Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಸಂಪಾಜೆ: ಪ್ರಪಂಚಕ್ಕೆ ತಾಯಿ, ಮಗುವಿಗೆ ತಾಯಿಯೇ ಪ್ರಪಂಚ : ಜಯಲಕ್ಷ್ಮಿ ಅಭಿಮತ*
  • *ಸುಂಟಿಕೊಪ್ಪದಲ್ಲಿ ಕರವೇ ಸ್ವಾಭಿಮಾನಿ ಸೇನೆ ಹೋಬಳಿ ಘಟಕ ಉದ್ಘಾಟನೆ; ಹೊಸ ಸದಸ್ಯರ ಸೇರ್ಪಡೆ ಬಳಿಕ ಮಾದಾಪುರ ರಸ್ತೆಯ ಗುಂಡಿ ಮುಚ್ಚಿ ಸಮಾಜಮುಖಿ ಕಾರ್ಯ*
  • *ಕ.ಸಾ.ಪ. ವತಿಯಿಂದ ಕುಶಾಲನಗರ ಸರ್ಕಾರಿ ಪ್ರೌಢಶಾಲೆಯಲ್ಲಿ ಕೆ.ಟಿ. ಸುಬ್ಬರಾವ್ ದತ್ತಿ ಕಾರ್ಯಕ್ರಮ; ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕೊಡಗಿನ ಕೊಡುಗೆ ಅಪಾರ: ಉ.ರಾ. ನಾಗೇಶ್*
  • *ಪ್ರಮುಖ ಪ್ರವಾಸಿ ತಾಣಗಳಲ್ಲಿ ಮೂಲ ಸೌಕರ್ಯ ಕಲ್ಪಿಸಿ : ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್*
  • *ಕೊಡಗು : ಪರಿಸರ ಸ್ನೇಹಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿ : ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್*
  • *ಮಡಿಕೇರಿಯಲ್ಲಿ ಅರಣ್ಯ ಹುತಾತ್ಮರ ಸ್ಮಾರಕಕ್ಕೆ ಗಣ್ಯರಿಂದ ಗೌರವ ನಮನ*
  • *ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ :  ಅರಣ್ಯ ಮತ್ತು ಪರಿಸರ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಿ: ಜಿಲ್ಲಾಧಿಕಾರಿ ಸೋಮಖಶೇಖರ್*
  • *ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಕಾವೇರಿ ಶಾಲೆಯ ತ್ರೋಬಾಲ್ ತಂಡ ರನ್ನರ್ಸ್*
  • ಸೋಮವಾರಪೇಟೆ ಹೋಮ್‌ಸ್ಟೇ ಅಸೋಸಿಯೇಷನ್‌ನಿಂದ ಕಾಸರಗೋಡು–ಕಣ್ಣೂರು ಅಧ್ಯಯನ ಪ್ರವಾಸ*
  • *ಕಸ್ತೂರಿ ರಂಗನ್ ವರದಿ ವಿರೋಧಿಸಿ ಮಡಿಕೇರಿಯಲ್ಲಿ ಬೃಹತ್ ರೈತ ಪ್ರತಿಭಟನೆ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಸೋಮವಾರಪೇಟೆಯಲ್ಲಿ ವಿಶ್ವ ಹಿಂದೂ ಪರಿಷತ್‍ನಿಂದ ಸಂಸ್ಥಾಪನಾ ದಿನ ಆಚರಣೆ : ಹಿಂದೂ ಸಂಸ್ಕಾರವನ್ನು ಹಿಂದೂಗಳೇ ಅಗೌರವದಿಂದ ಕಾಣುವುದು ದುರಂತ : ದೇಶಿಕೇಂದ್ರದ ಸ್ವಾಮೀಜಿ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಸೋಮವಾರಪೇಟೆಯಲ್ಲಿ ವಿಶ್ವ ಹಿಂದೂ ಪರಿಷತ್‍ನಿಂದ ಸಂಸ್ಥಾಪನಾ ದಿನ ಆಚರಣೆ : ಹಿಂದೂ ಸಂಸ್ಕಾರವನ್ನು ಹಿಂದೂಗಳೇ ಅಗೌರವದಿಂದ ಕಾಣುವುದು ದುರಂತ : ದೇಶಿಕೇಂದ್ರದ ಸ್ವಾಮೀಜಿ*

ಸೆಪ್ಟೆಂಬರ್ 3, 20242 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಸೋಮವಾರಪೇಟೆ ಸೆ.3 NEWS DESK : ವಿಶ್ವದಲ್ಲಿಯೇ ಶ್ರೇಷ್ಠ ಎನಿಸಿಕೊಂಡಿರುವ ಹಿಂದೂ ಸಂಸ್ಕಾರ ಪದ್ಧತಿಯನ್ನು ಹಿಂದುಗಳಾದ ನಾವುಗಳೇ ಅಗೌರವಿಸುತ್ತಿರುವುದು ನಮ್ಮ ದುರಂತ ಎಂದು ವಿರಕ್ತ ಮಠದ ಮಠಾಧೀಶರಾದ ಶ್ರೀ ನಿಶ್ಚಲ ನಿರಂಜನ ದೇಶಿಕೇಂದ್ರ ಮಹಾಸ್ವಾಮಿಗಳು ವಿಷಾದ ವ್ಯಕ್ತಪಡಿಸಿದರು. ಸೋಮವಾರಪೇಟೆ ಕೊಡವ ಸಮಾಜದಲ್ಲಿ ವಿಶ್ವ ಹಿಂದೂ ಪರಿಷದ್ ಸೋಮವಾರಪೇಟೆ ಪ್ರಖಂಡದ ವತಿಯಿಂದ ನಡೆದ ವಿಶ್ವ ಹಿಂದೂ ಪರಿಷದ್‍ನ ಸ್ಥಾಪನಾ ದಿನ ಹಾಗೂ ಷಷ್ಟಿ ಪೂರ್ತಿ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ನಮ್ಮ ಧರ್ಮ ಮತ್ತು ಆಚರಣೆಗಳನ್ನು ನಮ್ಮವರೇ ತೆಗಳುವುದರಿಂದ ನಮ್ಮ ದೇಶದಲ್ಲಿಯೇ ಹಿಂದೂ ಧರ್ಮಕ್ಕೆ ಧಕ್ಕೆ ಬರುತ್ತಿದೆ. ಇಂತಹ ಕಾರ್ಯಗಳು ಮುಂದುವರಿಯುತ್ತಾ ಹೋದರೆ ಹಿಂದುತ್ವದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡುವ ಅನಿವಾರ್ಯತೆ ಬರಲಿದೆ. ಈ ವರೆಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘ, ವಿ.ಹಿಂ.ಪ. ಮಠ ಮಾನ್ಯಗಳು ಹಿಂದೂ ಧರ್ಮವನ್ನು ರಕ್ಷಿಸುತ್ತಾ ಬರುತ್ತಿದೆ. ಮುಂದೆ ನಮ್ಮಲ್ಲಿನ ನ್ಯೂನತೆಗಳನ್ನು ಸರಿಪಡಿಸಿಕೊಂಡು ಎಲ್ಲಾರೂ ಸಂಘಿಗಳಾಗುವ ಮೂಲಕ ಹಿಂದೂ ಧರ್ಮ ಹಾಗೂ ಸಂಸ್ಕಾರವನ್ನು ಗೌರವಿಸುವಂತಾಗಬೇಕೆಂದರು. ವಿ.ಹಿಂ.ಪ. ನ ಜಿಲ್ಲಾ ಬೌದ್ಧಿಕ್ ಪ್ರಮುಖ್ ಚಿ.ನಾ.ಸೋಮೇಶ್ ಮಾತನಾಡಿ, 1964ರ ಆಗಸ್ಟ್ 29ರಂದು ಮುಂಬೈನಲ್ಲಿ ವಿ.ಹಿಂ.ಪ. ಸ್ಥಾಪನೆಯಾಯಿತು. ಇದರ ಸ್ಥಾಪನೆಗೆ ಬಾಬಾ ಅಮ್ಟೆಯವರು ಮೂಲ ಕಾರಣಿ ಪುರುಷರಾಗಿದ್ದರು. ಅಂದಿನಿಂದ ಸಮಾಜದಲ್ಲಿನ ಹಲವಾರು ಸಮಸ್ಯೆಗಳಿಗೆ ತಕ್ಕ ಉತ್ತರ ನೀಡುತ್ತಾ, ಹಿಂದೂ ಸಮಾಜವನ್ನು ಉಳಿಸಿ, ಬೆಳೆಸುವ ಕಾರ್ಯ ಮಾಡುತ್ತಾ ಬರುತ್ತಿದೆ ಎಂದು ಹೇಳಿದರು. ಮೀನುಗಾರಿಕಾ ಇಲಾಖೆಯ ನಿರ್ದೇಶಕಿ ಮಿಲನ ಭರತ್ ಮಾತನಾಡಿ, ಶ್ರೀಕೃಷ್ಣ ಹುಟ್ಟಿದ ದಿನವೇ ವಿ.ಹಿಂ.ಪರಿಷತ್ ಸ್ಥಾಪನೆಯಾಯಿತು. ಶ್ರೀ ಕೃಷ್ಣ ಪರಮಾತ್ಮನಿಗೆ ದೊಡ್ಡ ಆರಾಧನೆ ಮಾಡದೆ ಕೇವಲ ಪ್ರೀತಿಸಿ, ಭಜಿಸಿದರೆ ಸಾಕು ಆತನ ಕೃಪೆಗೆ ಪಾತ್ರರಾಗಬಹುದು. ಈ ದಿನ ಮಕ್ಕಳಿಗೆ ಶ್ರೀ ಕೃಷ್ಣನ ವೇಷ ಹಾಕುವ ಮೂಲಕ ನಾವು ಪರಮಾತ್ಮನನ್ನು ಕಾಣುತ್ತಿದ್ದೇವೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿ.ಹಿಂ.ಪ.ನ ಸೋಮವಾರಪೇಟೆ ಪ್ರಖಂಡದ ಅಧ್ಯಕ್ಷ ಎ.ಎಸ್.ಮಲ್ಲೇಶ್, ಪರಿಷದ್ ಬೆಳೆದು ಬಂದ ಹಾದಿಯನ್ನು ವಿವರಿಸಿದರು. ಚೌಡ್ಲು ಪ್ರಾ.ಕೃ.ಪ.ಸ. ಸಂಘದ ನಿವೃತ್ತ ನೌಕರ ಹೆಚ್.ಹೆಚ್.ಹೂವಯ್ಯ ಹಾಜರಿದ್ದರು. ವಿದ್ಯಾರ್ಥಿನಿ ಶ್ರೀ ಲಕ್ಷ್ಮಿ ಪ್ರಾರ್ಥಿಸಿದರು. ಜಿಲ್ಲಾ ಸತ್ಸಂಗ ಪ್ರಮುಖ್ ಪವಿತ್ರಾ ಶೇಷಾದ್ರಿ ನಿರೂಪಿಸಿದರು. ಪ್ರಖಂಡದ ದುರ್ಗಾವಾಹಿನಿ ಪ್ರಮುಖ್ ಭಾನುಮತಿ ಆದರ್ಶ್ ಸ್ವಾಗತಿಸಿದರು. ವಿಧಿ ಪ್ರಕೋಷ್ಠದ ಸಂಚಾಲಕ ವಕೀಲ ಹೆಮಂತ್ ವಂದಿಸಿದರು. 1 ರಿಂದ 7ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಶ್ರೀ ಕೃಷ್ಣ ರಾಧೆಯರ ಛಧ್ಮವೇಷ ಸ್ಪರ್ಧೆಯನ್ನು ಆಯೋಜಿಸಿ ಬಹುಮಾನ ಹಾಗೂ ಪ್ರಶಸ್ತಿಪತ್ರಗಳನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ವಿ.ಹಿಂ.ಪ.ನ ಜಿಲ್ಲಾಧ್ಯಕ್ಷ ಸಿ.ಕೆ. ಬೋಪಣ್ಣ, ಜಿಲ್ಲಾ ಸಮಿತಿಯ ಪರಮೇಶ್ ಕೂತಿ, ತಾಲೂಕು ಸಮಿತಿಯ ಸಿ.ಎಸ್.ನಾಗರಾಜ್, ಮಾಜಿ ಶಾಸಕ ಅಪ್ಪಚ್ಚುರಂಜನ್ ಹಾಗೂ ಇತರರು ಪಾಲ್ಗೊಂಡಿದ್ದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಸಂಪಾಜೆ: ಪ್ರಪಂಚಕ್ಕೆ ತಾಯಿ, ಮಗುವಿಗೆ ತಾಯಿಯೇ ಪ್ರಪಂಚ : ಜಯಲಕ್ಷ್ಮಿ ಅಭಿಮತ*

ಸೆಪ್ಟೆಂಬರ್ 11, 2026

*ಸುಂಟಿಕೊಪ್ಪದಲ್ಲಿ ಕರವೇ ಸ್ವಾಭಿಮಾನಿ ಸೇನೆ ಹೋಬಳಿ ಘಟಕ ಉದ್ಘಾಟನೆ; ಹೊಸ ಸದಸ್ಯರ ಸೇರ್ಪಡೆ ಬಳಿಕ ಮಾದಾಪುರ ರಸ್ತೆಯ ಗುಂಡಿ ಮುಚ್ಚಿ ಸಮಾಜಮುಖಿ ಕಾರ್ಯ*

ಸೆಪ್ಟೆಂಬರ್ 11, 2026

*ಕ.ಸಾ.ಪ. ವತಿಯಿಂದ ಕುಶಾಲನಗರ ಸರ್ಕಾರಿ ಪ್ರೌಢಶಾಲೆಯಲ್ಲಿ ಕೆ.ಟಿ. ಸುಬ್ಬರಾವ್ ದತ್ತಿ ಕಾರ್ಯಕ್ರಮ; ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕೊಡಗಿನ ಕೊಡುಗೆ ಅಪಾರ: ಉ.ರಾ. ನಾಗೇಶ್*

ಸೆಪ್ಟೆಂಬರ್ 11, 2026

*ಸುಂಟಿಕೊಪ್ಪದಲ್ಲಿ ಕರವೇ ಸ್ವಾಭಿಮಾನಿ ಸೇನೆ ಹೋಬಳಿ ಘಟಕ ಉದ್ಘಾಟನೆ; ಹೊಸ ಸದಸ್ಯರ ಸೇರ್ಪಡೆ ಬಳಿಕ ಮಾದಾಪುರ ರಸ್ತೆಯ ಗುಂಡಿ ಮುಚ್ಚಿ ಸಮಾಜಮುಖಿ ಕಾರ್ಯ*

ಸೆಪ್ಟೆಂಬರ್ 11, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಸುಂಟಿಕೊಪ್ಪ, NEWS DESK ಸೆ. 11: ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ಕೊಡಗು ಜಿಲ್ಲೆಯ ಸುಂಟಿಕೊಪ್ಪ ಹೋಬಳಿ ಘಟಕದ…

*ಕ.ಸಾ.ಪ. ವತಿಯಿಂದ ಕುಶಾಲನಗರ ಸರ್ಕಾರಿ ಪ್ರೌಢಶಾಲೆಯಲ್ಲಿ ಕೆ.ಟಿ. ಸುಬ್ಬರಾವ್ ದತ್ತಿ ಕಾರ್ಯಕ್ರಮ; ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕೊಡಗಿನ ಕೊಡುಗೆ ಅಪಾರ: ಉ.ರಾ. ನಾಗೇಶ್*

ಸೆಪ್ಟೆಂಬರ್ 11, 2026

*ಪ್ರಮುಖ ಪ್ರವಾಸಿ ತಾಣಗಳಲ್ಲಿ ಮೂಲ ಸೌಕರ್ಯ ಕಲ್ಪಿಸಿ : ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್*

ಸೆಪ್ಟೆಂಬರ್ 11, 2026

*ಕೊಡಗು : ಪರಿಸರ ಸ್ನೇಹಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿ : ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್*

ಸೆಪ್ಟೆಂಬರ್ 11, 2026

*ಮಡಿಕೇರಿಯಲ್ಲಿ ಅರಣ್ಯ ಹುತಾತ್ಮರ ಸ್ಮಾರಕಕ್ಕೆ ಗಣ್ಯರಿಂದ ಗೌರವ ನಮನ*

ಸೆಪ್ಟೆಂಬರ್ 11, 2026

*ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ :  ಅರಣ್ಯ ಮತ್ತು ಪರಿಸರ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಿ: ಜಿಲ್ಲಾಧಿಕಾರಿ ಸೋಮಖಶೇಖರ್*

ಸೆಪ್ಟೆಂಬರ್ 11, 2026

*ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಕಾವೇರಿ ಶಾಲೆಯ ತ್ರೋಬಾಲ್ ತಂಡ ರನ್ನರ್ಸ್*

ಸೆಪ್ಟೆಂಬರ್ 11, 2026

ಸೋಮವಾರಪೇಟೆ ಹೋಮ್‌ಸ್ಟೇ ಅಸೋಸಿಯೇಷನ್‌ನಿಂದ ಕಾಸರಗೋಡು–ಕಣ್ಣೂರು ಅಧ್ಯಯನ ಪ್ರವಾಸ*

ಸೆಪ್ಟೆಂಬರ್ 11, 2026

*ಕಸ್ತೂರಿ ರಂಗನ್ ವರದಿ ವಿರೋಧಿಸಿ ಮಡಿಕೇರಿಯಲ್ಲಿ ಬೃಹತ್ ರೈತ ಪ್ರತಿಭಟನೆ*

ಸೆಪ್ಟೆಂಬರ್ 11, 2026

*ಕೊಡಗಿನಲ್ಲಿ ಧ್ವನಿವರ್ಧಕಗಳಿಗೆ ‘ಪ್ರೆಶರ್ ಮಿಡ್’ ಬಳಕೆ ನಿಷೇಧ*

ಸೆಪ್ಟೆಂಬರ್ 11, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.