
ಮಡಿಕೇರಿ ಸೆ.28 NEWS DESK : ಕೊಡಗು ಜಿಲ್ಲೆಯ ಮೂವರು ವಿದ್ಯಾಥಿ೯ಗಳು ಮಂಗಳೂರು ವಲಯದಿಂದ 16 ವಷ೯ದೊಳಗಿನ ಕನಾ೯ಟಕ ರಾಜ್ಯ ಮಟ್ಟದ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಶನಿವಾರಸಂತೆಯ ಕಾಫಿ ಬೆಳೆಗಾರ ಹೆಚ್.ಎಸ್.ವಸಂತ್ ಕುಮಾರ್, ಶ್ವೇತಾ ದಂಪತಿ ಪುತ್ರ ಯತೀಂದ್ರ, ಕುಶಾಲನಗರದ ಸುರೇಶ್, ಗಾಯತ್ರಿ ದಂಪತಿ ಪುತ್ರ ಸೂಯ೯ತ್ರಿಭುವನ್ ಮತ್ತು ವಿರಾಜಪೇಟೆಯ ಎಂ.ಸಿ.ಅಪ್ಪಣ್ಣ, ತನೋಜ್ ದೇವಮ್ಮ ದಂಪತಿ ಪುತ್ರ ಅಂಶಲ್ ಪೊನ್ನಣ್ಣ 16 ವಷ೯ದೊಳಗಿನ ಕ್ರಿಕೆಟ್ ಪಂದ್ಯಾಟಕ್ಕೆ ಮಂಗಳೂರು ವಲಯದಿಂದ ಕನಾ೯ಟಕ ತಂಡಕ್ಕೆ ಆಯ್ಕೆಯಾಗಿದ್ದಾರೆ. ಯತೀಂದ್ರ ಪ್ರಸ್ತುತ ಬೆಂಗಳೂರಿನ ಕ್ರೀಡಾಶಾಲೆಯಲ್ಲಿ ಕಲಿಯುತ್ತಿದ್ದರೆ. ಸೂಯ೯ತ್ರಿಭುವನ್ ಕುಶಾಲನಗರದ ಪಾತಿಮಾ ಕಾನ್ವೆಂಟ್ ವಿದ್ಯಾಥಿ೯ಯಾಗಿದ್ದು, ಅಂಶಲ್ ಪೊನ್ನಣ್ಣ ವಿರಾಜಪೇಟೆಯ ಎಸ್ ಎಂ ಎಸ್ ಶಾಲಾ ವಿದ್ಯಾಥಿ೯ಯಾಗಿದ್ದಾನೆ.








