Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಕೊಡಗು ಹೆಗ್ಗಡೆ ಸಮಾಜದ ಕ್ರೀಡಾ ಹಬ್ಬಕ್ಕೆ ಸಂಭ್ರಮದ ತೆರೆ*
  • *ಶಂಸುಲ್ ಉಲಮಾ ಕಾಲೇಜು ವಿದ್ಯಾರ್ಥಿಗಳ ಸಾಧನೆ : ಶಿಕ್ಷಣದ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಗಣ್ಯರ ಕರೆ*
  • *5ನೇ ದಿನವೂ ಮುಂದುವರೆದ ವಸತಿ ರಹಿತರ ಧರಣಿ*
  • *ಕೊಡಗು : ಪತ್ರಿಕಾ ಪ್ರವಾಸ ವಾಹನಕ್ಕೆ ಚಾಲನೆ*
  • *ಜಿಲ್ಲಾ ಮಟ್ಟದ ತ್ರೈಮಾಸಿಕ ಕೆಡಿಪಿ ಸಭೆ : ಜೂನ್ ಮೊದಲ ವಾರದಲ್ಲಿ ಮುಂಗಾರು ಆರಂಭ ಸಾಧ್ಯತೆ : ರಸ್ತೆ ಸೇರಿದಂತೆ ಹಲವು ಕಾಮಗಾರಿ ಪೂರ್ಣಗೊಳಿಸಿ : ಸಚಿವ ಎನ್.ಎಸ್.ಭೋಸರಾಜು*
  • *ಮಾದಾಪುರದಲ್ಲಿ ಕೊಡವ ಸಮಾಜ ಭವನ ಲೋಕಾಪ೯ಣೆ : ಪ್ರಾಮಾಣಿಕತೆಯೊಂದಿಗೆ ಸಂಸ್ಕೃತಿ ಸಂರಕ್ಷಣೆಗೆ ಕೊಡವರು ವಿಶ್ವವ್ಯಾಪಿ ಹೆಸರು ವಾಸಿ : ಬಸವರಾಜ ಬೊಮ್ಮಾಯಿ ಶ್ಲಾಘನೆ*
  • *ಮಡಿಕೇರಿಯಲ್ಲಿ ಪತ್ರಕರ್ತರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ*
  • *ಪೊನ್ನಂಪೇಟೆಯಲ್ಲಿ ಬಿಜೆಪಿ ವಿಜಯೋತ್ಸವ*
  • *ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ‘ಶಾರ್ಟ್ ರೇಂಜ್ ರೈಫಲ್ ಫೈರಿಂಗ್ ರೇಂಜ್’ ಉದ್ಘಾಟನೆ*
  • *ಶ್ರದ್ಧಾಭಕ್ತಿಯಿಂದ ಜರುಗಿದ ಕರ್ಣಂಗೇರಿ ಕ್ಷೇತ್ರದ ಶ್ರೀರಾಜರಾಜೇಶ್ವರಿ ದೇವಾಲಯದ ವಾರ್ಷಿಕೋತ್ಸವ ಹಾಗೂ ರಥೋತ್ಸವ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಮಡಿಕೇರಿ ದಸರಾ ಜನೋತ್ಸವ ಕಾಫಿ ಟೇಬಲ್ ಪುಸ್ತಕ ಬಿಡುಗಡೆ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಮಡಿಕೇರಿ ದಸರಾ ಜನೋತ್ಸವ ಕಾಫಿ ಟೇಬಲ್ ಪುಸ್ತಕ ಬಿಡುಗಡೆ*

ಸೆಪ್ಟೆಂಬರ್ 30, 20242 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಸೆ.30 NEWS DESK : ಐತಿಹಾಸಿಕ ಮಡಿಕೇರಿ ದಸರಾ ಉತ್ಸವ ಒಂದೂವರೆ ಶತಮಾನದ ಉದ್ದಕ್ಕೂ ನಡೆದು ಬಂದ ಹಾದಿಯ ಪಥವನ್ನು ಗುರುತಿಸುವ ನಿಟ್ಟಿನಲ್ಲಿ ಹಿರಿಯ ಪತ್ರಕರ್ತ ಅನಿಲ್ ಹೆಚ್.ಟಿ. ಅವರು ರಚಿಸಿರುವ ‘ಮಡಿಕೇರಿ ಜನೋತ್ಸವ ದಸರಾ ಕಾಫಿ ಟೇಬಲ್ ಪುಸ್ತಕ’ವನ್ನು ಭಾನುವಾರ ಅನಾವರಣಗೊಳಿಸಲಾಯಿತು. ನಗರದ ರೆಡ್ ಬ್ರಿಕ್ಸ್ ಹೋಟೆಲ್‍ನ ಸತ್ಕಾರ ಸಭಾಂಗಣದಲ್ಲಿ ಆಯೋಜಿತ ಸಮಾರಂಭದಲ್ಲಿ ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಮಡಿಕೇರಿ ದಸರಾ ಜನೋತ್ಸವ ಪುಸ್ತಕವನ್ನು ಅನಾವರಣಗೊಳಿಸಿದರು. ಈ ಸಂದರ್ಭ ಮಾತನಾಡಿದ ಜಿಲ್ಲಾಧಿಕಾರಿಗಳು, ಸುಮಾರು ಒಂದೂವರೆ ಶತಮಾನದ ಮಡಿಕೇರಿ ದಸರಾ ಉತ್ಸವ ನಡೆದು ಬಂದ ಹಾದಿಯ ಬಗ್ಗೆ ಸ್ಪಷ್ಟವಾದ ಮಾಹಿತಿಗಳಿಲ್ಲ. ಇಂತಹ ಸಂದರ್ಭ ಅನಿಲ್ ಅವರು ದಸರಾ ಇತಿಹಾಸದ ಮೇಲೆ ಬೆಳಕು ಚೆಲ್ಲುವ ನಿಟ್ಟಿನಲ್ಲಿ ಪುಸ್ತಕವೊಂದನ್ನು ಹೊರ ತಂದಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಮುಂಬರುವ ದಿನಗಳಲ್ಲಿ ಮಡಿಕೇರಿ ದಸರಾ ಉತ್ಸವ ನಡೆಸಿರುವ ಬಗ್ಗೆ ಸಮಗ್ರ ‘ದಾಖಲೀಕರಣ’ ಮಾಡಲಾಗುತ್ತದೆಂದು ತಿಳಸಿದರು. ಮಡಿಕೇರಿ ಮತ್ತು ಮೈಸೂರು ದಸರಾ ಉತ್ಸವ ಆಚರಣೆಗೆ ಸಾಕಷ್ಟು ವ್ಯತ್ಯಾಸಗಳಿದೆ. ಆದರೆ, ಮಡಿಕೇರಿ ದಸರಾ ಯಾವ ರೀತಿಯಲ್ಲಿ ಆರಂಭವಾಯಿತು, ಬದಲಾವಣೆಗಳಿಗೆ ಹೇಗೆ ತೆರೆದುಕೊಂಡಿತು ಎನ್ನುವ ಬಗ್ಗೆ ದಾಖಲೆಗಳಿಲ್ಲ. ಈ ಹಿನ್ನೆಲೆ ಮಡಿಕೇರಿ ದಸರಾ ಕಾರ್ಯಕ್ರಮಗಳು ಯಾವ ರೀತಿಯಾಗಿ ನಡೆದಿದೆ, ಶೋಭಾ ಯಾತ್ರೆಯಲ್ಲಿ ಮಂಟಪಗಳಲ್ಲಿ ಪ್ರದರ್ಶಿಸಲ್ಪಡುವ ಪೌರಾಣಿಕ ವಿಷಯಗಳಿರಬಹುದು, ಸ್ಥಳೀಯ ಸಂಸ್ಕøತಿಯನ್ನು ಪ್ರತಿಬಿಂಬಿಸುವ ವಿಚಾರಗಳಿರಬಹುದು ಅವುಗಳನ್ನು ದಾಖಲಿಸುವುದು ಅವಶ್ಯ. ಇದು ಮುಂದೆ ದಸರಾ ಉತ್ಸವ ಆಚರಿಸುವವರಿಗೆ ಮಾರ್ಗದರ್ಶಕವಾಗಲಿದೆಯೆಂದು ಅಭಿಪ್ರಾಯಿಸಿದರು. ಮಡಿಕೇರಿ ದಸರಾ ಶೋಭಾಯಾತ್ರೆಯ ದಶ ಮಂಟಪಗಳಲ್ಲಿ ಪ್ರದರ್ಶಿತವಾಗುವ ಕಲಾ ಕೃತಿಗಳು, ಕಥೆಯನ್ನು ಪ್ರಸ್ತುತ ಪಡಿಸುವ ಅಂಶಗಳನ್ನು ದಾಖಲಿಸಿಕೊಂಡು ವಿಭಿನ್ನ ಭಾಷೆಗಳಲ್ಲಿ ಯೂ ಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲ ತಾಣಗಳ ಮೂಲಕ ಪ್ರಚುರ ಪಡಿಸಿದರೆ, ಹೊರಗಿನವರಿಗೂ ಮಡಿಕೇರಿ ದಸರಾ ವಿಚಾರಗಳು ಸ್ಪಷ್ಟವಾಗಿ ಅರ್ಥೈಸಿಕೊಳ್ಳಲು ಸಾಧ್ಯವಾಗುತ್ತದೆಂದು ತಿಳಸಿದರು.
ದಸರಾ ಪ್ರಚಾರದಲ್ಲಿ ಸೋತಿದ್ದೇವೆ :: ಪ್ರಸ್ತಾವಿಕವಾಗಿ ಮಾತನಾಡಿದ ಲೇಖಕ ಅನಿಲ್ ಹೆಚ್.ಟಿ. ಅವರು, ಮಡಿಕೇರಿ ದಸರಾ ಉತ್ಸವವನ್ನು ಸಮರ್ಪಕವಾಗಿ ಹೊರ ಜಿಲ್ಲೆ ರಾಜ್ಯಗಳಲ್ಲಿ ಪ್ರಚಾರ ಪಡಿಸುವಲ್ಲಿ ನಾವಿಂದು ಸೋತಿದ್ದೇವೆ. ನಿಜಕ್ಕಾದರೆ, ವಿಶಿಷ್ಟವಾದ ಮಡಿಕೇರಿ ದಸರಾವನ್ನು ಬೆಂಗಳೂರು, ಚೆನ್ನೈ, ಮುಂಬೈಗಳಲ್ಲಿ ಪ್ರಚಾರ ಪಡಿಸುವ ಅಗತ್ಯವಿದೆಯೆಂದು ತಿಳಿಸಿದರು. ದಸರಾ ಉತ್ಸವ ಸಂದರ್ಭ ಶಾಸ್ತ್ರೀಯ ಸಂಗೀತ, ಜಾನಪದ , ಭಾವಗೀತೆ ಪ್ರಕಾರಗಳ ಪ್ರದರ್ಶನ ಹಿಂದೆ ಬಿದ್ದು, ಫ್ಯೂಷನ್ ಮುನ್ನೆಲೆಗೆ ಬಂದು ನಿಂತಿದೆ. ಈ ಹಿನ್ನೆಲೆ ದಸರಾ ಸಂದರ್ಭ ನಮ್ಮ ಸಂಸ್ಕøತಿಗೆ ಪೂರಕವಾದ ಕಾರ್ಯಕ್ರಮಗಳನ್ನು ಮತ್ತೊಂದು ವೇದಿಕೆಯಲ್ಲಿ ಪ್ರದರ್ಶಿಸುವ ಪ್ರಯತ್ನಗಳು ನಡೆಯಬೇಕಾಗಿದೆ ಎಂದರು. ಸನ್ಮಾನ- ಇದೇ ಸಂದರ್ಭ ಮಡಿಕೇರಿ ದಸರಾಕ್ಕೆ ರೂಪುರೇಷೆ ನೀಡಿದ್ದ ದಿ. ಭೀಮ್ ಸಿಂಗ್ ಅವರ ಪುತ್ರಿ ಶಾರದಾಬಾಯಿಯವರ ಪರವಾಗಿ ಅವರ ಮಕ್ಕಳಾದ ರವಿ ಕುಮಾರ್ ಮತ್ತು ವಾಸಂತಿ ಅವರನ್ನು ಹಾಗೂ ದಸರಾ ಮಂಟಪಗಳಿಗೆ ವಿನೂತನ ವಿನ್ಯಾಸ ನೀಡಿದ್ದ ನಗರದ ಹಿರಿಯ ಶಿವರಾಮ್ ಶೆಟ್ಟಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಮಾಜಿ ವಿಧಾನ ಸಭಾಧ್ಯಕ್ಷರಾದ ಕೆ.ಜಿ. ಬೋಪಯ್ಯ, ಮಾಜಿ ಸಚಿವರಾದ ಎಂ.ಪಿ. ಅಪ್ಪಚ್ಚು ರಂಜನ್, ಎಎಸ್‍ಪಿ ಕೆ.ಎಸ್. ಸುಂದರರಾಜ್,ಮಡಿಕೇರಿ ದಸರಾ ಸಮಿತಿ ಗೌರವಾಧ್ಯಕ್ಷರಾದ ಜಿ. ಚಿದ್ವಿಲಾಸ್, ಕಾರ್ಯಾಧ್ಯಕ್ಷರಾದ ಪ್ರಕಾಶ್ ಆಚಾರ್ಯ, ಪ್ರಧಾನ ಕಾರ್ಯದರ್ಶಿ ರಾಜೇಶ್ ಯಲ್ಲಪ್ಪ, ಖಜಾಂಚಿ ಅರುಣ್ ಶೆಟ್ಟಿ, ದಶ ಮಂಟಪ ಸಮಿತಿ ಅಧ್ಯಕ್ಷರಾದ ಜಗದೀಶ್, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಅಧ್ಯಕ್ಷ ಧರ್ಮಜ ಉತ್ತಪ್ಪ ಉಪಸ್ಥಿತರಿದ್ದರು. ಸಂಧ್ಯಾ ಚಿದ್ವಿಲಾಸ್, ಚಿತ್ರಾನಂಜಪ್ಪ ತಂಡ ಪ್ರಾರ್ಥಿಸಿದರು. ಎಸ್‍ಐ ಮುನೀರ್ ಅಹಮ್ಮದ್ ಕಾರ್ಯಕ್ರಮ ನಿರೂಪಿಸಿದರು. ಸನ್ಮಾನಿತರ ಪರಿಚಯವನ್ನು ಶಿಕ್ಷಕಿಯರಾದ ಪ್ರತಿಮಾ ರೈ ಮತ್ತು ಜಲಲಕ್ಷ್ಮಿ ಅವರು ಮಾಡಿಕೊಟ್ಟರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಕೊಡಗು ಹೆಗ್ಗಡೆ ಸಮಾಜದ ಕ್ರೀಡಾ ಹಬ್ಬಕ್ಕೆ ಸಂಭ್ರಮದ ತೆರೆ*

ಮೇ 5, 2026

*ಶಂಸುಲ್ ಉಲಮಾ ಕಾಲೇಜು ವಿದ್ಯಾರ್ಥಿಗಳ ಸಾಧನೆ : ಶಿಕ್ಷಣದ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಗಣ್ಯರ ಕರೆ*

ಮೇ 5, 2026

*5ನೇ ದಿನವೂ ಮುಂದುವರೆದ ವಸತಿ ರಹಿತರ ಧರಣಿ*

ಮೇ 5, 2026

*ಶಂಸುಲ್ ಉಲಮಾ ಕಾಲೇಜು ವಿದ್ಯಾರ್ಥಿಗಳ ಸಾಧನೆ : ಶಿಕ್ಷಣದ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಗಣ್ಯರ ಕರೆ*

ಮೇ 5, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ವಿರಾಜಪೇಟೆ ಮೇ 6 NEWS DESK : ಪೆರುಂಬಾಡಿಯ ಶಂಸುಲ್ ಉಲಮಾ ಎಜುಕೇಶನಲ್ ಅಕಾಡೆಮಿಯ ಎಸ್ಇಎ ಕಾಲೇಜು ವಿದ್ಯಾರ್ಥಿಗಳು ಪಿಯುಸಿ ಪರೀಕ್ಷೆಯಲ್ಲಿ…

*5ನೇ ದಿನವೂ ಮುಂದುವರೆದ ವಸತಿ ರಹಿತರ ಧರಣಿ*

ಮೇ 5, 2026

*ಕೊಡಗು : ಪತ್ರಿಕಾ ಪ್ರವಾಸ ವಾಹನಕ್ಕೆ ಚಾಲನೆ*

ಮೇ 5, 2026

*ಜಿಲ್ಲಾ ಮಟ್ಟದ ತ್ರೈಮಾಸಿಕ ಕೆಡಿಪಿ ಸಭೆ : ಜೂನ್ ಮೊದಲ ವಾರದಲ್ಲಿ ಮುಂಗಾರು ಆರಂಭ ಸಾಧ್ಯತೆ : ರಸ್ತೆ ಸೇರಿದಂತೆ ಹಲವು ಕಾಮಗಾರಿ ಪೂರ್ಣಗೊಳಿಸಿ : ಸಚಿವ ಎನ್.ಎಸ್.ಭೋಸರಾಜು*

ಮೇ 5, 2026

*ಮಾದಾಪುರದಲ್ಲಿ ಕೊಡವ ಸಮಾಜ ಭವನ ಲೋಕಾಪ೯ಣೆ : ಪ್ರಾಮಾಣಿಕತೆಯೊಂದಿಗೆ ಸಂಸ್ಕೃತಿ ಸಂರಕ್ಷಣೆಗೆ ಕೊಡವರು ವಿಶ್ವವ್ಯಾಪಿ ಹೆಸರು ವಾಸಿ : ಬಸವರಾಜ ಬೊಮ್ಮಾಯಿ ಶ್ಲಾಘನೆ*

ಮೇ 5, 2026

*ಮಡಿಕೇರಿಯಲ್ಲಿ ಪತ್ರಕರ್ತರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ*

ಮೇ 5, 2026

*ಪೊನ್ನಂಪೇಟೆಯಲ್ಲಿ ಬಿಜೆಪಿ ವಿಜಯೋತ್ಸವ*

ಮೇ 5, 2026

*ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ‘ಶಾರ್ಟ್ ರೇಂಜ್ ರೈಫಲ್ ಫೈರಿಂಗ್ ರೇಂಜ್’ ಉದ್ಘಾಟನೆ*

ಮೇ 5, 2026

*ಶ್ರದ್ಧಾಭಕ್ತಿಯಿಂದ ಜರುಗಿದ ಕರ್ಣಂಗೇರಿ ಕ್ಷೇತ್ರದ ಶ್ರೀರಾಜರಾಜೇಶ್ವರಿ ದೇವಾಲಯದ ವಾರ್ಷಿಕೋತ್ಸವ ಹಾಗೂ ರಥೋತ್ಸವ*

ಮೇ 5, 2026

*ಬಾಳೆಲೆ-ನಲ್ಲೂರು : ಮೇ 5 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ*

ಮೇ 4, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.