



ಮಡಿಕೇರಿ ಸೆ.14 NEWS DESK : ಮಡಿಕೇರಿ ನಗರಸಭೆಗೆ ನೂತನ ಪೌರಾಯುಕ್ತರಾಗಿ ಹೆಚ್.ಆರ್.ರಮೇಶ್ ಅವರನ್ನು ನೇಮಕಗೊಳಿಸಿ ಕರ್ನಾಟಕ ಸರ್ಕಾರದ ಅಧೀನ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದಾರೆ. ಕರ್ತವ್ಯದಲ್ಲಿದ್ದ ವಿಜಯ ಅವರನ್ನು ಸಕ್ಷಮ ಪ್ರಾಧಿಕಾರಕ್ಕೆ ಹಿಂಪಡೆದ ಹಿನ್ನೆಲೆ ತೆರವಾದ ಸ್ಥಾನಕ್ಕೆ ರಮೇಶ್ ಅವರನ್ನು ನಿಯೋಜಿಸಲಾಗಿದೆ. ರಮೇಶ್ ಅವರು ಈ ಹಿಂದೆ ಮಡಿಕೇರಿ ನಗರಸಭೆಯಲ್ಲಿ ಆರೋಗ್ಯಾಧಿಕಾರಿ, ಕಂದಾಯಾಧಿಕಾರಿಯಾಗಿ, ಸೋಮವಾರಪೇಟೆ, ವಿರಾಜಪೇಟೆ ತಾಲ್ಲೂಕು ಸ್ಥಳೀಯಾಡಳಿತದ ಮುಖ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸಿ, ಹುಣಸೂರು ನಗರಸಭೆ ಕಮೀಷನರ್ ಆಗಿ, ಮೈಸೂರು ಕಾರ್ಪೋರೇಷನ್ ನೋಡೆಲ್ ಅಧಿಕಾರಿಯಾಗಿ, ದಕ್ಷಿಣ ಕನ್ನಡದ ವಿಟ್ಲ ಪುರಸಭೆಯ ಮುಖ್ಯಾಧಿಕಾರಿಯಾಗಿ, ಸಕಲೇಶಪುರ ನಗರಸಭೆಯಲ್ಲಿ ಕಮೀಷನರ್ ಆಗಿ ಕೆಲಸ ಮಾಡಿ ಇದೀಗ ನಗರಸಭೆಯ ಪೌರಾಯುಕ್ತರಾಗಿ ನೇಮಕಗೊಂಡಿದ್ದಾರೆ. ವಿಜಯ ಅವರ ವರ್ಗಾವಣೆಗೆ ಈ ಹಿಂದೆ ನಗರಸಭೆಯ ಎಲ್ಲಾ ಸದಸ್ಯರು ಒಮ್ಮತದ ನಿರ್ಣಯ ಕೈಗೊಂಡಿದ್ದರು.








