Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ರೆಗ್ಯೂಲರ್ ಡಿಪ್ಲೋಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ತರಬೇತಿಗೆ ಅರ್ಜಿ ಆಹ್ವಾನ*
  • *ಮೇ 12 ರಂದು ಉದ್ಯೋಗ ಮೇಳ*
  • *ಹುದ್ದೆಗೆ ಅರ್ಜಿ ಆಹ್ವಾನ*
  • *ಮೇ 10 ರಂದು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ
  • *ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದ ಸಂಸದ ಯದುವೀರ್‌ ಒಡೆಯರ್‌*
  • *ಎನ್‍ಡಿಎ ಫಲಿತಾಂಶ ಪ್ರಕಟ : ಕ್ರಿಯೇಟಿವ್ ಕಾಲೇಜಿನ 4 ಮಂದಿ ವಿದ್ಯಾರ್ಥಿಗಳು ಆಯ್ಕೆ*
  • *ಅರೆಭಾಷೆ ಸಾಂಸ್ಕೃತಿಕ ಸಂಭ್ರಮ : ಬಹು ಸಂಸ್ಕೃತಿ ಉತ್ಸವಗಳು ಭಾಷೆ ಮತ್ತು ಸಂಸ್ಕೃತಿಯ ಉಳಿವಿಗೆ ಪೂರಕ : ಸದಾನಂದ ಮಾವಜಿ*
  • *ಶಾಸಕ ಡಾ.ಮಂತರ್ ಗೌಡ ಅವರ ಕಾಳಜಿಗೆ ಸಾರ್ವಜನಿಕರ ಮೆಚ್ಚುಗೆ*
  • *ರಾಷ್ಟ್ರಮಟ್ಟದ ಸೆಸ್ಟೋಬಾಲ್ ಕ್ರೀಡೆ : ಮೊದಲ ಬಾರಿಗೆ ಚಿನ್ನ ಗೆದ್ದ ಕರ್ನಾಟಕ ತಂಡ : ಕೀರ್ತಿ ತಂದ ಕೊಡಗಿನ ಕ್ರೀಡಾಪಟುಗಳು*
  • *ರಾಷ್ಟ್ರಮಟ್ಟದ ಬ್ರೈನೋಬ್ರೈನ್ ಸ್ಪರ್ಧೆ : ಮಡಿಕೇರಿಯ ಅನ್ವಿತ್.ಎಸ್ ಚಾಂಪಿಯನ್*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಕೊಡಗು ಬ್ಲಡ್ ಡೋನಸ್೯ ಸಂಸ್ಥೆಯ 7ನೇ ವಾಷಿ೯ಕೋತ್ಸವ : ಜೀವ ಉಳಿಸುವ ರಕ್ತದಾನಿಗಳೇ ನಿಜವಾದ ಹೀರೋಗಳು :  ಅನಿಲ್ ಹೆಚ್.ಟಿ.*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಕೊಡಗು ಬ್ಲಡ್ ಡೋನಸ್೯ ಸಂಸ್ಥೆಯ 7ನೇ ವಾಷಿ೯ಕೋತ್ಸವ : ಜೀವ ಉಳಿಸುವ ರಕ್ತದಾನಿಗಳೇ ನಿಜವಾದ ಹೀರೋಗಳು :  ಅನಿಲ್ ಹೆಚ್.ಟಿ.*

ನವೆಂಬರ್ 21, 20243 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ನ.21 NEWS DESK : ಗಾಯಾಳುವಿನ ಜೀವ ಸಂರಕ್ಷಣೆ ಮತ್ತು ರೋಗಿಗೆ ಅನಿವಾಯ೯ತೆಯಾದ ಸಂದಭ೯ದಲ್ಲಿ ನೀಡಲ್ಪಡುವ ರಕ್ತವನ್ನು ದಾನವಾಗಿ ನೀಡುವ ಮಹತ್ವದ ಸೇವೆ ಕೈಗೊಳ್ಳುವ ರಕ್ತದಾನಿಗಳೇ ನಿಜವಾದ ಸೂಪರ್ ಹೀರೋಗಳಾಗಿದ್ದಾರೆ ಎಂದು ರೋಟರಿ ಮಿಸ್ಟಿ ಹಿಲ್ಸ್ ನಿದೇ೯ಶಕ ಅನಿಲ್ ಹೆಚ್.ಟಿ. ಅಭಿಪ್ರಾಯಪಟ್ಟಿದ್ದಾರೆ.  ನಗರದ ರೋಟರಿ ಸಭಾಂಗಣದಲ್ಲಿ ಕೊಡಗು ಬ್ಲಡ್ ಡೋನರ್ಸ್ ಸಂಸ್ಥೆಯ 7ನೇ ವಾಷಿ೯ಕೋತ್ಸವ ಕಾಯ೯ಕ್ರಮವನ್ನು ಸಸಿಗೆ ನೀರೆರೆದು ಉದ್ಘಾಟಿಸಿದ ಅನಿಲ್ ಹೆಚ್.ಟಿ, ಸಮಾಜಮುಖಿಯಾದ ಮಾನವನಿಗೆ ಎಲ್ಲಾ ರೀತಿಯಲ್ಲಿಯೂ ತೃಪ್ತಿ ನೀಡಬಲ್ಲ ಕಾಯ೯ವಾಗಿ ರಕ್ತದಾನದಂಥ ಸೇವೆ ಕಂಡುಬರುತ್ತದೆ, ರಕ್ತದಾನದ ಮೂಲಕ ದಾನಿಯು ಮತ್ತೊಂದು ಜೀವವನ್ನು ಸಂರಕ್ಷಿಸುತ್ತಾನೆ, ಈ ನಿಟ್ಟಿನಲ್ಲಿ ದೇವರು ಕೂಡ ಮೆಚ್ಚುವ ಕೆಲಸ ಮಾಡಿ, ರಕ್ತವನ್ನು ಸಕಾಲಿಕವಾಗಿ ಪಡೆದು ಜೀವ ಉಳಿಸಿಕೊಳ್ಳುವವನ ಪಾಲಿಗೂ ದಾನಿ ದೇವರಂತೆ ಕಾಣುತ್ತಾನೆ, ರಕ್ತದಾನಿಗಳೇ ಈ ಸಮಾಜದಲ್ಲಿ ನಿಜವಾದ ಸೂಪರ್ ಹೀರೋಗಳಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.  ಜಗತ್ತು ಆಧುನಿಕ ತಂತ್ರಜ್ಞಾನಗಳ ನೆರವಿನಿಂದ ಎಷ್ಟೇ ಮುಂದುವರೆದಿದ್ದರೂ ಇಂದಿಗೂ ಕೃತಕ ರೀತಿಯಲ್ಲಿ ರಕ್ತವನ್ನು ಉತ್ಪಾದಿಸಲು ಸಾಧ್ಯವಿಲ್ಲ, ಹೀಗಾಗಿಯೇ ರಕ್ತಕ್ಕೆ ಮಹತ್ವ ಎಂದೆಂದೂ ಇರುತ್ತದೆ, ಸಕಾ೯ರ ರಕ್ತದಾನಕ್ಕೆ ಸಾಕಷ್ಟು ಪ್ರಚಾರ ಕೈಗೊಂಡಿದ್ದರೂ ಅನೇಕರಲ್ಲಿ ರಕ್ತದಾನದ ಕುರಿತು ಆತಂಕ ಇನ್ನೂ ಇದೆ, ಇಂಥ ಭಯವನ್ನು ಹೋಗಲಾಡಿಸುವ ಕೆಲಸಗಳೂ ಸಂಘಸಂಸ್ಥೆಗಳಿಂದ ಆಗಬೇಕೆಂದು ಕರೆ ನೀಡಿದರು. ಸಮಾಜಸೇವಾ ಕಾಯ೯ಗಳಲ್ಲಿ ಸಂಘಸಂಸ್ಥೆಗಳ ನಡುವೇ ಪೈಪೋಟಿಗಿಂತ ಯಾರು ಹೆಚ್ಚಿನ ಮಾನವೀಯ ಸೇವೆ ಮಾಡುತ್ತಾರೆ ಎಂಬ ಆತ್ಮ ತೃಪ್ತಿಯೇ ಆದ್ಯತೆಯಾಗಬೇಕೆಂದೂ ಅನಿಲ್ ಅಭಿಪ್ರಾಯಪಟ್ಟರು. ಹಳೇ ಕಾಲಕ್ಕೆ ಹೋಲಿಸಿದರೆ ಆಧುನಿಕ ಜೀವನ ಶೈಲಿಯಿಂದಾಗಿ ಜಂಕ್ ಆಹಾರಸೇವನೆ ಹೆಚ್ಚಾಗಿರುವುದು ರಕ್ತದೊತ್ತಡ, ರಕ್ತಹೀನತೆಯಂತ ಸಮಸ್ಯೆಗಳಿಗೆ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟ ಅವರು, ಹಿಂದಿನ ಕಾಲದವರು ಜೀವಿಸಿದ್ದಂತ ಬದುಕು ಈಗಿನ ಮತ್ತು ಭವಿಷ್ಯದ ಪೀಳಿಗೆಯವರಿಗೆ ಜೀವಿಸಲು ಸಾಧ್ಯವಾಗಲಾರದು ಎಂದೂ ಅನಿಲ್ ಹೇಳಿದರು. ಮಡಿಕೇರಿಯಲ್ಲಿ 21 ಸಮಾನಮನಸ್ಕರು ಸೇರಿ ಸಂಘಟಿಸಿದ ಕೊಡಗು ಬ್ಲಡ್ ಡೋನರ್೯ ಸಂಸ್ಥೆಯು ಈವರೆಗೂ 3522 ಮಂದಿಗೆ ರಕ್ತದಾನ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿರುವುದು ಶ್ಲಾಘನೀಯ ಸಾಧನೆಯಾಗಿದೆ ಎಂದೂ ಅನಿಲ್ ಹೆಮ್ಮೆಯಿಂದ ನುಡಿದರು. ಜಿಲ್ಲಾ ರಕ್ತನಿಧಿ ಕೇಂದ್ರದ ಮುಖ್ಯಸ್ಥ ಡಾ.ಕರುಂಬಯ್ಯ ಮಾತನಾಡಿ, ಮಡಿಕೇರಿಯಲ್ಲಿ ಜಿಲ್ಲಾಸ್ಪತ್ರೆ ವಿಸ್ತಾರಗೊಂಡು ಇನ್ನಷ್ಟು ಸೌಲಭ್ಯ ಹೊಂದಿದ ಬಳಿಕ ರೋಗಿಗಳ ದಾಖಲಾತಿ ಸಂಖ್ಯೆಯಲ್ಲಿ ಏರಿಕೆಯಾಗುತ್ತಲೇ ಇದೆ, ಹೀಗಾಗಿ ರಕ್ತಕ್ಕಾಗಿ ಬೇಡಿಕೆ ಕೂಡ ಏರಿಕೆಯಾಗಿದೆ. ಪ್ರತೀ ತಿಂಗಳು ಜಿಲ್ಲಾ ರಕ್ತನಿಧಿಗೆ 500 ಯೂನಿಟ್ ರಕ್ತದ ಅಗತ್ಯವಿದ್ದು, ತಿಂಗಳಿಗೆ ರಕ್ತಸಂಗ್ರಹಣೆಯ ಕನಿಷ್ಟ 10 ಶಿಬಿರಗಳ ಮೂಲಕ ಪ್ರತೀ ಶಿಬಿರದಿಂದಲೂ 50 ಯೂನಿಟ್ ರಕ್ತ ಸಂಗ್ರಹ ಮಾಡಿಕೊಳ್ಳಬೇಕಾದ ಅನಿವಾಯ೯ತೆ ಇದೆ ಎಂದರು. ವಾಷಿ೯ಕವಾಗಿ ಕೊಡಗು ಜಿಲ್ಲೆಯಲ್ಲಿ ಕನಿಷ್ಟ 100 ರಕ್ತಸಂಗ್ರಹಣಾ ಶಿಬಿರದ ಅನಿವಾಯ೯ತೆಯಿದ್ದು, ಈ ನಿಟ್ಟಿನಲ್ಲಿ ರಕ್ತ ಸಂಗ್ರಹಣೆಗೆ ಜಿಲ್ಲೆಯಾದ್ಯಂತ ಜನರು ಸಹಕಾರ ನೀಡಬೇಕೆಂದು ಕೋರಿದರು. 18 ರಿಂದ 65 ವಷ೯ದೊಳಗಿನ ಆರೋಗ್ಯವಂತರೆಲ್ಲರೂ ರಕ್ತದಾನ ಮಾಡಬಹುದಾಗಿದ್ದು, ರಕ್ತದಾನ ಮಾಡುವುದು ಆರೋಗ್ಯವಂತನ ಹೊಣೆಗಾರಿಕೆಯೂ ಆಗಿದೆ ಎಂದು ನುಡಿದ ಡಾ.ಕರುಂಬಯ್ಯ, ಶ್ರೇಷ್ಟ ಕಾಯ೯ವಾಗಿ ರಕ್ತದಾನವನ್ನು ಎಲ್ಲರೂ ಪರಿಗಣಿಸುವಂತೆ ಮನವಿ ಮಾಡಿದರು. ಕೊಡಗು ಬ್ಲಡ್ ಡೋನಸ್೯ ಸಂಸ್ಥೆಯ ಅಧ್ಯಕ್ಷ ಪಿ.ಪಿ.ಸುಕುಮಾರ್ ಮಾತನಾಡಿ, ಈ ಶಿಬಿರದಲ್ಲಿ ಮಹಿಳೆಯರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ರಕ್ದದಾನ ಮಾಡುತ್ತಿರುುವುದು ಶ್ಲಾಘನೀಯ ಬೆಳವಣಿಗೆಯಾಗಿದ್ದು, ಮುಂದಿನ ಶಿಬಿರಗಳಿಗೆ ಬರುವ ರಕ್ತದಾನಿಗಳಿಗೆ ಪ್ರಯಾಣ ವೆಚ್ಚವನ್ನೂ ಸಂಸ್ಥೆ ವತಿಯಿಂದ ಭರಿಸಲಾಗುತ್ತದೆ ಎಂದು ಘೋಷಿಸಿದರು. ಜಿಲ್ಲೆಯಾದ್ಯಂತಲಿನ ಕಾಲೇಜುಗಳಿಗೆ ತೆರಳಿ ರಕ್ತದಾನದ ಮಹತ್ವವನ್ನು ತಿಳಿಸುವುದಲ್ಲದೇ ರಕ್ತದಾನಕ್ಕೆ ಪ್ರೇರೇಪಣೆ ಮಾಡುವ ಉದ್ದೇಶವೂ ಇದೆ ಎಂದೂ ಸುಕುಮಾರ್ ಹೇಳಿದರು. ಕೊಡಗು ಬ್ಲಡ್ ಡೋನಸ್೯ ಸಂಸ್ಥೆಯ ನಿಕಟಪೂವ೯ ಅಧ್ಯಕ್ಷ ಖಲೀಲ್ ಕ್ರಿಯೇಟಿವ್ ಮಾತನಾಡಿ, ಭಾರತದಾದ್ಯಂತ ಎಲ್ಲಿಯೇ ಅಗತ್ಯವಿದ್ದರೂ ರಕ್ತದಾನ ನೀಡುವ ನಿಟ್ಟಿನಲ್ಲಿ ರಕ್ತದಾನಿಗಳ ಬೖಹತ್ ಜಾಲವನ್ನು ಸಂಸ್ಥೆ ಹೊಂದಿರುವುದಾಗಿ ಮಾಹಿತಿ ನೀಡಿದರಲ್ಲದೇ, ರಕ್ತದಾನಿಗಳಿಗಾಗಿ ಎಲ್ಲಾ ರಕ್ತದಾನ ಸಂಬಂಧಿತ ಸಂಘಸಂಸ್ಥೆಗಳನ್ನು ಒಂದೇ ವೇದಿಕೆಯಡಿ ತರುವ ನಿಟ್ಟಿನಲ್ಲಿಯೂ ಪ್ರಯತ್ನ ಸಾಗಿದೆ, ಹೀಗಾದಾಗ ವಿಳಂಭರಹಿತವಾಗಿ ಅಗತ್ಯವಿರುವ ರೋಗಿಗೆ ಅಗತ್ಯವುಳ್ಳ ರಕ್ತ ಅತ್ಯಂತ ಶೀಘ್ರವಾಗಿ ದೊರಕಲಿದೆ ಎಂದೂ ಅವರು ಹೇಳಿದರು. ಕೊಡಗು ಬ್ಲಡ್ ಡೋನಸ್೯ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಮೊಹಮ್ಮದ್ ಅಂಜುಮ್ ಮಾತನಾಡಿ, ಕನಾ೯ಟಕ ಬ್ಲಡ್ ಹೆಲ್ಪ್ ಲೈನ್ ಅವರ ಸಹಕಾರ ಕೂಡ ತಮ್ಮ ಸಂಸ್ಥೆಗೆ ದೊರಕಿರುವುದು ಹೆಮ್ಮೆ ತಂದಿದೆ ಎಂದರು. ಮಡಿಕೇರಿ ರೋಟರಿ ಸಂಸ್ಥೆಯ ಅಧ್ಯಕ್ಷ ಸುದಯ್ ನಾಣಯ್ಯ, ಮಡಿಕೇರಿಯ ಹೆಚ್.ಡಿ.ಎಫ್.ಸಿ ಬ್ಯಾಂಕ್ ಆಪರೇಷನ್ ಮ್ಯಾನೇಜರ್ ನಾರಾಯಣ ರಾಜೇಂದ್ರ, ನೇತ್ರ ಆಪ್ಟಿಕಲ್ಸ್ ಮಾಲೀಕರಾದ ಅಫ್ಸಾನ್ , ಡಾ.ವಿನಾಯಕ್ ವೇದಿಕೆಯಲ್ಲಿದ್ದರು, ಚನ್ನನಾಯಕ ನಿರೂಪಿಸಿದ ಕಾಯ೯ಕ್ರಮದಲ್ಲಿ ಬಾಳೆಯಡ ದಿವ್ಯ ಸ್ವಾಗತಿಸಿದರು, ಸಂಸ್ಥೆಯ ಕಾಯ೯ದಶಿ೯ ಮೈಖೆಲ್ ವಗೀ೯ಸ್ ಸಂಸ್ಥೆಯ ಮಾಹಿತಿ ನೀಡಿ ಮುಸ್ತಫ ವಂದಿಸಿದರು.

ರಕ್ತದಾನಿಗಳ ಉತ್ತಾಹ….!
ಕಾಯ೯ಕ್ರಮದಲ್ಲಿ ಕೊಡಗು ಬ್ಲಡ್ ಡೋನಸ್೯ ಸಂಘದ ಪ್ರಗತಿಗೆ ಕಾರಣಕತ೯ರಾದವರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಮೊಹಮ್ಮದ್ ಅಂಜುಮ್, ನಿಕಟಪೂವ೯ ಅಧ್ಯಕ್ಷ ಖಲೀಲ್ ಕ್ರಿಯೆಟೀವ್ ಸಂಸ್ಥೆಯ ಉಪಾಧ್ಯಕ್ಷ 85 ಸಲ ರಕ್ತದಾನ ಮಾಡಿದ ದಾಖಲೆಗೆ ಕಾರಣರಾದ ಅಶ್ರಫ್, ಸಂಸ್ಥೆಯ ಸದಸ್ಯ ಉನೈಸ್ ಅವರುಗಳನ್ನು ಸನ್ಮಾನಿಸಲಾಯಿತು. ರಕ್ತದಾನ ಶಿಬಿರದಲ್ಲಿ ನೂರಾರು ಮಂದಿ ರಕ್ತದಾನ ಮಾಡಿದರೆ ಹೈದರಾಬಾದ್ ನಲ್ಲಿದ್ದ ಮಡಿಕೇರಿ ಮೂಲದ ಅಣ್ಣತಂಗಿ ಕೂಡ ಶಿಬಿರಕ್ಕಾಗಿ ಮಡಿಕೇರಿಗೆ ಬಂದು ರಕ್ತದಾನ ಮಾಡಿದ್ದು ವಿಶೇಷವಾಗಿತ್ತು. ಕೊಡಗು ಪೊಲೀಸ್ ಇಲಾಖೆಯ ಹೆಡ್ ಕಾನ್ಸ್ ಟೇಬಲ್ ರಾಮಪ್ಪ 52 ನೇ ಬಾರಿ ರಕ್ದದಾನ ಮಾಡಿ ಗಮನ ಸೆಳೆದರು. ಅನೇಕ ಮಹಿಳೆಯರೂ ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡಿದರು. ಇದೇ ಸಂದಭ೯ ನೇತ್ರ ತಪಾಸಣಾ ಶಿಬಿರ ಕೂಡ ಆಯೋಜಿಸಲಾಗಿತ್ತು. ಅಗತ್ಯವುಳ್ಳವರಿಗೆ ನೇತ್ರ ಆಪ್ಟಿಕಲ್ಸ್ ಮೂಲಕ ಕನ್ನಡಕಗಳನ್ನು ಉಚಿತವಾಗಿ ನೀಡಲಾಯಿತು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ರೆಗ್ಯೂಲರ್ ಡಿಪ್ಲೋಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ತರಬೇತಿಗೆ ಅರ್ಜಿ ಆಹ್ವಾನ*

ಮೇ 9, 2026

*ಮೇ 12 ರಂದು ಉದ್ಯೋಗ ಮೇಳ*

ಮೇ 9, 2026

*ಹುದ್ದೆಗೆ ಅರ್ಜಿ ಆಹ್ವಾನ*

ಮೇ 9, 2026

*ಮೇ 12 ರಂದು ಉದ್ಯೋಗ ಮೇಳ*

ಮೇ 9, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಮೇ 9 NEWS DESK  : ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ…

*ಹುದ್ದೆಗೆ ಅರ್ಜಿ ಆಹ್ವಾನ*

ಮೇ 9, 2026

*ಮೇ 10 ರಂದು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ

ಮೇ 9, 2026

*ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದ ಸಂಸದ ಯದುವೀರ್‌ ಒಡೆಯರ್‌*

ಮೇ 9, 2026

*ಎನ್‍ಡಿಎ ಫಲಿತಾಂಶ ಪ್ರಕಟ : ಕ್ರಿಯೇಟಿವ್ ಕಾಲೇಜಿನ 4 ಮಂದಿ ವಿದ್ಯಾರ್ಥಿಗಳು ಆಯ್ಕೆ*

ಮೇ 9, 2026

*ಅರೆಭಾಷೆ ಸಾಂಸ್ಕೃತಿಕ ಸಂಭ್ರಮ : ಬಹು ಸಂಸ್ಕೃತಿ ಉತ್ಸವಗಳು ಭಾಷೆ ಮತ್ತು ಸಂಸ್ಕೃತಿಯ ಉಳಿವಿಗೆ ಪೂರಕ : ಸದಾನಂದ ಮಾವಜಿ*

ಮೇ 9, 2026

*ಶಾಸಕ ಡಾ.ಮಂತರ್ ಗೌಡ ಅವರ ಕಾಳಜಿಗೆ ಸಾರ್ವಜನಿಕರ ಮೆಚ್ಚುಗೆ*

ಮೇ 9, 2026

*ರಾಷ್ಟ್ರಮಟ್ಟದ ಸೆಸ್ಟೋಬಾಲ್ ಕ್ರೀಡೆ : ಮೊದಲ ಬಾರಿಗೆ ಚಿನ್ನ ಗೆದ್ದ ಕರ್ನಾಟಕ ತಂಡ : ಕೀರ್ತಿ ತಂದ ಕೊಡಗಿನ ಕ್ರೀಡಾಪಟುಗಳು*

ಮೇ 9, 2026

*ರಾಷ್ಟ್ರಮಟ್ಟದ ಬ್ರೈನೋಬ್ರೈನ್ ಸ್ಪರ್ಧೆ : ಮಡಿಕೇರಿಯ ಅನ್ವಿತ್.ಎಸ್ ಚಾಂಪಿಯನ್*

ಮೇ 9, 2026

*ಫೀ.ಮಾ.ಕಾರ್ಯಪ್ಪ ಕಾಲೇಜ್ ನಲ್ಲಿ “ಕಲಾ ವೈಭವ” ಉದ್ಘಾಟನೆ : ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಕಲೆ ಸಹಕಾರಿ : ಮೇ.ಪ್ರೊ.ರಾಘವ ಬಿ. ಅಭಿಮತ*

ಮೇ 9, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.