿ ಭಾಗವಹಿಸಿದ ಆಟಗಾರರನ್ನು ಒಲಂಪಿಯನ್ ಗಳು ಎಂದು ಕರೆಯಲಾಗುತ್ತದೆ. ಈ ಆಟಗಾರರಿಗೆ ಮಾತ್ರ ಒಲಂಪಿಕ್ಸ್ ಲಾಂಛನವನ್ನು ಬಳಸಲು ಅವಕಾಶವಿರುತ್ತದೆ. ಈ ಎಲ್ಲಾ ಒಲಂಪಿಯನ್ ಗಳಿಗೆ ಕೊಡಗಿನಲ್ಲಿ ನಿವೇಶನ ಮಂಜೂರು ಮಾಡಿ ಒಲಂಪಿಯನ್ಸ್ ವಿಲೇಜ್ ಎಂದು ನಾಮಕರಣ ಮಾಡಿದರೆ ಕೊಡಗಿನ ಕ್ರೀಡಾ ತಾರೆಯರಿಗೆ ಇದು ಗೌರವ ಹೆಚ್ಚಿಸುತ್ತದೆ ಹಾಗೂ ಯುವ ಆಟಗಾರರಿಗೂ ಆಡಲು ಪ್ರೋತ್ಸಾಹ ನೀಡಿದಂತಾಗುತ್ತದೆ. ಅವರ ಭಾವಚಿತ್ರವನ್ನು “ಊಚಿಟಟ oಜಿ ಈಚಿme” ಎಂದು ದಾಖಲಿಸಿ ಗೌರವ ನೀಡಬೇಕು.
    ಕ್ರೀಡಾ ವರದಿ : ಕ್ರೀಡಾ ವರದಿಗಳು ಕೇವಲ ಪುರಸ್ಕಾರಕ್ಕೆ ಮಾತ್ರ ಸೀಮಿತವಾಗಬಾರದು, ನೈಜಾಂಶಗಳನ್ನು ಬರೆಯಬೇಕು ಎಂದು ಹಿಂದೂ ಪತ್ರಿಕೆ ಸಂಪಾದಕ ರಂಗಸ್ವಾಮಿ ಅವರು 1950ರಲ್ಲಿ ಮುನ್ನುಡಿ ಬರೆದಿದ್ದರು. ಕೊಡಗಿನಲ್ಲಿ ಒಳಾಂಗಣ ಕ್ರೀಡಾಂಗಣ, ಆಸ್ಟ್ರೋ ಟರ್ಫ್ ಹಾಗೂ ಕ್ರೀಡಾ ಸಾಮಗ್ರಿಗಳ ಸೌಲಭ್ಯಗಳನ್ನು ಮತ್ತಷ್ಟು ವೃದ್ಧಿಸಿದರೆ ಇನ್ನು ಹೆಚ್ಚಿನ ಒಲಂಪಿಕ್ಸ್ ಕ್ರೀಡಾಪಟುಗಳು ಹೊರಹೊಮ್ಮಬಹುದು ಎಂಬುದೊಂದು ಆಶಾಭಾವನೆ.

ಕ್ರೀಡಾ ವಿಶ್ಲೇಷಣೆ : ಚೆಪ್ಪುಡೀರ ಕಾರ್ಯಪ್ಪ

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಅಮ್ಮತ್ತಿ ಕೊಡವ ಸಮಾಜದಿಂದ ಶಾಸಕ ಎ.ಎಸ್.ಪೊನ್ನಣ್ಣರಿಗೆ ಸನ್ಮಾನ*

ಮಾರ್ಚ್ 30, 2026

*ಕೆದಮುಳ್ಳೂರು : ಏ.3 ಮತ್ತು 4 ರಂದು ಶ್ರೀ ಚಾಮುಂಡಿ ದೇವಿಯ ತೆರೆ ಮಹೋತ್ಸವ*

ಮಾರ್ಚ್ 30, 2026

*ಶ್ರದ್ಧಾಭಕ್ತಿಯಿಂದ ಜರುಗಿದ ಕೆದಮುಳ್ಳೂರು ಶ್ರೀ ಭಗವತಿ ದೇವರ ವಾರ್ಷಿಕೋತ್ಸವ*

ಮಾರ್ಚ್ 30, 2026

*ಕೆದಮುಳ್ಳೂರು : ಏ.3 ಮತ್ತು 4 ರಂದು ಶ್ರೀ ಚಾಮುಂಡಿ ದೇವಿಯ ತೆರೆ ಮಹೋತ್ಸವ*

ಮಾರ್ಚ್ 30, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ವಿರಾಜಪೇಟೆ ಮಾ.30 NEWS DESK : ವಿರಾಜಪೇಟೆ ಸಮೀಪದ ಕೆದಮುಳ್ಳುರು ಗ್ರಾಮದಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ಶ್ರೀ ಚಾಮುಂಡಿ ದೇವಿಯ…

*ಶ್ರದ್ಧಾಭಕ್ತಿಯಿಂದ ಜರುಗಿದ ಕೆದಮುಳ್ಳೂರು ಶ್ರೀ ಭಗವತಿ ದೇವರ ವಾರ್ಷಿಕೋತ್ಸವ*

ಮಾರ್ಚ್ 30, 2026

*ಕುಡಿಯುವ ನೀರಿನ ಅಭಾವ : ಪೊನ್ನಂಪೇಟೆಯಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು*

ಮಾರ್ಚ್ 30, 2026

*ಎಮ್ಮೆಮಾಡು ಪ್ರಕರಣ : ಸಾಮಾಜಿಕ ಜಾಲತಾಣದ ಮೇಲೆ ನಿಗಾ ವಹಿಸಿರುವ ಕೊಡಗು ಪೊಲೀಸ್*

ಮಾರ್ಚ್ 30, 2026

*ಸೋಮವಾರಪೇಟೆ : ಮಹಿಳಾ ಸಂಘಗಳು ಮಹಿಳೆಯರ ಅಭಿವೃದ್ಧಿಗೆ ಸಹಕಾರಿ : ಸಾಹಿತಿ ಶ.ಗ.ನಯನತಾರ*

ಮಾರ್ಚ್ 30, 2026

*ಕೊಡಗು : ದೈವಕ್ಕೆ ಅಪಮಾನ ಆರೋಪ : ಸೂಕ್ತ ಕ್ರಮಕ್ಕೆ ಒತ್ತಾಯ*

ಮಾರ್ಚ್ 30, 2026

*ಭಗವಾನ್ ಮಹಾವೀರರ ಜೀವನ ಮತ್ತು ಬೋಧನೆಗಳು ಸಾರ್ವಕಾಲಿಕ : ವಾಣಿ ಪುಷ್ಪರಾಜ್*

ಮಾರ್ಚ್ 30, 2026

*ಕೂಡಿಗೆ ಸೈನಿಕ ಶಾಲೆಗೆ ನಿರ್ದೇಶಕರ ಭೇಟಿ*

ಮಾರ್ಚ್ 30, 2026

*”ಮುಕ್ಕಾಟಿರ ಕ್ರಿಕೆಟ್ ನಮ್ಮೆ” ಏ.3 ರಿಂದ ಆರಂಭ : 289 ತಂಡಗಳ ನಡುವೆ ಹಣಾಹಣಿ : ಮೇ 1 ರಂದು ಅಂತಿಮ ಪಂದ್ಯ*

ಮಾರ್ಚ್ 30, 2026

*ಏ.18 ಮತ್ತು 19 ರಂದು ಮಡಿಕೇರಿಯಲ್ಲಿ ರಾಜ್ಯ ಮಟ್ಟದ “ಮೊಗೇರ ಕ್ರೀಡಾಕೂಟ”*

ಮಾರ್ಚ್ 30, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.