
ಮಡಿಕೇರಿ ಆ.18 NEWS DESK : ಮಕ್ಕಳಿಗೆ ಪ್ರಾಯೋಗಿಕವಾಗಿ ಕೃಷಿ ಚಟುವಟಿಕೆಗಳ ಬಗ್ಗೆ ಮಾಹಿತಿ ಒದಗಿಸುವ ಮೂಲಕ, ಅವರಲ್ಲಿ ಕೃಷಿ ಸಂಸ್ಕøತಿಯತ್ತ ಒಲವು ಮೂಡಿಸುವುದು ಸೇರಿದಂತೆ, ಸಮಾಜದ ಬದಲಾವಣೆಗೆ ಮಹತ್ವದ ಕೊಡುಗೆಯನ್ನು ನೀಡಿದ ಸಾಧಕ ಮಹಿಳೆಯರನ್ನು ಸನ್ಮಾನಿಸಿ ಗೌರವಿಸುವ “ಗದ್ದೆಹಳ್ಳ ಗದ್ದೆ ಆಟ”(ಜಿಜಿಎ) ಎನ್ನುವ ವಿಶಿಷ್ಟ ಕಾರ್ಯಕ್ರಮ ಆ.22 ರಂದು ಗದ್ದೆಹಳ್ಳ ಗ್ರಾಮದಲ್ಲಿ ನಡೆಯಲಿದೆ. ಓಮ್ಸ್(ಒಒಹೆಚ್‍ಎಂಎಸ್) ಸಂಸ್ಥೆಯ ಪ್ರಮುಖರು ಹಾಗೂ ಕಾರ್ಯಕ್ರಮದ ರೂವಾರಿಗಳಾದ ಸನ್ಮಾನ್ ಮಾಧವ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕೃಷಿ ಚಟುವಟಿಕೆಗಳಿಂದ ನಾವೆಲ್ಲರು ದೂರ ಸರಿಯುತ್ತಿದ್ದೇವೆ.ಈ ಹಿನ್ನೆಲೆಯಲ್ಲಿ ಮತ್ತೆ ಅನ್ನ ನೀಡುವ ಕೃಷಿಯತ್ತ ಯುವ ಸಮೂಹದಲ್ಲಿ ಆಸಕ್ತಿ ಮುಡಿಸುವ ನಿಟ್ಟಿನ ಒಂದು ದಿನದ ಕಾರ್ಯಕ್ರಮವನ್ನು ಸಂಸ್ಥೆ ಆಯೋಜಿಸಿದೆ. ಇದರಲ್ಲಿ ಮುನ್ನೂರು ಮಕ್ಕಳನ್ನು ತೊಡಗಿಸುವುದು ನಮ್ಮ ಉದ್ದೇಶವಾಗಿದೆಯೆಂದು ಮಾಹಿತಿಯನ್ನಿತ್ತರು. ಗದ್ದೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಭತ್ತದ ಕೃಷಿಯ ಮಹತ್ವ, ಭತ್ತದ ನಾಟಿ ಕಾರ್ಯ, ವಿವಿಧ ಮನರಂಜನಾ ಆಟೋಟಗಳ ಮೂಲಕ ಮಣ್ಣಿನೊಂದಿಗಿನ ಮನುಷ್ಯನ ಗಾಢ ಸಂಬಂಧಗಳ ಅರಿವನ್ನು ಮಕ್ಕಳಲ್ಲಿ ಮೂಡಿಸುವುದು, ಇಲ್ಲಿನ ಕೃಷಿ ಸಂಸ್ಕøತಿಯ ಮಾಹಿತಿ ಒದಗಿಸುವ ಅತ್ಯಂತ ವಿಶಿಷ್ಟ ಕಾರ್ಯಕ್ರಮವನ್ನು ರೂಪಿಸಲಾಗಿದೆಯೆಂದು ತಿಳಿಸಿದರು. ಸಾಧಕ ಮಹಿಳೆಯರಿಗೆ ಸನ್ಮಾನ : ಸಂಸ್ಥೆಯ ಪ್ರಮುಖರಾದ ತೃಶಾಲ್ ಸನ್ಮಾನ್ ಮಾತನಾಡಿ, ಕಾರ್ಯಕ್ರಮದಲ್ಲಿ ಸಾಧಕ ಹತ್ತು ಮಂದಿ ಮಹಿಳೆಯರನ್ನು ಸನ್ಮಾನಿಸಿ ಗೌರವಿಸಲಾಗುವುದೆಂದರು. ಗೋಷ್ಠಿಯಲ್ಲಿ ಓಮ್ಸ್ ಸಂಸ್ಥೆಯ ಪಾರ್ಥ ಭೀಮಯ್ಯ ಹೊಸ್ಕೇರಿ, ಸುಂಟಿಕೊಪ್ಪದ ಪವಿತ್ರ, ಕಂಬಿಬಾಣೆಯ ಪ್ರದೀಶ್ ಉಪಸ್ಥಿತರಿದ್ದರು.









