
ಮಡಿಕೇರಿ ಡಿ.2 NEWS DESK : ಮೈಸೂರು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಹಾಗೂ ಮೈಸೂರು-ಮಂಡ್ಯ ಮತ್ತು ಕೊಡಗು ಜಿಲ್ಲಾ ಸೌಹಾರ್ದ ಸಹಕಾರಿಗಳ ಒಕ್ಕೂಟದ ಜಂಟಿ ಆಶ್ರಯದಲ್ಲಿ ಕೊಡಗು ಜಿಲ್ಲೆಯ ಸೌಹಾರ್ದ ಸಹಕಾರಿಗಳ ಮುಖ್ಯಕಾರ್ಯನಿರ್ವಾಹಕರು ಹಾಗೂ ಸಿಬ್ಬಂದಿಗಳಿಗಾಗಿ ಕ್ಲಸ್ಟರ್ ಮಟ್ಟದ ತರಬೇತಿ ನಡೆಯಿತು. ನಗರದ ಕೊಡವ ಸಮಾಜ ಕಾಂಪ್ಲೆಕ್ ನಲ್ಲಿರುವ ಕೊಡವ ಎಂಟರ್‌ಪ್ರೆನ್ಯೂರ್ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಲಿ ಸಭಾಂಣದಲ್ಲಿ ನಡೆದ ತರಬೇತಿ ಶಬಿರವನ್ನು ಮೈಸೂರು, ಮಂಡ್ಯ ಮತ್ತು ಕೊಡಗು ಜಿಲ್ಲಾ ಸೌಹಾರ್ದ ಸಹಕಾರಿಗಳ ಒಕ್ಕೂಟ ನಿಯಮಿತದ ಅಧ್ಯಕ್ಷ ಎಸ್.ಆರ್. ನಾರಾಯಣ ರಾವ್ ಉದ್ಘಾಟಿಸಿದರು. ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಎ.ವಸಂತ ಗುಣಾತ್ಮಕ ಸಾಲಗಳ ನೀಡಿಕೆ ಹಾಗೂ ಸಾಲ ವಸೂಲಾತಿ ಕ್ರಮಗಳು ವಿಷಯದ ಕುರಿತು ಉಪನ್ಯಾಸ ನೀಡಿದರು. ಇಗ್ಗುತ್ತಪ್ಪ ಕೊಡವ ಸೌಹಾರ್ದ ಕ್ರೆಡಿಟ್ ಕೋ ಆಪರೇಟೀವ್ ಲಿ. ಹಾಲಿ ನಿರ್ದೇಶಕ ಎಂ.ಕೆ.ಸೋಮಯ್ಯ ಅಧ್ಯಕ್ಷತೆ ಯನ್ನು ವಹಿಸಿದ್ದರು. ತರಬೇತಿಯಲ್ಲಿ ಕೊಡಗಿನ ಸಹಕಾರ ಸಂಘಗಳ ಒಕ್ಕೂಟದ ನಿರ್ದೇಶಕರು, ಸಿಇಒ, ಸಿಬ್ಬಂದಿಗಳಲ್ಲದೆ ಬಹಳಷ್ಟು ಪ್ರತಿನಿಧಿಗಳು ಭಾಗವಹಿಸಿದ್ದರು.









