Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಮೂರು ವರ್ಷಗಳ ಸಾಧನೆಯ ಶ್ವೇತಪತ್ರ ಹೊರಡಿಸಲಿ : ವಿರಾಜಪೇಟೆ ಬಿಜೆಪಿ ಸವಾಲು*
  • *ಆಮ್ ಆದ್ಮಿ ಪಾರ್ಟಿಯ ಕಚೇರಿ ಉದ್ಘಾಟನೆ : ರಾಜಕೀಯ ಪಕ್ಷಗಳಿಗೆ ಜನಸಾಮಾನ್ಯರ ಒಳಿತಿಗಿಂತ ಅಧಿಕಾರವೇ ಮುಖ್ಯವಾಗಿದೆ : ಕೆ.ಪಿ.ಬಾಲಸುಬ್ರಹ್ಮಣ್ಯ ಬೇಸರ*
  • *ಪುರುಷರ ರಾಷ್ಟ್ರೀಯ ಹಾಕಿ ಟೂರ್ನಿಗೆ ಕೊಡಗು ಜಿಲ್ಲಾ ಸರ್ಕಾರಿ ನೌಕರರ ತಂಡ ಆಯ್ಕೆ : ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಹಾಕಿ ಟೂರ್ನಿ*
  • *ಉತ್ತರ ಕೊಡಗು ಮುಸ್ಲಿಂ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎಂ.ಎಚ್.ಮುಸ್ತಫ ಹಾಜಿ, ಉಪಾಧ್ಯಕ್ಷರಾಗಿ ಎಂ.ಬಿ.ಕೌಸರ್ ಆಯ್ಕೆ*
  • *ಮುಂಗಾರು ಸಂದರ್ಭದಲ್ಲಿ ಅಗತ್ಯ ಮುನ್ನೆಚ್ಚರ ವಹಿಸಿ : ಡಾ.ಎನ್.ವಿ.ಪ್ರಸಾದ್ ಸೂಚನೆ*
  • *ಮರಗೋಡು ಗ್ರಾಮದಲ್ಲಿ ಅರೆಭಾಷೆ ಗ್ರಾಮೋತ್ಸವ : ಅರೆಭಾಷೆ ಕಲಿಕೆ ಮತ್ತು ಅಭಿವೃದ್ಧಿಗೆ ಮತ್ತಷ್ಟು ಶ್ರಮಿಸಿ: ಶಾಸಕ ಡಾ.ಮಂತರ್ ಗೌಡ*
  • *AI ಎನ್ನುವುದು ಕೇವಲ ತಂತ್ರಜ್ಞಾನದ ಚರ್ಚೆಯಲ್ಲ — ಇದು ಮೂಲಭೂತವಾಗಿ ನಂಬಿಕೆ, ಜವಾಬ್ದಾರಿ, ಪಾರದರ್ಶಕತೆ ಮತ್ತು ನಾಗರಿಕರ ಮೇಲಿನ ಪ್ರಭಾವ : ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್*
  • *ಪ್ರವಾಸೋದ್ಯಮ  ಸಂಘ-ಸಂಸ್ಥೆಗಳ ಸಭೆ : ಕೊಡಗಿನ ಆತಿಥ್ಯ ಪ್ರವಾಸೋದ್ಯಮದ ಬಗ್ಗೆ ಆದಾರರಹಿತ ಟೀಕೆಗಳಿಗೆ ಕಡಿವಾಣ ಅಗತ್ಯ : ದಿನೇಶ್ ಕಾಯ೯ಪ್ಪ*
  • *ಫೀ.ಮಾ.ಕಾರ್ಯಪ್ಪ ಕಾಲೇಜಿನ ವಾರ್ಷಿಕೋತ್ಸವ : 77 ವರ್ಷಗಳ ಸುದೀರ್ಘ ಸೇವೆಯಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಉತ್ತಮ ವೇದಿಕೆ ನೀಡಿದೆ : ಪ್ರೊ. ಅಶೋಕ್ ಸಂಗಪ್ಪ ಆಲೂರ ಮೆಚ್ಚುಗೆ*
  • *ಮೇ 29 ಮತ್ತು 30 ರಂದು 17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಗೋಮಾಳವನ್ನು ಗುತ್ತಿಗೆ ಆಧಾರದಲ್ಲಿ ಗೋಶಾಲೆಗೆ ಒದಗಿಸಿ : ಹ್ಯೂಮನ್ ರೈಟ್ಸ್ ಇಂಟರ್‌ನ್ಯಾಷನಲ್ ಫೆಡರೇಷನ್ ಒತ್ತಾಯ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಗೋಮಾಳವನ್ನು ಗುತ್ತಿಗೆ ಆಧಾರದಲ್ಲಿ ಗೋಶಾಲೆಗೆ ಒದಗಿಸಿ : ಹ್ಯೂಮನ್ ರೈಟ್ಸ್ ಇಂಟರ್‌ನ್ಯಾಷನಲ್ ಫೆಡರೇಷನ್ ಒತ್ತಾಯ*

ಆಗಷ್ಟ್ 14, 20243 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

 

ಮಡಿಕೇರಿ ಆ.14 NEWS DESK : ಜಿಲ್ಲೆಯ ಗೋಮಾಳ ಜಾಗವನ್ನು ಷರತ್ತು ಮುಖಾಂತರ ಗೋ ಶಾಲೆ ನಡೆಸುವವರಿಗೆ ಗುತ್ತಿಗೆ ನೀಡುವ ಮೂಲಕ ಗೋವುಗಳ ರಕ್ಷಣೆಗೆ ಜಿಲ್ಲಾಡಳಿತ ಮುಂದಾಗಬೇಕೆಂದು ಹ್ಯೂಮನ್ ರೈಟ್ಸ್ ಇಂಟರ್‍ನ್ಯಾಷನಲ್ ಫೆಡರೇಷನ್‍ನ ರಾಜ್ಯಾಧ್ಯಕ್ಷ ಹರೀಶ್ ಜಿ.ಆಚಾರ್ಯ ಒತ್ತಾಯಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗಿನಲ್ಲಿ ಬೀದಿ ಬದಿಯ ದನಗಳು ತೊಂದರೆ ಅನುಭವಿಸುತ್ತಿದ್ದು, ಮಡಿಕೇರಿಯ ಅಬ್ಬಿಫಾಲ್ಸ್ ರಸ್ತೆಯಲ್ಲಿ ಸರ್ಕಾರದ ಗೋಶಾಲೆ ಇದ್ದರೂ ಸಾರ್ವಜನಿಕರು, ರೈತರು ತಮಗೆ ಸಾಕಲು ಅಸಾಧ್ಯವಾದ ಗೋವುಗಳನ್ನು ಬಿಡಲು ಆಗುತ್ತಿಲ್ಲ. ಮಡಿಕೇರಿಯಲ್ಲಿ 24 ಎಕರೆ ಗೋಮಾಳ ಜಾಗವಿದ್ದರು ಅದರಲ್ಲಿ 8 ಎಕ್ರೆ ಜಾಗವನ್ನು ಗೋಶಾಲೆಗೆ ಬಳಸಿಕೊಳ್ಳಲಾಗಿದೆ. ಅಲ್ಲಿ ಗೋವುಗಳಿಗೆ ಶೆಡ್‍ಕಟ್ಟಿ 37 ಗೋವುಗಳಿಗೆ ಆಶ್ರಯ ಕಲ್ಲಿಸಲಾಗಿದೆ. ಆದರೆ ಗೋಶಾಲೆಯ ಅಭಿವೃದ್ಧಿಗಾಗಿ ಹಣ ಬಂದಿದ್ದರೂ ಈ 8 ಎಕ್ರೆ ಜಾಗಕ್ಕೆ ಗಿಡಮರಗಳಿಂದಲೇ ಬೇಲಿ ಹಾಕಬೇಕು ಎಂಬ ನಿಯಮವಿದೆ ಹೊರತು ತಂತಿ ಬೇಲಿ ಹಾಕಲು ಅನುಮತಿ ಇಲ್ಲದಾಗಿದೆ ಎಂದು ಟೀಕಿಸಿದರು. ರೈತರು ಸಾಕಲು ಅಸಾಧ್ಯವಾದ ಗೋವುಗಳನ್ನು ತಂದು ಜಿಲ್ಲೆಯ ಸಂಪಾಜೆ, ಮಡಿಕೇರಿ ಮತ್ತು ಕುಶಾಲನಗರ ರಸ್ತೆಗಳಲ್ಲಿ ಬಿಟ್ಟು ಹೋಗುತ್ತಿದ್ದು, ಸಂಚಾರಕ್ಕೆ ಸಮಸ್ಯೆ ಉಂಟಾಗುತ್ತಿದೆ. ವಾಹನಗಳಿಂದ ಅಪಘಾತಕ್ಕೊಳಗಾಗಿ ಮೃತಪಡುತ್ತಿರುವ ಸಂಖ್ಯೆ ಹೆಚ್ಚಾಗಿದೆ. ಅಲ್ಲದೇ ಗೋ ಕಳ್ಳರಿಗೆ ಇದರಿಂದ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದರು.
ಈ ಹಿಂದೆ ಗೋವುಗಳನ್ನು ಗೋ ರಕ್ಷಕರು ಅಥವಾ ಪೊಲೀಸ್ ಇಲಾಖೆಯು ವಶ ಪಡಿಸಿಕೊಂಡಾಗ ಕೊಡಗಿನ ಶ್ರೀ ಕೃಷ್ಣ ಗೋಶಾಲೆಗೆ ಅಥವಾ ಹೊರಗಿನ ಗೋಶಾಲೆಗಳಲ್ಲಿ ಗೋವುಗಳನ್ನು ಬೀಡುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಹೊರ ಜಿಲ್ಲೆಯ ಗೋಶಾಲೆಗಳಲ್ಲಿ ಗೋವುಗಳನ್ನು ಸ್ವೀಕರಿಸದೆ ನಿಮ್ಮ ಜಿಲ್ಲೆಯಲ್ಲಿಯೇ ಬಿಡಿ ಎಂದು ಹೇಳಿ ಕಳುಹಿಸಲಾಗುತ್ತಿದೆ. ಕೊಡಗಿನಲ್ಲಿ ಗೋವುಗಳನ್ನು ಪಾಲನೆ ಮಾಡಲು ಜಾಗವಿಲ್ಲದಾಗ ಪೊಲೀಸ್ ಇಲಾಖೆಯವರು ವಶ ಪಡಿಸಿಕೊಂಡ ಗೋವುಗಳನ್ನು ಎಲ್ಲಿ ಬಿಡಲು ಸಾಧ್ಯ ಎಂದು ಪ್ರಶ್ನಿಸಿದರು. ಕೊಡಗಿನಲ್ಲಿರುವ ಗೋಮಾಳ ಜಾಗಗಳನ್ನು ಷರತ್ತು ಮುಖಾಂತರ ಗೋ ಶಾಲೆ ನಡೆಸುವವರಿಗೆ ಬೋಗ್ಯಕ್ಕೆ ನೀಡಿದರೆ ಗೋವುಗಳನ್ನು ಸುರಕ್ಷಿತವಾಗಿರಸಬಹುದು. ಅಲ್ಲದೇ ಈಗ ಇರುವ ಸರ್ಕಾರಿ ಗೋ ಶಾಲೆಯನ್ನು ಗೋಶಾಲೆ ನಡೆಸುವವರಿಗೆ ಬೋಗ್ಯಕ್ಕೆ ನೀಡಿದರೆ ಗೋವುಗಳಿಂದ ಆಗುತ್ತಿರುವ ತೊಂದರೆಯನ್ನು ಮತ್ತು ರೈತರ ಸಮಸ್ಯೆಯನ್ನು ಪರಿಹರಿಸಲು ಸಾಧ್ಯ ಎಂದು ಹೇಳಿದರು.
ಜಿಲ್ಲೆಯಲ್ಲಿ ಮಳೆಯಿಂದಾಗಿ ಅಲ್ಲಲ್ಲಿ ಬರೆಕುಸಿತ, ಮಣ್ಣು ಕುಸಿತಗೊಳ್ಳುತ್ತಿದ್ದು, ಅಪಾರ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ. ಹೀಗಿರುವಾಗ ಅಪಾಯದ ಅಂಚಿನಲ್ಲಿರುವ ಬೆಟ್ಟದ ಮೇಲೆ ಹೋಂಸ್ಟೇ, ರೆಸಾರ್ಟ್ ಗಳ ನಿರ್ಮಾಣಕ್ಕೆ ಜಿಲ್ಲಾಡಳಿತ ಅನುಮತಿ ನೀಡುತ್ತಿರುವುದು ಸರಿಯಾದ ಕ್ರಮವಲ್ಲ. ಇದು ಮುಂದುವರೆದಲ್ಲಿ ಮುಂದಿನ ದಿನಗಳಲ್ಲಿ ಕೊಡಗು ಕೂಡ ಕಾಂಕ್ರೀಟ್ ಕಾಡಾಗುವುದರಲ್ಲಿ ಸಂಶಯವಿಲ್ಲ ಎಂದರು. ತೋಟಗಳಲ್ಲಿ ಇರುವ ಮರಗಳನ್ನು ಹೋರತು ಪಡಿಸಿ ಕಾಡಿನಲ್ಲಿರುವ ಮರಗಳ ತೆರವಿಗೆ ಅನುಮತಿ ನೀಡಬಾರದು. ಆದ್ದರಿಂದ ಜಿಲ್ಲಾಡಳಿತ ಇಂತವುಗಳಿಗೆ ಅನುಮತಿ ನೀಡಬಾರದು. ತಪ್ಪಿದ್ದಲ್ಲಿ ಸಂಸ್ಥೆ ನ್ಯಾಯಾಲಯದ ಮೊರೆ ಹೋಗಲಿದೆ ಎಂದು ಎಚ್ಚರಿಕೆ ನೀಡಿದರು. ಈಗಾಗಲೇ ಜಿಲ್ಲೆಯ ವಿವಿಧೆಡೆ ಕಾಡಾನೆಗಳು ನಾಡಿಗೆ ಲಗ್ಗೆ ಇಟ್ಟು ಅಪಾರ ಪ್ರಮಾಣದ ಹಾನಿ ಉಂಟುಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಕಾಡುಪ್ರಾಣಿಗಳು ನಾಡಿಗೆ ಲಗ್ಗೆ ಇಡಲಿದೆ. ಆದ್ದರಿಂದ ಅರಣ್ಯ ಇಲಾಖೆ ಟೀಕ್ ಮರಗಳನ್ನು ತೆಗೆದು ಪ್ರಾಣಿ ಪಕ್ಷಿಗಳಿಗೆ, ಆನೆಗಳಿಗೆ ಆಹಾರವನ್ನು ನೀಡುವ ಮರಗಳನ್ನು ಕಾಡಿನಲ್ಲಿ ಬೆಳೆಸಬೇಕೆಂದು ಮನವಿ ಮಾಡಿದರು. ಕೊಡಗಿನ ವಿವಿಧ ನಗರಗಳಲ್ಲಿ ಬೀದಿ ನಾಯಿಗಳ ಕಾಟ ಮೀತಿಮೀರಿದ್ದು ಸಾರ್ವಜನಿಕರು ಆತಂಕದಲ್ಲಿ ನಡೆದಾಡುವಂತಾಗಿದೆ. ನಗರ ಸಭೆಯ ಅಧಿಕಾರಿಗಳಿಗೆ ಈ ಬಗ್ಗೆ ಕ್ರಮ ಕೈಗೊಳ್ಳಲು ಮನವಿ ಮಾಡಿದರೆ ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ ಮಾಡಿ ಬಿಡುತ್ತೇವೆ ಎಂದು ಹೇಳುತ್ತಲೇ ಕಾಲ ಹರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಹರೀಶ್ ಆಚಾರ್ಯ, ಅಧಿಕಾರಿಗಳಿಗೆ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಾಗದಿದ್ದರೆ ಖಾಸಗಿಯವರಿಗೆ ಒಪ್ಪಂದದ ಮೇರೆಗೆ ಹಣ ನೀಡಿ ನಾಯಿಗಳಿಗೆ ಸಂತನ ಹರಣ ಚಿಕಿತ್ಸೆ ನೀಡಲು ಮುಂದಾಗಲಿ ಎಂದರು. ಮಡಿಕೇರಿ ನಗರದಲ್ಲಿ ಮತ್ತು ಕೊಡಗಿನ ಎಲ್ಲಾ ರಸ್ತೆಗಳು ಹದಗೆಟ್ಟಿದ್ದು, ಸಮರ್ಪಕವಾಗಿ ಚರಂಡಿ ವ್ಯವಸ್ಥೆಗಳಿಲ್ಲದೆ ಮಳೆಯ ನೀರು ರಸ್ತೆಯಲ್ಲಿ ನಿಂತು ರಸ್ತೆ ಗುಂಡಿಮಯವಾಗುತ್ತಿದೆ. ಆದ್ದರಿಂದ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ರಸ್ತೆ ಬದಿಯಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸಲು ಅಥವಾ ಚರಂಡಿಗಳ ಸ್ವಚ್ಚಗೊಳಿಸಲು ಕ್ರಮ ಕೈಗೊಳ್ಳಬೇಕು ಮತ್ತು ರಸ್ತೆ ನಿರ್ಮಾಣದ ಸಂದರ್ಭ ಕಳಪೆ ಕಾಮಗಾರಿ ನಡೆಯಂತೆ ಎಚ್ಚರ ವಹಿಸಬೇಕು ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಫೆಡರೇಷನ್‍ನ ಜಿಲ್ಲಾಧ್ಯಕ್ಷ ಪಿ.ಎಸ್.ಭರತ್, ಕಾರ್ಯದರ್ಶಿ ಸೋಮನಾಥ್, ಸಲಹೆಗಾರ ಚೌರೀರ ರಮೇಶ್ ಕಾವೇರಪ್ಪ, ಸದಸ್ಯ ಅಮ್ಮಾಟಂಡ ಪೆಮ್ಮಯ್ಯ, ವಿರಾಜಪೇಟೆ ತಾಲ್ಲೂಕು ಅಧ್ಯಕ್ಷ ಪಟ್ಟಡ ವಿಕ್ರಂ ಚಂಗಪ್ಪ ಹಾಜರಿದ್ದರು.

 

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಮೂರು ವರ್ಷಗಳ ಸಾಧನೆಯ ಶ್ವೇತಪತ್ರ ಹೊರಡಿಸಲಿ : ವಿರಾಜಪೇಟೆ ಬಿಜೆಪಿ ಸವಾಲು*

ಮೇ 27, 2026

*ಆಮ್ ಆದ್ಮಿ ಪಾರ್ಟಿಯ ಕಚೇರಿ ಉದ್ಘಾಟನೆ : ರಾಜಕೀಯ ಪಕ್ಷಗಳಿಗೆ ಜನಸಾಮಾನ್ಯರ ಒಳಿತಿಗಿಂತ ಅಧಿಕಾರವೇ ಮುಖ್ಯವಾಗಿದೆ : ಕೆ.ಪಿ.ಬಾಲಸುಬ್ರಹ್ಮಣ್ಯ ಬೇಸರ*

ಮೇ 27, 2026

*ಪುರುಷರ ರಾಷ್ಟ್ರೀಯ ಹಾಕಿ ಟೂರ್ನಿಗೆ ಕೊಡಗು ಜಿಲ್ಲಾ ಸರ್ಕಾರಿ ನೌಕರರ ತಂಡ ಆಯ್ಕೆ : ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಹಾಕಿ ಟೂರ್ನಿ*

ಮೇ 27, 2026

*ಆಮ್ ಆದ್ಮಿ ಪಾರ್ಟಿಯ ಕಚೇರಿ ಉದ್ಘಾಟನೆ : ರಾಜಕೀಯ ಪಕ್ಷಗಳಿಗೆ ಜನಸಾಮಾನ್ಯರ ಒಳಿತಿಗಿಂತ ಅಧಿಕಾರವೇ ಮುಖ್ಯವಾಗಿದೆ : ಕೆ.ಪಿ.ಬಾಲಸುಬ್ರಹ್ಮಣ್ಯ ಬೇಸರ*

ಮೇ 27, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ NEWS DESK ಮೇ 27 : ರಾಜಕೀಯ ಪಕ್ಷಗಳಿಗೆ ಜನಸಾಮಾನ್ಯರ ಒಳಿತಿಗಿಂತ ಅಧಿಕಾರವೇ ಮುಖ್ಯವಾಗಿದೆ. ಜನರ ಜೀವನ ಹಾಳಾದರೂ…

*ಪುರುಷರ ರಾಷ್ಟ್ರೀಯ ಹಾಕಿ ಟೂರ್ನಿಗೆ ಕೊಡಗು ಜಿಲ್ಲಾ ಸರ್ಕಾರಿ ನೌಕರರ ತಂಡ ಆಯ್ಕೆ : ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಹಾಕಿ ಟೂರ್ನಿ*

ಮೇ 27, 2026

*ಉತ್ತರ ಕೊಡಗು ಮುಸ್ಲಿಂ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎಂ.ಎಚ್.ಮುಸ್ತಫ ಹಾಜಿ, ಉಪಾಧ್ಯಕ್ಷರಾಗಿ ಎಂ.ಬಿ.ಕೌಸರ್ ಆಯ್ಕೆ*

ಮೇ 27, 2026

*ಮುಂಗಾರು ಸಂದರ್ಭದಲ್ಲಿ ಅಗತ್ಯ ಮುನ್ನೆಚ್ಚರ ವಹಿಸಿ : ಡಾ.ಎನ್.ವಿ.ಪ್ರಸಾದ್ ಸೂಚನೆ*

ಮೇ 26, 2026

*ಮರಗೋಡು ಗ್ರಾಮದಲ್ಲಿ ಅರೆಭಾಷೆ ಗ್ರಾಮೋತ್ಸವ : ಅರೆಭಾಷೆ ಕಲಿಕೆ ಮತ್ತು ಅಭಿವೃದ್ಧಿಗೆ ಮತ್ತಷ್ಟು ಶ್ರಮಿಸಿ: ಶಾಸಕ ಡಾ.ಮಂತರ್ ಗೌಡ*

ಮೇ 26, 2026

*AI ಎನ್ನುವುದು ಕೇವಲ ತಂತ್ರಜ್ಞಾನದ ಚರ್ಚೆಯಲ್ಲ — ಇದು ಮೂಲಭೂತವಾಗಿ ನಂಬಿಕೆ, ಜವಾಬ್ದಾರಿ, ಪಾರದರ್ಶಕತೆ ಮತ್ತು ನಾಗರಿಕರ ಮೇಲಿನ ಪ್ರಭಾವ : ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್*

ಮೇ 26, 2026

*ಪ್ರವಾಸೋದ್ಯಮ  ಸಂಘ-ಸಂಸ್ಥೆಗಳ ಸಭೆ : ಕೊಡಗಿನ ಆತಿಥ್ಯ ಪ್ರವಾಸೋದ್ಯಮದ ಬಗ್ಗೆ ಆದಾರರಹಿತ ಟೀಕೆಗಳಿಗೆ ಕಡಿವಾಣ ಅಗತ್ಯ : ದಿನೇಶ್ ಕಾಯ೯ಪ್ಪ*

ಮೇ 26, 2026

*ಫೀ.ಮಾ.ಕಾರ್ಯಪ್ಪ ಕಾಲೇಜಿನ ವಾರ್ಷಿಕೋತ್ಸವ : 77 ವರ್ಷಗಳ ಸುದೀರ್ಘ ಸೇವೆಯಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಉತ್ತಮ ವೇದಿಕೆ ನೀಡಿದೆ : ಪ್ರೊ. ಅಶೋಕ್ ಸಂಗಪ್ಪ ಆಲೂರ ಮೆಚ್ಚುಗೆ*

ಮೇ 26, 2026

*ಮೇ 29 ಮತ್ತು 30 ರಂದು 17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ*

ಮೇ 26, 2026

*ಮಡಿಕೇರಿ ನಗರಸಭೆಯ ಬಿಜೆಪಿ ಆಡಳಿತ ಮಂಡಳಿ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ* 

ಮೇ 26, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.