Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ರೆಗ್ಯೂಲರ್ ಡಿಪ್ಲೋಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ತರಬೇತಿಗೆ ಅರ್ಜಿ ಆಹ್ವಾನ*
  • *ಮೇ 12 ರಂದು ಉದ್ಯೋಗ ಮೇಳ*
  • *ಹುದ್ದೆಗೆ ಅರ್ಜಿ ಆಹ್ವಾನ*
  • *ಮೇ 10 ರಂದು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ
  • *ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದ ಸಂಸದ ಯದುವೀರ್‌ ಒಡೆಯರ್‌*
  • *ಎನ್‍ಡಿಎ ಫಲಿತಾಂಶ ಪ್ರಕಟ : ಕ್ರಿಯೇಟಿವ್ ಕಾಲೇಜಿನ 4 ಮಂದಿ ವಿದ್ಯಾರ್ಥಿಗಳು ಆಯ್ಕೆ*
  • *ಅರೆಭಾಷೆ ಸಾಂಸ್ಕೃತಿಕ ಸಂಭ್ರಮ : ಬಹು ಸಂಸ್ಕೃತಿ ಉತ್ಸವಗಳು ಭಾಷೆ ಮತ್ತು ಸಂಸ್ಕೃತಿಯ ಉಳಿವಿಗೆ ಪೂರಕ : ಸದಾನಂದ ಮಾವಜಿ*
  • *ಶಾಸಕ ಡಾ.ಮಂತರ್ ಗೌಡ ಅವರ ಕಾಳಜಿಗೆ ಸಾರ್ವಜನಿಕರ ಮೆಚ್ಚುಗೆ*
  • *ರಾಷ್ಟ್ರಮಟ್ಟದ ಸೆಸ್ಟೋಬಾಲ್ ಕ್ರೀಡೆ : ಮೊದಲ ಬಾರಿಗೆ ಚಿನ್ನ ಗೆದ್ದ ಕರ್ನಾಟಕ ತಂಡ : ಕೀರ್ತಿ ತಂದ ಕೊಡಗಿನ ಕ್ರೀಡಾಪಟುಗಳು*
  • *ರಾಷ್ಟ್ರಮಟ್ಟದ ಬ್ರೈನೋಬ್ರೈನ್ ಸ್ಪರ್ಧೆ : ಮಡಿಕೇರಿಯ ಅನ್ವಿತ್.ಎಸ್ ಚಾಂಪಿಯನ್*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಅರಮೇರಿ ಕಳಂಚೇರಿ ಮಠದಲ್ಲಿ 226ನೇ ಮಾಸಿಕ ಹೊಂಬೆಳಕು ತತ್ವ ಚಿಂತನಾಗೋಷ್ಠಿ : ಸಮಾಜದಲ್ಲಿ ನವ ಮಾಧ್ಯಮಗಳನ್ನು ಸೂಕ್ತರೀತಿಯಲ್ಲಿ ಬಳಸುವಂತೆ ಸಲಹೆ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಅರಮೇರಿ ಕಳಂಚೇರಿ ಮಠದಲ್ಲಿ 226ನೇ ಮಾಸಿಕ ಹೊಂಬೆಳಕು ತತ್ವ ಚಿಂತನಾಗೋಷ್ಠಿ : ಸಮಾಜದಲ್ಲಿ ನವ ಮಾಧ್ಯಮಗಳನ್ನು ಸೂಕ್ತರೀತಿಯಲ್ಲಿ ಬಳಸುವಂತೆ ಸಲಹೆ*

ಡಿಸೆಂಬರ್ 3, 20242 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ವಿರಾಜಪೇಟೆ ಡಿ.3 NEWS DESK :  ಹೊಂಬೆಳಕು ಮಾಸಿಕ ತತ್ವ ಚಿಂತನಾಗೋಷ್ಟಿಯ 226 ಸಂಚಿಕೆ  ಅರಮೇರಿ ಕಳಂಚೇರಿ ಮಠದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿರಾಜಪೇಟೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರಾಜೇಶ್ ಪದ್ಮನಾಭ ನನ್ನ ತಂದೆಯವರಾದ ದಿವಂಗತ ಡಿ.ಜೆ ಪದ್ಮನಾಭ ಅವರು ಕರ್ನಾಟಕ ಸಂಘವನ್ನು ನಿರ್ಮಾಣ ಮಾಡುವ ಸಮಯದಲ್ಲಿ ಅಂದಿನ ಕಾಲದಲ್ಲಿ ಮಠದ ವತಿಯಿಂದ ಹತ್ತು ಸಾವಿರ ರೂಗಳ ದೇಣಿಗೆಯನ್ನು ನೀಡಿದ್ದರು. ತಂದೆಯವರಿಗೆ ಮಠದೊಂದಿಗೆ ಉತ್ತಮ ಬಾಂಧವ್ಯವಿತ್ತು. ನನ್ನ ತಂದೆಯವರ ಬೆಳವಣಿಗೆಯಲ್ಲಿ ಮಠದ ಪಾತ್ರವೂ ಇದೆ ಎನ್ನುವುದನ್ನು ಸ್ಮರಣೆ ಮಾಡಲು ಬಯಸುತ್ತೇನೆ. ಮಾಧ್ಯಮಗಳು ಇಂದಿನ ಸಮಯದಲ್ಲಿ ಸಕಾರತ್ಮಕತೆಗಿಂತ ನಕಾರತ್ಮಕತೆಯನ್ನು ಹೆಚ್ಚು ಬಿತ್ತುತ್ತಿವೆ. ಹೀಗಾಗಿ ಸಮಾಜದ ಸ್ವಾಸ್ಥ್ಯ ಹದಗೆಡುತ್ತಿದೆ. ಜನರ ವಿಶ್ವಾಸವನ್ನು ಮಾಧ್ಯಮಗಳು ಕಳೆದುಕೊಳ್ಳುತ್ತಿವೆ ಎಂದು ಅಭಿಪ್ರಾಯಪಟ್ಟರು. ಪತ್ರಕರ್ತೆ ಉಷಾಪ್ರೀತಮ್ ಮಾತನಾಡಿ, ಪ್ರಪಂಚದ ಯಾವ ಆವಿಷ್ಕಾರಗಳು ಮನುಕುಲಕ್ಕೆ ಕೆಡುಕು ಮಾಡಬೇಕು ಎನ್ನುವ ಉದ್ದೇಶ ಇಟ್ಟುಕೊಂಡು ಬಂದಿರುವುದಿಲ್ಲ. ಹಾಗೇ ಇಂದು ನವಮಾಧ್ಯಮಗಳು ಕೆಡುಕನ್ನೇ ಬಯಸುತ್ತಿಲ್ಲ. ಆದರೆ ಅವುಗಳನ್ನು ಬಳಕೆ ಮಾಡುವ ಬಳಕೆದಾರರ ತಪ್ಪಿನಿಂದ ನವಮಾಧ್ಯಮಗಳು ನಮಗೆ ತಪ್ಪಾಗಿ ಕಾಣುತ್ತಿವೆ. ಅದರಿಂದ ಅಪರಾಧಗಳು ಹೆಚ್ಚುತ್ತಿವೆ ಅಷ್ಟೇ.  ಮನುಷ್ಯ ಹೇಗೆ ಭೌತಿಕ ಜಗತ್ತಿನ್ನಲ್ಲಿ ಸಂಸ್ಕಾರವಂತನಾಗಿ, ವಿದ್ಯೆ, ವಿವೇಚನೆಯುಳ್ಳವನಾಗಿರುತ್ತಾನೋ ಅದೇ ವ್ಯಕ್ತಿತ್ವವನ್ನು ವರ್ಚ್ಯುವಲ್ ಜಗತ್ತಿನ್ನಲ್ಲಿ ಪ್ರದರ್ಶಿಸಬೇಕು ಆಗ ಯಾವುದೇ ಪ್ರಮಾದಗಳು ಸಂಭವಿಸುವುದಿಲ್ಲ. ಜನರು ಕೂಡಾ ನವ ಮಾಧ್ಯಮಗಳ ಬಳಕೆ ಮಾಡಿದರೆ ಸಾಲದು ಯಾವ ಸೂಕ್ತ ಮಾರ್ಗದಲ್ಲಿ ಬಳಸಿದರೆ ಸರಿ ಎನ್ನುವ ವಿವೇಚನೆಯ ಜೊತೆಗೆ ನವಮಾಧ್ಯಮಗಳ ಬಳಕೆ ಮಾಡಬೇಕು ಎಂದರು. ನವಮಾಧ್ಯಮಗಳಿಂದ ಮನುಷ್ಯರ ಜೀವನ ಬಹಳ ಸರಳಿಕರಣಗೊಂಡಿದೆ. ಆದರೆ ಹೆಚ್ಚಿನ ಬಳಕೆದಾರರು ನವಮಾಧ್ಯಮಗಳಿಂದಲೇ ಬದುಕನ್ನು ಕ್ಲಿಷ್ಟಕರವಾಗಿಯೂ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಜನರಿಗೆ ಸೂಕ್ತ ತಿಳುವಳಿಕೆ ನೀಡಬೇಕು ಎಂದು ಹೇಳಿದರು. ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಮಾತನಾಡಿದ ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾಧ್ಯಮಗಳು ಇಂದು ಸ್ಪರ್ಧೆಗೆ ಇಳಿದಿವೆ. ಇಂದು ನಾವು ಯಾವ ವಾಹಿನಿ ಹಾಕಿದ ಕೂಡಲೇ ನಮ್ಮಲ್ಲೆ ಮೊದಲು ಎನ್ನುವ ಒಕ್ಕಣೆ ಕಣ್ಣಿಗೆ ಬೀಳುತ್ತದೆ. ಇದು ವೀಕ್ಷಕರಿಗೆ ಅನಾವಶ್ಯಕ. ಇಂದು ಮಾಧ್ಯಮಗಳು ಯಾವ ಸುದ್ದಿಗೆ ಮಹತ್ವನೀಡಬೇಕು ಎಂದು ನಿರ್ಧರಿಸುವಲ್ಲಿ ಸೋಲುತ್ತಿವೆ. ಇತ್ತೀಚೆಗೆ ನಡೆದ ಉಧ್ಯಮಿಯೊಬ್ಬರ ಮಗನ ಅದ್ಧೂರಿ ವಿವಾಹವನ್ನು ವಾರಗಟ್ಟಲೇ ವಾಹಿನಿಗಳು ಪ್ರಸಾರ ಮಾಡಿದವು. ಇದರಿಂದ ಯಾರಿಗೆ ಏನು ಉಪಯೋಗವಾಯಿತು. ಅದಾಗಿ ಸ್ವಲ್ಪ ದಿನಕ್ಕೆ ಭಾರತದ ಒಬ್ಬ ಖ್ಯಾತ ಉಧ್ಯಮಿ ಈ ದೇಶದ ಅನೇಕ ಮಂದಿಗೆ ಉಧ್ಯೋಗ ನೀಡಿದವರು, ಭಾರತದ ಕೀರ್ತಿಯನ್ನು ಹೆಚ್ಚಿಸಿದಂತವರು ವಿಧಿವಶರಾದರು. ಅವರ ಬಗ್ಗೆ ಒಂದು ದಿನದ ಸುದ್ದಿಯಲ್ಲಿ ಸ್ವಲ್ಪ ಹೇಳಿ ನಿಲ್ಲಿಸಿಬಿಟ್ಟರು. ಆದರೆ ಖಂಡಿತವಾಗಿ ಸತ್ತ ಬಳಿಕವೂ ಆದರ್ಶವಾಗುಳಿದ ಉಧ್ಯಮಿ ಕಥೆಯನ್ನು ಮಾಧ್ಯಮಗಳು ಪ್ರಸಾರ ಮಾಡಬೇಕಿತ್ತು. ಆ ಮೂಲಕ ಜನರಿಗೆ ಸ್ಪೂರ್ತಿಯನ್ನು ತುಂಬಬಹುದಾಗಿತ್ತು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಎಸ್.ಎಂ.ಎಸ್ ವಸತಿ ಶಾಲೆಯ ವಿದ್ಯಾರ್ಥಿಗಳು ನಿರೂಪಣೆ, ಸ್ವಾಗತ, ಪರಿಚಯವನ್ನು ಮಾಡಿಕೊಟ್ಟರು. ಕಾರ್ಯಕ್ರಮದಲ್ಲಿ ಸಾರ್ವಜನಿಕರು, ವಸತಿ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ರೆಗ್ಯೂಲರ್ ಡಿಪ್ಲೋಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ತರಬೇತಿಗೆ ಅರ್ಜಿ ಆಹ್ವಾನ*

ಮೇ 9, 2026

*ಮೇ 12 ರಂದು ಉದ್ಯೋಗ ಮೇಳ*

ಮೇ 9, 2026

*ಹುದ್ದೆಗೆ ಅರ್ಜಿ ಆಹ್ವಾನ*

ಮೇ 9, 2026

*ಮೇ 12 ರಂದು ಉದ್ಯೋಗ ಮೇಳ*

ಮೇ 9, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಮೇ 9 NEWS DESK  : ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ…

*ಹುದ್ದೆಗೆ ಅರ್ಜಿ ಆಹ್ವಾನ*

ಮೇ 9, 2026

*ಮೇ 10 ರಂದು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ

ಮೇ 9, 2026

*ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದ ಸಂಸದ ಯದುವೀರ್‌ ಒಡೆಯರ್‌*

ಮೇ 9, 2026

*ಎನ್‍ಡಿಎ ಫಲಿತಾಂಶ ಪ್ರಕಟ : ಕ್ರಿಯೇಟಿವ್ ಕಾಲೇಜಿನ 4 ಮಂದಿ ವಿದ್ಯಾರ್ಥಿಗಳು ಆಯ್ಕೆ*

ಮೇ 9, 2026

*ಅರೆಭಾಷೆ ಸಾಂಸ್ಕೃತಿಕ ಸಂಭ್ರಮ : ಬಹು ಸಂಸ್ಕೃತಿ ಉತ್ಸವಗಳು ಭಾಷೆ ಮತ್ತು ಸಂಸ್ಕೃತಿಯ ಉಳಿವಿಗೆ ಪೂರಕ : ಸದಾನಂದ ಮಾವಜಿ*

ಮೇ 9, 2026

*ಶಾಸಕ ಡಾ.ಮಂತರ್ ಗೌಡ ಅವರ ಕಾಳಜಿಗೆ ಸಾರ್ವಜನಿಕರ ಮೆಚ್ಚುಗೆ*

ಮೇ 9, 2026

*ರಾಷ್ಟ್ರಮಟ್ಟದ ಸೆಸ್ಟೋಬಾಲ್ ಕ್ರೀಡೆ : ಮೊದಲ ಬಾರಿಗೆ ಚಿನ್ನ ಗೆದ್ದ ಕರ್ನಾಟಕ ತಂಡ : ಕೀರ್ತಿ ತಂದ ಕೊಡಗಿನ ಕ್ರೀಡಾಪಟುಗಳು*

ಮೇ 9, 2026

*ರಾಷ್ಟ್ರಮಟ್ಟದ ಬ್ರೈನೋಬ್ರೈನ್ ಸ್ಪರ್ಧೆ : ಮಡಿಕೇರಿಯ ಅನ್ವಿತ್.ಎಸ್ ಚಾಂಪಿಯನ್*

ಮೇ 9, 2026

*ಫೀ.ಮಾ.ಕಾರ್ಯಪ್ಪ ಕಾಲೇಜ್ ನಲ್ಲಿ “ಕಲಾ ವೈಭವ” ಉದ್ಘಾಟನೆ : ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಕಲೆ ಸಹಕಾರಿ : ಮೇ.ಪ್ರೊ.ರಾಘವ ಬಿ. ಅಭಿಮತ*

ಮೇ 9, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.