
ಮಡಿಕೇರಿ ಡಿ.13 NEWS DESK : ಕೊಡಗು ಜಿಲ್ಲೆಯ ನ್ಯಾಷನಲ್ ಮೆಡಿಕೋಸ್ ಸಂಸ್ಥೆ, ಸಂಸ್ಕೃತಿ ಸಿರಿ ಬಳಗ ಮತ್ತು ಟ್ರಸ್ಟ್, ಸ್ವಸ್ಥ ಕೂರ್ಗ್ ಫೌಂಡೇಶನ್ ಸಹಯೋಗದಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ಜ.26 ರಂದು ಕೃತಕ ಅಂಗಾಂಗಗಳ ಉಚಿತ ಜೋಡಣೆ, ವಿತರಣೆ ಮತ್ತು ಆರೋಗ್ಯ ತಪಾಸಣೆ ನಡೆಯಲಿದೆ ಎಂದು ಖ್ಯಾತ ಇ.ಎನ್.ಟಿ ವೈದ್ಯರು ಹಾಗೂ ಸಂಸ್ಕೃತಿ ಸಿರಿ ಬಳಗದ ಟ್ರಸ್ಟಿ ಡಾ.ಕೋಲೆಯಂಡ ಮೋಹನ್ ಅಪ್ಪಾಜಿ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಡಿಕೇರಿಯ ಪೊಲೀಸ್ ಮೈತ್ರಿ ಭವನದಲ್ಲಿ ಉಚಿತ ಜೋಡಣೆ, ವಿತರಣೆ, ಆರೋಗ್ಯ ತಪಾಸಣೆ ಮತ್ತು ತಜ್ಞ ವೈದ್ಯರುಗಳ ಸಮ್ಮುಖದಲ್ಲಿ ಸಮಾಲೋಚನೆ ಶಿಬಿರ ನಡೆಯಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು. ಐ.ಎಂ.ಎ ಕೊಡಗು, ಎ.ಓ.ಐ ಕೊಡಗು (ಇ.ಎನ್.ಟಿ ಸರ್ಜನ್ಸ್), ಸ್ವಸ್ಥ ಕೂರ್ಗ್, ಡಿಆರ್‍ಎಂ ಆಸ್ಪತ್ರೆ ಮೈಸೂರು, ಎನ್‍ಜಿಒ, ಕೊಡಗು ಕಾಫಿ ಪ್ಲಾಂಟರ್ಸ್ ಸದಸ್ಯರು ಕೊಡಗು ಇವರುಗಳ ಸಹಯೋಗದೊಂದಿಗೆ ನಡೆಸಲಾಗುವ ಉಚಿತ ಶಿಬಿರದಲ್ಲಿ 2ಆ ಇಕೋ ಮತ್ತು ಉಚಿತ ಲ್ಯಾಬ್ ಪರೀಕ್ಷೆ, ಶ್ರವಣ, ಹಲ್ಲಿನ ತಪಾಸಣೆ ನಡೆಯಲಿದೆ. ಎಲ್ಲಾ ಶಿಬಿರಾರ್ಥಿಗಳಿಗೆ ಔಷಧಿ ಮತ್ತು ರೋಗ ನಿರೋಧಕ ಪಾನೀಯವನ್ನು ಉಚಿತವಾಗಿ ನೀಡಲಾಗುವುದು. ಬೆಂಗಳೂರಿನ ಕರ್ನಾಟಕ ಮಾರ್ವಾರಿ ಸಂಸ್ಥೆ ಉಚಿತ ಕೃತಕ ಅಂಗಾಂಗಗಳ ಜೋಡಣೆಯ ಉಸ್ತುವಾರಿಯನ್ನು ನಿಭಾಯಿಸಲಿದ್ದಾರೆ ಎಂದರು.
ಪ್ರತಿ ಕಾಲಿನ ಕೃತಕ ಅಂಗಾಂಗದ ರಿಯಾಯಿತಿ ದರ ರೂ.3 ಸಾವಿರ ಹಾಗೂ ಕೈ ಭಾಗಗಳಿಗೆ ರೂ.5 ಸಾವಿರವಾಗಿದೆ. ಇವುಗಳಿಗೆ ಸುಮಾರು 2D ಲಕ್ಷಕ್ಕಿಂತಲೂ ಹೆಚ್ಚಿನ ಅನುದಾನ ವೆಚ್ಚವಾಗಲಿದ್ದು, ಪ್ರಾಯೋಜಕರು ಇವುಗಳನ್ನು ಉಚಿತವಾಗಿ ನೀಡಿದರೆ ರೋಗಿಗಳಿಗೆ ಉಚಿತವಾಗಿ ನೀಡಲಾಗುವುದು. ಶಿಬಿರಕ್ಕೆ ಪ್ರಾಯೋಜಕತ್ವ ನೀಡಬಯಸುವವರು BANK : AOI, KODAGU BRANCH, ಖಾತೆ ಸಂಖ್ಯೆ – 897320110000014, IFSC Code BKID-0008973, MICR Code : 571013153 ಸಲ್ಲಿಸಬಹುದು ಎಂದು ಹೇಳಿದರು. ಉಚಿತ ಶಿಬಿರಕ್ಕೆ ನೋಂದಣಿ ಮಾಡುವವರು ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯ ಒಳಗೆ ಮೊ.ಸಂ 8792874030 ಅಥವಾ ವಿಳಾಸ : ಅಮೃತಾ ಇ ಎನ್ ಟಿ ಅಂಡ್ ವರ್ಟಿಗೋ ಕ್ಲಿನಿಕ್, ಮಡಿಕೇರಿ ಇಲ್ಲಿ ನೋಂದಾಯಿಸಬಹುದು. ಐ.ಎಂ.ಓ ಅಧ್ಯಕ್ಷ ಡಾ.ಶ್ಯಾಮ್ ಅಪ್ಪಣ್ಣ ಮಾತನಾಡಿ, ಸಾರ್ವಜನಿಕರಿಗೆ ಉಪಯುಕ್ತವಾಗುವ ನಿಟ್ಟಿನಲ್ಲಿ ಶಿಬಿರವನ್ನು ಆಯೋಜಿಸಲಾಗಿದ್ದು, ಪ್ರತಿ ಬಾರಿಯೂ ಹೊಸಬರು ಶಿಬಿರದ ಪ್ರಯೋಜನ ಪಡೆದುಕೊಳ್ಳುತ್ತಿದ್ದು, ಪ್ರಯೋಜಕರು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬಂದಲ್ಲಿ ಸಾರ್ವಜನಿಕರಿಗೆ ಸಹಕಾರಿಯಾಗಲಿದೆ ಎಂದರು.
::: ಜಿಲ್ಲಾ ಮಟ್ಟದ ನೃತ್ಯ ಸ್ಪರ್ಧೆ ::: ಕೊಡಗು ಸಂಸ್ಕೃತಿ ಸಿರಿ ಬಳಗ ಮತ್ತು ಟ್ರಸ್ಟ್‍ನ ಅಧ್ಯಕ್ಷೆ ಈರಮಂಡ ಹರಿಣಿ ವಿಜಯ್ ಮಾತನಾಡಿ, ಗಣರಾಜ್ಯೋತ್ಸವದ ಅಂಗವಾಗಿ ಕೊಡಗು ಜಿಲ್ಲಾ ಮಟ್ಟದ ನೃತ್ಯ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಈ ಸ್ಪರ್ಧೆ ಮುಕ್ತ ನೃತ್ಯೋತ್ಸವವಾಗಿದ್ದು, ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ. ಶಾಲಾ- ಕಾಲೇಜು ಹಾಗೂ ನೃತ್ಯ ಶಾಲೆಗಳು ಸ್ಪರ್ಧೆಯಲ್ಲಿ ಭಾಗವಹಿಸಬಹುದು ಎಂದರು. ದೇಶಕ್ಕೆ ಹಾಗೂ ಗಣರಾಜ್ಯೋತ್ಸವಕ್ಕೆ ಸಂಬಧಪಟ್ಟ ಹಾಡುಗಳು, ಕನ್ನಡ ಅಥವಾ ಹಿಂದಿ ಭಾಷೆ ಹಾಡುಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಗುಂಪು ನೃತ್ಯದಲ್ಲಿ 6 ರಿಂದ 10 ವಿದ್ಯಾರ್ಥಿಗಳು ಮಾತ್ರ ಪಾಲ್ಗೊಳ್ಳಬಹುದು. ಯಾವುದೇ ಸಂಸ್ಕೃತಿಗೆ ಧಕ್ಕೆಯಾಗಬಹುದಾದ ಹಾಡು ಅಥವಾ ನೃತ್ಯಕ್ಕೆ ಅವಕಾಶವಿರುವುದಿಲ್ಲ ಎಂದು ಹೇಳಿದರು. ಪ್ರತಿ ನೃತ್ಯಕ್ಕೆ 10 ನಿಮಿಷಗಳ ಕಾಲಾವಕಾಶವಿರುತ್ತದೆ, ನೃತ್ಯ ತಂಡದ ಹೆಸರನ್ನು ಹಾಗೂ ನೃತ್ಯಕ್ಕೆ ಬಳಸುವ ಹಾಡಿನ ವಿವರಗಳನ್ನು ಜನವರಿ 15 ರೊಳಗೆ ನೀಡಬೇಕು. ನಂತರ ಬಂದವರಿಗೆ ಅವಕಾಶವಿರುವುದಿಲ್ಲ. ತೀರ್ಪುಗಾರರ ನಿರ್ಧಾರವೇ ಅಂತಿಮವಾಗಿರುತ್ತದೆ. ಮುಕ್ತ ನೃತ್ಯೋತ್ಸವ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ, ಆಕರ್ಷಕ ಟ್ರೋಫಿಯೊಂದಿಗೆ ಪ್ರಶಂಸನಾ ಪತ್ರ ಹಾಗೂ ಭಾಗವಹಿಸಿದ ಎಲ್ಲಾ ನೃತ್ಯ ತಂಡದವರಿಗೆ ಪ್ರಶಂಸನಾ ಪತ್ರ ನೀಡಲಾಗುವುದು ಎಂದು ತಿಳಿಸಿದರು. ನೃತ್ಯ ಸ್ಪರ್ಧೆಗೆ ಹೆಸರು ನೋಂದಣಿ ಮಾಡಲು ಸಂಸ್ಕೃತಿ ಸಿರಿ ಬಳಗ ಟ್ರಸ್ಟ್ ಖಜಾಂಚಿ ಕೂಡಂಡ ಸೀಮಾ – 9481488602, ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 9740970840, 9731024125ನ್ನು ಸಂಪರ್ಕಿಸಬಹುದಾಗಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಸಂಸ್ಕೃತಿ ಸಿರಿ ಬಳಗ ಮತ್ತು ಟ್ರಸ್ಟ್ ಉಪಾಧ್ಯಕ್ಷೆ ಕೋಲೆಯಂಡ ನಿಶಾ ಮೋಹನ್, ಖಜಾಂಚಿ ಕೂಡಂಡ ಸೀಮಾ ಕಾವೇರಪ್ಪ ಹಾಗೂ ಗೌರವ ಕಾರ್ಯದರ್ಶಿ ಕೇಚಂಡ ಸುನೀತ ಗಣೇಶ್ ಉಪಸ್ಥಿತರಿದ್ದರು.










